ಯುವವಾಹಿನಿ ಕೂಳೂರು ಘಟಕದ ವತಿಯಿಂದ ದಿನಾಂಕ 18 ರಿಂದ 21 ರವರೆಗೆ ಕಮಲಶಿಲೆ, ಹಂಪಿ, ಮಂತ್ರಾಲಯ ಪ್ರವಾಸ ಹಮ್ಮಿಕೊಂಡಿತು. ಘಟಕದ ಉಪಾಧ್ಯಕ್ಷರಾದ ಪವಿತ್ರ ಅಮೀನ್ ರವರ ಸಂಚಾಲಕತ್ವದಲ್ಲಿ 40 ಜನರ ತಂಡ ದಿನಾಂಕ 18.10.19 ರಂದು ಸಂಜೆ 4 ಗಂಟೆಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಹೊರಟು ಕಮಲಶಿಲೆ ದೇವರ ದರ್ಶನ ಪಡೆದು, ಪ್ರಯಾಣ ಮುಂದುವರೆಸಿ 19.10.19 ರ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಹೊಸಪೇಟೆ ತಲುಪಿ ಅಲ್ಲಿ ಉಪಹಾರದ ನಂತರ ಹಂಪಿ ತಲುಪಿದೆವು. ಆ ದಿನ ಹಂಪಿಯ ವಿರೂಪಾಕ್ಷ ದೇವಾಲಯ, ಸಾಸಿವೆ ಕಾಳು ಗಣಪ, ಕಡಲೆಕಾಳು ಗಣಪ, ಕಮಲ್ ಮಹಲ್, ವಿಜಯ ವಿಠ್ಠಲ ದೇವಸ್ಥಾನ, ತುಂಗಭದ್ರಾ ಡಾಮ್ ಈ ಎಲ್ಲ ಸ್ಥಳಗಳಿಗೆ ಭೇಟಿ ನೀಡಿ ನಂತರ ಅಲ್ಲಿಂದ ಹೊರಟು 20.10.19 ರ ಬೆಳಿಗ್ಗೆ 2 ಗಂಟೆಗೆ ಸರಿಯಾಗಿ ಮಂತ್ರಾಲಯ ತಲುಪಿದೆವು. ಬೆಳಿಗ್ಗಿನ ಉಪಹಾರದ ನಂತರ 9 ಗಂಟೆಗೆ ಮಂತ್ರಾಲಯ ರಾಯರ ದರ್ಶನ ಪಡೆದು ನಂತರ ಅಲ್ಲಿಂದ ಪಂಚಮುಖಿ ಹನುಮಂತ ದೇವಾಲಯ, ಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿ ನಂತರ ಅಲ್ಲಿಂದ ಹೊರಟು 21.10.19 ರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಕೂಳೂರು ತಲುಪಿದೆವು.