ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 06.05.2019 ರಿಂದ 10.05.2019 ರವರೆಗೆ ಐದು ದಿನಗಳ ಬೇಸಿಗೆ ಶಿಬಿರವು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ಜರುಗಿತು.
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಸಲಹೆಗಾರರಾದ ಜಿತೇಂದ್ರ ಜೆ.ಸುವರ್ಣ ಶಿಬಿರ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಚಿತ್ರಶ್ರೀ ಮನೋಜ್,ತಸಲೀಮ, ಕುಂಬ್ಳೆ ಗೋಪಾಲ ಕೃಷ್ಣಭಟ್, ವಿದ್ಯಾ ರಾಕೇಶ್ ಮಕ್ಕಳಿಗೆ ವ್ಯಕ್ತಿತ್ವ ವಿಕಸನ, ಮಿಮಿಕ್ರಿ, ವಾಲ್ ಪತ್ರಿಕೆ, ಗ್ಲಾಸ್ ಪೈಂಟಿಂಗ್, ಪ್ಲವರ್ ಮೇಕಿಂಗ್ , ಕಸದಿಂದ ರಸ ಹೀಗೆ ಕ್ರಿಯಾತ್ಮಕವಾಗಿ ಮಾರ್ಗದರ್ಶನ ನೀಡಿದರು. ಮಕ್ಕಳಿಂದ ವಿವಿಧ ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಮಕ್ಕಳೇ ಸಮಾರೋಪ ಸಮಾರಂಭ ನಡೆಸಿರುವುದು ಶಿಬಿರದ ವೈಶಿಷ್ಟ್ಯವಾಗಿತ್ತು.
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ ಅಧ್ಯಕ್ಷೆ ಉಮಾ ಶ್ರೀಕಾಂತ್ ಸ್ವಾಗತಿಸಿದರು, ಕಾರ್ಯದರ್ಶಿ ನೈನಾ ವಿಶ್ವನಾಥ್ ವಂದಿಸಿದರು, ಶಿಬಿರದ ಸಂಚಾಲಕರಾದ ಚಿತ್ರಾಶ್ರೀ ಮನೋಜ್ ಶಿಬಿರದ ನೇತ್ರತ್ವ ವಹಿಸಿದ್ದರು. ಈ ಶಿಬಿರವು ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಿತು.