ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು

ಎಂ. ಸಂಜೀವ ಪೂಜಾರಿ – ಅಧ್ಯಕ್ಷರು -1988-89

ಯುವವಾಹಿನಿಯ ಸ್ಥಾಪಕ ಸದಸ್ಯರಲ್ಲಿ ಓರ್ವರಾದ ಶ್ರೀ ಎಂ. ಸಂಜೀವ ಪೂಜಾರಿಯವರು ಬಿಲ್ಲವ ಸಮಾಜಕ್ಕೆ ಯುವವಾಹಿನಿಯಂತಹ ಒಂದು ಯುವಸಂಘಟನೆಯ ಕನಸ್ಸನ್ನು ಮೊದಲಾಗಿ ಕಂಡವರು. ತನ್ನ ಕನಸ್ಸನ್ನು ಹಿರಿಯರಾದ ಶ್ರೀ ಮಂಜುನಾಥ ಸುವರ್ಣ, ಶ್ರೀ ಆದಿಶ್, ಶ್ರೀ ಅಣ್ಣು ಪೂಜಾರಿ, ಶ್ರೀ ದಿನೇಶ್ ಅಮೀನ್ ಮಟ್ಟು ಮುಂತಾದವರಲ್ಲಿ ತಿಳಿಸಿ ಅದರ ಸಾಕಾರಕ್ಕಾಗಿ ಹಗಲಿರುಳು ದುಡಿದವರು. ಡಾನ್ ಬಾಸ್ಕೋ ಕಟ್ಟಡದ ಒಂದು ಕೋಣೆಯಲ್ಲಿ ವಾಸವಾಗಿದ್ದ ಇವರ ಕೋಣೆಯಲ್ಲಿಯೇ ಸಂಘಟನೆಯ ಆರಂಭಿಕ ಸಮಾಲೋಚನೆಗಳು ನಡೆಯುತ್ತಿದ್ದವು.

ಬಳಿಕ ಈ ಸಮಾಲೋಚನಾ ಸಭೆಗಳು ಬಾವುಟಗುಡ್ಡೆಯ ಟಾಗೋರ್ ಪಾರ್ಕ್, ಅನಂತರ ಮಂಗಳ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡು ಸಂಘಟನೆಯ ಸ್ಥಾಪನೆಯ ಬಳಿಕ ಡಾನ್ ಬಾಸ್ಕೋ ಮಿನಿಹಾಲ್‌ನಲ್ಲಿ ಸಭೆಗಳು ನಡೆಯತೊಡಗಿದವು.

ಜಿಲ್ಲೆಯ ವಿವಿಧೆಡೆ ಸಂಘಟನೆಯ ಘಟಕಗಳು ಸ್ಥಾಪನೆಯಾಗುವುದರೊಂದಿಗೆ 1988 ರ ಜನವರಿ 24ರಂದು ಯುವವಾಹಿನಿಯ ಸಮಾವೇಶ ನಡೆದು ಕೇಂದ್ರ ಸಮಿತಿಯ ರಚನೆಯಾಯಿತು. ಶ್ರೀ ಸಂಜೀವ ಪೂಜಾರಿಯವರು ಕೇಂದ್ರ ಸಮಿತಿಯ ಪ್ರಥಮ ಅಧ್ಯಕ್ಷರಾಗಿ ಆಯ್ಕೆಗೊಂಡರು.

1988-89 ನೇ ಸಾಲಿನ ಅಧ್ಯಕ್ಷರಾಗಿದ್ದ ಶ್ರೀ ಸಂಜೀವ ಪೂಜಾರಿಯವರು ತಮ್ಮ ಅಧಿಕಾರವಧಿಯಲ್ಲಿ ಯುವವಾಹಿನಿಗೆ ಮೂಲಭೂತ ಚೌಕಟ್ಟನ್ನು ಒದಗಿಸಿ ಕೊಡುವುದರೊಂದಿಗೆ ಸಂಘಟನೆಗೆ ನಿಯಮ ನಿಬಂಧನೆಗಳ ರಚನೆಯನ್ನು ಪ್ರಥಮವಾಗಿ ರೂಪಿಸಿದವರು. ಅಲ್ಲದೆ ಜಿಲ್ಲೆಯಾದ್ಯಂತ ಓಡಾಡಿ 13 ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡವರು. ಯುವವಾಹಿನಿಯಂತಹ ಸಮುದಾಯ ಸಂಘಟನೆಯಲ್ಲಿ ’ವ್ಯಕ್ತಿತ್ವ ವಿಕಸನ’ ದಂತಹ ತರಬೇತಿ ಕಾರ್ಯಕ್ರಮಗಳ ಕಲ್ಪನೆಯನ್ನು ಇರಿಸಿಕೊಂಡು ಅದನ್ನು ಕಾರ್ಯ ರೂಪದಲ್ಲಿ ತಂದವರು. ಯುವವಾಹಿನಿಗೆ ಒಂದು ಮುಖವಾಣಿ ಪತ್ರಿಕೆಯ ಅಗತ್ಯವನ್ನು ಮನಗಂಡು ತನ್ನ ಮಿತ್ರರ ಸಹಕಾರದೊಂದಿಗೆ ಯುವವಾಹಿನಿ ಮಾಸಿಕ ಪತ್ರಿಕೆಯನ್ನು ಆರಂಭಿಸಿದವರು.

ಬಿ.ಕಾಂ. ಪದವಿಯೊಂದಿಗೆ ಶ್ರೀ ಸಂಜೀವ ಪೂಜಾರಿ ಯವರು ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿ ಹಂತ ಹಂತವಾಗಿ ಮೇಲೆ ಬಂದವರು. ದಣಿವರಿಯದ, ಅದಮ್ಯ ಉತ್ಸಾಹದ ಯುವಕ ಸಂಜೀವ ಪೂಜಾರಿಯವರು ತನ್ನ ವಿದ್ಯಾಭ್ಯಾಸವನ್ನೂ ಮುಂದುವರಿಸಿ ಕಾನೂನು ಪದವಿಯನ್ನು ಪಡೆದರು. ಕೆಲವು ಸಮಯ ತನ್ನ ಬಿಡುವಿನ ವೇಳೆಯಲ್ಲಿ ಮಂಗಳೂರಿನ ಖ್ಯಾತ ವಕೀಲರಾದ ಎಲ್.ಡಿ. ಬಲ್ಲಾಳ್‌ರವರ ಬಳಿ ಕಾನೂನು ಅಭ್ಯಾಸವನ್ನು ನಡೆಸಿದ್ದರು. ಮಾತ್ರವಲ್ಲದೆ ಸ್ನಾತಕೋತ್ತರ ಪದವಿಯಾದ ಎಲ್.ಎಲ್.ಎಂ.ನ್ನು ಪಡೆದರು. ಅಂತರಾಷ್ಟ್ರೀಯ ನೌಕೋದ್ಯಮ ವೃತ್ತಿಪರ ಸಂಸ್ಥೆ Institute of Charterd Ship workers, London ಇದರ ಸದಸ್ಯತ್ವವನ್ನು ಪಡೆಯಲು ನಡೆಸಲ್ಪಡುವ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಪ್ರಸಕ್ತ ಎಂ.ಸಿ.ಎಫ್.ನಲ್ಲಿ ಅಧಿಕಾರಿ (Executive) ಯಾಗಿರುವ ಸಂಜೀವ ಪೂಜಾರಿಯವರ ಪತ್ನಿ ಶ್ರೀಮತಿ ನಿರ್ಮಲ ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್‌ನ ಕೂಳೂರು ಶಾಖೆಯ ಶಾಖಾಧಿಕಾರಿ. ಒಬ್ಬಳೇ ಮಗಳು ನಿಖಿತಾ ದಂತ ವೈದ್ಯಕೀಯ ಪದವೀಧರರಾಗಿದ್ದು ಕಳೆದ ನವೆಂಬರ್ 1, 2012 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ವಿಳಾಸ : ’ಓಂಕಾರ’, ಮ.ನಂ. 2-49/11(1), ನವಗಿರಿ ನಗರ, ಹೊಸಬೆಟ್ಟು, ಮಂಗಳೂರು – 575 019
ಫೋನ್: 0824-2400664, 94480571424

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!