ಮಂಗಳೂರು: ಯುವವಾಹಿನಿ(ರಿ.) ಕೂಳೂರು ಘಟಕದ ವತಿಯಿಂದ ಈಶ ಫೌಂಡೇಶನ್ ಕೊಯಂಬತ್ತೂರು ಪ್ರವಾಸವನ್ನು ದಿನಾಂಕ 17-05-2024 ರಿಂದ 19-05-2024 ರವರೆಗೆ ಜೊತೆ ಕಾರ್ಯದರ್ಶಿ ಕೀರ್ತನಾ ಇವರ ಸಂಚಾಲಕತ್ವದಲ್ಲಿ ಹಾಗೂ ಸದಸ್ಯರಾದ ತುಳಸಿ ಸುಜೀರ್ ಇವರ ಸಹ ಸಂಚಾಲಕತ್ವದಲ್ಲಿ ಆಯೋಜಿಸಲಾಗಿತ್ತು.
ದಿನಾಂಕ 17-05-2024 ರಂದು ರಾತ್ರಿ 10.30 ರ ಸಮಯಕ್ಕೆ ಎಲ್ಲರೂ ಸೆಂಟ್ರಲ್ ರೈಲು ನಿಲ್ದಾಣದ ಬಳಿ ಬಂದು ಸೇರಿ ಅಲ್ಲಿಂದ 11.55 ರ ವೆಸ್ಟ್ ಕೋಸ್ಟ್ ರೈಲಿನಲ್ಲಿ 95 ಜನರ ತಂಡ ಈಶ ಫೌಂಡೇಶನ್ ಪ್ರವಾಸ ಹೊರಟರು. ರಾತ್ರಿ ಪ್ರಯಾಣದ ನಂತರ ಬೆಳಗ್ಗಿನ ಜಾವ 6.00 ಗಂಟೆಗೆ ಎಲ್ಲರೂ ಪಾಲಕ್ಕಾಡ್ ರೈಲ್ವೆ ಸ್ಟೇಶನ್ ನಲ್ಲಿ ಇಳಿದು ಅಲ್ಲಿಂದ ಪ್ರವಾಸದ ಮಾರ್ಗದರ್ಶಕರ ಸೂಚನೆಯ ಮೇರೆಗೆ ಬಸ್ಸಿನತ್ತ ಹೆಜ್ಜೆ ಹಾಕಿದೆವು. ಅಲ್ಲಿಂದ ಮೊದಲೇ ಯೋಜನೆ ಹಾಕಿದ ಹಾಗೆ ಪ್ರಯಾಣಿಕರನ್ನು ಎರಡು ತಂಡವಾಗಿ ಮಾಡಿ ಎರಡು ಬಸ್ಸಿನಲ್ಲಿ ಫ್ರೆಶ್ ಅಪ್ ಆಗಲು ರೂಮ್ ಕಡೆ ಪಯಣ ಮಾಡಿ ಅಲ್ಲಿ ಮೊದಲೇ ನಿಗದಿ ಮಾಡಿದ ರೂಮ್ ನಲ್ಲಿ ಫ್ರೆಶ್ ಅಪ್ ಆಗಿ ಬೆಳಗ್ಗಿನ ರುಚಿಯಾದ ಉಪಾಹಾರವನ್ನು ಮುಗಿಸಿ, ಮತ್ತೆ ಪಯಣವನ್ನು ಮುಂದುವರಿಸಲಾಯಿತು.
ಮೊದಲಿಗೆ ಪಾಲಕ್ಕಾಡ್ ಹನುಮಾನ್ ದೇವರ ದರ್ಶನ ಮುಗಿಸಿ, ಮಲ್ಲಾಪುರಾಮ್ ಡ್ಯಾಂ ವೀಕ್ಷಣೆ, ಪಾಕ್೯, ರೋಪ್ ಕಾರ್ ನಲ್ಲಿ ಕುಳಿತುಕೊಂಡು ರಮಣೇಯ ದೃಶ್ಯವನ್ನು ಕಣ್ತುಂಬಿಕೊಂಡು, ಸುಮಾರು ಒಂದು ಗಂಟೆಗಳ ಕಾಲ ಸುಂದರ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಿ ಅಲ್ಲಿಂದ ಮಧ್ಯಾಹ್ನದ ಊಟ ಮುಗಿಸಿ ಸಂಜೆ 4.00 ಗಂಟೆಗೆ ಈಶ ಫೌಂಡೇಶನ್ ತಲುಪಿದರು. ಆದಿಯೋಗಿ ದರ್ಶನ ಪಡೆದು ಅಲ್ಲಿನ ಪ್ರಶಾಂತ ವಾತಾವರಣದ ಮಧ್ಯೆ ಧ್ಯಾನ ಮಂದಿರದಲ್ಲಿ ಮನಸ್ಸನ್ನು ಪರಿಶುದ್ಧಗೊಳಿಸಿ ನಂತರ ಸಂಜೆ 7.20 ರ ಲೇಸರ್ ಶೋ ವೀಕ್ಷಣೆ ಮಾಡಿ, ಬಸ್ಸಿನಲ್ಲಿ ರೈಲ್ವೆ ಸ್ಟೇಶನ್ ಪಯಣ ಮಾಡಿ ಅಲ್ಲಿ ಊಟದ ವ್ಯವಸ್ಥೆ. ರಾತ್ರಿ 11.00 ಗಂಟೆಗೆ ಪಾಲಕ್ಕಾಡ್ ನಿಂದ ವೆಸ್ಟ್ ಕೋಸ್ಟ್ ರೈಲಿನಲ್ಲಿ ಮಂಗಳೂರು ಕಡೆಗೆ ಹೊರಟು ಬೆಳಗ್ಗಿನ ಜಾವ 9.00 ಗಂಟೆಗೆ ಮಂಗಳೂರು ರೈಲ್ವೆ ನಿಲ್ದಾಣ ತಲುಪಿ ಪ್ರವಾಸದ ಸುಂದರ ಕ್ಷಣಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ಎಲ್ಲರೂ ತಮ್ಮ ತಮ್ಮ ಮನೆ ಕಡೆ ಹೆಜ್ಜೆ ಹಾಕಿದೆವು. ಪ್ರವಾಸದಲ್ಲಿ ಘಟಕದ ಅಧ್ಯಕ್ಷರಾದ ಇಂದಿರಾ ಸುರೇಶ್, ನಿಕಟ ಪೂರ್ವ ಅಧ್ಯಕ್ಷರಾದ ಯಶವಂತ್ ಪೂಜಾರಿ, ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ನಯನ ರಮೇಶ್, ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಕಾರ್ಯದರ್ಶಿ ನಯನ ಕೋಟ್ಯಾನ್, ಕೋಶಾಧಿಕಾರಿ ವಿಘ್ನೇಶ್, ಪದಾಧಿಕಾರಿಗಳು, ಸದಸ್ಯರು ಮತ್ತು ಕುಟುಂಬದವರು ಭಾಗವಹಿಸಿದ್ದರು.