ಮಂಗಳೂರು: ಭಾನುವಾರ ದಿನಾಂಕ 16-06-2024 ರಂದು ಯುವವಾಹಿನಿ(ರಿ.) ಮಂಗಳೂರು ಘಟಕ, ಯುವವಾಹಿನಿ(ರಿ.) ಮಹಿಳಾ ಘಟಕ, ಪ್ರಗತಿ ಮಹಿಳಾ ಮಂಡಲ, ಬ್ರಹ್ಮ ಕುಮಾರಿ ಮಂಗಳೂರು, ಹಾಗೂ ಆತ್ಮಶಕ್ತಿ ಸಹಕಾರಿ ಸಂಘ. ಎಲ್ಲರ ಸಂಯೋಜನೆಯೊಂದಿಗೆ ಉಚಿತ ನೇತ್ರ ತಪಾಸಣೆ ಹಾಗೂ ಸಾಮಾನ್ಯ ವೈದ್ಯಕೀಯ ಶಿಬಿರ, ಉರ್ವಸ್ಟೋರ್ ನ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ ಇರುವ ಪ್ರಗತಿ ಮಹಿಳಾ ಮಂಡಲದಲ್ಲಿ ನಡೆಯಿತು.
ಬ್ರಹ್ಮ ಕುಮಾರಿ ಜಯಶ್ರೀ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಪ್ರಸ್ತುತ ಸಮಯದಲ್ಲಿ ಆರೋಗ್ಯ ಶಿಬಿರದ ಮಹತ್ವವನ್ನು ತಿಳಿಸಿದರು. ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷರು ಚಿತ್ತರಂಜನ್ ಅಧ್ಯಕ್ಷೀಯ ಭಾಷಣದಲ್ಲಿ ತಮ್ಮ ಸಹಕಾರಿ ಸಂಘವು ಅರ್ಥಿಕ ವ್ಯವಹಾರದ ಬಳಿಕ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಲ್ಲದೆ 68 ನೇ ಉಚಿತ ವೈದ್ಯಕೀಯ ಶಿಬಿರ ಇದಾಗಿದೆ ಎಂದರು.
ನಿಧಿಲ್ಯಾಂಡ್ ಡೆವಲೆಪರ್ಸ್ ಇಂಡಿಯಾದ ಆಡಳಿತ ನಿರ್ದೇಶಕರಾದ ಪ್ರಶಾಂತ ಕುಮಾರ್ ಸನಿಲ್, ಯುವವಾಹಿನಿ(ರಿ.) ಮಂಗಳೂರು ಘಟಕದ ಅಧ್ಯಕ್ಷರು ನಾಗೇಶ್ ಅಮೀನ್, ಯುವವಾಹಿನಿ(ರಿ.) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರು ಶುಭ ರಾಜೇಂದ್ರ, ಪ್ರಗತಿ ಮಹಿಳಾ ಮಂಡಲದ ಅಧ್ಯಕ್ಷರು ಪುಷ್ಪ.ಕೆ.ಎ , ಯುವವಾಹಿನಿ(ರಿ.) ಮಂಗಳೂರು ಘಟಕದ ಆರೋಗ್ಯ ನಿರ್ದೇಶಕರು ಅರುಣ್ ಕೋಟ್ಯಾನ್, ಕೆಎಂಸಿ ಆಸ್ಪತ್ರೆಯ ವೈದ್ಯರುಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುಮಾರು 250 ಜನರು ಈ ಶಿಬಿರದ ಪ್ರಯೋಜನ ಪಡಕೊಂಡಿದ್ದು, 100 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಯುವವಾಹಿನಿ(ರಿ.) ಮಂಗಳೂರು ಘಟಕ ಮತ್ತು ಯುವವಾಹಿನಿ(ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಆತ್ಮಶಕ್ತಿ ಸಹಕಾರಿ ಸಂಘದ ಶಾಖಾಧಿಕಾರಿಗಳಾದ ಶ್ರೀ ಸಚೀನ್ ಸ್ವಾಗತಿಸಿದರು, ಶ್ರೀಮತಿ ಸುಜಾತ ವಂದಿಸಿದರು, ಶ್ರೀಮತಿ ಸ್ವಾತಿ ನಿರೂಪಣೆ ಮಾಡಿದರು, ಶ್ರೀಮತಿ ಆಶಾ ಹಾಗೂ ಶ್ರೀಮತಿ ಸೌಮ್ಯ ಕಾರ್ಯಕ್ರಮ ಸಂಯೋಜನೆ ಮಾಡಿದರು.