ಯಡ್ತಾಡಿ :- ಯುವವಾಹಿನಿ (ರಿ.) ಯಡ್ತಾಡಿ ಹಾಗೂ ಗ್ರಾಮ ಒನ್ ನಾಗರೀಕ ಸೇವಾ ಕೇಂದ್ರ ಯಡ್ತಾಡಿ ಇವರ ಜಂಟಿ ಆಶ್ರಯದಲ್ಲಿ ಉಚಿತ “ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಕಾರ್ಡ್ ನ ನೋಂದಣಿಯನ್ನು ದಿನಾಂಕ 29 ಮೇ 2022 ರ ಭಾನುವಾರದಂದು ಏರ್ಪಡಿಸಲಾಗಿತ್ತು.
ಘಟಕದ ಅಧ್ಯಕ್ಷರಾದ ಶ್ರೀ ಸೋಮಪ್ಪ ಪೂಜಾರಿಯವರು ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರಾಜು ಪೂಜಾರಿಯವರು ಸಾಂಕೇತಿಕವಾಗಿ ಆಯುಷ್ಮಾನ್ ಆರೋಗ್ಯ ಕಾರ್ಡನ್ನು ಫಲಾನುಭವಿಗಳಿಗೆ ವಿತರಿಸಿದರು. ಪರಿಸರದ 115 ಮಂದಿ ಫಲಾನುಭವಿಗಳಿಗೆ ಉಚಿತವಾಗಿ ಆಯುಷ್ಮಾನ್ ಆರೋಗ್ಯ ಕಾರ್ಡನ್ನು ನೋಂದಣಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.