ಆಶಯ : ರಾಕೇಶ್ ಕುಮಾರ್

ಆತ್ವವಿಶ್ವಾಸ, ಇಂದ್ರಿಯ ನಿಗ್ರಹ ಶಕ್ತಿ ಮತ್ತು ನಮ್ಮ ಸಮಾಜ

ಈ ಜಗತ್ತೆಂಬ ಮಾಯಲೋಕವು ಶತಕೋಟಿ ಜೀವರಾಶಿಗಳಿಂದ ತುಂಬಿ ತುಳುಕುತ್ತಿದ್ದರೂ, ಈ ಎಲ್ಲಾ ಜೀವರಾಶಿಗಳಿಗಿಂತ ಶ್ರೇಷ್ಠವಾದ ಹಾಗೂ ಭಿನ್ನವಾದ ಜೀವಿ ಮಾನವ. ಆಲೋಚನಾ ಶಕ್ತಿ ಮನುಷ್ಯ ಪ್ರಾಣಿಗೆ ಬಿಟ್ಟು ಇನ್ನಾವುದೇ ಪ್ರಾಣಿಗಳಿಗಿಲ್ಲ ಎಂಬ ಸತ್ಯ ನಮಗೆಲ್ಲಾ ತಿಳಿದಿದೆ. ಉಳಿದ ಪ್ರಾಣಿಗಳಿಗಿಂತ ತನ್ನ ಭಾವನೆಗಳನ್ನು ಇತರರೊಂದಿಗೆ ಭಾಷೆಯ ಮೂಲಕ, ಮಾತಿನಿಂದ ಸಂವಹನ ರೂಪದಲ್ಲಿ ವ್ಯಕ್ತಪಡಿಸುವ ವಿಶೇಷ ಸಾಮರ್ಥ್ಯ ಗಳಿಸಿದಂತ ಮಾನವ ವರ್ಗದಲ್ಲಿ ಜನಿಸಿದ ನಾವೇ ಧನ್ಯರು.

ಪರಶುರಾಮ ಸೃಷ್ಠಿಯ ಈ ತುಳುನಾಡಿನಲ್ಲಿ ಬೈದ್ಯ ಅಂದರೆ ವೈದ್ಯ, ಬಿರುವ ಅಂದರೆ ವೀರ (ಸೇನಾನಿ), ಪೂಜಾರಿ ಎಂದರೆ ಪೂಜೆ ಮಾಡುವವ ಹೀಗೆ ವಿವಿಧ ಕಸುಬುಗಳೊಂದಿಗೆ ಬಾಳಿ ಬದುಕಿದ ನಮ್ಮ ಹಿಂದಿನ ತಲೆಮಾರಿನ ಬದುಕಿನ ಜಾಡನ್ನು ನೋಡುವಾಗ ಬಿಲ್ಲವರು ಮೂರ್ತೆದಾರರೆ? – ಎಂಬ ಜಿಜ್ಞಾಸೆ ನಮ್ಮಲ್ಲಿ ಮೂಡುತ್ತದೆ. ಒಂದು ಕಾಲಘಟ್ಟದಲ್ಲಿ ಬಿಲ್ಲವರ ಮುಖ್ಯ ಕಸುಬು ಕೃಷಿ ಸಾಗುವಳಿಯಾಗಿದ್ದರೂ ಕೂಡ ಊಳಿಗಮಾನ್ಯ ವ್ಯವಸ್ಥೆಯೊಳಗಿನ ಕೆಳಸ್ಥರದಲ್ಲಿ ಅವರನ್ನು ಪರಿಗಣಿಸಿ ಮೂರ್ತೆದಾರಿಕೆಯೇ ಇವರ ಪ್ರಮುಖ ವೃತ್ತಿ ಎಂಬುದಾಗಿ ಇತಿಹಾಸದ ಒಂದು ಕಾಲಘಟ್ಟದಿಂದ, ಉದ್ದೇಶ ಪೂರ್ವಕವಾಗಿಯೇ ಒಂದು ತೆರನಾದ ಅಸ್ಪ್ರಶ್ಯತೆಯ ಸ್ವರೂಪವನ್ನು ನೀಡಲಾಯಿತು. ಬಿಲ್ಲವರು ಒಟ್ಟಾದರೆ ಅವರ ಶಕ್ತಿಯ ಮುಂದೆ ತಾವೆಲ್ಲರೂ ಮಂಕಾಗಿ ಅವರ ಅಡಿಯಾಳಾಗ ಬೇಕಾಗಬಹುದೇನೋ ಎಂಬ ಭಯದಿಂದ ಅಲ್ಪಸಂಖ್ಯಾತ ಆದರೆ ಜಾತಿ ವ್ಯವಸ್ಥೆಯಲ್ಲಿ ಬಿಲ್ಲವರಿಗಿಂತ ಮೇಲೆಂಬ ಪೊಳ್ಳು ವೇದಾಂತವನ್ನು ಮುಂದಿರಿಸಿಕೊಂಡು ಬಂದಿರುವ ಸ್ವಾರ್ಥಪರ ಪಂಗಡಗಳು, ಬಿಲ್ಲವರ ಮುಗ್ಧತೆ, ಒಳ್ಳೆಯತನವನ್ನು ಬಳಸಿ, ಬಿಲ್ಲವರನ್ನು ದಾಸ್ಯಕ್ಕೆ ನೂಕುವ ಕಾರ್ಯದಲ್ಲಿ ಸಫಲರಾಗಿ, ಈಗಲೂ ಅದನ್ನೇ ಮುಂದುವರೆಸುವ ಪ್ರಯತ್ನ ಮಾಡುತ್ತಿದೆ. ಇದನ್ನು ಅರಿಯಲು ವಿಫಲರಾಗಿರುವ ಹಿರಿಯರು ಸಾಗುತ್ತಿರುವ ನೀರಿನೊಂದಿಗೆ ತೇಲಿ ಹೋಗುತ್ತಿದ್ದಾರೆ. ನಮ್ಮ ಸಮಾಜವನ್ನು ಬಲಪಡಿಸುವ ಸಂಘಟನೆಯ ಶಕ್ತಿಯನ್ನು ಅರಿಯಲು ನಮ್ಮ ಯುವಕರು ಇನ್ನೂ ಪ್ರಯತ್ನಿಸಿಲ್ಲ. ಅಂತಹ ಪ್ರಯತ್ನವನ್ನು ಮಾಡುವ ಕೇವಲ ಬೆರಳೆಣಿಕೆಯಷ್ಟು ಯುವಕರಿಗೆ, ಧರ್ಮಜಾತಿ ಎಂಬ ನೀತಿ ಪಾಠವನ್ನು ಮಾಡಲಾಗುತ್ತಿದೆ. ಇಂತಹ ವಶೀಕರಣಕ್ಕೆ ಒಳಗಾಗಿರುವ ಹಲವು ಯುವಕರನ್ನು ವಾಸ್ತವಕ್ಕೆ ತರಲು ನಾವು ಶಕ್ತರೇ?

ಈ ಸಂದರ್ಭದಲ್ಲಿ ಒಂದುಕತೆ ನೆನಪಿಗೆ ಬರುತ್ತದೆ, ಒಂದು ಗರ್ಭಿಣಿ ಸಿಂಹಿಣಿ ಅಗಾಗ್ಯೆ ಕುರಿ ಮಂದೆಗಳ ಮೇಲೆ ದಾಳಿ ಮಾಡುತ್ತಿದ್ದು, ಒಮ್ಮೆ ಕುರಿ ಮಂದೆಗಳ ಮೇಲೆ ಎರಗಿ ದಾಳಿ ಮಾಡುವಾಗ ತನ್ನ ಮರಿಗೆ ಜನ್ಮ ನೀಡಿ ಅಸುನೀಗಿತು. ಹುಟ್ಟಿದ ಆ ಮರಿ ಸಿಂಹ ಕುರಿ ಮಂದೆಗಳ ಜೊತೆ ಸೇರಿ ಹುಲ್ಲನ್ನು ಮೇಯುತ್ತಾ, ಕುರಿ ಮರಿಗಳ ಜೊತೆ ಆಟ ಆಡುತ್ತಾ ತಾನೇ ಕುರಿಮರಿಯಾಗಿತ್ತು. ಸಿಂಹಗಳ ಘರ್ಜನೆ ಕೇಳುವಾಗ ಹೆದರಿ ಇತರ ಕುರಿಗಳೊಂದಿಗೆ ಪರಾರಿಯಾಗುತ್ತಿತ್ತು. ಒಂದು ದಿನ ಸಿಂಹವೊಂದು ಈ ಕುರಿ ಮಂದೆಗಳ ಮೇಲೆ ದಾಳಿ ಮಾಡುವಾಗ, ಓಡುತ್ತಿರುವ ಈ ಮರಿ ಸಿಂಹವನ್ನು ಕಂಡು ಆಶ್ಚರ್ಯಪಟ್ಟಿತು, ಓಡಿ ಹೋಗಿ ಆ ಸಿಂಹದ ಮರಿಯನ್ನು ತಡೆದು ಏ ನಿಲ್ಲು! ನೀನು ಕೂಡಾ ನನ್ನಂತೆ ಸಿಂಹ! ನೀನು ನನ್ನನ್ನು ನೋಡಿ ಓಡುವ ಅಗತ್ಯವಿಲ್ಲ, ನಿನ್ನ ಆಹಾರ ಮಾಂಸ ಹುಲ್ಲಲ್ಲ, ಎಂದು ಹೇಳಿದರೂ, ಆ ಮರಿ ಸಿಂಹ ಕೇಳದೆ, ಇಲ್ಲ ನಾನು ಕುರಿ ಮರಿ ಎನ್ನುತ್ತಾ ಮತ್ತಷ್ಟು ವೇಗವಾಗಿ ಓಡತೊಡಗಿತು. ಆ ಮರಿಯನ್ನು ತಡೆದು ಒಂದು ನೀರಿನ ತೊರೆಯ ಬಳಿ ಕೊಂಡೊಯ್ದ ಸಿಂಹ ನೀರಿನಲ್ಲಿ ಆ ಮರಿಯ ಪ್ರತಿಬಿಂಬ ತೋರಿಸಿ ನೋಡಲ್ಲಿ ನೀನು ಕೂಡಾ ನನ್ನಂತೆ ಇರುವೆ, ಬಾ ಘರ್ಜಿಸು! ಮರಿಸಿಂಹ ನಿಧಾನವಾಗಿ ಘರ್ಜಿಸಲು ಪ್ರಯತ್ನಿಸಿ ಕೊನೆಗೊಮ್ಮೆ ಸಂಪೂರ್ಣ ಘರ್ಜನೆಯನ್ನು ಮಾಡಿ ಹೆಮ್ಮೆಯಿಂದ ಬೀಗಿತು. ಸ್ನೇಹಿತರೆ, ನಾವೆಲ್ಲ ಆ ಸಿಂಹದಂತೆ ಇರುವವರು. ನಮ್ಮನ್ನು ನಾವೇ ಏಕೇ ಕುರಿಗಳೆಂದು ಭಾವಿಸಬೇಕು? ನಮ್ಮ ಸಮುದಾಯದ ಶಕ್ತಿಯನ್ನು ಬಲ್ಲ ಹೇಡಿಗಳು ನಮ್ಮನ್ನು ಕುರಿಗಳು ಎಂದು ಬಿಂಬಿಸುವ ಶತ ಪ್ರಯತ್ನವನ್ನು ನಡೆಸಿರುವುದಂತು ಖಚಿತ! ಆದರೆ ನಾನು ಸಿಂಹ ಎಂದು ಘರ್ಜಿಸಲು ನಮ್ಮ ಯುವಕರಲ್ಲಿ ಆತ್ಮ ವಿಶ್ವಾಸವಿದೆಯೇ?

ನಮ್ಮ ಯುವಕರಲ್ಲಿ ಆತ್ಮ ವಿಶ್ವಾಸದ ಕೊರತೆ ಇದೆಯೇ? ಹೌದು ಖಂಡಿತ !

ಏಳಿ ಎಚ್ಚರಗೊಳ್ಳಿ, ಜಾಗ್ರತರಾಗಿ, ನಿಮ್ಮೊಳಗಿನ ದಿವ್ಯತೆಯನ್ನು ಪ್ರಕಟಗೊಳಿಸಿ. ಆತ್ಮವಿಶ್ವಾಸ ಸಂಪನ್ನನಾದ ವ್ಯಕ್ತಿ ಪಡೆಯಲಾಗದ ವಸ್ತುವೇ ಇಲ್ಲ ಎಂಬುದು ಸ್ವಾಮಿ ವಿವೇಕಾನಂದರ ಗುಡುಗು ನುಡಿಯನ್ನು ನಮ್ಮ ಯುವಜನತೆ ಇನ್ನೂ ಅರ್ಥೈಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಸಕಾರತ್ಮಕ ಆಲೋಚನೆಗಳಿಂದ ಜೀವನವನ್ನು ಮುಂದುವರಿಸಿಕೊಂಡು ಹೋದರೆ ಜೀವನವೊಂದು ಬಹು ದೊಡ್ಡ ಸಮರವೇ ಆದರೂ ಗೆಲುವು ನಮ್ಮದೆ!

ಪ್ರತಿಯೊಬ್ಬ ವ್ಯಕ್ತಿಯೂ ತನ್ನಲ್ಲಿ ಪ್ರತಿಭೆಯನ್ನು ಹುದುಗಿಸಿಕೊಂಡು ಹುಟ್ಟುತ್ತಾನೆ. ಈ ಪ್ರತಿಭೆಯು ಪ್ರಕಟಗೊಳ್ಳಲು ಸರಿಯಾದ ಅವಕಾಶ ಸಂದರ್ಭಗಳು ಉದಿಸಿ ಬರಬೇಕು. ಎತ್ತರಕ್ಕೇರುವಾಗ ಏಣಿಯನ್ನು ನಿಲ್ಲಿಸಲು ಭದ್ರ ನೆಲೆ ಬೇಕಾದಂತೆ, ಬಾಳಿನಲ್ಲೂ ಎತ್ತರಕ್ಕೇರಲು ನಂಬಿಕೆಯ ಧೃಢ ನೆಲೆ ಬೇಕು. ಯಶಸ್ಸು ಮತ್ತು ಆತ್ಮ ವಿಶ್ವಾಸ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಬಹಳಷ್ಟು ಕ್ಷೇತ್ರದಲ್ಲಿ ನಮ್ಮ ಯುವಕರು ಇತರರಿಗೆ ಪೈಪೋಟಿ ನೀಡಲು ವಿಫಲರಾಗುತ್ತಾರೆ. ಆತ್ಮ ವಿಶ್ವಾಸದ ಕೊರತೆ ನಮ್ಮ ಯುವಕರ ಯಶಸ್ಸಿನ ಹಿನ್ನಡೆಗೆ ಕಾರಣವಾಗಿರುತ್ತದೆ. ಇರುವೆ ತನ್ನ ಆಹಾರವನ್ನು ಬಾಯಿಯಿಂದ ಕಚ್ಚಿಕೊಂಡು ಹೋಗುತ್ತದೆ. ಆ ಆಹಾರ ಕೆಳಗೆ ಬಿದ್ದರೂ ಮತ್ತೆ ಹಿಂದಕ್ಕೆ ಬಂದು ಆ ಆಹಾರವನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗುತ್ತದೆ. ಈ ಕ್ರಿಯೆಯು ತನ್ನ ಆಹಾರವನ್ನು ಗುಡಾಣದವರೆಗೆ ಸಾಗಿಸುವವರೆಗೂ ಮುಂದುವರೆಯುತ್ತದೆ. ಇದನ್ನೆ ಆತ್ಮವಿಶ್ವಾಸವೆನ್ನುವುದು. ಆ ಸಣ್ಣ ಇರುವೆಯ ಕಾರ್ಯವೈಖರಿ ನಮಗೆ ಮಾದರಿಯಾಗಲಿ.

ಸರಿ ಈ ಅತ್ಮವಿಶ್ವಾಸವೊಂದೇ ಸಾಕೇ ನಮ್ಮ ಯಶಸ್ಸಿನ ಪಯಣಕ್ಕೆ? – ಖಂಡಿತ ಇಲ್ಲ! ಇದರೊಂದಿಗೆ ಇಂದ್ರಿಯಗಳನ್ನು ನಿಗ್ರಹಿಸಿದರೆ ಅದು ನಮ್ಮ ಆತ್ಮಜಾಗೃತಿಗೆ ಸಹಕಾರಿಯಾಗಿರುತ್ತದೆ – ಕೆಲವೊಮ್ಮೆ ನಮ್ಮ ಇಂದಿ ನಾಳಿ ಲೋಕವಂ ಸಂತಯಿಪ ಬಂಧುಜೀವನ್ಮುಕ್ತ – ಮಂಕುತಿಮ್ಮ

ಇಂದ್ರಿಯ ನಿಗ್ರಹ ಶಕ್ತಿ ಮತ್ತು ಆತ್ಮವಿಶ್ವಾಸದ ಒರತೆಯು ನಮ್ಮೆಲ್ಲರಲ್ಲಿ ತುಂಬಲಿ ಅದು ನಮ್ಮ ಯುವಜನರಲ್ಲಿ ಸಿಂಹ ಘರ್ಜನೆಯನ್ನು ಉಂಟು ಮಾಡಲಿ ಎಂಬುದೇ ನಮ್ಮೆಲ್ಲರ ಆಶಯ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!