ಬಜಪೆ : ಯುವವಾಹಿನಿ (ರಿ) ಬಜಪೆ ಘಟಕದ “ಆಟಿದ ನೆಂಪು” ಕಾರ್ಯಕ್ರಮವು 28-07-2024 ಭಾನುವಾರ ಬಜಪೆ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಜರುಗಿತು.
ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಸುಂಕದಕಟ್ಟೆ ಪ್ರಾಂಶುಪಾಲರು ಡಾ.ಲತಾ ಆರ್. ಕೋಟ್ಯಾನ್ ತುಳುನಾಡ ಸಂಸ್ಕೃತಿ ಬಿಂಬಿಸುವ ಚೆನ್ನೆ ಮನೆ ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಬಜಪೆ ಘಟಕದ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಶ್ಲಾಘನೀಯ ಮಾತನ್ನಾಡಿದರು.
ಸಂದೇಶ್ ಕುಮಾರ್ ಬಡಗಬೆಳ್ಳೂರು ನಾರಾಯಣ ಗುರುಗಳ ಭಕ್ತಿಗೀತೆ ಟ್ರೈಲರ್ ಬಿಡುಗಡೆಗೊಳಿಸಿ ಆಟಿಯ ವಿಶೇಷತೆ ಬಗ್ಗೆ ಹಿಂದಿನ ಕಾಲದ ಆಟಿಯ ತಿಂಗಳಿನ ಕಷ್ಟಗಳ ಬಗ್ಗೆ ಈಗಿನ ಯುವ ಪೀಳಿಗೆಗೆ ತಿಳಿ ಹೇಳುವುದು ಹಾಗೂ ಅಳಿವಿನಂಚಿನಲ್ಲಿರುವ ಸಂಸ್ಕೃತಿಯನ್ನು ಉಳಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಉಪನ್ಯಾಸನಿತ್ತರು.
ಮುಖ್ಯ ಅತಿಥಿಗಳು ವಿ.ಜೆ. ಮಧುರಾಜ್ ಖ್ಯಾತ ನಿರೂಪಕರು, ಲೋಕೇಶ್ ಕೋಟ್ಯಾನ್, ಪ್ರಥಮ ಉಪಾಧ್ಯಕ್ಷರು ಯುವವಾಹಿನಿ (ರಿ) ಕೇಂದ್ರ ಸಮಿತಿ, ಶಿವರಾಮ್ ಪೂಜಾರಿ ಅಧ್ಯಕ್ಷರು ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬಜಪೆ -ಕರಂಬಾರು, ರೋಹಿಣಿ ರಾಜೇಶ್ ಕಾರ್ಯದರ್ಶಿ ಯುವವಾಹಿನಿ (ರಿ) ಬಜಪೆ, ಕಾರ್ಯಕ್ರಮ ಸಂಚಾಲಕರು ಚಿತ್ತರಂಜನ್ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರಂಜನ್ ಕರ್ಕೇರ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ವಿದ್ಯಾರ್ಥಿ ವೇತನ ಪ್ರತಿಭಾ ಪುರಸ್ಕಾರ
ಸ್ಥಳೀಯ 10 ನೇ ತರಗತಿ, ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಈ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನಕ್ಕೆ ಆರ್ಥಿಕವಾಗಿ ಸಹಾಯವಿತ್ತ ಸುಕುಮಾರ್ ಸಾಲ್ಯಾನ್ ಮತ್ತು ಯಶೋಧ ಸುಕುಮಾರ್ ಸಾಲ್ಯಾನ್ ಹಾಗೂ ಸರಿತಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ವಿನೋಧರ ಪೂಜಾರಿ ಇವರನ್ನು ಗೌರವಿಸಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದು ಡಾಕ್ಟರೇಟ್ ಪದವಿ ಸ್ವೀಕರಿಸಿದ ಶಿಲ್ಪಾ ದಿನೇಶ್ ಇವರನ್ನು ಸನ್ಮಾನಿಸಲಾಯಿತು. ಪೂಜಾ ಕಿರಣ್ ಅತ್ತೋಲಿಗೆ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು.
ಯುವವಾಹಿನಿ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.