ಮಂಗಳೂರು : ಪ್ರತಿಯೊಬ್ಬರ ಜೀವನದಲ್ಲೂ ಪ್ರತಿದಿನವೂ ವಿದ್ಯಾರ್ಥಿ ಜೀವನವೇ ಆಗಿದೆ, ಪ್ರತಯೊಬ್ಬರಿಂದಲೂ ನಾವು ಕಲಿಯುವ ವಿಷಯ ಸಾಕಷ್ಟಿರುತ್ತದೆ. ಪ್ರತಿ ದಿನವೂ ತಿಳಿಯುವುದೇ ಒಂದು ಜೀವನ ಈ ನಿಟ್ಟಿನಲ್ಲಿ ಯುವವಾಹಿನಿ ಹಮ್ಮಿಕೊಂಡಿರುವ ಚತುರ್ಮುಖ ಒಂದು ಹೊಸ ಮತ್ತು ಉತ್ತಮ ಪ್ರಯತ್ನ, ಇಲ್ಲಿ ಎಲ್ಲರೂ ಜೊತೆಯಾಗಿ ಕಲಿಯುವ ಅವಕಾಶ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಯುತ ಕೆ.ಎಸ್ ಬಿಳಗಿ ತಿಳಿಸಿದರು. ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಪುರಭವನದಲ್ಲಿ ಹಮ್ಮಿಕೊಂಡಿದ್ದ ಕಾನೂನು, ನ್ಯಾಯ, ಲೇಖನಿ ಮತ್ತು ಮನಶಾಸ್ತ್ರದ ಜೊತೆ ವಿದ್ಯಾರ್ಥಿಗಳ ಮುಖಾಮುಖಿ ಕಾರ್ಯಕ್ರಮ ಚತುರ್ಮುಖವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಯೋಗ, ಸಂಪರ್ಕ ಎಂಬ ಮೂರು ಮುಖ್ಯ ಧ್ಯೇಯದೊಂದಿಗೆ ಸಾಮಾಜಿಕ ಸೇವೆಯಲ್ಲಿ ಮೂವತ್ತು ಸಂವತ್ಸರಗಳನ್ನು ಸಾರ್ಥಕದಿಂದ ಕಳೆದು ಈ ಬಾರಿಯ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ನಮ್ಮ ಸಂಸ್ಥೆಯು ಒಂದು ಹೊಸ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿದ್ದು ಮಾನಸಿಕ ತುಮುಲಗಳಿಗೆ ಉತ್ತರ ಕಂಡುಕೊಳ್ಳಲಾಗದೆ ನಲುಗುತ್ತಿರುವ ಯುವ ಸಮುದಾಯಕ್ಕೆ, ಬುದ್ದಿಗೆ ಕೆಲಸ ಕೊಡದೆ ಆತುರದ ನಿರ್ಧಾರದಿಂದ ಸಮಸ್ಯೆಯ ಸುಳಿಯೊಳಗೆ ಸಿಲುಕುತ್ತಿರುವ ಯುವ ಸಮುದಾಯದ ಜೊತೆಗೆ ನೇರಾ ನೇರಾ ಮಾತುಕತೆಗೆ ವೇದಿಕೆಯನ್ನು ಸಿದ್ಧಗೊಳಿಸಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯವಾಗಿ ವಿದ್ಯಾರ್ಥಿಗಳ ಸವಾಲುಗಳು ಇರುವುದು ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ಮತ್ತು ಮನಶಾಸ್ತ್ರದ ಜೊತೆಗೆ, ಇದು ನಮ್ಮ ಸಾಮಾಜಿಕ ವ್ಯವಸ್ಥೆಯ ಚತುರ್ಮುಖ.
ತನ್ನ ಜೀವನದ ದಿನಗಳನ್ನು ನ್ಯಾಯಾಂಗದಲ್ಲಿ ಗಳಿಸದ ಅನುಭವವನ್ನು ಎಳೆಎಳೆಯಾಗಿ ವಿವರಿಸಿ ಬದುಕಿನ ಜೊತೆಯಾಗಿ ವಿದ್ಯಾರ್ಥಿಗಳಿಗೆ ಅನುಭವ ಪಾಠ ಹೇಳಿದ ನ್ಯಾಯಾಧೀಶರ ಮಾತು ಪರಿಣಾಮಕಾರಿಯಾಗಿತ್ತು. ಮುಖ್ಯ ಅತಿಥಿಯಾಗಿ ಮಾತನಾಡಿದ ಉದಯವಾಣಿ ದೈನಿಕದ ಮಂಗಳೂರು ವಿಭಾಗದ ಚೀಫ್ ಬ್ಯೂರೋ ಮನೋಹರ್ ಪ್ರಸಾದ್ ಮಾತನಾಡಿ, ಚತುರ್ಮುಖ ಅನ್ನುವ ಪರಿಕಲ್ಪನೆಯೇ ವಿಭಿನ್ನವಾದುದು, ಇಂದು ಚತುರ್ಮುಖ ಯಶಸ್ವಿಯಾಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಯುವವಾಹಿನಿಯವರ ಕಾರ್ಯಬದ್ಧತೆ ಮತ್ತು ಕಾರ್ಯನಿಷ್ಠತೆ, ಯುವವಾಹಿನಿಯ ಜೊತೆ ನನಗೆ ನಿತಟ ಸಂಪರ್ಕವಿದೆ, ಈ ಸಂಸ್ಥೆಯನ್ನು ಗಮನಿಸುತ್ತಾ ಬಂದಿದ್ದೇನೆ, ಸಮಾಜಕ್ಕೆ ಏನನ್ನಾದರೂ ನೀಡಬೇಕು ಎನ್ನುವ ಅವರ ಪ್ರಾಮಾಣಿಕ ಪ್ರಯತ್ನ ಇಂದು ಸಂಸ್ಥೆಯ ನಿಜವಾದ ಯಶಸ್ಸು ಎಂದರು.
ಉದ್ಘಾಟನಾ ಸಮಾರಂಭದ ಬಳಿಕ ಒಂದೇ ವೇದಿಕೆಯಲ್ಲಿ ಕಾನೂನು, ನ್ಯಾಯ, ಲೇಖನಿ ಮತ್ತು ಮನಶಾಸ್ತ್ರಜ್ಞರೆ ಜೊತೆ ಸಂವಾದ ನಡೆಯಿತು. ಸಂವಾದದಲ್ಲಿ ನ್ಯಾಯದ ಅಂಗಣದಲ್ಲಿ ಹಿರಿಯ ವಕೀಲರಾದ ಶ್ರೀ ನಾರಾಯಣ ಟಿ. ಪೂಜಾರಿ, ಪ್ರಾಸ್‌ಕ್ಯೂಟರ್ ಲೋಕಾಯುಕ್ತ ಶ್ರೀ ರಾಜೇಶ್ ಕೆ.ಎಸ್.ಎನ್, ಮನಶಾಸ್ತ್ರ ವಿಭಾಗದಲ್ಲಿ ಖ್ಯಾತ ಮನೋ ವೈದ್ಯರುಗಳಾದ ಡಾ.ರವೀಶ್ ತುಂಗಾ ಮತ್ತು ಡಾ. ಅರುಣಾ ಯಡಿಯಾಲ್, ಕಾನೂನು ವಿಭಾಗದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶ್ರೀ ಮಂಜುನಾಥ್ ಮತ್ತು ಶ್ರೀ ರವೀಶ್ ನಾಯ್ಕ್, ಲೇಖನಿ ವಿಭಾಗದಲ್ಲಿ ಪ್ರಜಾವಾಣಿ ದೈನಿಕದ ಚೀಫ್ ರಿಪೋರ್ಟರ್ ಶ್ರೀ ಬಾಲಕೃಷ್ಣ ಪುತ್ತಿಗೆ ಮತ್ತು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಪಿ.ಬಿ ಹರೀಶ್ ರೈ ಭಾಗವಹಿಸಿ ವಿದ್ಯಾರ್ಥಿಗಳ ನೇರಾನೇರಾ ಪ್ರಶ್ನೆಗಳಿಗೆ ಉತ್ತರ ನೀಡಿದರು. ಮಂಗಳೂರು, ಪುತ್ತೂರು, ಸುರತ್ಕಲ್ ಮತ್ತು ಮೂಲ್ಕಿಯ ವಿವಿಧ ಕಾಲೇಜಿನ ೩೯೬ ಮಂದಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂವಾದದಲ್ಲಿ ಸಕ್ರೀಯವಾಗಿ ಭಾಗವಹಿಸಿ ಅತ್ಯುತ್ತಮ ಪ್ರಶ್ನೆ ಕೇಳಿದ ಮೂವರು ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಪ್ರಾಸ್ತವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಧನ್ಯವಾದ ನೀಡಿದ್ದು, ಉಪಾಧ್ಯಕ್ಷರಾದ ನರೇಶ್ ಕುಮಾರ್ ಸಂವಾದ ನಡೆಸಿಕೊಟ್ಟರು. ಉಪಾಧ್ಯಕ್ಷರಾದ ಜಯಂತ ನಡುಬೈಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಉತ್ತಮ ಕಾರ್ಯಕ್ರಮ..
Helpful programme for all.