ಮಂಗಳೂರು: ಯುವವಾಹಿನಿ (ರಿ) ಶಕ್ತಿನಗರ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸಹಯೋಗದಲ್ಲಿ 09-06-2024ನೇ ಆದಿತ್ಯವಾರ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ ಮತ್ತು ಸಂಘಟನಾ ಕಾರ್ಯದರ್ಶಿಯಾದ ದೀಕ್ಷಿತ್ ಪೂಜಾರಿ ಮತ್ತು ಘಟಕದ ಅಧ್ಯಕ್ಷರಾದ ಗಣೇಶ್ ಕೆ. ಮಹಾಕಾಳಿ, ಉಪಾಧ್ಯಕ್ಷರಾದ ತುಕಾರಾಂ, ಕಾರ್ಯದರ್ಶಿ ಅಕ್ಷತಾ ಚರಣ್ ಇವರು ಉಪಸ್ಥಿತರಿದ್ದರು.
ಉತ್ತಮ ಶ್ರೇಣಿಯಲ್ಲಿ ಅಂಕ ಪಡೆದ ಕೃತಿ, ಆದಿತ್ಯ, ಲಿಖಿತ ಇವರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಘಟಕದ ಜೊತೆ ಕಾರ್ಯದರ್ಶಿಯ ಪತಿಗೆ ಆರೋಗ್ಯದ ಸಮಸ್ಯೆ ಇದ್ದ ಕಾರಣ, ಘಟಕದ ವತಿಯಿಂದ
ಧನಸಹಾಯ ನೀಡಲಾಯಿತು. ಕೇಂದ್ರ ಸಮಿತಿಯ ಪ್ರಚಾರ ನಿರ್ದೇಶಕರಾದ ಪೃಥ್ವಿರಾಜ್ ಮತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು.