ವಿಶುಕುಮಾರ್ ಎಂಬ ಬರಹಗಾರನ ಕಥೆ-11 : ರವಿರಾಜ್ ಅಜ್ರಿ

ಅನ್ಯಾಯಗಳ ವಿರುದ್ಧ ಬರವಣಿಗೆ

ಕಳೆದ ಸಂಚಿಕೆಗಳಲ್ಲಿ ವಿಶುಕುಮಾರ್ ಅವರು ತನ್ನ 30 ರ ಹರೆಯದ ಒಳಗಿನ ಅಂದರೆ 1965 ರ ಮೊದಲು ಬರೆದ ಲೇಖನ, ಕಾದಂಬರಿ, ನಾಟಕಗಳ ಬಗ್ಗೆ ಬರೆದಿದ್ದೇವು. ಮುಂದಿನ ಸಂಚಿಕೆಗಳಲ್ಲಿ 1975 ರ ಒಳಗೆ ಅವರ ಬರವಣಿಗೆ, ಯೋಚನಾ ಮಟ್ಟ, ಸಾಧನೆಗಳ ಕುರಿತು ಬರೆಯುತ್ತೇವೆ.

1965 ರಲ್ಲಿ ವಿಶುಕುಮಾರ್ ಅವರು ರಾಜ್ಯ ಸರಕಾರದ ಮುಜರಾಯಿ ಇಲಾಖೆಗೆ ಅಧಿಕಾರಿಯಾಗಿ ನೇಮಕಗೊಂಡರು. ಅವರು ಕುಂದಾಪುರದಲ್ಲಿ ಕೆಲಸ ಮಾಡತೊಡಗಿದರು. ‘ ಎಂಡೋಮೆಂಟ್ ‘ ಆಗಿರುವ ದೇವಾಲಯಗಳ ಲೆಕ್ಕ ಪರಿಶೋಧನೆ ಮಾಡುವುದೇ ಇವರ ಕೆಲಸ. ಹಾಗಾಗಿ ಅವಳಿ ಜಿಲ್ಲೆಯ ನಾಡಿನ ದೇವಾಲಯಗಳಿರುವ ಜಾಗಗಳಿಗೆ ಹೋಗುವುದು ಇವರಿಗೆ ಅನಿವಾರ್ಯ ಬಂತು. ಈ ಸಮಯಗಳಲ್ಲೇ ಅವರಿಗೆ ಮೇಲ್ವರ್ಗದವರ ಪರಿಚಯ, ಒಡನಾಟ ಆಗತೊಡಗಿದ್ದು .

ದೇವಾಲಯ‘ ಅಂದಾಕ್ಷಣ ಅದರ ಆಡಳಿತ ಕುಂದಾಪುರ- ಪುತ್ತೂರು ಕಡೆ ಶೆಟ್ಟರು- ಬಂಟರು( ಒಕ್ಕಲಿಗರಿಗೆ) ,ಬೆಳ್ತಂಗಡಿ- ಕಾರ್ಕಳ ಕಡೆ ಜೈನರು, ಉಡುಪಿಯಲ್ಲಿ ಬ್ರಾಹ್ಮಣರ ಕೈಯಲ್ಲಿದೆ. ಮಂಗಳೂರು- ಬಂಟ್ವಾಳ: ಕೆಲವು ದೇವಸ್ಥಾನಗಳ ಬ್ರಾಹಣ್ಮರ ಕೈಯಲ್ಲೂ, ಕೆಲವು ಜೈನರ ಹಾಗೂ ಶೆಟ್ಟರ ಆಡಳಿತದಲ್ಲೂ ಇವೆ. ಆದರೆ ಪೂಜೆ ಮಾಡುವ ಅರ್ಚಕರು ಎಲ್ಲ ದೇವಾಲಯಗಳಲ್ಲೂ ಬ್ರಾಹ್ಮಣರಾಗಿದ್ದಾರೆ. ಏನಿದು ವಿಪರ್ಯಾಸವೆಂದರೆ, ಈ ದೇವಾಲಯಗಳ ಲೆಕ್ಕ ಪರಿಶೋಧಕ ‘ ಬಿಲ್ಲವ’ ಸಮಾಜಕ್ಕೆ ಸೇರಿದವರಾದ ವಿಶುಕುಮಾರ್! ಆಗಿದ್ದು ಎಡವಟ್ಟು ಇಲ್ಲೇ- ವಿಶುಕುಮಾರ್ ಅವರ ಮನಸ್ಸಿಗೆ ಒಂದೊಂದೇ ಆಘಾತಗಳು ಆಗ ತೊಡಗಿದ್ದವು ಈ ಸಮಯದಲ್ಲೇ- ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ – ಜಾತಿಯ ಕಟ್ಟುಪಾಡುಗಳು ಹಂತಹಂತವಾಗಿ ಕೆಳಗಿಳಿಯ ತೊಡಗಿರುವುದು ಇದೇ ಸಮಯಗಳಲ್ಲಿ-

ಬರಹಗಾರ ವಿಶುಕುಮಾರ್ ಸುಮಾರು 12 ವರ್ಷಗಳ ಕಾಲ ಕಷ್ಟಪಟ್ಟು ಈ ರಂಗದಲ್ಲಿ ಅವಮಾನ, ಕೀಳರಿಮೆ, ಕೆಲವು ಕಡೆ ಪ್ರತಿಭಟನೆ ಮಾಡಿ 1977 ರಲ್ಲಿ ಕೆಲಸಕ್ಕೆ ರಾಜಿನಾಮೆ ಕೊಟ್ಟರು. ಆದರೂ ಇವರ ಸೇವೆಯನ್ನು ಮೆಚ್ಚಿ ” ಕಲಾಪ್ರಜ್ಞಾ ” ಬಿರುದನ್ನು ನೀಡಿದ್ದಾರೆ!ಈ ಹನ್ನೆರಡು ವರ್ಷಗಳ ಅನುಭವವೇ, ಕೆಲಸದಲ್ಲಿದ್ದು ಕೊಂಡೇ ಬರವಣಿಗೆ ತೊಡಗಿದರು. ” ನಾನು ಎಲ್ಲಿಯವರೆಗೆ ಮೋಸ ಮಾಡದೆ, ಅನ್ಯಾಯಮಾಡದೆ ಬದುಕಿರುತ್ತೇವೊ, ಅಲ್ಲಿಯವರೆಗೂ ನನ್ನ ಸ್ವಾತಂತ್ರ್ಯವನ್ನು ಯಾರೂ ಕಸಿಯಲಾರರು, ಬೆಲೆಗೆ ಕೊಂಡು ಕೊಳ್ಳಲಾರರು ” – ಇದು ವಿಶುಕುಮಾರರು ಆಗಾಗ ಹೇಳುವ ಮಾತುಗಳು.

ಇನ್ನೊಂದು ಅವರ ನುಡಿಮುತ್ತು ಕೇಳಿ:  ಜನ ಬಲ- ಹಣ ಬಲವಿಲ್ಲದಿದ್ದರೂ ಎಂದಿಗೂ ಯಾರಿಗೂ ಹೆದರದೆ, ತನ್ನ ಮೇಲೆ ಅನ್ಯಾಯವಾದಾಗ ಅದನ್ನು ಸಹಿಸದೇ ಛಲ ಮತ್ತು ಸ್ವಾಭಿಮಾನದಿಂದ ಹೋರಾಡಬೇಕು” ಎಂದು. ಇದನ್ನು ವಿಶುಕುಮಾರ್ ಅವರು ತನ್ನ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದಾರೆ.

‘ ದೇವಾಲಯ’ ಗಳಲ್ಲಿ ನಡೆಯುವ ಅನಾಚಾರ, ಮೋಸ, ಜಾತಿ,ಮೇಲು-ಕೀಳು- ಇವುಗಳ ಮೇಲೊಗರವೇ ವಿಶುಕುಮಾರ್ ಅವರು ಎರಡು ಕಾದಂಬರಿಗಳನ್ನು ಬರೆಯಲು ಕಾರಣವಾದವು. ಒಂದು ‘ ಭಗವಂತನ ಆತ್ಮ ಕಥೆ ‘; ಇನ್ನೊಂದು ‘ ಕರ್ಮ’. ಈ ಎರಡು ಕಾದಂಬರಿಗಳನ್ನು ಓದಿದವರು, ಅಲ್ಲಿ ಅವರು ಬಳಸಿಕೊಂಡಿರುವ ಭಾಷೆ, ಪಾತ್ರ ವರ್ಗಗಳ ರಚನೆ, ಆಯ್ಕೆ ಮಾಡಿಕೊಂಡಿರುವ ವಸ್ತು – ಇವುಗಳನ್ನು ನೋಡಿಯೇ ವಿಶುಕುಮಾರ್ ಅವರು ಮೇಲ್ವರ್ಗದವರ ವಿರೋಧಿ ಎಂದು ಹೇಳುವುದು! ಆದರೆ ಇದು ಎಷ್ಟು ಸತ್ಯ.

ವಿಶುಕುಮಾರ್ ಟೀಕೆಗೆ ಎಂದೂ ಹೆದರುವವರಲ್ಲ. ಇದು ಅವರ ಗುಣ. ಮುಂದೆ ಅವರು ಬೇರೆ ಬೇರೆ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಕಾದಂಬರಿ ಬರೆದಿರುತ್ತಾರೆ. ಆ ಬಗ್ಗೆ ಮತ್ತೆ ಮುಂದಿನ ಕಂತುಗಳಲ್ಲಿ ಚರ್ಚೆಗೆ ಬರೋಣ.

ಭಗವಂತನ ಆತ್ಮ ಕಥೆ ‘- 1966 ರಲ್ಲಿ ಬರೆದ ಕಾದಂಬರಿ. ಅದು ನವಭಾರತ ದೈನಿಕ ಪತ್ರಿಕೆಯಲ್ಲಿ 12.05.1966 ರಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ” ಎಷ್ಟು ಪ್ರಶಂಸಾ ಪತ್ರಗಳು ಬಂದಿದ್ದವೊ- ಅಷ್ಟೇ ಬೈಗಳು ಬಂದಿದ್ದನ್ನು ಸಂಪಾದಕರು ನನಗೆ ತೋರಿಸಿದಾಗ ನಾವು ಹೆಮ್ಮೆ ಪಡತಕ್ಕಂತಹ ವಿಷಯವಾಗಿದೆ. ಬೈಸಿಕೊಳ್ಳುವುದಕ್ಕೆ ಯೋಗ್ಯತೆ ಬೇಕು ” ಎಂದು ವಿಶುಕುಮಾರ್ ಹೇಳುತ್ತಾರೆ. ಕಾದಂಬರಿ ಧಾರಾವಾಹಿಯಾಗಿ ಪ್ರಕಟವಾದ ನಂತರ ಒಂದು ಕಾಲು ವರ್ಷಗಳ ಬಳಿಕ ಪುಸ್ತಕ ರೂಪದಲ್ಲಿ ಬಂದದ್ದು- ಈ ಕೃತಿಯನ್ನೂ ಮಾವಿನಕೆರೆ ರಂಗನಾಥ ಅವರು ‘ ಪುರೋಗಾಮಿ ಸಾಹಿತ್ಯ ‘ ಪ್ರಕಾಶನದ ಮೂಲಕ 1968 ರಲ್ಲಿ ಪ್ರಕಟಣೆ ಮಾಡಿದ್ದರು.

ಭಕ್ತಿಯ ಕೇಂದ್ರವೆನಿಸಿದ ದೇವಾಲಯದ ಗರ್ಭಗುಡಿಯಲ್ಲೇ ಆಡಳಿತ ವ್ಯವಸ್ಥೆ ವಹಿಸಿಕೊಂಡಿರುವ ಸ್ವಾರ್ಥಿಗಳು ತಮ್ಮ ಸ್ವಪ್ರತಿಷ್ಠೆ, ಹಣದ ದಾಹದಿಂದ ದೇವರ ಎದುರಿಗೆ ಭಗವಂತನ ಹೆಸರಿನಲ್ಲಿ ಭಕ್ತರ ಸುಲಿಗೆ, ಕಾಮಕೇಳಿ, ಮೋಸ ನಡೆಸುವುದೇ ‘ ಭಗವಂತನ ಆತ್ಮ ಕಥೆ ‘ ಯ ವಸ್ತು. ಇದನ್ನು ಭಗವಂತನೇ ಡೈರಿ ರೂಪದಲ್ಲಿ ಬರೆದಿಟ್ಟು ಲೇಖನಿಗೆ ಒಪ್ಪಿಸುವ ಹೊಸ ರೀತಿಯ ಕಥನಾ ಶೈಲಿ. ನಂಬಿಕೆಗಳು ಹೇಗೆ ಒಂದು ಸಮಾಜದ ಅಭಿವೃದ್ಧಿ ಹಾಗೂ ಅಧ : ಪತನಕ್ಕೆ ದಾರಿ ಮಾಡಿಕೊಡುತ್ತದೆಂಬುದು ಕಾದಂಬರಿ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಕಾಡಿನಲ್ಲಿ ದೇವರನ್ನು ಸೃಷ್ಟಿಸಿ, ಕಾಡನ್ನು ಅಭಿವೃದ್ಧಿಸಿಪಡಿಸಿ- ಮತ್ತೆ ಹೇಗೆ ಪತನ ವಾಗುತ್ತದೆಂಬುದು ಈ ಕಾದಂಬರಿ ತಿಳಿಸುತ್ತದೆ. ವಿಶುಕುಮಾರರು ಮುಜರಾಯಿ ಇಲಾಖೆಯಲ್ಲಿದ್ದುದರಿಂದ ದೇವಾಲಯಗಳ ಒಳ, ಹೊರ ರಾಜಕೀಯವನ್ನು ತಿಳಿದಿದ್ದು, ಅದನ್ನು ಕಥನಾತ್ಮಕವಾಗಿ ಉತ್ತಮವಾಗಿ ವಿವರಿಸಿದ್ದಾರೆ.

ಹಾಗೇ ಮತ್ತೊಂದು ಕಾದಂಬರಿ ‘ ಕರ್ಮ‘. ಕನ್ನಡ ಪ್ರಭ ದೈನಿಕದಲ್ಲಿ ಪ್ರಕಟವಾದ ಕಿರು ಕಾದಂಬರಿ. 1974 ರಲ್ಲಿ ಗೀತಾ ಬುಕ್ ಹೌಸ್ ನವರು ಪ್ರಕಟಿಸಿದ್ದಾರೆ. 123 ಪುಟಗಳ ಕಾದಂಬರಿ. ಇದನ್ನು ವಿಶುಕುಮಾರ್ ಕೇವಲ 20 ದಿನಗಳಲ್ಲಿ ಬರೆದು ಮುಗಿಸಿದ್ದಾರೆ. 1974 ರ ಜುಲೈ 11 ರಂದು ಬರವಣಿಗೆ ಪ್ರಾರಂಭಿಸಿ ಜುಲೈ 31 ರಂದು ಮುಗಿಸಲಾಗಿದೆಂದು ವಿಶುಕುಮಾರ್ ಪುಸ್ತಕದ ಮುನ್ನಡಿಯಲ್ಲಿ ಬರೆದಿದ್ದಾರೆ. ” ಹತ್ತು ಹಲವು ಜೀವಂತ ವ್ಯಕ್ತಿಗಳ ರಕ್ತ ಮಾಂಸ ಸಂಸ್ಕೃತಿಗಳನ್ನು ಉಪಾಧ್ಯಾಯರ ಸೃಷ್ಟಿಯಲ್ಲಿ ಪ್ರಯತ್ನಿಸಿದ್ದೇನೆ. ೧೫ ವರ್ಷಗಳಿಂದ ಹಳ್ಳಿ ಹಳ್ಳಿಗಳನ್ನು ಮಠ, ದೇವಸ್ಥಾನ, ಭೂತ ಸ್ಥಾನಗಳನ್ನು ಸುತ್ತಿ ಸುತ್ತಿ, ಉಂಟಾದ ತಲೆ ಸುತ್ತುವಿಕೆಯ ಅನುಭವದಿಂದ ಈ ಕಿರು ಕಾದಂಬರಿ ಬರೆದಿದ್ದೇನೆ. ಬರೆಯ ಬಾರದ್ದನ್ನೆಲ್ಲಾ ಇಲ್ಲಿ ಬರೆಯಬೇಕಾಗಿ ಬಂದಿರುವುದು ನನ್ನ ಕರ್ಮ. ನಮ್ಮ ನಂಬಿಕೆ, ನಡವಳಿಕೆಗಳಿಗೆ ಇನ್ನೂ ಚಾಳೀಸು ತೊಡಿಸದೆ ಇರುವುದು ನಮ್ಮ ದೆವ್ವ ದೇವತೆಗಳ ಕರ್ಮ ” ಎಂದು ವಿಶುಕುಮಾರ್ ಕಾದಂಬರಿಯ ಬಗ್ಗೆ ಹೇಳುತ್ತಾರೆ. ಈ ಕಾದಂಬರಿ ದೈವ, ದೇವಸ್ಥಾನಗಳ ಧಾರ್ಮಿಕ ವ್ಯವಸ್ಥೆಯನ್ನು ವಿಡಂಬಿಸುತ್ತದೆ. ಅಲ್ಲಿನ ಶೋಷಣೆ, ಭ್ರಷ್ಟಾಚಾರ ನಮ್ಮೆದುರಿಗೆ ಇಡುತ್ತದೆ. ಬ್ರಾಹ್ಮಣರ ಡಾಂಭೀಕತನ, ದಲಿತನೊಬ್ಬನ ಆಶೋತ್ತರಗಳಿಗೆ ದುರಂತದ ಕೊನೆ ಕಾಣುತ್ತದೆ ಕಾದಂಬರಿ. ಕಾದಂಬರಿ ಭಾಷೆ ಕುಂದಾಪುರದ ಆಡು ಭಾಷೆಯ ಸೊಗಡಿನಲ್ಲಿದೆ. ಪ್ರಾದೇಶಿಕತೆಯ ಮೆರುಗು ಒದಗಿದೆ.

ಇನ್ನೊಂದು ಮಹತ್ವ ಕಾದಂಬರಿ ‘ಭೂಮಿ‘. ಭೂ ಮಸೂದೆಯ ಹಿನ್ನಲೆಯಲ್ಲಿ ಬರೆದ ಕಾದಂಬರಿ. ‘ ಕರ್ಮವೀರ ‘ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. 65 ಪುಟಗಳ ಕೃತಿ. ” ಕಾದಂಬರಿ ಬರೆದು, ಸುಮಾರು ಒಂದೂವರೆ ವರ್ಷ ಹಾಗೇ ಇತ್ತು. ಬಹು ದಿನಗಳ ವರೆಗೆ ಒಳಗೆಯೆ ಇರಲು ಕಾರಣ- ಇದನ್ನು ಪ್ರಕಟಿಸುವುದಕ್ಕೆ ಭಯವಿತ್ತು. ಭೂ ಮಸೂದೆಯ ಸಿಹಿ- ಕಹಿಗಳನ್ನು ಪ್ರಕಟಣೆಗೆ ಸರಕಾರ ಒಪ್ಪುವುದೋ ಇಲ್ಲವೋ ಎಂಬುದರ ಭಯ. ಲೇಖಕ ಸರಕಾರದ ವಿರುದ್ಧವಂತೂ ಏನನ್ನೂ ಬರೆಯಬಾರದು- ಆದರೆ ಪರಿಸರದ ಆಗು ಹೋಗುಗಳನ್ನು ಇದ್ದಂತೆ ಬರೆಯುವುದಕ್ಕೆ ಆತ ಹೆದರಲಾರ “- ಇದು ವಿಶುಕುಮಾರ್ ಅವರ ಅಂಬೋಣ.

‘ ಭೂ ಮಸೂದೆ ‘ ಕಾನೂನಿನ ಸಾಧಕ – ಬಾಧಕಗಳನ್ನು ಬಗ್ಗೆ ಕಾದಂಬರಿ ಚರ್ಚಿಸುತ್ತದೆ. 1974 ರಲ್ಲಿ ಕಾನೂನು ಜಾರಿಗೆ ಬಂದಾಗ, ಧನಿ ಮತ್ತು ಒಕ್ಕಲುಗಳು ಅನುಭವಿಸಿದ ತೊಂದರೆ ಕಾದಂಬರಿ ತಿಳಿಸುತ್ತದೆ. ಕಾನೂನು ಜಾರಿಗೆ ಬಂದಾಗ ಅದರ ನಿಜವಾದ ಮಾಲಿಕ ಭೂಮಿಯನ್ನು ಕಳೆದುಕೊಳ್ಳುತ್ತಾರೆ .ಉಳುವವನು ಭೂಮಿಯ ಒಡೆಯನಾಗುತ್ತಾನೆ.ಆದರೆ ಕಾದಂಬರಿಯಲ್ಲಿ ಭೂ ಮಸೂದೆ ಕಾನೂನಿನ ಮೂಲಕ ಒಕ್ಕಲಿನೊಬ್ಬ ಭೂಮಿ ಪಡೆಯುವುದರ ಬದಲು, ತನ್ನ ಇದ್ದ ಭೂಮಿ, ಮನೆ-ಮಠವನ್ನು ಕಳೆದುಕೊಳ್ಳುತ್ತಾನೆ. ಅದು ಈ ಕಾದಂಬರಿಯಲ್ಲಿದೆ . ಕಾನೂನಿನ ಹಿನ್ನಲೆಯಲ್ಲಿ ವ್ಯವಸ್ಥೆಯ ಭ್ರಷ್ಟತನದಿಂದ ಓರ್ವ ರೈತ ಮನೆ-ಮಾರುಗಳನ್ನು ಕಳೆದುಕೊಳ್ಳುವುದು ಎಂಥ ವೈಪರೀತ್ಯ. ಯಾವ ಕಾನೂನು ರೈತರ ಹಿತದೃಷ್ಟಿಗೆ ರಚಿತವಾಯಿತೋ ಅದೇ ಕಾನೂನು ರೈತನಿಗೆ ಮಾರಕವಾಗಿದೆ. ಅದನ್ನು ಈ ಕಾದಂಬರಿಯಲ್ಲಿ ವಿಶುಕುಮಾರ್ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಭೂ ಮಸೂದೆ ಕಾನೂನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ತೀವ್ರವಾಗಿ ತೊಂದರೆ ಮಾಡಿತು. ಹಾಗಾಗಿ ಇಲ್ಲಿನ ಸ್ಥಿತಿ- ಗತಿ ಕಾದಂಬರಿಯಲ್ಲಿ ನಿರೂಪಿಸಲಾಗಿದೆ. ತುಳು ನಾಡಿನ ಪ್ರಾದೇಶಿಕ ವಿವರಗಳು ಕಾದಂಬರಿಯಲ್ಲಿ ಮೂಡಿ ಬಂದಿದೆ. ತುಳು ಭಾಷೆಯ ಅನೇಕ ಪದಗಳು ಅರ್ಥಪೂರ್ಣವಾಗಿ ಕಾದಂಬರಿಯಲ್ಲಿ ಸೇರಿಕೊಂಡಿವೆ.

.- ರವಿರಾಜ ಅಜ್ರಿ
10.10.2016

               ರವಿರಾಜ ಅಜ್ರಿ

2 thoughts on “ಅನ್ಯಾಯಗಳ ವಿರುದ್ಧ ಬರವಣಿಗೆ

  1. This is a good job that Mr.Ajri is doing. One can recall the days when the legend Vishukumar lived and worked with and created history by his literature.

  2. ಇಂದಿನ ಜನಾಂಗಕ್ಕೆ ವಿಶುಕುಮಾರ್ ರನ್ನು ಪರಿಚಯಿಸಿದ ರವಿರಾಜ್ ಅಜ್ರಿಯವರಿಗೆ ವಂದನೆಗಳು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!