ಆಶಯ -ಸಿಂಚನ:- ಮೇ -2017

ಅಧ್ಯಕ್ಷರ ಮಾತು-ಪದ್ಮನಾಭ ಮರೋಳಿ

ಪದ್ಮನಾಭ ಮರೋಳಿ ಅಧ್ಯಕ್ಷರು ,ಯುವವಾಹಿನಿ (ರಿ) ಕೇಂದ್ರ ಸಮಿತಿ,ಮಂಗಳೂರು

ಆತ್ಮೀಯರೇ,
ಮಕ್ಕಳ ಪರೀಕ್ಷೆಯ ಸಮಯ ಕಳೆದು ನಾವೆಲ್ಲರೂ ಹಾಯಾಗಿ ಮಕ್ಕಳ ರಜೆಯ ಮಜಾ ಅನುಭವಿಸುತ್ತಿದ್ದೇವೆ. ಈ ಸಮಯದಲ್ಲಿ ಕುಟುಂಬದವರೆಲ್ಲರೂ ಒಟ್ಟುಗೂಡಿಕೊಂಡು ಯಾವುದಾದರೂ ಧಾರ್ಮಿಕ ಕ್ಷೇತ್ರಕ್ಕೆ ಹೋಗಿ, ಪರೀಕ್ಷೆ ಬರೆದ ಮಕ್ಕಳಿಗೆ ಒಳ್ಳೆಯ ಅಂಕ ದೊರೆಯುವಂತೆ ಹಾಗೂ ಎಲ್ಲರಿಗೂ ಒಳ್ಳೆಯದಾಗುವಂತೆ ಬೇಡುವುದರ ಜೊತೆಗೆ ನಮ್ಮ ಕೌಟುಂಬಿಕ ಸಂಬಂಧಗಳನ್ನು ಅಭಿವೃದ್ಧಿ ಪಡಿಸಿಕೊಂಡರೆ ಬಹಳ ಒಳ್ಳೆಯದು. ಪರೀಕ್ಷೆಯ ಫಲಿತಾಂಶ ಬಂದ ಮೇಲೆ ಒಳ್ಳೆಯ ಅಂಕ ಪಡೆದ ಮಕ್ಕಳನ್ನು ಸನ್ಮಾನಿಸುವ ಪರಿಪಾಠವನ್ನು ಇಟ್ಟುಕೊಳ್ಳೋಣ. ಅದೇ ರೀತಿ ಸ್ವಲ್ಪ ಕಡಿಮೆ ಅಂಕ ಪಡೆದ ಮಕ್ಕಳನ್ನು ಯಾವ ರೀತಿಯಿಂದಲೂ ತೆಗಳದೆ, ನಿರುತ್ಸಾಹಗೊಳಿಸದೆ, ನೀನು ನಿಜವಾಗಿಯೂ ಬುದ್ಧಿವಂತ, ನೀನು ಸರಿಯಾದ ರೀತಿಯಲ್ಲಿ ಪ್ರಯತ್ನ ಮಾಡಿದ್ದೆ ಆದಲ್ಲಿ, ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ನಿನಗೆ ಸಾಧ್ಯವಿದೆ ಎನ್ನುವ ಧೈರ್ಯದ ನುಡಿಗಳನ್ನು ಆಡಿ ಅವರನ್ನು ಪ್ರೋತ್ಸಾಹಿಸುವಂತಹ ಕೆಲಸವನ್ನು ತಾಯಿ ತಂದೆಯವರಾದ ನಾವೆಲ್ಲರೂ ಮಾಡೋಣ. ನಾವು ನಮ್ಮ ಮಕ್ಕಳಿಗೆ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮನದಟ್ಟಾಗುವಂತೆ ಹೇಳುವ ಹಾಗೂ ಅವರ ವಿಚಾರವಾಗಿ ಹೆಚ್ಚೆಚ್ಚು ತಿಳಿದುಕೊಳ್ಳುವಂತಹ ಪ್ರಯತ್ನವನ್ನು ಮಾಡಬೇಕಾಗಿದೆ. ನಾನು ಯಾಕೆ ಈ ಮಾತನ್ನು ಹೇಳುತ್ತೇನೆಂದರೆ, ನನಗೂ ಗುರುಗಳ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಶಿವಗಿರಿಗೆ ಪ್ರವಾಸ ಮಾಡಿದ್ದರಿಂದ, ಗುರುಗಳು ಅರವೀಪುರಂನಲ್ಲಿ ತನ್ನ ಮೊದಲ ದೇಗುಲವನ್ನು ಸ್ಥಾಪಿಸಿದಾಗ, ಮೇಲ್ವರ್ಗದ ಜನಾಂಗದವರು ಗುರುಗಳ ಶಕ್ತಿಯನ್ನು ಪರೀಕ್ಷಿಸಲು ಒಂದು ಕಣ್ಣು ಕಾಣದ ಮಗುವನ್ನು ಅವರ ಮುಂದೆ ನಿಲ್ಲಿಸಿ ನಿನಗೆ ನಿಜವಾಗಿಯೂ ದೈವೀಶಕ್ತಿಯಿದ್ದಲ್ಲಿ ಈ ಮಗುವಿಗೆ ಕಣ್ಣು ಕಾಣುವಂತೆ ಮಾಡು ಎಂದಾಗ ಗುರುಗಳು ಆ ಮಗುವಿಗೆ ಜಗತ್ತನ್ನು ಕಾಣುವಂತೆ ಮಾಡಿದ್ದು, ಅಲ್ಲದೆ ಕುದ್ರೋಳಿ ದೇವಸ್ಥಾನವನ್ನು ಸ್ಥಾಪಿಸುವ ನೆಪದಲ್ಲಿ ಮಂಗಳೂರಿಗೆ ಬಂದಿದ್ದಾಗ ಮಾತುಬಾರದ ಮಗುವಿಗೆ ತಾನು ಕುಡಿದ ಕಾಫಿ ಲೋಟದ ತಳದÀಲ್ಲಿ ಉಳಿದ ಒಂದು ತೊಟ್ಟು ಕಾಫಿಯನ್ನು ಆ ಮಗುವಿನ ಬಾಯಿಗೆ ಹಾಕಿ ಆ ಮಗುವಿಗೆ ಮಾತಾಡಲು ಬರುವಂತೆ ಮಾಡಿದ್ದನ್ನು ತಿಳಿದುಕೊಳ್ಳುವಂತಾಯಿತು. ಈಗಲೂ ಕುದ್ರೋಳಿ ಕ್ಷೇತ್ರದಲ್ಲಿ ಗುರುಪೂಜೆಯಾದ ಬಳಿಕ ಕಾಫಿ ಕೊಡುವ ಸಂಪ್ರದಾಯವಿದೆ. ಇಂತಹ ಗುರುಗಳ ದೈವೀಶಕ್ತಿಯ ಪರಿಚಯವನ್ನು ನಮ್ಮ ಮಕ್ಕಳಿಗೆ ತಿಳಿಸುವ ಪ್ರಯತ್ನವನ್ನು ನಾವೆಲ್ಲರು ಕೂಡಿ ಮಾಡಬೇಕಾಗಿದೆ.
ವಿವಿಧ ಘಟಕಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಟ್ರಾಫಿಕ್ ಇನ್ಸ್‍ಪೆಕ್ಟರ್‍ರಿಂದ ರಸ್ತೆ ನಿಯಮಗಳ ಬಗ್ಗೆ ಮಾಹಿತಿ ಯನ್ನು ನೀಡಿ, ಯುವವಾಹಿನಿಗೆ ಹೊಸ ಕಚೇರಿ ಹಾಗೂ ಸಭಾಂಗಣ ಮಾಡುವ ದಿಸೆಯಲ್ಲಿ ಕೆಲಸ ಮಾಡುತ್ತಿರುವ ಮಂಗಳೂರು ಘಟಕಕ್ಕೆ ನನ್ನ ಆತ್ಮೀಯ ವಂದನೆಗಳು. ವರುಷ ಪೂರ್ತಿ ದಾಖಲೆ ಪ್ರಯಾಣದ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೆ, ಅಚ್ಚುಕಟ್ಟಾಗಿ ವಿಶಿಷ್ಟ ರೀತಿಯಲ್ಲಿ ಪದಗ್ರಹಣ ಕಾರ್ಯಕ್ರಮ ಮಾಡಿದ ಮಂಗಳೂರು ಮಹಿಳಾ ಘಟಕ ಅಧ್ಯಕ್ಷರು ಮತ್ತು ಸದಸ್ಯರಿಗೆ ನನ್ನ ಪ್ರೀತಿಯ ನಮನಗಳು ಹಾಗೂ ನೂತನ ಅಧ್ಯಕ್ಷೆ ಕು. ಸುಪ್ರೀತಾ ಮತ್ತು ಪದಾಧಿಕಾರಿಗಳಿಗೆ ನನ್ನ ಶುಭ ಕಾಮನೆಗಳು. ಕೇಶ ವಿನ್ಯಾಸ ತರಬೇತಿ ಶಿಬಿರವನ್ನು ಮಾಡಿದ ಕಂಕನಾಡಿ ಘಟಕಕ್ಕೆ ವಂದನೆಗಳು. ಸನ್ಮಾನ ಕಾರ್ಯಕ್ರಮದೊಂದಿಗೆ ಪದಗ್ರಹಣ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ಮಾಡಿದ ಹಳೆಯಂಗಡಿ ಘಟಕಕ್ಕೆ ನನ್ನ ನಮನಗಳು. ಹಾಗೂ ಹೊಸ ಅಧ್ಯಕ್ಷ ಶರತ್‍ಕುಮಾರ್ ಮತ್ತು ಅವರ ತಂಡಕ್ಕೆ ಶುಭಾಶಯಗಳು. ಸಮುದ್ರ ಕಿನಾರೆಯಲ್ಲಿ ಆಟೋಟಗಳನ್ನು ನಡೆಸುವರೇ ಹಾಗೂ ವಾಟರ್ ರೆಸಾರ್ಟ್‍ಗೆ ಪ್ರವಾಸ ಮಾಡುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಕೂಳೂರು ಘಟಕಕ್ಕೆ ಅಭಿನಂದನೆಗಳು. ಬಡಕುಟುಂಬ ವಾಸಿಸುತ್ತಿರುವ ಮನೆಯ ಜಾಗದ ನಕ್ಷೆ ಹಾಗೂ ಸರಕಾರಿ ಕಾಗದ ಪತ್ರಗಳನ್ನು ಮಾಡುವ ಕೆಲಸ ಮಾಡುತ್ತಿರುವ ಹಾಗೂ ಮುಂದಿನ ಸಾಲಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮಹಾಸಭೆ ಯನ್ನು ಹಮ್ಮಿಕೊಂಡಂತಹ ಅಡ್ವೆ ಘಟಕಕ್ಕೆ ಆತ್ಮೀಯ ವಂದನೆಗಳು. ಬಡಕುಟುಂಬವೊಂದಕ್ಕೆ ಮನೆ ಕಟ್ಟಿ ಆ ಮನೆಗೆ “ನಮ್ಮ ಮನೆ” ಎಂದು ಹೆಸರಿಟ್ಟು ಅದರ ಪೂಜಾವಿಧಿಗಳನ್ನು ಮಾಡಿಸಿ ಮನೆಯನ್ನು ಹಸ್ತಾಂತರ ಮಾಡಿ ಮಹತ್ಸಾಧನೆ ಮಾಡಿದ ಹಾಗೂ ಘಟಕದವರೆಲ್ಲರೂ ಸೇರಿ ಶನಿಪೂಜೆಯನ್ನು ಮಾಡಿದ ಹೆಜಮಾಡಿ ಘಟಕಕ್ಕೆ ಮನದಾಳದ ವಂದನೆಗಳು. ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪದಗ್ರಹಣ ಸಮಾರಂಭವನ್ನು ಆಯೋಜನೆ ಮಾಡಲು ಹೊರಟಿರುವ ಪಡುಬಿದ್ರಿ ಘಟಕಕ್ಕೆ ಆತ್ಮೀಯ ನಮನಗಳು. ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಅದನ್ನು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‍ರವರಿಂದ ಉದ್ಘಾಟನೆ ಮಾಡಿಸಿ, ಪದಗ್ರಹಣ ಕಾರ್ಯಕ್ರಮ ಹಾಗೂ “ಯುವ ಕ್ರೀಡಾ ಸಂಗಮ 2017” ಎಂಬ ಅಂತರ್‍ಘಟಕ ಹಗ್ಗಜಗ್ಗಾಟವನ್ನು ವ್ಯವಸ್ಥಿತವಾಗಿ ನಡೆಸಿದ ಉಡುಪಿ ಘಟಕಕ್ಕೆ ಮನತುಂಬಿದ ನಮನಗಳು. ಹಾಗೂ ಹೊಸ ಅಧ್ಯಕ್ಷ ರಮೇಶ್ ಕುಮಾರ್ ಮತ್ತು ಪದಾಧಿಕಾರಿಗಳಿಗೆ ಶುಭಾಶಯಗಳು. ರಕ್ತದಾನ ಶಿಬಿರ ಹಾಗೂ ತಾಳಮದ್ದಳೆಯನ್ನು ನಡೆಸಿದ ಹಾಗೂ ಸುಳ್ಯ ಘಟಕದ ಸ್ಥಾಪನೆ ಹಾಗೂ ಉದ್ಘಾಟನೆಗೆ ಸರ್ವ ರೀತಿಯಿಂದಲೂ ಸಹಕರಿಸಿದ ಪುತ್ತೂರು ಘಟಕಕ್ಕೆ ನನ್ನ ಪ್ರೀತಿಯ ಅಭಿನಂದನೆಗಳು. ಪ್ರತೀ ಸಭೆಯಲ್ಲೂ ಯುವವಾಹಿನಿಯ ಮಾಜಿ ಅಧ್ಯಕ್ಷರುಗಳಿಂದ ಯುವವಾಹಿನಿಯ ಬಗ್ಗೆ ಮಾಹಿತಿ ಒದಗಿಸುತ್ತಿರುವ ಹಾಗೂ ಬೇರೆ ಘಟಕದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಕೊಲ್ಯ ಘಟಕಕ್ಕೆ ಧನ್ಯವಾದಗಳು. ಬಡ ಕುಟುಂಬಕ್ಕೆ ಸೂರು ನಿರ್ಮಿಸಿಕೊಡುವ ಕೆಲಸವನ್ನು ತ್ವರಿತವಾಗಿ ಮಾಡುತ್ತಿರುವ ಬಂಟ್ವಾಳ ಘಟಕಕ್ಕೆ ಅಂತರಾಳದ ವಂದನೆಗಳು. ಯುವವಾಹಿನಿಯ ವಾರ್ಷಿಕ ಸಮಾವೇಶವನ್ನು ಬಹಳ ವಿಶೇಷ ರೀತಿಯಲ್ಲಿ ಮಾಡುವರೇ ಸಭೆಗಳನ್ನು ನಡೆಸುತ್ತಿರುವ ಹಾಗೂ ಘಟಕದ ಸದಸ್ಯರುಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿಯನ್ನು ನೀಡಿದ ಉಪ್ಪಿನಂಗಡಿ ಘಟಕಕ್ಕೆ ಆತ್ಮೀಯ ನಮನಗಳು. “ಯುವವಾಹಿನಿ ಟ್ರೋಫಿ” ಕ್ರಿಕೆಟ್ ಪಂದ್ಯಾಟ, ಅದರ ಉಳಿಕೆ ಹಣ ಹಾಗೂ ಎಲ್ಲರಿಂದಲೂ ದೇಣಿಗೆ ಸಂಗ್ರಹಿಸಿದ ಹಣವನ್ನು ಮೃತ ಚಂದ್ರಹಾಸ ಬರಮೇಲು ಅವರ ಕುಟುಂಬಕ್ಕೆ ಹಸ್ತಾಂತರಿಸಿದ ಬೆಳ್ತಂಗಡಿ ಘಟಕಕ್ಕೆ ಅಭಿನಂದನೆಗಳು. “ಯುವಕ್ರೀಡಾ ಸಂಗಮ 2017” ಇದರಲ್ಲಿ ಪಾಲ್ಗೊಳ್ಳುವರೇ ತಯಾರಿ ನಡೆಸುತ್ತಿರುವ ಕಟಪಾಡಿ ಘಟಕಕ್ಕೆ ಕೃತಜ್ಞತೆಗಳು. ವಾಹನ ಸಂಚಾರಿ ನಿಯಮಗಳ ಮಾಹಿತಿಯನ್ನು ನೀಡಿದ ಸುರತ್ಕಲ್ ಘಟಕಕ್ಕೆ ನಮನಗಳು. ವಿಶೇಷ ಕಾರ್ಯಕ್ರಮ ‘ಮಕ್ಕಳ ಬೇಸಿಗೆ ಶಿಬಿರ’ದ ತಯಾರಿಯಲ್ಲಿರುವ ಯಡ್ತಾಡಿ ಘಟಕಕ್ಕೆ ಅಭಿನಂದನೆಗಳು. ಸ್ಥಳೀಯ ಬಿಲ್ಲವ ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಸಸಿಹಿತ್ಲು ಘಟಕಕ್ಕೆ ವಂದನೆಗಳು. ಬಪ್ಪನಾಡು ಕ್ಷೇತ್ರದ ಜಾತ್ರೆಯ ಸಮಯದಲ್ಲಿ ಸ್ವಯಂಸೇವಕರಾಗಿ ದುಡಿದ, 5 ದಿವಸಗಳ ಮಹಾಯಾಗದಲ್ಲಿ ವೇದಿಕೆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ, ಹೊರೆ ಕಾಣಿಕೆಯನ್ನು ಸಮರ್ಪಿಸಿ ಪಾನಕ ಸೇವೆಯನ್ನು ನೀಡಿದ ಮೂಲ್ಕಿ ಘಟಕಕ್ಕೆ ಮನತುಂಬಿದ ನಮನಗಳು. ಯುವವಾಹಿನಿಯ 25ನೇ ಘಟಕವಾಗಿ ಸೇರ್ಪಡೆಗೊಂಡ ಸುಳ್ಯ ಘಟಕದ ಅಧ್ಯಕ್ಷ ಶಿವಪ್ರಸಾದ್ ಮತ್ತು ಪದಾಧಿಕಾರಿಗಳಿಗೆ ಶುಭ ಹಾರೈಕೆಗಳು. ಸ್ಥಳೀಯ ಬಿಲ್ಲವ ಸಂಘದ ಕಾರ್ಯಕಲಾಪಗಳಲ್ಲಿ ಸಕ್ರಿಯರಾಗಿರುವ ನಿಡ್ಡೋಡಿ ಘಟಕಕ್ಕೆ ವಂದನೆಗಳು.
ನಮಸ್ಕಾರ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!