ಅಡ್ವೆ: ಯುವವಾಹಿನಿ (ರಿ) ಅಡ್ವೆ ಘಟಕದಿಂದ ಅಂತರ್ಜಲ ಮಟ್ಟ ಏರಿಕೆಗೆ ಕಿಂಡಿ ಅಣೆಕಟ್ಟು ಮುಚ್ಚುವ ಕಾರ್ಯಕ್ರಮ ದಿನಾಂಕ 18-11-2018 ಹಾಗೂ 25-11-2018 ರಂದು ಘಟಕದ ಸಂಘಟನಾ ಕಾರ್ಯದರ್ಶಿ ಅರುಣಾನಂದ ಕಿಶೋರ್ ಇವರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯದಲ್ಲಿ ಘಟಕದ ಅಧ್ಯಕ್ಷರಾದ ಜಿತೇಶ್ ಜೆ. ಕರ್ಕೇರ, ಉಪಾಧ್ಯಕ್ಷರಾದ ಶ್ರೀಧರ್ ಟಿ. ಪೂಜಾರಿ, ಕಾರ್ಯದರ್ಶಿ ಪ್ರಸನ್ನ ಕುಮಾರ್ ಸೇರಿದಂತೆ ಘಟಕದ ಮಾಜಿ ಅಧ್ಯಕ್ಷರುಗಳು, ಹೆಚ್ಚಿನ ಸದಸ್ಯರುಗಳು ಭಾಗವಹಿಸಿದ್ದರು. ಈ ಅಣೆಕಟ್ಟನ್ನು ಮುಚ್ಚಿದ ಪರಿಣಾಮ ಪರಿಸರದ ಸುಮಾರು 60 ಮನೆಗಳ ಬಾವಿಗಳ ಒರತೆ ಹೆಚ್ಚಬಹುದೆಂದು ಅಂದಾಜಿಸಲಾಗಿದೆ.