ವೇಣೂರು:- 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ದಿನಾಂಕ 13 ಆಗಸ್ಟ್ 2022 ಶನಿವಾರದಂದು ಎರಡು ಅಂಗನವಾಡಿ ಶಾಲೆಗಳಿಗೆ ಪುಟಾಣಿ ಮಕ್ಕಳ ಚೇರ್ ಗಳನ್ನು ಘಟಕದ ಅಧ್ಯಕ್ಷರಾದ ಯೋಗೀಶ್ ಬಿಕ್ರೋಟ್ಟು. ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಕ್ರೀಡಾ ಮತ್ತು ಅರೋಗ್ಯ ನಿರ್ದೇಶಕರಾದ ನವೀನ್ ಪಚ್ಚೇರಿಯವರ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿಯವರಾದ ಪ್ರಶಾಂತ್ ಕುಕ್ಕೇಡಿ, ಕೋಶಾಧಿಕಾರಿ ರಕ್ಷಿತ್ ಬಜಿರೆ , ಸಂಘಟನಾ ಕಾರ್ಯದರ್ಶಿ ಸುಕೇಶ್ ಊರಬೆ , ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ವೇಣೂರು ಇದರ ಅಧ್ಯಕ್ಷರಾದ ಹರೀಶ್ ಪೊಕ್ಕಿ, ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ತಾರಿಪಡ್ಪು, ನಮ್ಮ ಸದಸ್ಯರುಗಳಾದ ರಕ್ಷಿತ್ ಅಂಡಿಂಜೆ, ರಾಜೇಶ್ ಕೈತೇರಿ, ರಮೇಶ್ ಕೊಡಂಗೆ, ಹಾಗೂ ಅಂಗನವಾಡಿ ಶಿಕ್ಷಕಿಯರು ಮತ್ತು ಅಂಗನವಾಡಿ ಸಹಾಯಕಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.