21-04-2026, 6:00 PM
ಮಂಗಳೂರು: ದಿನಾಂಕ 21/04/2026 ರಂದು ನಡೆದ ಯುವವಾಹಿನಿಯ ಕಟ್ಟಡ ಸಮಿತಿಯ ಸಭೆಯಲ್ಲಿ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನೂತನ ಆಡಳಿತ ಕಚೇರಿ ನಿರ್ಮಾಣಕ್ಕಾಗಿ ಸಂಗ್ರಹಿಸಿದ ರೂ. 76,500/- ದೇಣಿಗೆಯನ್ನು ಮಂಗಳೂರು ಘಟಕದ ವತಿಯಿಂದ ಕೇಂದ್ರ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಘಟಕದ ಹಾಗೂ ಕೇಂದ್ರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಕಟ್ಟಡ ಸಮಿತಿಯ ಸಂಚಾಲಕರು, ಕಾರ್ಯದರ್ಶಿಗಳು, ಕೋಶಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Read More
20-04-2026, 9:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 20-04-2026 ರಂದು ಸಂಜೆ 5.30 ಗಂಟೆಗೆ ಶ್ರೀ ವಿಶ್ವಂಭರ ಭಜನಾ ಮಂಡಳಿ ಉರ್ವ ಸ್ಟೋರ್ ಇವರ ಸಹಯೋಗದೊಂದಿಗೆ ನಡೆಯಿತು. ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Read More
14-04-2026, 7:30 PM
ಮಂಗಳೂರು : ಯುವವಾಹಿನಿ ಮಂಗಳೂರು ಘಟಕದ ವತಿಯಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ 14.04.2026 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು ನಡೆಯಿತು. ಈ ಸಂದರ್ಭದಲ್ಲಿ ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಮುಖ್ಯ ಭಾಷಣಕಾರರಾದ ಸುನಿಲ್ ಕುಮಾರ್ ಬಜಾಲ್ ಅವರು ಮಾತನಾಡಿ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಡಾ. ಅಂಬೇಡ್ಕರ್ ಅವರ ಜೀವನ ಹಾಗೂ ಶಿಕ್ಷಣದ ಹಂಬಲವು ಎಲ್ಲರಿಗೂ ಮಾದರಿಯಾಗಿದೆ. ಅಂಬೇಡ್ಕರ್ ಎಂದರೆ ಸಂವಿಧಾನ ಶಿಲ್ಪಿ ಹಾಗೂ ದಲಿತರ ಪರ ಹೋರಾಟಗಾರ […]
Read More
07-04-2026, 9:00 PM
ಮಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ವಿದ್ಯಾವಂತರು ಅತ್ಯಂತ ಜಾಗರೂಕರಾಗಿ ಇರಬೇಕು ಎಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಉರ್ವ ಪೊಲೀಸ್ ಠಾಣೆಯ ಎ.ಎಸ್.ಐ ವೇಣುಗೋಪಾಲ್ ಅವರು ತಿಳಿಸಿದರು. ಅವರು ಏಪ್ರಿಲ್ 7 ರಂದು ಉರ್ವಸ್ಟೋರ್ನ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸೈಬರ್ ಕ್ರೈಮ್ ಹಾಗೂ ಮಾದಕವಸ್ತುಗಳ ಕುರಿತು ಮಾಹಿತಿ ಕಾರ್ಯಾಗಾರ”ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಜಾಗೃತಿಯೇ ರಕ್ಷಾಕವಚ:ಸೈಬರ್ ಅಪರಾಧಗಳ ಜಾಲದ […]
Read More
06-04-2026, 9:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿರುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ 06-04-2026 ರಂದು ಸೋಮವಾರ ಸಂಜೆ ಕ್ಷೇತ್ರದಲ್ಲಿ ಭಕ್ತಿಪೂರ್ವಕವಾಗಿ ಜರುಗಿತು. ಈ ವಾರದ ಭಜನಾ ಸೇವೆಯನ್ನು ಶ್ರೀ ರಾಘವೇಂದ್ರ ಮಾತೃ ಭಜನಾ ಮಂಡಳಿ, ಕನ್ಯಾನ ಇವರ ಸಹಯೋಗದೊಂದಿಗೆ ನಡೆಸಿಕೊಡಲಾಯಿತು. ಸಂಜೆ 5.30ಕ್ಕೆ ಆರಂಭಗೊಂಡ ಭಜನಾ ಕಾರ್ಯಕ್ರಮದಲ್ಲಿ ಮಂಡಳಿಯ ಸದಸ್ಯರು ವಿವಿಧ ಭಕ್ತಿಗೀತೆ ಹಾಗೂ ನಾಮ ಸಂಕೀರ್ತನೆಗಳ ಮೂಲಕ ಭಕ್ತಾದಿಗಳನ್ನು […]
Read More
22-03-2026, 2:00 PM
ಮಂಗಳೂರು: ಪ್ರಕೃತಿಯೊಡನೆ ಮನುಷ್ಯನ ಬದುಕು ಆಳವಾಗಿ ಬೆಸೆದುಕೊಂಡಿರುವುದರಿಂದ, ಆರೋಗ್ಯದ ಮೂಲವೂ ಪ್ರಕೃತಿಯಲ್ಲೇ ಅಡಗಿದೆ ಎಂದು ಖ್ಯಾತ ಆಯುರ್ವೇದ ತಜ್ಞ ಡಾ. ಎನ್.ಟಿ. ಅಂಚನ್ ಅಭಿಪ್ರಾಯಪಟ್ಟರು. ಆಯುರ್ವೇದವು ಕೇವಲ ಚಿಕಿತ್ಸಾ ವಿಧಾನವಲ್ಲ, ಅದು ಸಮಗ್ರ ಜೀವನಶೈಲಿ ಎಂದು ಅವರು ವಿವರಿಸಿದರು.ಗಿಡಮೂಲಿಕೆಗಳ ಬಳಕೆಯ ಕುರಿತು ಮಾತನಾಡಿದ ಅವರು, ನಮ್ಮ ಸುತ್ತಮುತ್ತಲೇ ದೊರೆಯುವ ಅನೇಕ ಸಸ್ಯಗಳಲ್ಲಿ ಅಪಾರ ಔಷಧೀಯ ಗುಣಗಳಿವೆ. ತುಳಸಿ, ಅಶ್ವಗಂಧಾ, ನೀಮ್, ಅಲೋವೆರಾ ಮುಂತಾದ ಗಿಡಮೂಲಿಕೆಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಹಲವು ದೀರ್ಘಕಾಲದ ಕಾಯಿಲೆಗಳ ನಿಯಂತ್ರಣದಲ್ಲೂ […]
Read More
09-03-2026, 8:00 PM
ಮಂಗಳೂರು: ದಿನಾಂಕ 09-03-2026 ನೇ ಸೋಮವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯನ್ನು ಯುವವಾಹಿನಿ (ರಿ.) ಕಂಕನಾಡಿ ಘಟಕದ ಸಹಯೋಗದೊಂದಿಗೆ ಭಕ್ತಿಭಾವದಿಂದ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Read More
02-03-2026, 9:00 PM
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ 02-03-2026, ಸೋಮವಾರದಂದು ನೆರವೇರಿತು. ಈ ವಾರದ ಭಜನಾ ಸೇವೆಯನ್ನು ಅಶೋಕ್ ನಗರ ದಂಬೇಲ್ನ ವೆಂಕಟೇಶ್ ರಾವ್ ಮತ್ತು ಬಳಗದವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಭಕ್ತಿಪ್ರಧಾನವಾದ ಸಂಕೀರ್ತನೆಗಳ ಮೂಲಕ ನೆರೆದಿದ್ದ ಭಕ್ತಾದಿಗಳಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಘಟಕದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ದೇವರ […]
Read More
01-03-2026, 2:00 PM
ಮಂಗಳೂರು : “ಸಂಘಟನೆಯ ಯಶಸ್ಸು ಕೇವಲ ಅಧಿಕಾರ ಚಲಾಯಿಸುವುದರಲ್ಲಿಲ್ಲ, ಬದಲಾಗಿ ಎಲ್ಲರನ್ನೂ ಒಗ್ಗೂಡಿಸಿ ದಕ್ಷ ನಿರ್ಧಾರಗಳನ್ನು ತೆಗೆದುಕೊಳ್ಳುವ ನಾಯಕತ್ವದ ಮೇಲಿದೆ” ಎಂದು ಆಪ್ತ ಸಮಾಲೋಚಕರು, ತರಬೇತುದಾರರಾದ ಸ್ಮಿತೇಶ್ ಎಸ್ ಬಾರ್ಯ ಅಭಿಪ್ರಾಯಪಟ್ಟರು. ಅವರು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮತ್ತು ಮಂಗಳೂರು ಘಟಕದ ಆತಿಥ್ಯದಲ್ಲಿ ಯೆಯ್ಯಾಡಿಯ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಮಾರ್ಚ್ 1, ಭಾನುವಾರ ಆಯೋಜಿಸಲಾಗಿದ್ದ ಯುವವಾಹಿನಿ ಘಟಕಗಳ ಪದಾಧಿಕಾರಿಗಳ ಮತ್ತು ಸದಸ್ಯರ ತರಬೇತಿ ಕಾರ್ಯಾಗಾರ ‘ವಿಕಾಸ 2026’ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ […]
Read More
27-02-2026, 11:22 AM
ಮಂಗಳೂರು/ಗೆಜ್ಜೆಗಿರಿ: ಪರಮಪೂಜ್ಯ ದೇಯಿ ಬೈದ್ಯೆತಿ ಹಾಗೂ ಕೋಟಿ-ಚೆನ್ನಯರ ಮೂಲಸ್ಥಾನವಾದ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಇತ್ತೀಚೆಗೆ ನಡೆದ ಜಾತ್ರಾ ಮಹೋತ್ಸವದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ವಿಶೇಷ ಸ್ವಯಂ ಸೇವೆ ಮತ್ತು ಅನ್ನದಾನ ಸೇವಾ ಕಾರ್ಯಕ್ರಮ ಜರುಗಿತು. ಫೆಬ್ರವರಿ 27ರಂದು ನಡೆದ ಈ ಸಂಭ್ರಮದ ಜಾತ್ರಾ ಮಹೋತ್ಸವದಲ್ಲಿ ಮಂಗಳೂರು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ಹಾಗೂ ಘಟಕದ ಸಕ್ರಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ […]
Read More