Yuvavahini

ಘಟಕಗಳು

ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: ಯುವವಾಹಿನಿ (ರಿ.) ಕೂಳೂರು ಘಟಕದಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸುಸಂದಭ೯ದಲ್ಲಿ ಧ್ವಜಾರೋಹಣವನ್ನು ಘಟಕದ ಮಾಗ೯ದಶ೯ಕರಾದ ಜಯಾನಂದ ಅಮೀನ್ ಇವರು ನಡೆಸಿಕೊಟ್ಟರು. ನಂತರ ಮಾಗ೯ದಶ೯ಕರು ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ಈ ದಿನ ನೆನಪುಮಾಡಿ ಘಟಕದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು. ವೇದಿಕೆಯಲ್ಲಿದ್ದ ಮಾಜಿ ಸೇನಾನಿ ಹಾಗೂ ಘಟಕದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ ಮಾಡಿ ಪ್ರಾಣತೆತ್ತ ಹೋರಾಟಗಾರರನ್ನು ನೆನಪು ಮಾಡಿಕೊಂಡು ನಮ್ಮಂತ ಸೈನಿಕರನ್ನು ಗುರುತಿಸಿಕೊಂಡು ಇಂದಿನ […]

Read More

ಆಟಿಡೊಂಜಿ ದಿನ ಕಾರ್ಯಕ್ರಮ

ಕಾಪು: ದಿನಾಂಕ 14-08-2024 ರಂದು ಸಂಜೆ 7 ಗಂಟೆಗೆ ಲೈಟ್ ಹೌಸ್ ಬೀಚ್ ರೆಸಾರ್ಟ್ನಲ್ಲಿ ಯುವವಾಹಿನಿ (ರಿ) ಕಾಪು ಘಟಕದ ವತಿಯಿಂದ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಕಾಪು ತಹಸೀಲ್ದಾರ್ ಡಾ. ಪ್ರತಿಭಾರವರು ಕಾರ್ಯಕ್ರಮ ಉದ್ಘಾಟನೆ ಮಾಡಿ ತುಳುನಾಡಿನ ಆಚರಣೆ ಹಾಗೂ ಆಟಿಯ ವಿಶೇಷ ತಿಂಡಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು ಹಾಗೂ ವಿದ್ಯಾರ್ಥಿ ವೇತನ ನೀಡುವಂತಹ ಒಳ್ಳೆಯ ಕೆಲಸ ಯುವವಾಹಿನಿ (ರಿ) ಕಾಪು ಘಟಕ ಮಾಡುತ್ತಿದೆ ಎಂದು ಶ್ಲಾಘಿಸಿದರು. 10 […]

Read More

2024-25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ

ಹೆಜಮಾಡಿ : ಯುವವಾಹಿನಿ (ರಿ) ಹೆಜಮಾಡಿ ಘಟಕದ ಪದಗ್ರಹಣ ಸಮಾರಂಭವು ದಿನಾಂಕ 11-08-2024 ನೇ ಆದಿತ್ಯವಾರ ಹೆಜಮಾಡಿ ಬಿಲ್ಲವರ ಸಂಘದ ರತ್ನಾಶಂಕರ್ ಸಭಾಗೃಹದಲ್ಲಿ ಜರಗಿತು. ಪ್ರಥಮವಾಗಿ ಅತಿಥಿ ಗಣ್ಯರೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಪೂಜೆಯನ್ನು ಸಲ್ಲಿಸಿ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಹೆಜಮಾಡಿ ಘಟಕದ ಅಧ್ಯಕ್ಷರಾದ ದೀಪಕ್ ವಿ ಕೋಟ್ಯಾನ್ ವಹಿಸಿದ್ದರು. ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಲು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೆ ಪೂಜಾರಿ ಉಧ್ಘಾಟಕರಾಗಿ […]

Read More

ಆಟಿದ ಐತಾರ ಮತ್ತು ನನ್ನಲ್ಲಿರುವ ನಾಯಕ

ಬೆಂಗಳೂರು: ಯುವವಾಹಿನಿ(ರಿ.) ಬೆಂಗಳೂರು ಘಟಕ ಆಯೋಜಿಸಿದಂತಹ ಆಟಿದ ಐತಾರ ಮತ್ತು ನನ್ನಲ್ಲಿರುವ ನಾಯಕ ಕಾರ್ಯಕ್ರಮವು 11-08-2024 ಆದಿತ್ಯವಾರ ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಚರಲ್ ಇನ್ಸ್ಟಿಟ್ಯೂಟ್, ರಾಜಾಜಿನಗರ ಕೈಗಾರಿಕಾ ಪ್ರದೇಶ ಬೆಂಗಳೂರು ಇಲ್ಲಿ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ವ್ಯಕ್ತಿತ್ವ ವಿಕಸನ ನಿರ್ದೇಶಕರು ಸೇರಿಕೊಂಡು ನಾಲ್ಕು ತಂಡಗಳಾದ ಆಟಿದ ಬೊಳ್ಳಿಲು, ಆಟಿದ ಬರ್ಸ, ಆಟಿದ ಪಂಚಮಿ, ಆಟಿ ಕಳೆಂಜ ಹಾಗೂ ತಂಡಗಳನ್ನು ತಾಂಬೂಲ ಹಾಗೂ ಶಾಲು ಹಾಕಿ, ಗುಲಾಬಿ ಹೂವನ್ನು ನೀಡುವ ಮೂಲಕ ಸಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ […]

Read More

ಆಟಿದ ಕಮ್ಮೆನ

ಬೆಳ್ತಂಗಡಿ: ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ವತಿಯಿಂದ ಆಟಿದ ಕಮ್ಮೆನ – 2024 ದಿನಾಂಕ 10-08-2024 ನೇ ಶನಿವಾರ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮೇಲಂತಸ್ತಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರು ಸದಾಶಿವ ಊರು ವಹಿಸಿದ್ದರು. ವಾಸ್ತವಿಕವಾಗಿ ಮಾತನಾಡಿದ ಘಟಕದ ಮಾಜಿ ಅಧ್ಯಕ್ಷರು ಎಂ.ಕೆ ಪ್ರಸಾದ್ ಆಟಿಯ ವಿಶೇಷತೆ ಬಗ್ಗೆ ಹಿಂದಿನ ಕಾಲದ ಆಟಿಯ ತಿಂಗಳಿನ ಕಷ್ಟಗಳ ಬಗ್ಗೆ ಈಗಿನ ಯುವ ಪೀಳಿಗೆಗೆ ‌ತಿಳಿ ಹೇಳುವುದು ಹಾಗೂ ಅಳಿವಿನಂಚಿನಲ್ಲಿರುವ ಸಂಸ್ಕೃತಿಯನ್ನು ಉಳಿಸುವುದು ಆದ್ಯ ಕರ್ತವ್ಯವಾಗಿದೆ […]

Read More

ಮುಲ್ಕಿಯಲ್ಲಿ ಆರಂಭಗೊಂಡ ಆಟಿಡೊoಜಿ ದಿನ ವಿಶ್ವವ್ಯಾಪಿಯಾಗಿದೆ – ಸೂರ್ಯಕಾಂತ್ ಜೆ ಸುವರ್ಣ

ಮುಲ್ಕಿ : ಕಳೆದ 22 ವರ್ಷದ ಹಿಂದೆ ಆರಂಭಗೊಂಡ ಆಟಿಡೊಂಜಿ ದಿನ ಕಾರ್ಯಕ್ರಮ ಇಂದು ವಿಶ್ವವ್ಯಾಪಿಯಾಗಿದ್ದು ವಿಶೇಷವಾಗಿದೆ ಎಂದು ಭಾರತ್ ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ಹೇಳಿದರು. ಅವರು ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ (ರಿ) ಮುಲ್ಕಿ ಘಟಕದ 22ನೇ ವರ್ಷದ ಆಟಿದೊಂಜಿ ದಿನ ಕಾರ್ಯಕ್ರಮದ ವೇದಿಕೆಯಲ್ಲಿ ನಿರ್ಮಿಸಿದ ಬಾವಿಯಿಂದ ನೀರು ಸೇದುವ ಮೂಲಕ ವಿಶೇಷವಾಗಿ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ (ರಿ) ಮುಲ್ಕಿ ಘಟಕದ ಅಧ್ಯಕ್ಷರು ರಿತೇಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಗತಿಪರ […]

Read More

ಅಸ್ಪ್ರಶ್ಯತೆ ಕಳೆ ಬೇರನ್ನು ಕಿತ್ತು ಹಾಕಿ ಭಗವಂತನ ಸೇವೆಯಲ್ಲಿ ನಿಸ್ಸಂಕೋಚವಾಗಿ ತೊಡಗಿಸಿಕೊಳ್ಳಲು ಸರ್ವರಿಗೂ ಅವಕಾಶ ಕಲ್ಪಿಸಿದ ಗುರುಗಳನ್ನು ನಿತ್ಯವು ಸ್ಮರಿಸಬೇಕು – ದಿನೇಶ್ ಸುವರ್ಣ ರಾಯಿ..

ಬಂಟ್ವಾಳ: ಯುವವಾಹಿನಿ (ರಿ) ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ ಮಾಲಿಕೆ-5 ಕಾರ್ಯಕ್ರಮವು ಸದಸ್ಯರು ಯೋಗೀಶ್ ಪೂಜಾರಿ ಕಲ್ಲಡ್ಕ ಇವರ ಗೃಹದಲ್ಲಿ ಜರಗಿತು. ಗುರುತತ್ವವಾಹಿನಿ ಮಾಲಿಕೆ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಪ್ರೇಮನಾಥ ಕೆ ಹಾಗೂ ಪ್ರಥಮ ಉಪಾಧ್ಯಕ್ಷರು ನಾರಾಯಣ ಪೂಜಾರಿ ಪಲ್ಲಿಕಂಡ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಸಂಘಟನಾ ಕಾರ್ಯದರ್ಶಿ ಉದಯ್ ಮೇನಾಡು, ಉದ್ಯೋಗ ಮತ್ತು ಭವಿಷ್ಯ ನಿರ್ದೆಶಕರು ಕಿರಣ್ ಪೂಂಜರೆಕೋಡಿ, ಸದಸ್ಯರು ಪ್ರಶಾಂತ್ ಏರಮಲೆ, ವಿಘ್ನೇಶ್ ಬೊಳ್ಳಾಯಿ, ಸೂರಜ್ ತುಂಬೆ, ಯತೀಶ್ ಬೊಳ್ಳಾಯಿ,ಸತೀಶ್ ಬಾಯಿಲ, […]

Read More

ಸಾಪ್ತಾಹಿಕ ಸಂಕೀರ್ತನೆ

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 05-08-2024ರ ಸೋಮವಾರದಂದು ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ವಿಜಯ್ .ಎಸ್. ಕುಕ್ಯಾನ್ ರವರ ಸಂಚಾಲಕತ್ವದಲ್ಲಿ ಯುವವಾಹಿನಿ ಸಾಪ್ತಾಹಿಕ ಸಂಕೀರ್ತನಾ ಸರಣಿ ಕಾರ್ಯಕ್ರಮ ನಡೆಯಿತು. ಯುವವಾಹಿನಿ (ರಿ) ಸುರತ್ಕಲ್ ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಸಾಪ್ತಾಹಿಕ ಸಂಕೀರ್ತನಾ ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಹಾರ್ಮೋನಿಯಂ ಶ್ರೀ ಯುವರಾಜ್ ಬೊಳ್ಳಾಜೆ ನುಡಿಸಿದರು. ಮಂಗಳೂರು ಘಟಕದ ಅಧ್ಯಕ್ಷರಾದ ನಾಗೇಶ್ ರವರು ಸಾಪ್ತಾಹಿಕ ಸಂಕೀರ್ತನೆಯಲ್ಲಿ ಪಾಲ್ಗೊಂಡ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು. ದೇವರ ಆಶೀರ್ವಾದ […]

Read More

ಆಟಿಡೊಂಜಿ ದಿನ‌

ಮಂಗಳೂರು : 04/08/2024 ರಂದು ಆದಿತ್ಯವಾರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕುಂಟಲ್ಪಾಡಿ ಇಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 200ಕ್ಕಿಂತಲೂ ಹೆಚ್ಚು ಜನ ಪಾಲ್ಗೊಂಡಿದ್ದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದವನ್ನು ಪಡೆದು ನಂತರ ಘಟಕದ ಮಹಿಳಾ ಸದಸ್ಯರಿಂದ ಹಾಗೂ ಸಣ್ಣ ಮಕ್ಕಳಿಂದ ಜಾನಪದ ನೃತ್ಯ , ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಘಟಕದ ಸದಸ್ಯರ ಮಕ್ಕಳಿಂದ ಪ್ರಾರ್ಥನೆ ನಡೆಸಿ ಘಟಕದ ಅಧ್ಯಕ್ಷರಾದ ಗಣೇಶ್ ಕೆ […]

Read More

ಬೆಂಕಿ ರಹಿತ ಅಡುಗೆ ಸ್ಪರ್ದೆ

ಮಂಗಳೂರು : ಕಂಕನಾಡಿ ಘಟಕದ ಸದಸ್ಯರಿಗೆ 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 04-08-2024ನೇ ಆದಿತ್ಯವಾರ ಬೆಂಕಿ ರಹಿತ ಅಡುಗೆ ಸ್ಪರ್ಧೆಯನ್ನು ಘಟಕದ ಕಚೇರಿಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಮಾನ್ಯ ಸುಂದರ್ ಸುವರ್ಣರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಾರ್ಥನೆದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 14 ಜನ ಸದಸ್ಯರು ಏಳು ತಂಡವಾಗಿ ಭಾಗವಹಿಸಿದ್ದರು ಹಾಗೂ ತೀರ್ಪುಗಾರರಾಗಿ ಕೊಡಿಯಲ್ ಬೈಲ್ ಶಾರದ ವಿದ್ಯಾಲಯದ ಶಿಕ್ಷಕಿ ಉಜ್ವಲ್ ಹಾಗೂ ಅಂಚನ್ ಕ್ಯಾಟರಿಂಗ್ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!