13-04-2026, 11:00 AM
ಮೂಡುಬಿದಿರೆ: ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ಸಮಾಜ ಮಂದಿರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪೂರ್ಣಾಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ದಿಶಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಮಾರೂರು ವಹಿಸಿದ್ದರು. ಈ ಸಂದರ್ಭದಲ್ಲಿ ಸಾಧಕಿ ದಿಶಾ ಪೂಜಾರಿ ಅವರಿಗೆ ರೂ. 10,000 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಘಟಕದ ಗೌರವ ಸಲಹೆಗಾರರಾದ ಪದ್ಮನಾಭ ಸಾಲ್ಯಾನ್ ಮಾತನಾಡಿ, […]
Read More
12-04-2026, 1:00 AM
ಪುತ್ತೂರು : ಯುವವಾಹಿನಿ (ರಿ.) ಪುತ್ತೂರು ಘಟಕದ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನಕ್ಕೆ ತೆರಳುವ ಮಾರ್ಗವಾದ ಮಜಲುಮಾರು ದೇವಸ್ಥಾನದಿಂದ ಮುಖ್ಯ ದ್ವಾರವರೆಗೆ ಎಪ್ರಿಲ್ 12 ರಂದು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ನಿವೃತ್ತ ಯೋಧರಾದ ವಿಶ್ವನಾಥ್ ಪೂಜಾರಿ ಹಾಗೂ ಉಮಾಮಹೇಶ್ವರಿ ದೇವಸ್ಥಾನದ ಸಮಿತಿ ಸದಸ್ಯರಾದ ಪದ್ಮನಾಭ ಪೂಜಾರಿ ಅವರು ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಯೋಧ ವಿಶ್ವನಾಥ್ ಪೂಜಾರಿ ಅವರು, ಯುವವಾಹಿನಿ ಘಟಕವು ಕೈಗೊಂಡಿರುವ ಈ ಸೇವಾ ಕಾರ್ಯ […]
Read More
10-04-2026, 9:00 PM
ಕೆಂಜಾರು: ಪೇಜಾವರ ಮಾಗಣೆ ಶ್ರೀ ಸಾರಬಳಿ ಧೂಮಾವತಿ ದೈವಸ್ಥಾನದಲ್ಲಿ ಜೀರ್ಣೋದ್ಧಾರಗೊಂಡ ನೂತನ ಸನ್ನಿಧಿಯಲ್ಲಿ ಜುಮಾದಿ ಬಂಟ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆ ಹಾಗೂ ಕಲಶೋತ್ಸವವು ಏಪ್ರಿಲ್ 10ರಂದು ಭಕ್ತಿಭಾವದಿಂದ ನಡೆಯಿತು. ಊರ-ಪರವೂರ ಭಕ್ತರ ಸಹಕಾರದಿಂದ ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಬಜಪೆ ಘಟಕದ ಸದಸ್ಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು. ಬಳಿಕ ದೈವಗಳ ಪ್ರಸಾದವನ್ನು ಸ್ವೀಕರಿಸಿ ಕೃಪೆಗೆ ಪಾತ್ರರಾದರು.
Read More
07-04-2026, 9:00 PM
ಮಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ವಿದ್ಯಾವಂತರು ಅತ್ಯಂತ ಜಾಗರೂಕರಾಗಿ ಇರಬೇಕು ಎಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಉರ್ವ ಪೊಲೀಸ್ ಠಾಣೆಯ ಎ.ಎಸ್.ಐ ವೇಣುಗೋಪಾಲ್ ಅವರು ತಿಳಿಸಿದರು. ಅವರು ಏಪ್ರಿಲ್ 7 ರಂದು ಉರ್ವಸ್ಟೋರ್‌ನ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸೈಬರ್ ಕ್ರೈಮ್ ಹಾಗೂ ಮಾದಕವಸ್ತುಗಳ ಕುರಿತು ಮಾಹಿತಿ ಕಾರ್ಯಾಗಾರ”ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಜಾಗೃತಿಯೇ ರಕ್ಷಾಕವಚ:ಸೈಬರ್ ಅಪರಾಧಗಳ ಜಾಲದ […]
Read More
06-04-2026, 9:00 PM
ಬಜಪೆ: ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಏಪ್ರಿಲ್ ತಿಂಗಳ ‘ಮನೆ ಮನೆ ಭಜನಾ ಸಂಕೀರ್ತನೆ’ ಕಾರ್ಯಕ್ರಮವು ದಿನಾಂಕ 06-04-2026 ರಂದು ಸೋಮವಾರ ಸಂಜೆ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಜರುಗಿತು. ಘಟಕದ ಸಮಾಜ ಸೇವಾ ನಿರ್ದೇಶಕರಾದ ಜಯರಾಮ ಪೂಜಾರಿ ಅವರ ನೂತನ ಗೃಹ ಪ್ರವೇಶದ ಪ್ರಥಮ ವರ್ಷದ ಆಚರಣೆಯ ಪ್ರಯುಕ್ತ, ಅವರ ನಿವಾಸದಲ್ಲಿ ಈ ಭಜನಾ ಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ 6.30 ರಿಂದ 7.30 ರವರೆಗೆ ನಡೆದ ಸಂಕೀರ್ತನೆಯಲ್ಲಿ ಘಟಕದ ಸದಸ್ಯರು ಭಕ್ತಿಪೂರ್ವಕವಾಗಿ ಪಾಲ್ಗೊಂಡರು.ಕಾರ್ಯಕ್ರಮದಲ್ಲಿ ಬಜಪೆ ಘಟಕದ […]
Read More
06-04-2026, 9:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿರುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ 06-04-2026 ರಂದು ಸೋಮವಾರ ಸಂಜೆ ಕ್ಷೇತ್ರದಲ್ಲಿ ಭಕ್ತಿಪೂರ್ವಕವಾಗಿ ಜರುಗಿತು. ಈ ವಾರದ ಭಜನಾ ಸೇವೆಯನ್ನು ಶ್ರೀ ರಾಘವೇಂದ್ರ ಮಾತೃ ಭಜನಾ ಮಂಡಳಿ, ಕನ್ಯಾನ ಇವರ ಸಹಯೋಗದೊಂದಿಗೆ ನಡೆಸಿಕೊಡಲಾಯಿತು. ಸಂಜೆ 5.30ಕ್ಕೆ ಆರಂಭಗೊಂಡ ಭಜನಾ ಕಾರ್ಯಕ್ರಮದಲ್ಲಿ ಮಂಡಳಿಯ ಸದಸ್ಯರು ವಿವಿಧ ಭಕ್ತಿಗೀತೆ ಹಾಗೂ ನಾಮ ಸಂಕೀರ್ತನೆಗಳ ಮೂಲಕ ಭಕ್ತಾದಿಗಳನ್ನು […]
Read More
06-04-2026, 8:00 PM
ಕೊಲ್ಯ: “ನಿಮ್ಮ ಆರೋಗ್ಯ ನಿಮ್ಮ ಕಾಲು ಮತ್ತು ಕೈಗಳಲ್ಲಿ” ಎಂಬ ಧ್ಯೇಯವಾಕ್ಯದೊಂದಿಗೆ, ಯುವವಾಹಿನಿ (ರಿ) ಕೊಲ್ಯ ಘಟಕ ಮತ್ತು ಮಂಗಳೂರಿನ ಕಂಪಾನಿಯೋ ಶ್ರೀದೇವಿ ವೆಲ್ನೆಸ್ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಮಾಹಿತಿ ಕಾರ್ಯಕ್ರಮವು ದಿನಾಂಕ 06-04-2026 ರಂದು ಕೊಲ್ಯದ ನಾರಾಯಣ ಗುರು ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ) ಕೊಲ್ಯ, ಸೋಮೇಶ್ವರ ಇವರ ಸಹಕಾರದೊಂದಿಗೆ ನಡೆಯುತ್ತಿರುವ 15 ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಭಾಗವಾಗಿ ಈ ಕಾರ್ಯಕ್ರಮವನ್ನು […]
Read More
05-04-2026, 9:00 PM
ಮೂಡುಬಿದಿರೆ: ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವು ದಿನಾಂಕ 05-04-2026 ರಂದು ಇಲ್ಲಿನ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಶೀನಪ್ಪ ಸಭಾಭವನದಲ್ಲಿ ಸಂಭ್ರಮದಿಂದ ಜರುಗಿತು. ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಮಾರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ರುಚಿಕಾ ರೋಶನ್ ಹಾಗೂ ತೆಂಕಮಿಜಾರು ಅಂಗನವಾಡಿ ಕೇಂದ್ರದ ಬಿ.ಎಲ್.ಒ. ಕವಿತಾ […]
Read More
05-04-2026, 9:00 PM
ಮಂಗಳೂರು: ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಆಯೋಜಿಸಲಾಗುತ್ತಿರುವ ನಿರಂತರ ‘ಮನೆ ಮನೆ ಭಜನೆ’ ಸರಣಿಯ 64ನೇ ಕಾರ್ಯಕ್ರಮವು ಇತ್ತೀಚೆಗೆ ಘಟಕದ ಪ್ರಥಮ ಉಪಾಧ್ಯಕ್ಷರಾದ ಮುಖೇಶ್ ಕುಮಾರ್ ಅವರ ನಿವಾಸದಲ್ಲಿ ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ನೆರವೇರಿತು. ಕಾರ್ಯಕ್ರಮದಲ್ಲಿ ನಡೆದ ಭಜನಾ ಸಂಕೀರ್ತನೆಯಲ್ಲಿ ಘಟಕದ ಸದಸ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಘಟಕದ ವತಿಯಿಂದ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಕಸ್ತೂರಿ ಮತ್ತು ಮಹೇಶ್ ದಂಪತಿಗಳನ್ನು ಕೂಳೂರು ಘಟಕದ ಅಧ್ಯಕ್ಷರಾದ ಗೀತಾ ವಸಂತ್ […]
Read More
05-04-2026, 9:00 PM
ಮಂಗಳೂರು: ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ವತಿಯಿಂದ ಲೋಬೋಸ್ ರಿವರ್ ವ್ಯೂಗೆ ಏಪ್ರಿಲ್ 5, 2026ರಂದು ಒಂದು ದಿನದ ಕಿರು ಪ್ರವಾಸವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಈ ಪ್ರವಾಸದಲ್ಲಿ ಘಟಕದ ಸದಸ್ಯರು, ಅವರ ಕುಟುಂಬಸ್ಥರು ಹಾಗೂ ಬಂಧು-ಮಿತ್ರರು ಸೇರಿ ಸುಮಾರು 80 ಮಂದಿ ಭಾಗವಹಿಸಿ ಸಂತಸದ ಕ್ಷಣಗಳನ್ನು ಹಂಚಿಕೊಂಡರು. ಬೋಟ್‌ನಲ್ಲಿ ಸಂಚರಿಸುತ್ತಾ ಪ್ರಕೃತಿಯ ಮನಮೋಹಕ ಸೌಂದರ್ಯವನ್ನು ಕಣ್ತುಂಬಿಕೊಂಡು ಎಲ್ಲರೂ ಮನಸಾರೆ ಆನಂದಿಸಿದರು.ಬೋಟ್ ಸಿಬ್ಬಂದಿಗಳಿಂದ ವಿವಿಧ ಆಟೋಟ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದು, […]
Read More