Yuvavahini

ಘಟಕಗಳು

ಕಂಕನಾಡಿ ಘಟಕದ ವತಿಯಿಂದ ಶ್ರೀ ಮಹಾಂಕಾಳಿ ದೈವಸ್ಥಾನಕ್ಕೆ ಕುರ್ಚಿ ಕೊಡುಗೆ

ದಿನಾಂಕ 29-12-2016 ರಂದು ಕಂಕನಾಡಿ ಘಟಕದ ವತಿಯಿಂದ ಶ್ರೀ ಮಹಾಂಕಾಳಿ ದೈವಸ್ಥಾನದಲ್ಲಿ ವಾರದ ಪೂಜೆ ಹಾಗೂ ಭಜನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಅಲ್ಲದೆ ದೈವಸ್ಥಾನಕ್ಕೆ 50 ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಘಟಕದ ಸಲಹೆಗಾರರಾದ ಜಿ. ಪರಮೇಶ್ವರ ಪೂಜಾರಿ, ಘಟಕದ ಅಧ್ಯಕ್ಷ ಹರೀಶ್ ಕೆ. ಸನಿಲ್, ಶ್ರೀ ಮಹಾಂಕಾಳಿ ದೈವಸ್ಥಾನದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಘಟಕದ ಕಾರ್ಯದರ್ಶಿ ಭವಿತ್‌ರಾಜ್ ಹಾಗೂ ನಿಕಟಪೂರ್ವ ಅಧ್ಯಕ್ಷ ಶೇಖರ್ ಅಮೀನ್ ಉಪಸ್ಥಿತರಿದ್ದರು.

Read More

ಅನ್ವೇಷಣಾ-2016 ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ ಸಮಾರೋಪ

ಶಿಕ್ಷಣವು ಇಂದಿನ ಮೊದಲ ಅವಶ್ಯಕತೆಯಾಗಬೇಕು. ಪಠ್ಯ ಕೇಂದ್ರಿತ ಶಿಕ್ಷಣದ ಜೊತೆಗೆ ಕೌಶಲ ಅಭಿವೃದ್ಧಿಗೊಳಿಸುವ ತರಬೇತಿ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಸ್ಪರ್ಧಾತ್ಮಕವಾದ ಯುಗವು ಬದುಕಿನ ಎಲ್ಲಾ ರಂಗಗಳಲ್ಲೂ ಸವಾಲನ್ನು ಎದುರು ಹಾಕುತ್ತದೆ. ಸವಾಲುಗಳನ್ನು ಧಾಟಿ ಬದುಕು ಕಟ್ಟಿಕೊಳ್ಳುವ ತುರ್ತು ವರ್ತಮಾನದ್ದಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ರಿಯಾಶೀಲರಾಗಬೇಕು. ಅದಕ್ಕೆ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ಅಭಿಪ್ರಾಯಪಟ್ಟರು. ಅವರು ಬಿ.ಸಿ.ರೋಡು ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಯುವವಾಹಿನಿ […]

Read More

ಯುವವಾಹಿನಿ ಬಂಟ್ವಾಳ ತಾಲ್ಲೂಕು ಘಟಕ ಅನ್ವೇಷಣಾ -2016 ; ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟನೆ

ಶಿಕ್ಷಣವು ಮಾನವನನ್ನು ಪರಿಪೂರ್ಣ ಮಾನವೀಯ ಪ್ರಜ್ಞೆಯ ನಾಗರಿಕನನ್ನಾಗಿಸುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯಚಟುವಟಿಕೆಯ ಜೊತೆಗೆ ಜೀವನ ಮೌಲ್ಯ, ಸಂವಹನ ಕೌಶಲಗಳನ್ನು ರೂಢಿಸಿಕೊಳ್ಳುವ ವ್ಯಕ್ತಿತ್ವ ವಿಕಸನಗೊಳಿಸುವ ಶಿಕ್ಷಣದ ಅಗತ್ಯತೆಯೂ ಇದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪಡೆಯುವ ಹಂತದಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳಬೇಕು. ನಿರಂತರ ಪರಿಶ್ರಮದ ಮೂಲಕ ಗುರಿಯನ್ನು ಮುಟ್ಟಲು ಸಾಧ್ಯ. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಅನ್ವೇಷಣಾ-2016 ನಂತಹ ಕಾರ್ಯಾಗಾರಗಳ ಅಗತ್ಯತೆ ಇದೆ ಎಂದು ಕಕ್ಯಪದವು ಎಲ್.ಸಿ.ಆರ್. ವಿದ್ಯಾಸಂಸ್ಥೆಯ ಸಂಸ್ಥಾಪಕ ರೋಹಿನಾಥ ಪಾದೆ ಅಭಿಪ್ರಾಯಪಟ್ಟರು. ಅವರು ಬಿ.ಸಿ.ರೋಡು ಗಾಣದಪಡ್ಪುವಿನ ಬ್ರಹ್ಮಶ್ರೀ […]

Read More

ಯಡ್ತಾಡಿ ಯುವವಾಹಿನಿಯ ಸಾಹಿತ್ಯ ಸಾಂಸ್ಕ್ರತಿಕ ಸಮ್ಮೇಳನ ‘ದೀವಿಗೆ 2016’

ದಿನಾಂಕ 25-12-2016 ರಂದು ಸಾಬರ ಕಟ್ಟೆಯ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಯಡ್ತಾಡಿ ಘಟಕದ ವತಿಯಿಂದ ಜರಗಿದ ಕೋಟ ಹೋಬಳಿ ಮಟ್ಟದ ಬಿಲ್ಲವರ 6ನೇ ಸಾಹಿತ್ಯಿಕ-ಸಾಂಸ್ಕೃತಿಕ ಸಮ್ಮೇಳನ ’ದೀವಿಗೆ-2016’ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿಯವರು ಭಾಷಣ ಮಾಡುತ್ತಿರುವುದು.

Read More

ಹೆಣ್ಣು ಮಕ್ಕಳ ಆತ್ಮರಕ್ಷಣೆ ಮತ್ತು ತರಬೇತಿ ಕಾರ್ಯಕ್ರಮ

ಯುವವಾಹಿನಿ (ರಿ) ಮೂಲ್ಕಿ ಘಟಕದ ವತಿಯಿಂದ ದಿನಾಂಕ 19-12-2016 ರಂದು ಸರಕಾರಿ ಪ್ರೌಢಶಾಲೆ ಸದಾಶಿವ ನಗರ ಇಲ್ಲಿ ಹೆಣ್ಣು ಮಕ್ಕಳ ಆತ್ಮರಕ್ಷಣೆ ಮತ್ತು ತರಬೇತಿ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಶಾಲಾ ಸಹಶಿಕ್ಷಕರಾದ ಅಶೋಕ್ ಜಂಬಗಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಂತರಾಷ್ಟ್ರೀಯ ಕ್ರೀಡಾಪಟು ಕಾರ್ತಿಕ್ ಎಸ್. ಕಟೀಲ್‌ರವರು ಸುಮಾರು ಒಂದೂವರೆ ಗಂಟೆಗಳ ಕಾಲ ಶಾಲಾ ವಿದ್ಯಾರ್ಥಿನಿಯರಿಗೆ ಪ್ರಾತ್ಯಕ್ಷತೆಯ ಮೂಲಕ ಉತ್ತಮ ತರಬೇತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಚೇತನ್ ಕುಮಾರ್‌ರವರು ವಹಿಸಿದ್ದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯ […]

Read More

ಅಭೂತಪೂರ್ವ ಸ್ಪಂದನೆಯಲ್ಲಿ ಸಾಕಾರಗೊಂಡ ಬಿಲ್ಲವ ವಧೂವರರ ಸಮಾವೇಶ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಟ್ಟಿಗೆ ಅಪೂರ್ವವಾದ, ಬಿಲ್ಲವ ಸಮಾಜದ ’ವಧೂವರರ ಸಮಾವೇಶ’ ಬಿಲ್ಲವ ಸಮಾಜ ಬಾಂಧವರ ಅಭೂತಪೂರ್ವ ಸ್ಪಂದನೆಯೊಂದಿಗೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಯುವವಾಹಿನಿ ಮಹಿಳಾ ಘಟಕದ ಸಾಮಾಜಿಕ ಕಳಕಳಿಯ ವೈಶಿಷ್ಟ್ಯಪೂರ್ಣ ಪರಿಕಲ್ಪನೆಯೊಂದಿಗೆ ಯುವವಾಹಿನಿ (ರಿ) ಕೇಂದ್ರ ಸಮಿತಿ ಮತ್ತು ಇತರ ಘಟಕಗಳ ಸಹಕಾರದೊಂದಿಗೆ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ದಿನಾಂಕ 18-12-2016 ರಂದು ಜರಗಿದ ಸಮಾವೇಶವು ಯುವವಾಹಿನಿಯ ಚಟುವಟಿಕೆಗಳಲ್ಲಿ ಒಂದು ಮೈಲುಗಲ್ಲಾಗಿ ಇತಿಹಾಸ ನಿರ್ಮಿಸಿತು. ಒಂದು ಮಹತ್ವಪೂರ್ಣ ಯೋಚನೆ, ಯೋಜನೆಯೊಂದಿಗೆ ಬಹಳಷ್ಟು […]

Read More

’ಪ್ರಸ್ತುತ ದಿನದಲ್ಲಿ ಯವಜನತೆ’ ಕಾರ್ಯಾಗಾರ

ಕೂಳೂರು ಘಟಕದ ವತಿಯಿಂದ ದಿನಾಂಕ 14-12-2016 ರಂದು ಕೂಳೂರಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಸಭಾಂಗಣದಲ್ಲಿ ಪ್ರಸ್ತುತ ದಿನದಲ್ಲಿ ಯವಜನತೆ’ ಎಂಬ ಕಾರ್ಯಾಗಾರ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನರೇಶ್‌ಕುಮಾರ್ ಸಸಿಹಿತ್ಲುರವರು ಪ್ರಸ್ತುತ ಸಮಾಜದಲ್ಲಿ ಬಿಲ್ಲವ ಯುವಜನತೆಗೆ ಆಗುವಂತಹ ತೊಂದರೆಗಳ ಬಗ್ಗೆ ತಿಳಿಸಿದರು. ಬಿಲ್ಲವ ಯುವಜನತೆಯು ಯಾವ ರೀತಿಯಲ್ಲಿ ಅನ್ಯ ಸಮುದಾಯದಿಂದ ದಾರಿ ತಪ್ಪುತ್ತಿದೆ ಎಂಬ ವಿಷಯವನ್ನು ಕೆಲವೊಂದು ಉದಾಹರಣೆಯ ಮೂಲಕ ತಿಳಿಸಿ ಯುವಜನತೆಗೆ ಎಚ್ಚರಿಕೆಯನ್ನು ನೀಡಿದರು ಹಾಗೂ ಆದಷ್ಟು ಯುವಜನತೆಯು ಯುವವಾಹಿನಿಗೆ ಸೇರಿ ಈ ಎಲ್ಲಾ […]

Read More

’ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳ ಅನುಷ್ಠಾನದಲ್ಲಿ ಬಿಲ್ಲವ ಸಮಾಜ’ ವಿಚಾರ ಕಮ್ಮಟ

ದಿನಾಂಕ 11-12-2016 ರಂದು ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ (ರಿ) ಪಣಂಬೂರು ಘಟಕದ ವತಿಯಿಂದ ಯುವವಾಹಿನಿ ಕೂಳೂರು ಘಟಕದ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳ ಅನುಷ್ಠಾನದಲ್ಲಿ ಬಿಲ್ಲವ ಸಮಾಜ ಎಂಬ ವಿಚಾರ ಕಮ್ಮಟ ನಡೆಯಿತು. ಕುಳಾಯಿ ಸಂಘದ ಅಧ್ಯಕ್ಷ ಎಂ.ಟಿ. ಸಾಲ್ಯಾನ್ ದೀಪ ಬೆಳಗಿಸಿ ಕಮ್ಮಟವನ್ನು ಉದ್ಘಾಟಿಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಕೆ. ವಿಶ್ವನಾಥ್‌ರವರು ಪಣಂಬೂರು ಹಾಗೂ ಕೂಳೂರು ಘಟಕದ ಬೆಳವಣಿಗೆಯನ್ನು ತಿಳಿಸುತ್ತಾ ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆ ಗೈದರು. ಯುವವಾಹಿನಿ (ರಿ) ಕೇಂದ್ರ […]

Read More

ಸುರತ್ಕಲ್ ಘಟಕದ ವತಿಯಿಂದ ಪೆರ್ಮುದೆ ಸರಕಾರಿ ಕೋಡಿಕೆರೆ ಶಾಲೆಗೆ ಪೋಡಿಯಂ ಕೊಡುಗೆ

ದಿನಾಂಕ 10-12-2016 ರಂದು ಸುರತ್ಕಲ್ ಘಟಕದ ಹೆಚ್ಚಿನ ಸದಸ್ಯರ ಸಹಕಾರದಿಂದ ಪೆರ್ಮುದೆ ಸರಕಾರಿ ಕೋಡಿಕೆರೆ ಶಾಲೆಗೆ ಒಂದು ಪೋಡಿಯಂನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಭಾಸ್ಕರ ಅಗರಮೇಲು, ಘಟಕದ ಮಾಜಿ ಅಧ್ಯಕ್ಷರುಗಳಾದ ಯೋಗೀಶ್ ಸನಿಲ್, ವಿಜಯಾ ಎಸ್. ಕುಕ್ಯಾನ್, ಸತೀಶ್ ಕೋಟ್ಯಾನ್ ಹಾಗೂ ಘಟಕದ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು.

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!