Yuvavahini

ಘಟಕಗಳು

ಭಜನಾ ಸಂಕೀರ್ತನೆ

ಯುವವಾಹಿನಿ(ರಿ.) ಬಜಪೆ ಘಟಕದ ವತಿಯಿಂದ ಭಜನಾ ಸಂಕೀರ್ತಣೆಯು ಬಜಪೆ ದೊಡ್ಡಿಕಟ್ಟ ಸ್ವಯಂ ಭೂಲಿಂಗೇಶ್ವರ ದೇವಸ್ಥಾನ ದಲ್ಲಿ ದಿನಾಂಕ 8-03-2024 ರಂದು ಸಾಯಂಕಾಲ 5:00 ರಿಂದ 7:30 ಗಂಟೆಯವರೆಗೆ ಅರ್ಥ ಪೂರ್ಣವಾಗಿ ನಡೆಯಿತು. ದೊಡ್ಡಿಕಟ್ಟ ದೇವಸ್ಥಾನದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶಾಲು ಹಾಕಿ, ಪ್ರಸಾದ ವಿತರಣೆ ಮಾಡಿ ಗೌರವಿಸಿದರು. ಘಟಕದ ಅಧ್ಯಕ್ಷರಾದ ಮಾಧವ ಸಾಲಿಯಾನ್, ಉಪಾಧ್ಯಕ್ಷರಾದ ರೇಣುಕಾ ಶೇಖರ್, ಮಾಜಿ ಅಧ್ಯಕ್ಷರುಗಳಾದ ದೇವರಾಜ್ ಅಮೀನ್, ಸಂಧ್ಯಾ ಕುಳಾಯಿ, ಚಂದ್ರಶೇಖರ್, ಯೋಗೀಶ್ […]

Read More

ಭಜನಾ ಸಂಕೀರ್ತನೆ

ಯುವವಾಹಿನಿ(ರಿ.) ಬಜಪೆ ಘಟಕದ ವತಿಯಿಂದ ಭಜನಾ ಸಂಕೀರ್ತನೆಯು ತಲಕಲ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ದಿನಾಂಕ 08-03-2024 ಸಾಯಂಕಾಲ 8:00 ರಿಂದ 8:45 ಗಂಟೆಯವರೆಗೆ ಅರ್ಥಪೂರ್ಣವಾಗಿ ನಡೆಯಿತು. ಅಧ್ಯಕ್ಷರಾದ ಮಾಧವ ಸಾಲಿಯಾನ್, ಕಾರ್ಯದರ್ಶಿ ರೋಹಿಣಿ, ಉಪಾಧ್ಯಕ್ಷರು ರೇಣುಕಾ ಶೇಖರ್, ಮಾಜಿ ಅಧ್ಯಕ್ಷರುಗಳಾದ ಸಂಧ್ಯಾ ಕುಳಾಯಿ, ಚಂದ್ರಶೇಖರ, ಯೋಗೀಶ್ ಪೂಜಾರಿ ಉಷಾ ಸುವರ್ಣ, ಸದಸ್ಯರಾದ ಚಿತ್ತರಂಜನ್, ಸುಚಿತಾ, ಸಂಧ್ಯಾ ಸುನಿಲ್, ಲೀಲಾವತಿ ಇತರ ಪದಾಧಿಕಾರಿಗಳು ಜೊತೆಗಿದ್ದರು. ದೇವಸ್ಥಾನದ ಅರ್ಚಕರು ಅಧ್ಯಕ್ಷರಿಗೆ ಶಾಲು ಹಾಕಿ ಪ್ರಸಾದ ನೀಡಿ ಎಲ್ಲರನ್ನು ಗೌರವಿಸಿದರು.

Read More

ಸಂಸ್ಕಾರ ಕಲಿಸುವಲ್ಲಿ ತಾಯಿ ಪಾತ್ರ ಹಿರಿದು-ಮಾಣಿಯಲ್ಲಿ ಆರತಿ ದಾಸಪ್ಪ

ಬಂಟ್ವಾಳ: ಮಕ್ಕಳಿಗೆ ಜೀವನ ಶಿಕ್ಷಣ ನೀಡಿ, ಸಂಸ್ಕಾರ ಕಲಿಸುವಲ್ಲಿ ತಾಯಿ ಪಾತ್ರ ಬಹಳ ಮುಖ್ಯ, ಕುಟುಂಬದ ಅಳಿವು ಉಳಿವು ಮಹಿಳೆ ಕೈಯಲ್ಲಿದೆ ಎಂದು ಕೊಡಪದವು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕಿ ಆರತಿ ದಾಸಪ್ಪ ಹೇಳಿದರು. ಯುವವಾಹಿನಿ (ರಿ.) ಮಾಣಿ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಮಾಣಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ 08/03/2024 ಶುಕ್ರವಾರದಂದು ಮಾಣಿ ನಾರಾಯಣ ಗುರು ಸಭಾಭವನ ದಲ್ಲಿ ಜರುಗಿದ ಮಾತೆಯ ಮಡಿಲು ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅತಿಥಿಯಾಗಿ […]

Read More

ಸೈಬರ್ ಕ್ರೈಂ ಮತ್ತು ಕಾನೂನು ಮಾಹಿತಿ

ಉಡುಪಿ: ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೈಬರ್ ಕ್ರೈಂ ಮತ್ತು ಕಾನೂನು ಮಾಹಿತಿ ಕಾರ್ಯಾಗಾರ ದಿನಾಂಕ 6/03/2024 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಲೋಕಾಯುಕ್ತ ಇನ್ಸ್ಪೆಕ್ಟರ್ ಮಂಜುನಾಥ್ ಆಗಮಿಸಿ, ಸುಮಾರು ಒಂದೂವರೆ ಗಂಟೆಗಳ ಕಾಲ ಸಾಮಾಜಿಕ ಜಾಲತಾಣಗಳ ಉಪಯೋಗ ಮತ್ತು ದುರುಪಯೋಗ ಹಾಗೂ ಕೆಲವೊಂದು ಸಂದರ್ಭದಲ್ಲಿ ನಮಗಾಗುವ ವಂಚನೆಯ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸುರೇಶ್ ರೈಯವರು ವಹಿಸಿದ್ದರು. ಘಟಕದ ಅಧ್ಯಕ್ಷೆ ಅಮಿತಾಂಜಲಿ, […]

Read More

ಕುಟುಂಬ ಸಮ್ಮಿಲನ, ಮಹಿಳಾ ದಿನಾಚರಣೆ

ಕಾಪು: ಯುವವಾಹಿನಿ(ರಿ.) ಕಾಪು ಘಟಕದ ವತಿಯಿಂದ ದಿನಾಂಕ 05-03-2024 ಮಂಗಳವಾರ ಸಾಯಂಕಾಲ 6.00ರಿಂದ 9.00ರವರೆಗೆ ಮಜೂರು ಗ್ರೀನ್ ವುಡ್ ರೆಸಾರ್ಟ್‌ನಲ್ಲಿ ಕುಟುಂಬ ಸಮ್ಮಿಲನ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಯುವವಾಹಿನಿ ಕಾಪು ಘಟಕದ ಅಧ್ಯಕ್ಷರು ಸೂರ್ಯನಾರಾಯಣ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸೌಮ್ಯ ರಾಕೇಶ್, ಕಾಪು ಶ್ರೀ ನಾರಾಯಣ ಗುರು ಸೇವಾ ಮಹಿಳಾ ಮಂಡಳಿ ಅಧ್ಯಕ್ಷೆ ಸರಿತಾ ಸಾಲ್ಯಾನ್ ಮತ್ತು ಕಾಪು ಜೇಸಿಐ ಅಧ್ಯಕ್ಷೆ ಸುಖಲಾಕ್ಷಿ ಬಂಗೇರ ಅವರನ್ನು ಸನ್ಮಾನಿಸಿ, […]

Read More

ಬನ್ನಂಜೆ ಬಾಬು ಅಮೀನ್ ಪ್ರಶಸ್ತಿ ಪ್ರದಾನ

ಉಡುಪಿ: ಮಾರ್ಚ್ 4 ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಚಿಟ್ಟಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್‌ನ ಲಕ್ಷ್ಮೀ ಸಭಾಭವನದಲ್ಲಿ ರವಿವಾರ ಜರಗಿತು. ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ನಿವೃತ್ತ ಪ್ರಾಂಶುಪಾಲ ಕನರಾಡಿ ವಾದಿರಾಜ ಭಟ್ ಅವರಿಗೆ ಹಾಗೂ ಜಾನಪದ ಕಲಾವಿದ ಪ್ರಶಸ್ತಿಯನ್ನು ಹಿರಿಯ ಬೈದೇರುಗಳ ದರ್ಶನ ಪಾತ್ರಿ ಕೋಟಿ ಪೂಜಾರಿ ಸೂಡ ಅವರಿಗೆ ಪ್ರದಾನಿಸಲಾಯಿತು. ಸಮಾಜಸೇವಕ ಈಶ್ವರ ಮಲ್ಪೆ ಅವರ ಪರವಾಗಿ ಅವರ ಪತ್ನಿ ಗೀತಾ […]

Read More

ಪದಗ್ರಹಣ ಸಮಾರಂಭ

ಹಳೆಯಂಗಡಿ: ಯುವವಾಹಿನಿ(ರಿ.) ಹಳೆಯಂಗಡಿ ಘಟಕದ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 03-03-2024 ರಂದು ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಿಲ್ಲವ ಭವನದಲ್ಲಿ ನಡೆಯಿತು. ಪದಗ್ರಹಣ ಯುವವಾಹಿನಿ ಸಮಾರಂಭದಲ್ಲಿ ಹಳೆಯಂಗಡಿ ಘಟಕದ ಅಧ್ಯಕ್ಷರು ಕಿರಣ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಮಾರಂಭದ ಉದ್ಘಾಟನೆಯನ್ನು ಬಿಲ್ಲವ ಸಮಾಜ ಸೇವಾ ಸಂಘ(ರಿ.) ಹಳೆಯಂಗಡಿ ಅಧ್ಯಕ್ಷರು ಚಂದ್ರಶೇಖರ್ ನಾನಿಲ್ ದೀಪವನ್ನು ಬೆಳಗಿಸುವುದರ ಮೂಲಕ ನೆರವೇರಿಸಿದರು. 2024- 25 ನೇ ಸಾಲಿನ ಅಧ್ಯಕ್ಷರಾಗಿ ಹಿತಾಕ್ಷಿ ನಾರಾಯಣ್, ಕಾರ್ಯದರ್ಶಿ ಪೂರ್ಣಿಮಾ ಹಾಗೂ […]

Read More

ಯುವವಾಹಿನಿ ಯುವಕರ ಆಶಾಕಿರಣ: ಪದ್ಮರಾಜ್ ಆರ್

ಬಜಪೆ: ನಾರಾಯಣ ಗುರು ಸ್ವಾಮಿಯವರ ತತ್ವಾದರ್ಶದಂತೆ ಯುವವಾಹಿನಿಯು ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ದೈಯ್ಯಗಳೊಂದಿಗೆ ಬಡವರ ಪಾಲಿಗೆ ಆಶಾಕಿರಣವಾಗಿ, ಯುವ ಜನತೆಗೆ ಬೇಕಾಗುವಂತಹ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಈ ಸಮಾಜಕ್ಕೆ ಮಾದರಿಯಾದ ಸಂಘಟನೆಯಾಗಿದೆ ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿಯಾದ ಪದ್ಮರಾಜ್ ಆರ್. ತಿಳಿಸಿದರು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೈದು ಶುಭನುಡಿಗೈದರು. ಅವರು ದಿನಾಂಕ 03/03/2024ರಂದು ಬಜಪೆ ಸಮುದಾಯ ಭವನದಲ್ಲಿ ಯುವವಾಹಿನಿ (ರಿ.) ಬಜಪೆ ಘಟಕದ 2024-25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ […]

Read More

ಮನೆ ಮನೆ ಭಜನೆ

ಯುವವಾಹಿನಿ ಸದಸ್ಯರೊಳಗೆ ಬಾಂಧವ್ಯ ವೃದ್ಧಿಸಲು ಹಾಗೂ ಘಟಕದ ಸದಸ್ಯರ ಕುಟುಂಬದೊಂದಿಗೆ ಬೆರೆಯಲು ನಾವು ಹಮ್ಮಿಕೊಂಡ ಮನೆ ಮನೆ ಭಜನೆ ಕಾರ್ಯಕ್ರಮ ದಿನಾಂಕ 02-03-2024 ಶನಿವಾರ ಘಟಕದ ಮಾಜಿ ಅಧ್ಯಕ್ಷರು ಯೋಗೀಶ್ ರಕ್ಷಿತಾ ಕೋಟ್ಯಾನ್ ರವರ ಮನೆಯಲ್ಲಿ ಭಜನಾ ಸಂಕೀರ್ತನೆ ನೆರವೇರಿತು. ಈ ಕಾರ್ಯಕ್ರಮದ ನೆನಪಿಗಾಗಿ ಘಟಕದ ವತಿಯಿಂದ ಶ್ರೀ ನಾರಾಯಣ ಗುರು ಚರಿತ್ರೆ ಪುಸ್ತಕವನ್ನು ನೀಡಲಾಯಿತು. ಭಜನಾ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು ,ಮಾಜಿ ಅಧ್ಯಕ್ಷರು ಗಳು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Read More

ದೇವಸ್ಥಾನದಲ್ಲಿ ಸ್ವಯಂ ಸೇವೆ

ಮೂಡುಬಿದಿರೆ: ಮುಂಡ್ಕೂರು ಕಜೆ-ಕುಕ್ಕುದಡಿ ಮಹಾಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ ಹಾಗೂ ನಾಗಮಂಡಲೋತ್ಸವ ಪ್ರಯುಕ್ತ ದಿನಾಂಕ 25-02-2024 ರಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಸುಮಾರು 20 ಸದಸ್ಯರು  ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!