ರಕ್ಷಾಬಂಧನ ಕಾಯ೯ಕ್ರಮ-ಯುವವಾಹಿನಿ (ರಿ) ಶಕ್ತಿ ನಗರ ಘಟಕ
19-09-2025, 7:51 AM
ದಿನಾಂಕ 9/8/2025 ರಂದು ಘಟಕದ ಸಹೋದರ ಸಹೋದರಿಯರು ಸೇರಿ ರಕ್ಷಾಬಂಧನ ಕಾಯ೯ಕ್ರಮನ್ನು ಆಚರಿಸಲಾಯಿತು.
19-09-2025, 7:51 AM
ದಿನಾಂಕ 9/8/2025 ರಂದು ಘಟಕದ ಸಹೋದರ ಸಹೋದರಿಯರು ಸೇರಿ ರಕ್ಷಾಬಂಧನ ಕಾಯ೯ಕ್ರಮನ್ನು ಆಚರಿಸಲಾಯಿತು.
19-09-2025, 7:48 AM
10/08/2025 ಘಟಕದ ವತಿಯಿಂದ ಆಟಿದ ಪೊರ್ಲು ಕಾರ್ಯಕ್ರಮ ತುಳುನಾಡಿನ ಸಂಪ್ರದಾಯದ ಪ್ರಕಾರ ಭತ್ತ ಕುಟ್ಟುವುದರ ಮೂಲಕ ವಿಶೇಷವಾಗಿ ಆಟಿದ ಪೊರ್ಲು 2025 ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧನ ಲಕ್ಷ್ಮಿ ಗಟ್ಟಿ .(ಸದಸ್ಯರು ರಾಣಿ ಅಬ್ಬಕ್ಕ ಅಧ್ಯಯನ ಪೀಠ ವಿಶ್ವ ವಿದ್ಯಾನಿಲಯ.ಮಂಗಳ ಗಂಗೋತ್ರಿ) ಆಟಿ ತಿಂಗಳ ವಿಶೇಷ ಆಚರಣೆಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು. ‘ಪರನೀರ್ ನೆಗೆಪೆರೆ ಬಲ್ಲಿ, ಪೊಸ ನೀರ್ ಉರ್ಕರ್ರೆ ಬಲ್ಲಿ’ ಎಂದರೆ ಹಳೇ ನೀರು ಬತ್ತಬಾರದು, ಹೊಸ ನೀರು ಹೆಚ್ಚಾಗಬಾರದು. ಹಿರಿಯರು, ಕಿರಿಯರು ಸಮಾನ […]
19-09-2025, 7:45 AM
ಸಂಪರ್ಕದ ನಿಟ್ಟಿನಲ್ಲಿ ಕುಟುಂಬ ಸಂಪರ್ಕ ನಿರ್ದೇಶಕರಾದ ಸುಜಾತ ರವರ ಸಂಚಾಲಕತ್ವದಲ್ಲಿ ದಿನಾಂಕ 11-08-2025 ರಂದು ಸು ಪ್ರಮ್ ಸೋ ಚಲನಚಿತ್ರ ವೀಕ್ಷಣೆಗೆ ಹೋಗಲಾಗಿತ್ತು. 51 ಜನ ಸದಸ್ಯರ ತಂಡ ಚಲನಚಿತ್ರ ವೀಕ್ಷಣೆ ಮಾಡಿದೆವು.
19-09-2025, 7:42 AM
ತಾರೀಕು 27/08/2025 ರಿಂದ 31/08/2025ರ ವರೆಗೆ ಘಟಕದ ಸ್ಥಾಪಕ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಸುವರ್ಣ ರವರ ಅಧ್ಯಕ್ಷತೆಯಲ್ಲಿ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸುವರ್ಣ ಸಂಭ್ರಮ ವು ಯಶಸ್ವಿಯಾಗಿ ವಿಜೃಂಭಣೆಯಿಂದ ಜರಗಿತು. ಸಮಾರಂಭದ ಐದು ದಿವಸದ ಸಭಾ ವೇದಿಕೆಯ ನಿರ್ವಹಣೆ ಯನ್ನು ನಮ್ಮ ಘಟಕವು ಅಚ್ಚುಕಟ್ಟಾಗಿ ನಿರ್ವಹಿಸಿತು.
19-09-2025, 7:38 AM
ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ (ರಿ ) ಸಂಘದ ಸಹಯೋಗದಲ್ಲಿ 05/09/25 ರಂದು ಶಿಕ್ಷಕ ದಿನಾಚರಣೆ ..ಸಮಾಜ ಸೇವಾ ನಿರ್ದೇಶಕರಾದ ಸೌಮ್ಯ ಮನೋಜ್ ಸ್ವಾಗತಿಸಿದರು,ಮಾತೃ ಸಂಘದ ಅಧ್ಯಕ್ಷರಾದ ಶ್ರೀ ವಿಜೇತ್ ಪಜೀರು ಕಾರ್ಯಕ್ರಮ ಉದ್ಘಾಟನೆ ಮಾಡಿದರು ನಿವೃತ್ತ ಶಿಕ್ಷಕ ದಂಪತಿಗಳಾದ ಶ್ರೀಮತಿ ಚಂದ್ರಾವತಿ ಗಂಗಾಧರ್ ಮತ್ತು ಶ್ರೀ ಗಂಗಾಧರ್ ಮಾಸ್ಟರ್ ಅನ್ನು ಸನ್ಮಾನಿಸಲಾಯಿತು..ನಿವೃತ್ತ ಶಿಕ್ಕಕರಾದ ಶ್ರೀ ವಸಂತ್ ಕೋಡಿ ಮುಖ್ಯ ಅಥಿತಿ ಆಗಿ ಆಗಮಿಸಿದ್ದರು..ಯುವವಾಹಿನಿ ಸದಸ್ಯರಾದ 7 ಜನ ಶಿಕ್ಷಕರನ್ನು ಅಭಿನಂದಿಸಲಾಯಿತು..ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ […]
19-09-2025, 7:34 AM
ದಿನಾಂಕ 7-9-2025 ಆದಿತ್ಯವಾರ ಕಂಕನಾಡಿ ಗರಡಿ ಕ್ಷೇತ್ರದಲ್ಲಿ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಪ್ರಯುಕ್ತ ಗುರು ಪೂಜೆಯನ್ನು ನೆರವೇರಿಸಿ ಪ್ರಸಾದವನ್ನು ಸ್ವೀಕರಿಸಲಾಯಿತು.
19-09-2025, 7:27 AM
ದಿನಾಂಕ 16-09-2025: ಘಟಕದ ಸಾಪ್ತಾಹಿಕ ಸಭೆಯಲ್ಲಿ ಇಂಜಿನಿಯರ್ ದಿನ ಆಚರಿಸಲಾಯಿತು. ಘಟಕದ ಇಂಜಿನಿಯರ್ ಸದಸ್ಯರುಗಳಾದ ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿ ಹಾಗೂ ಗಣೇಶ್ ವಿ ಕೋಡಿಕಲ್ ರನ್ನು ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಇಂಜಿನಿಯರ್ ದಿನದ ಪ್ರಯುಕ್ತ ಗೌರವಿಸಿ ಶುಭಾಶಯ ತಿಳಿಸಿದರು. ಈ ಸಂದರ್ಭ ಘಟಕದ ಪ್ರಥಮ ಉಪಾಧ್ಯಕ್ಷರಾದ ಹರೀಶ್ ಕೆ ಸುವರ್ಣ, ಕಾರ್ಯದರ್ಶಿ ಯಶವಂತ್ ಪೂಜಾರಿ ಉಳಾಯಿಬೆಟ್ಟು, ಕೋಶಾಧಿಕಾರಿ ಮಹೇಶ್ ಅಮೀನ್ ಹಾಗೂ ಘಟಕದ ಮಾಜಿ ಅಧ್ಯಕ್ಷರು , ಸದಸ್ಯರು ಉಪಸ್ಥಿತರಿದ್ದರು.
17-09-2025, 4:50 AM
ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪುಂಜಾಲಕಟ್ಟೆ ಶ್ರೀ ನಾರಾಯಣಗುರು ವಸತಿ ಶಾಲೆ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಗಾಣದಪಡ್ಡು, ಯುವವಾಹಿನಿ ಬಂಟ್ವಾಳ ಘಟಕ ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜನ್ಮದಿನಾಚರಣೆ ಪ್ರಯುಕ್ತ ತಾಲೂಕು ಮಟ್ಟದ ಗುರುಜಯಂತಿ ಆಚರಣೆ ದಿನಾಂಕ 07/09/2025 ನೇ ಆದಿತ್ಯವಾರ ಬಿ.ಸಿ.ರೋಡಿನ ಗಾಣದಪಡ್ಡುವಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ವಹಿಸಿ ಮಾತನಾಡಿ, ಸಂಘರ್ಷ […]
16-09-2025, 7:32 PM
ದಿನಾಂಕ 07- 09- 2025ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನೋತ್ಸವ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಿಶೇಷ ಮಹಾ ಪೂಜೆಯನ್ನು ಸಲ್ಲಿಸಲಾಯಿತು.
16-09-2025, 7:30 PM
07- 09- 2025ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನೋತ್ಸವ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕುಳಾಯಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರೆಲ್ಲರೂ ಭಾಗವಹಿಸಿದ್ದರು.