15-03-2026, 2:00 PM
ಮೂಡುಬಿದಿರೆ, ಮಾ.15: ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ 2026-27ನೇ ಸಾಲಿನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ಮೂಡುಬಿದಿರೆಯ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಮೃತ ಸಭಾಭವನದಲ್ಲಿ ಭಾನುವಾರ ಜರುಗಿತು.ಕಾರ್ಯಕ್ರಮವನ್ನು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಡಿಮೈಲಿಗೆ ವಿರೋಧಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಯುವವಾಹಿನಿ ಸಂಘಟನೆ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಬಲವಾಗಿ ಬೇರೂರಬೇಕು […]
Read More
15-03-2026, 11:00 AM
ಮಂಗಳೂರು :ಯುವವಾಹಿನಿ (ರಿ.) ಬಜಪೆ ಘಟಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಬಜಪೆ ಪಟ್ಟಣ ಪಂಚಾಯತ್ ಇವರ ಜಂಟಿ ಆಶ್ರಯದಲ್ಲಿ ಹಾಗೂ ಆಳ್ವಾಸ್ ಆಸ್ಪತ್ರೆ, ಮೂಡಬಿದ್ರೆ ಇವರ ಸಹಯೋಗದೊಂದಿಗೆ ಮಾರ್ಚ್ 15, 2026 ರಂದು ಬಜಪೆ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ-ಕರಂಬಾರು ಅಧ್ಯಕ್ಷ ಶಿವರಾಮ್ ಪೂಜಾರಿ ದೀಪ ಪ್ರಜ್ವಲನೆ ಮಾಡುವ ಮೂಲಕ ಶಿಬಿರ […]
Read More
15-03-2026, 10:00 AM
ಬಂಟ್ವಾಳ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಎಪ್ರಿಲ್ 19 ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯುವ ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಡೆನ್ನಾನ ಡೆನ್ನನ 2026 ರ ಲೋಗೋವನ್ನು ಕಿಯೋನಿಕ್ಸ್ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಹಾಗೂ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಅನಾವರಣಗೊಳಿಸಿದರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು […]
Read More
14-03-2026, 2:00 PM
ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಹೇಳಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ, ಯುವವಾಹಿನಿ (ರಿ.) ಕೊಲ್ಯ ಘಟಕದ ಆತಿಥ್ಯದಲ್ಲಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ “ಸಖೀ […]
Read More
14-03-2026, 2:00 PM
ಮಂಗಳೂರು : ಮಹಿಳಾ ದಿನಾಚರಣೆಯ ಸಂಭ್ರಮವು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿದಿನವೂ ಸಂತೋಷ, ಸಂಭ್ರಮ ಹಾಗೂ ಸಕಾರಾತ್ಮಕ ಚಿಂತನೆಗಳೊಂದಿಗೆ ಆಚರಿಸಬೇಕಾಗಿದೆ ಎಂದು ರೂವಾರಿ.ಕಾಮ್ ಡಿಜಿಟಲ್ ಪತ್ರಿಕೆಯ ಪ್ರಧಾನ ಸಂಪಾದಕಿ ರತ್ನಾವತಿ ಜೆ. ಬೈಕಾಡಿ ಅಭಿಪ್ರಾಯಪಟ್ಟರು. ಅವರು ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಮಾರ್ಚ್ 14, 2026 ರಂದು ಸಂಜೆ 5 ಗಂಟೆಗೆ ಯುವವಾಹಿನಿ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು “ಇತರರು ಏನು ಹೇಳುತ್ತಾರೆ” ಎಂಬ ಕೀಳರಿಮೆಯನ್ನು ತೊರೆದು, […]
Read More
12-03-2026, 1:07 PM
ಮಂಗಳೂರು: ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ, ಯುವವಾಹಿನಿ (ರಿ.) ಕೊಲ್ಯ ಘಟಕದ ಆತಿಥ್ಯದಲ್ಲಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ “ಸಖೀ ಸಂವಾದ – 2026” ಸಂವಾದ ಕಾರ್ಯಾಗಾರವು ಮಾರ್ಚ್ 14 ರಂದು ಬೆಳಿಗ್ಗೆ 9:30ರಿಂದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಉದ್ಘಾಟನೆ ಮತ್ತು ಅತಿಥಿಗಳುದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ […]
Read More
09-03-2026, 8:00 PM
ಮಂಗಳೂರು: ದಿನಾಂಕ 09-03-2026 ನೇ ಸೋಮವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯನ್ನು ಯುವವಾಹಿನಿ (ರಿ.) ಕಂಕನಾಡಿ ಘಟಕದ ಸಹಯೋಗದೊಂದಿಗೆ ಭಕ್ತಿಭಾವದಿಂದ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Read More
08-03-2026, 9:15 PM
ಮಂಗಳೂರು: ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಏಳು ದಿನಗಳ ರಾಜಸ್ಥಾನ ಪ್ರವಾಸವು ಅತ್ಯಂತ ಯಶಸ್ವಿಯಾಗಿ ಹಾಗೂ ಸ್ಮರಣೀಯವಾಗಿ ಸಂಪನ್ನಗೊಂಡಿತು. ಪ್ರವಾಸದ ಹಾದಿ ಮತ್ತು ಪ್ರಮುಖ ಕ್ಷಣಗಳು:ಮಾರ್ಚ್ 2, 2026 ರಂದು ಆರಂಭವಾದ ಈ ಪ್ರವಾಸದಲ್ಲಿ ಒಟ್ಟು 24 ಸದಸ್ಯರ ತಂಡ ಭಾಗವಹಿಸಿತ್ತು. ಬೊಳ್ಳಿ ಟೂರಿಸಂ ಸಹಯೋಗದೊಂದಿಗೆ ಆಯೋಜಿಸಲಾದ ಈ ಪ್ರವಾಸದ ಪ್ರಮುಖ ಹಂತಗಳು ಇಲ್ಲಿವೆ:ಜೈಪುರ ದರ್ಶನ: ಮಂಗಳೂರಿನಿಂದ ಬೆಂಗಳೂರು ಮೂಲಕ ವಿಮಾನದ ಮೂಲಕ ಜೈಪುರ ತಲುಪಿದ ತಂಡವು, ಅಲ್ಲಿನ ಐತಿಹಾಸಿಕ ಹವಾ […]
Read More
08-03-2026, 9:00 PM
ಪಣಂಬೂರು: “ಇಂದಿನ ಬದಲಾದ ಜೀವನಶೈಲಿ ಮನುಷ್ಯನನ್ನು ರೋಗಗಳ ಗೂಡಾಗಿಸುತ್ತಿದೆ. ಅನಿಯಮಿತ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದ ಆಯುಷ್ಯ ಕ್ಷೀಣಿಸುತ್ತಿರುವುದು ಆತಂಕಕಾರಿ ಸಂಗತಿ. ಆರೋಗ್ಯಕರ ಬದುಕಿಗಾಗಿ ದಿನದ 24 ಗಂಟೆಗಳಲ್ಲಿ ಕನಿಷ್ಠ ಒಂದು ಗಂಟೆಯನ್ನಾದರೂ ಯೋಗಾಭ್ಯಾಸಕ್ಕೆ ಮೀಸಲಿಡುವುದು ಅನಿವಾರ್ಯ,” ಎಂದು SPYSS(R) ಜಿಲ್ಲಾ ಸಂಯೋಜಕಿ ಕನಕಾ ಮೋಹನ್ ತಿಳಿಸಿದರು. ಯುವವಾಹಿನಿ (ರಿ.) ಪಣಂಬೂರು-ಕುಳಾಯಿ ಘಟಕದ ವತಿಯಿಂದ ಮಾರ್ಚ್ 8ರ ಭಾನುವಾರ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಆರೋಗ್ಯ ಪದ್ಧತಿಯ […]
Read More
08-03-2026, 9:00 PM
ಮಂಗಳೂರು: “ಒಬ್ಬ ಸುಸಂಸ್ಕೃತ ಮಹಿಳೆ ತನ್ನ ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ದೇಶ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಹೆಣ್ಣು ತಾನು ಹುಟ್ಟಿದ ಮನೆ ಹಾಗೂ ಸೇರಿದ ಗಂಡನ ಮನೆಯ ಹಿತ ಬಯಸುವವಳು,” ಎಂದು ಡಿವೈನ್ ಪಾರ್ಕ್ನ ಮಹಿಳಾ ಮೇಲ್ಮೈ ಅಧಿಕಾರಿ ಪ್ರೇಮ ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.ಅವರು ದಿನಾಂಕ 08-03-2026 ರಂದು ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. […]
Read More