ದೇವಸ್ಥಾನದಲ್ಲಿ ಸ್ವಯಂ ಸೇವೆ
25-02-2024, 5:18 PM
ಮೂಡುಬಿದಿರೆ: ಮುಂಡ್ಕೂರು ಕಜೆ-ಕುಕ್ಕುದಡಿ ಮಹಾಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ ಹಾಗೂ ನಾಗಮಂಡಲೋತ್ಸವ ಪ್ರಯುಕ್ತ ದಿನಾಂಕ 25-02-2024 ರಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಸುಮಾರು 20 ಸದಸ್ಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
25-02-2024, 5:18 PM
ಮೂಡುಬಿದಿರೆ: ಮುಂಡ್ಕೂರು ಕಜೆ-ಕುಕ್ಕುದಡಿ ಮಹಾಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ ಹಾಗೂ ನಾಗಮಂಡಲೋತ್ಸವ ಪ್ರಯುಕ್ತ ದಿನಾಂಕ 25-02-2024 ರಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಸುಮಾರು 20 ಸದಸ್ಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
25-02-2024, 4:45 PM
ಕೂಳೂರು: ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ 27ನೇ ಸ್ವಚ್ಛತಾ ಅಭಿಯಾನವು ಸಂಘಟನಾ ಕಾರ್ಯದರ್ಶಿ ಮುಕೇಶ್ ರವರ ಸಂಚಾಲಕತ್ವದಲ್ಲಿ ಕೂಳೂರು ಪರಿಸರದಲ್ಲಿ ದಿನಾಂಕ 25/02/2024 ಭಾನುವಾರದಂದು ಹಮ್ಮಿಕೊಂಡಿದ್ದರು. ಅಧ್ಯಕ್ಷರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಇಂದಿರಾ ಸುರೇಶ್, ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ , ಭಾಸ್ಕರ್ ಕೋಟ್ಯಾನ್, ನಯನ ರಮೇಶ್ , ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಸಂಘಟನಾ ಕಾರ್ಯದರ್ಶಿ ಮುಕೇಶ್, ಕಾರ್ಯದರ್ಶಿ ನೈನಾ ಕೋಟ್ಯಾನ್ , ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
24-02-2024, 11:17 AM
ಕಂಕನಾಡಿ: ಯುವವಾಹಿನಿ (ರಿ.) ಕಂಕನಾಡಿ ಘಟಕ ಹಾಗೂ ಭಾರತ ಸರ್ಕಾರ ದತ್ತೋಪಂಥ, ಠೇಂಗಡಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ದಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಪ್ರಾದೇಶಿಕ ನಿರ್ದೇಶನಾಲಯ, ಮಂಗಳೂರು ವತಿಯಿಂದ ಮಹಿಳೆಯರಿಗೆ ಸ್ವಉದ್ಯೋಗ ಉಚಿತ ತರಬೇತಿ ಕಾರ್ಯಗಾರವು ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನ ಸಭಾಂಗಣದಲ್ಲಿ ದಿನಾಂಕ 24-02-2024 ಶನಿವಾರದಂದು ನಡೆಯಿತು. ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನದ ಅಧ್ಯಕ್ಷರಾದ ಉಮಾನಾಥ್ ಕೋಟ್ಯಾನ್ ರವರು ದೀಪ ಪ್ರಜ್ವಲಿಸುವ ಮುಖೇನ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ರೇಖಾ ಗೋಪಾಲ್ […]
23-02-2024, 5:52 PM
ಬಜಪೆ: ಯುವವಾಹಿನಿ ಬಜಪೆ ಘಟಕದ ಫೆಬ್ರವರಿ ತಿಂಗಳ ಮನೆ ಮನೆ ಭಜನಾ ಸಂಕೀರ್ತಣೆಯು ದಿನಾಂಕ 23/02/24 ರಂದು ಘಟಕದ ಪ್ರಧಾನ ಕಾರ್ಯದರ್ಶಿಯಾದ ದೀಕ್ಷಿತ್ ಅಮೀನ್ ಇವರ ಮನೆಯಲ್ಲಿ ಸಾಯಂಕಾಲ 6:00 ಗಂಟೆಯಿಂದ 7:00 ಗಂಟೆಯವರೆಗೆ ಅರ್ಥಪೂರ್ಣವಾಗಿ ನೆರವೇರಿತು.
23-02-2024, 3:27 PM
ಯುವವಾಹಿನಿ(ರಿ.) ಕೊಲ್ಯ ಘಟಕದ ವತಿಯಿಂದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ದಿನಾಂಕ 23-02-2024ನೇ ಶುಕ್ರವಾರದಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಾನೂನು ಮತ್ತು ಶಿಸ್ತಿನ ಅರಿವು ಮುಗ್ದ ಮನಗಳೊಂದಿಗೆ ಒಲವಿನ ಸಂವಾದ ಎಂಬ ಕಾರ್ಯಕ್ರಮವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಪಟ್ಟು ಶಾಲಾ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಸುಸಂದರ್ಭದಲ್ಲಿ ಆನಂದಾಶ್ರಮ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಗುರುಮೂರ್ತಿ ದೀಪ ಬೆಳಗಿಸಿ ಉದ್ಘಾಟಿಸಿ ಮಕ್ಕಳು ತಮ್ಮ ಜೀವನದಲ್ಲಿ ಬಹಳ ಅಗತ್ಯವಾಗಿ ಅಳವಡಿಸಿಕೊಳ್ಳಬಹುದಾದ ಮೌಲ್ಯಯುತವಾದ ಕಾರ್ಯಕ್ರಮವೆಂದು ಹರ್ಷ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಪನ್ಮೂಲ ವ್ಯಕ್ತಿ ಹೈಕೋರ್ಟ್ ವಕೀಲರಾದ ರಾಜಲಕ್ಷ್ಮಿ ಡಿ. ಸುವರ್ಣ […]
22-02-2024, 5:12 PM
ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಇವರ ಆಶ್ರಯದಲ್ಲಿ ಉಳ್ಳಾಲ ತಾಲೂಕು ಬಿಲ್ಲವರ ಸಮಾವೇಶ ಸಮಿತಿ ಸಹಭಾಗಿತ್ವದಲ್ಲಿ ಫೆಬ್ರವರಿ 25 ರಂದು ಕೊಲ್ಯ ಬಿಲ್ಲವ ಸಮಾಜ ಸಂಘದ ಆವರಣದಲ್ಲಿ ಬಿಲ್ಲವರ ಸಮಾವೇಶ ನಡೆಯಲಿದೆ. ಕೇಂದ್ರ ಸರ್ಕಾರದ ಮಾಜಿ ವಿತ್ತ ಸಚಿವರು, ಬಿಲ್ಲವರ ಹಿರಿಯ ಮುಖಂಡರಾದ ಬಿ. ಜನಾರ್ಧನ ಪೂಜಾರಿ ಇವರಿಂದ ಉದ್ಘಾಟನೆಗೊಳ್ಳಲಿರುವ ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಗಣ್ಯಾತಿಗಣ್ಯರು ಭಾಗವಹಿಸಲಿದ್ದು ದಿನಪೂರ್ತಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಉಳ್ಳಾಲ ವಲಯದ ಅನೇಕ ಬಿಲ್ಲವ […]
22-02-2024, 2:32 PM
ವಿಟ್ಲ: ಪುಣಚ ನೀರುಮಜಲು ಬ್ರಹ್ಮ ಬೈದೆರ್ಕಳ ಗರಡಿ ನೇಮೋತ್ಸವದ ಸಂದರ್ಭ ದಿನಾಂಕ 22-02-2024 ಗುರುವಾರ ದಂದು ರಾತ್ರಿ 8-00ರಿಂದ 11-00 ಗಂಟೆಯವರೆಗೆ ಯುವವಾಹಿನಿ ವಿಟ್ಲ ಘಟಕದ ಸದಸ್ಯರು ಅನ್ನ ಸಂತರ್ಪಣೆಯ ಸ್ವಯಂ ಸೇವೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ರಾಜೇಶ್ ವಿಟ್ಲ, ಕಾರ್ಯದರ್ಶಿ ಶೋಭಾ, ಕೋಶಾಧಿಕಾರಿ ನಿರ್ಮಲಾ, ಪದಾಧಿಕಾರಿಗಳು ಮತ್ತು ಸುಮಾರು 20 ಸದ್ಯಸರು ಸ್ವಯಂ ಸೇವೆಯಲ್ಲಿ ಪಾಲ್ಗೊಂಡರು.
21-02-2024, 4:57 PM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕ ಹಾಗೂ ಅಂಬಲಪಾಡಿ ರೋಟರಿ ಜಂಟಿ ಆಶ್ರಯದಲ್ಲಿ ಭಾರತ ಸರ್ಕಾರ ದತ್ತೋಪಂಥ ಠೇಂಗಡಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ದಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಪ್ರಾದೇಶಿಕ ನಿರ್ದೇಶನಾಲಯ ಮಂಗಳೂರು ಇವರ ವತಿಯಿಂದ ಮಹಿಳೆಯರಿಗಾಗಿ ಅರ್ಧ ದಿನದ ಸ್ವಉದ್ಯೋಗ ಉಚಿತ ತರಬೇತಿ ಕಾರ್ಯಾಗಾರವು ಯುವವಾಹಿನಿ ಉಡುಪಿ ಘಟಕದ ಸಭಾಂಗಣದಲ್ಲಿ ದಿನಾಂಕ 21-02-24 ರಂದು ನಡೆಯಿತು. ದೀಪ ಪ್ರಜ್ವಲನೆ ಹಾಗೂ ಸಾಮೂಹಿಕ ಪ್ರಾರ್ಥನೆಯೊಂದಿಗೆ ಶಿಬಿರ ಆರಂಭಗೊಂಡಿತು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ […]
20-02-2024, 12:11 PM
ಮಂಗಳೂರು : ಯುವವಾಹಿನಿ ಸಂಸ್ಥೆಯು ಯುವಕರ ಆಕರ್ಷಣೆಯ ಮೂಲಕ ಯುವಜನತೆಯಲ್ಲಿ ಹೊಸ ಸ್ಪೂರ್ತಿ ತುಂಬಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ.ಪೂಜಾರಿ ತಿಳಿಸಿದರು. ಅವರು 2024 ಫೆಬ್ರವರಿ 20 ರಂದು ಮಂಗಳೂರಿನ ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ ಮಂಗಳೂರು ಘಟಕದ ಪದಗ್ರಹಣ ಸಮಾರಂಭದಲ್ಲಿ ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಶ್ರೀನಿವಾಸ್ ಬಲ್ಕ್ ಕ್ಯಾರಿಯರ್ ಇದರ ಮಾಲೀಕರಾದ ಲೋಕೇಶ್ ಆರ್ ಅಮೀನ್ ಇವರು ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿದರು, ಕೇಂದ್ರ […]
18-02-2024, 4:23 PM
ಕೆಂಜಾರು-ಕರಂಬಾರು: ಧಾರ್ಮಿಕತೆ ಎಂಬುವುದು ಜನಜೀವನದ ಭಾಗ. ವಸ್ತುವಿನಲ್ಲಿ ವಿವಿಧ ನೆಲೆಯ ಗುಣಮಟ್ಟ ಇರುವಂತೆ ಧಾರ್ಮಿಕತೆಯಲ್ಲಿಯೂ ಉತ್ತಮ,ಉನ್ನತ ಹಾಗೂ ದುರ್ಬಲ ಎಂಬ ಮೂರು ಗುಣಮಟ್ಟವಿದೆ. ಉತ್ತಮ ಹಾಗೂ ಉನ್ನತ ಧಾರ್ಮಿಕತೆಯ ಪಾಲಕರು ಫಲಾನುಭವಿಗಳಾಗಬೇಕು. ದುರ್ಬಲ ಧಾರ್ಮಿಕತೆಯಿಂದ ಯುವಜನತೆಯನ್ನು ಪಾರುಗೊಳಿಸುವ ಹೊಣೆ ಯುವವಾಹಿನಿಗಿರಲಿ. ಒಂದು ವರ್ಷದ ಅವಧಿಯಲ್ಲಿ ಅಲ್ಪಾವಧಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಚಿಂತನೆ ಸಹಜವಾಗಿ ನೂತನ ಪದಾಧಿಕಾರಿಗಳಿಗಿರುತ್ತದೆ. ಅಲ್ಪಾವಧಿಯೊಂದಿಗೆ ದೂರದೃಷ್ಟಿಯ ಕಾರ್ಯಕ್ರಮಗಳಿಗೂ ಆದ್ಯತೆ ಇರಲಿ. ಸಂಘಟನೆ ಸ್ವರೂಪ ಮತ್ತು ಕಾರ್ಯಕ್ರಮದ ವೈವಿಧ್ಯಕ್ಕೆ ಯುವವಾಹಿನಿ ನಾಡಿಗೆ ಮಾದರಿ ಎಂದು ಮೂಡುಬಿದಿರೆ ಆಳ್ವಾಸ್ […]