22-01-2017, 11:38 AM
ದಿನಾಂಕ 22-01-2017 ರಂದು ಯುವವಾಹಿನಿ(ರಿ) ಉಡುಪಿ ಘಟಕದ ನೇತೃತ್ವದಲ್ಲಿ ಮಹಿಳಾ ಸೌಂದರ್ಯವೃದ್ಧಿ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ ಎಂಬ ಮಹಿಳಾ ಕಾರ್ಯಕ್ರಮ ಶ್ರೀ ಜಗನ್ನಾಥ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಮಲ್ಪೆ ಬಿಲ್ಲವ ಮಹಿಳಾ ಸಂಘ ಅಧ್ಯಕ್ಷೆ ಶ್ರೀಮತಿ ವಿಜಯ ಬಂಗೇರರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಸೌಂದರ್ಯ ತಜ್ಞೆಯಾದ ವೇದಾವತಿ ಸುವರ್ಣರವರು ಈ ಕಾರ್ಯಾಗಾರವನ್ನು ನಡೆಸಿಕೊಟ್ಟು ಉತ್ತಮ ಮಾಹಿತಿಯನ್ನು ನೀಡಿದರು. ಯುವವಾಹಿನಿ (ರಿ) ಮಂಗಳೂರು ಕೇಂದ್ರ ಸಮಿತಿಯ ಮಹಿಳಾ ಸಂಚಾಲಕಿ ಶ್ರೀಮತಿ ಗುಣವತಿ ರಮೇಶ್ ಅತಿಥಿಗಳಾಗಿ ಭಾಗವಹಿಸಿದರು. ಯುವವಾಹಿನಿ(ರಿ) ಉಡುಪಿ […]
Read More
22-01-2017, 9:18 AM
ದಿನಾಂಕ 22-1-2017 ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ(ನಿ) ಮಂಗಳೂರು, ದಿ ಕ್ರಿಶ್ಚಿಯನ್ ಎಜ್ಯುಕೇಶನ್ ಸೊಸೈಟಿ (ರಿ) ಮಂಗಳೂರು, ರೋಟರಿ ಕ್ಲಬ್ ಮಂಗಳೂರು, ಯುವವಾಹಿನಿ (ರಿ) ಮಂಗಳೂರು ಘಟಕ ಮತ್ತು I.A.S. ಮಂಗಳೂರು ಸಂಸ್ಥೆಗಳ ಸಹಯೋಗದೊಂದಿಗೆ UPSC/KAS/IBPS ಉಚಿತ ಪ್ರೇರಣಾ ಶಿಬಿರವು ಜರಗಿತು. ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಎಸ್‌ಪಿ ಭೂಷಣ್ ಗುಲಾಬ್ ರಾವ್ ಬೋರಸೆ IPS ಉದ್ಘಾಟಿಸಿ, ಮಾತನಾಡುತ್ತಾ ಸೇವಾ ಮನೋಭಾವ ಇರುವವರು ಕಠಿಣ ಅಭ್ಯಾಸ, ತರಬೇತು ಪಡೆದು ಜನ ಸೇವೆ ಮಾಡುವ ಮನೋಭಾವವಿದ್ದರೆ ಮಾತ್ರ ಐ.ಎ.ಎಸ್, ಕೆ.ಎ.ಎಸ್‌ನಂತಹ […]
Read More
14-01-2017, 12:41 PM
ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 14-1-2017 ರಂದು ಕೂಳೂರಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಸಭಾಂಗಣದಲ್ಲಿ ಸುವರ್ಣ ಆರೋಗ್ಯಕ್ಕೆ ಸುರಕ್ಷಾ ಯೋಜನೆಗಳು ಎಂಬ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಂಯೋಜಕರಾದ ಜಗನ್ನಾಥ್ ಶಿರ್ಲಾಲ್‌ರವರು ಆರೋಗ್ಯ ಸುರಕ್ಷಾ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಸರಕಾರದಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸುರಕ್ಷಾ ಯೋಜನೆಗಳಿದ್ದು, ಆಯೋಜನೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಜನರು […]
Read More
14-01-2017, 11:21 AM
ಯುವವಾಹಿನಿ (ರಿ) ಉಡುಪಿ ಘಟಕದ ನೇತೃತ್ವದಲ್ಲಿ ತಾ. 14-01-2017 ರಂದು ಉದ್ಯಾವರದ ಈಂದ್ ಬೈಲಿನ ಶ್ರೀಮತಿ ಗಿರಿಜಾ ಇವರಿಗೆ, ಯುವವಾಹಿನಿಯ ಮಹತ್ವಾಕಾಂಕ್ಷೆಯ ತಲೆಗೊಂದು ಸೂರು ಕಾರ್ಯಕ್ರಮದ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ಜರುಗಿತು. ಮಾನ್ಯ ಶಾಸಕರುಗಳಾದ ವಿನಯ ಕುಮಾರ್ ಸೊರಕೆ ಹಾಗೂ ಕೋಟ ಶ್ರೀನಿವಾಸ್ ಪೂಜಾರಿಯವರು ಶಿಲಾನ್ಯಾಸದ ಕಾರ್ಯವನ್ನು ನೆರವೇರಿಸಿದರು. ಯುವವಾಹಿನಿಯ ಸದಸ್ಯರು, ಊರ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಸಾಂಗವಾಗಿ ನೆರೆವೇರಿತು. ಸುಮಾರು 3 ರಿಂದ 5 ಲಕ್ಷದ ಖರ್ಚಿನಲ್ಲಿ ಈ ಮನೆಯ ನಿರ್ಮಾಣ ಮಾಡಲಾಗುವುದು ಎಂದು ಉಡುಪಿ ಘಟಕದ ಅಧ್ಯಕ್ಷ […]
Read More
08-01-2017, 12:27 PM
ದಿನಾಂಕ 8-01-2017 ನೇ ರವಿವಾರದಂದು ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ (ರಿ) ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಹಾಗೂ ಯುವಜನತೆಗೆ ಮತ್ತು ಪೋಷಕರಿಗೆ ಉಪಯೋಗವಾಗುವ ಕಾರ್ಯಕ್ರಮವಾಗಿ ಪ್ರೇರಣ-2017’ ಎನ್ನುವ ಕಾರ್ಯಕ್ರಮವು ಶ್ರೀಗೋಕರ್ಣನಾಥೇಶ್ವರ ಕಾಲೇಜು, ಗಾಂಧಿನಗರ, ಮಂಗಳೂರು ಇಲ್ಲಿ ಜರಗಿತು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್‌ರವರು ಪ್ರೇರಣಾ ಶಿಬಿರವನ್ನು ಉದ್ಘಾಟಿಸಿ, ಶುಭಕೋರಿದರು. ಯುವ ವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಪದ್ಮನಾಭ ಮರೋಳಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗೋಕರ್ಣನಾಥ ಕಾಲೇಜು ಮಂಗಳೂರು ಇದರ […]
Read More