30-10-2019, 4:00 PM
ಯುವವಾಹಿನಿ (ರಿ) ಬೆಳ್ತಂಗಡಿ ಘಟಕ ದಿಂದ ತುಳುನಾಡ ತುಡರ್ ಪರ್ಬ ಸಾಮೂಹಿಕ ದೀಪವಾಳಿ ಆಚರಣೆ. ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಯುವವಾಹಿನಿ ಮಹಿಳಾ ಸಂಚಲನ ಸಮಿತಿ ಬೆಳ್ತಂಗಡಿ, ಗೆಳೆಯರ ಬಳಗ ಗುರುವಾಯನಕೆರೆ,ಶಾರದಾಂಬ ಭಜನಾ ಮಂಡಳಿ ಗುರುವಾಯನಕೆರೆ,ಶ್ರೀ ಗುರು ಮಿತ್ರ ಸಮೂಹ ಬೆಳ್ತಂಗಡಿ, ವಿದ್ಯಾ ನಿಕೇತನ ನ್ರತ್ಯ ಶಾಲೆ ಗುರುವಾಯನಕೆರೆ ಇವರ ಸಹಕಾರದಿಂದ ದೀಪಾವಳಿ ಹಬ್ಬದ ಪ್ರಯುಕ್ತ ತುಳುನಾಡ ತುಡರ್ ಪರ್ಬ ಸಾಮೂಹಿಕ ದೀಪಾವಳಿ ಆಚರಣೆ ಅ 26ರಂದು ಗುರುವಾಯನಕೆರೆ ಶಾರದಾ ಮಂಟಪದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. […]
Read More
30-09-2019, 8:48 AM
ದಿನಾಂಕ 29.09.2019 ರಂದು ಯುವವಾಹಿನಿ(ರಿ) ಮಂಗಳೂರು ಘಟಕ ಮತ್ತು ಕಾರ್ಕಳ ಘಟಕ ಇದರ ಜಂಟಿ ಆಶ್ರಯದಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು, ವ್ಯಾಪಾರಸ್ಥರು, ಸ್ವ ಉದ್ಯೋಗಿಗಳಿಗೆ, ಹೊಸದಾಗಿ ಉದ್ಯಮ ಪ್ರಾರಂಭಿಸುವವರಿಗೆ ಮತ್ತು ನಿರುದ್ಯೋಗಿಗಳಿಗೆ ಯಶಸ್ವಿ ಉದ್ಯಮಕ್ಕೆ ಸಮಗ್ರ ಮಾರ್ಗದರ್ಶನ ಚೇತರಿಕಾ 2019 ಎಂಬ ಕಾರ್ಯಕ್ರಮವು ಯುವವಾಹಿನಿ ಸಭಾಂಗಣ ಉರ್ವಸ್ಟೋರ್ ನಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಯಮಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಇದರ ಪ್ರಧಾನ ಕಾರ್ಯದರ್ಶಿ ರವಿಪೂಜಾರಿ ಚಿಲಿಂಬಿ ಉದ್ಘಾಟಿಸಿದರು. ಯುವವಾಹಿನಿಯು ಅವಕಾಶ ವಂಚಿತ ವರ್ಗಗಳಿಗೆ […]
Read More
16-09-2019, 4:30 PM
ಯುವವಾಹಿನಿ (ರಿ.)ಕಂಕನಾಡಿ ಘಟಕದ ವತಿಯಿಂದ ದಿನಾಂಕ 15.09.2019ರಂದು ಆದಿತ್ಯವಾರ ಸಂಜೆ 5 ಕ್ಕೆ ಶ್ರೀ ಬ್ರಹ್ಮಮುಗೇರ ಶ್ರೀ ಮಹಾಂಕಾಳಿ ದೈವಸ್ಥಾನದ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತಿಯ ಪ್ರಯುಕ್ತ ಗುರುಸ್ಮರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಶ್ರೀ ಬ್ರಹ್ಮಮುಗೇರ ಶ್ರೀ ಮಹಾಂಕಾಳಿ ದೈವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರು ಶ್ರೀನಿವಾಸ ಬಂಗೇರ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ. ಪಿ ಎಲ್ […]
Read More
05-09-2019, 5:29 PM
ಯುವವಾಹಿನಿ (ರಿ ) ಮೂಲ್ಕಿ ಘಟಕ ಹಾಗೂ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆ ಮೂಲ್ಕಿ ಇವರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ-5.9. 2019 ರಂದು ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಜರಗಿತು. ಯುವ ವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಸತೀಶ್ ಕಿಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಯುವ ವಾಹಿನಿ (ರಿ )ಕೇಂದ್ರ ಸಮಿತಿ ಮಂಗಳೂರು ಉಪಾಧ್ಯಕ್ಷರಾದ ಡಾ / ರಾಜಾರಾಮ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಹೂ ಹಾಕಿ ನಮಿಸಲಾಯ್ತು. […]
Read More
05-09-2019, 5:26 PM
ನಗರದ ಉಜ್ಜೋಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವವಾಹಿನಿ ಕಂಕನಾಡಿ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರನ್ನು ಗುರುತಿಸಿ ಗೌರವಿಸುವ *ಗುರುನಮನ* ಕಾರ್ಯಕ್ರಮ ಇತ್ತೀಚೆಗೆ ಉಜ್ಜೋಡಿ ಶ್ರೀ ಮಹಾಂಕಾಳಿ ದೈವಸ್ಥಾನದ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಶಾರದ ಕಾಲೇಜಿನ ಪ್ರಾಂಶುಪಾಲರಾದ ದಯಾನಂದ ಕಟೀಲ್ ಭಾಗವಹಿಸಿ ಶಿಕ್ಷಕರನ್ನು ಗುರುತಿಸಿ ಗೌರವಿಸು ಅತ್ಯಂತ ಮಹತ್ತರ ಸೇವೆ ಎಂದು ಯುವವಾಹಿನಿ ಕಂಕನಾಡಿ ಘಟಕದ ವಿವಿಧ ಚಟುವಟಿಕೆಗಳ ಬಗ್ಗೆ ಶ್ಲಾಘಿಸುತ್ತಾ ಶಿಕ್ಷಕರ ದಿನಾಚರಣೆ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕರಾದ ಸೈಂಟ್ ಅಲೋಶಿಯಸ್ ಕಾಲೇಜಿನ ರಾಕೇಶ್ […]
Read More
28-07-2019, 1:28 PM
ಕೊಲ್ಯ : ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ಘಟಕದ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕರಾದ ಮೋಹನ್ ಮಾಡೂರ್ ರವರು ಕಳೆದ 7 ತಿಂಗಳಿನ ಹಿಂದೆ ಬೈಕ್ ಅಪಘಾತಕ್ಕೊಳಗಾದ ಪರಿಣಾಮವಾಗಿ ತನ್ನ ಒಂದು ಕಾಲು ಶಸ್ತ್ರಚಿಕಿತ್ಸೆ ಗೊಳಗಾಗಿ ತನ್ನ ಕುಟುಂಬ ನಿರ್ವಹಣೆಯನ್ನು ಮಾಡಲು ತಾನು ಮಾಡುತ್ತಿರುವ ವೃತ್ತಿಯನ್ನು ಮುಂದುವರಿಸಲು ಸಾಧ್ಯವಾಗದೆ ಬೇರಾವ ಸಂಪಾದನೆ ಕೂಡಾ ಇವರಿಗಿಲ್ಲ.ಇವರ ಪತ್ನಿ ವೀಣಾ ರವರು ಕೂಡಾ ಘಟಕದ ಸದಸ್ಯೆಯಾಗಿದ್ದು ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು […]
Read More
13-07-2019, 9:10 AM
ವೇಣೂರು : ಸೂಕ್ತವಾದ ಒಂದು ಉದ್ಯೋಗವನ್ನು ಪಡೆಯಬೇಕಾದರೆ ನಾವು ಯಾವ ತೆರನಾದ ಶಿಕ್ಷಣವನ್ನು ಪಡೆಯಬೇಕು ಎಂಬ ಮಾಹಿತಿಯನ್ನು ಪಡೆದುಕೊಂಡು ಅದರಂತೆಯೇ ನಾವು ಮುನ್ನಡೆದರೆ ನಮ್ಮ ಬದುಕು ಹಸನನಾಗುವುದರಲ್ಲಿ ಯಾವುದೇ ಸಂಶಯವಿಲ್ಲಯೆಂದು ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ರಾಸಾಯನಶಾಸ್ರ ಉಪನ್ಯಾಸಕರಾದ ಸಂತೋಷ್ ಎ ಹೇಳಿದರು. ಅವರು ಯುವವಾಹಿನಿ (ರಿ) ವೇಣೂರು ಘಟಕದ ವತಿಯಿಂದ ವೇಣೂರು ಲಯನ್ಸ್ ಭವನದಲ್ಲಿ ನಡೆದ ವೃತ್ತಿಮಾರ್ಗದರ್ಶನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಯುವವಾಹಿನಿ (ರಿ) ವೇಣೂರು ಘಟಕದ ಅಧ್ಯಕ್ಷರಾದ ನವೀನ್ ಪೂಜಾರಿ […]
Read More
13-07-2019, 8:56 AM
ಮೂಡುಬಿದಿರೆ : ಯುವವಾಹಿನಿ (ರಿ) ಮೂಡುಬಿದಿರೆ ಘಟಕದ ವತಿಯಿಂದ ಆರಂಭಿಸಲ್ಪಟ್ಟ “ಯುವಸ್ಪಂದನ” ಸೇವಾ ಯೋಜನೆಗೆ ಆರ್ಥಿಕ ನೆರವಿಗಾಗಿ ಹಲವಾರು ಸಮಾಜದ ವಿಧ್ಯಾರ್ಥಿಗಳು ಆರ್ಥಿಕ ನೆರವಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಇದರಲ್ಲಿ ಚೆನ್ನಪ್ಪ ಪೂಜಾರಿ ಇವರ ಸುಪುತ್ರಿ ಕು.ಶ್ರದ್ಧಾ ಅಯ್ಯಪ್ಪ ಮಂದಿರ ಹತ್ತಿರ ಪ್ರಾಂತ್ಯ ವಿಲೇಜ್.ಕೊಡಂಗಲ್ಲು ಇವರು ಈಗಾಗಲೇ ಡಿಗ್ರಿ ಮುಗಿಸಿ ಪ್ರಥಮ ವರ್ಷದ ಎಂ.ಕಾಂ ಅನ್ನು ಆಳ್ವಾಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದು ಈಗ ದ್ವಿತೀಯ ವರ್ಷದ ಎಂ.ಕಾಂ ನ್ನು ಮುಂದುವರಿಸಲು ಅಸಾಧ್ಯವಾಗಿದೆ ಕಾರಣ ಆರ್ಥಿಕ ಸಮಸ್ಯೆಯಾಗಿದ್ದು.ತಾಯಿ ಅಕ್ಷರದಾಸೋಹದ ಕೆಲಸಕ್ಕೆ ಹೋಗುತ್ತಿದ್ದು..ಆದ್ದರಿಂದ […]
Read More
13-07-2019, 8:53 AM
ಮೂಡುಬಿದಿರೆ : ಯುವವಾಹಿನಿ (ರಿ) ಮೂಡುಬಿದಿರೆ ಘಟಕದ ವತಿಯಿಂದ ಆರಂಭಿಸಲ್ಪಟ್ಟ “ಯುವಸ್ಪಂದನ” ಸೇವಾ ಯೋಜನೆಗೆ ಆರ್ಥಿಕ ನೆರವಿಗಾಗಿ ಹಲವಾರು ಸಮಾಜದ ಬಡ ವಿಧ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದರು ಆ ಮನವಿಯನ್ನು ಪರಿಶೀಲಿಸಿ. ಯುವವಾಹಿನಿ ರಿ .ಮೂಡುಬಿದಿರೆ ಘಟಕದ ಜುಲೈ ತಿಂಗಳ ಸದಸ್ಯರ ಸಭೆಯು ದಿನಾಂಕ13-7-2019 ಶನಿವಾರ “ಬ್ರಹ್ಮಶ್ರೀ ಗುರುನಾರಯಣ ಸೇವಾ ಸಂಘ ಮೂಡುಬಿದಿರೆಲ್ಲಿ ನಡೆದಿದ್ದು ಈ ಸಭೆಯಲ್ಲಿ ಬೆಳುವಾಯಿ ಗೊಲಾರ ಮನೆ ಕೆಸರುಗದ್ದೆ ನಿವಾಸಿ ಲಕ್ಷ್ಮಣ್ ಪೂಜಾರಿ ಇವರ ಸುಪುತ್ರಿ ರಕ್ಷಿತಾ ಇವರು ಪ್ರಥಮ ವರ್ಷದ ಬಿ.ಎ ಪದವಿಯನ್ನು […]
Read More
13-07-2019, 8:26 AM
ಕೂಳೂರು : ಯುವವಾಹಿನಿ ಕೂಳೂರು ಘಟಕದ ವತಿಯಿಂದ ದಿನಾಂಕ 13.07.19 ರಂದು ಐ. ಎ. ಎಸ್, ಕೆ. ಎ. ಎಸ್ ಪ್ರೇರಣಾ ಶಿಬಿರ ಕಾರ್ಯಕ್ರಮವು ಸರ್ಕಾರಿ ಪದವಿ ಪೂರ್ವ ಕಾಲೇಜು, ಕಾವೂರು ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ನಡೆಸಿಕೊಡಲು ಸರ್ವಜ್ಞ ಐ. ಎ. ಎಸ್ ಅಕಾಡೆಮಿಯ ತರಬೇತುದಾರರಾದ ಸುರೇಶ್.ಎಮ್.ಎಸ್ ರವರು ಆಗಮಿಸಿದ್ದರು. ಕಾರ್ಯಕ್ರಮವು ದೀಪ ಬೆಳಗಿಸುವುದರ ಮೂಲಕ ಪ್ರಾರಂಭಗೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ತಾರಾ. ಯು. ರಾವ್ ರವರು ಮಾತನಾಡಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಆಶಿಸಿದರು. […]
Read More