Yuvavahini

ಕೇಂದ್ರ ಸಮಿತಿ

ಶಿಕ್ಷಕರ ದಿನಾಚರಣೆ-ಯುವವಾಹಿನಿ( ರಿ.) ಬಜಪೆ ಘಟಕ

ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಾಗಿ ನಿಸ್ವಾರ್ಥವಾಗಿ ಸೇವೆಗೈಯುತ್ತಿರುವ ಘಟಕದ ಸಕ್ರಿಯ ಐವರು ಸದಸ್ಯರಾದ ಶ್ರೀಮತಿ ಸಂಧ್ಯಾ ಕುಳಾಯಿ, ಶ್ರೀ ಯೋಗೀಶ್ ಪೂಜಾರಿ, ಶ್ರೀಮತಿ ರೂಪಾವತಿ, ಡಾ. ಶಿಲ್ಪಾ ದಿನೇಶ್ ಮತ್ತು ಶ್ರೀಮತಿ ಪೂಜಾ ಕಿರಣ್ ರವರನ್ನು ಗೌರವಿಸಲಾಯಿತು.

Read More

ಬ್ರಹ್ಮಶ್ರೀ ನಾರಾಯಣಗುರುಗಳ 171 ನೆ ಜನ್ಮ ದಿನಾಚರಣೆ -ಯುವವಾಹಿನಿ( ರಿ.) ಬಂಟ್ವಾಳ ಘಟಕ

ಬ್ರಹ್ಮಶ್ರೀ ನಾರಾಯಣಗುರುಗಳ 171 ನೆ ಜನ್ಮ ದಿನಾಚರಣೆ ಪ್ರಯುಕ್ತ ಗುರು ಪೂಜೆ 07/09/2025 ರಂದು ನಡೆಯಿತು . ‘ವಿದ್ಯೆಯಿಂದ ಸ್ವತಂತ್ರರಾಗಿ’ ಎಂಬ ಮಾತಿನ ವ್ಯಾಪ್ತಿಯನ್ನು ಹಿಗ್ಗಿಸಬೇಕಾಗಿದೆ. ‘ವಿದ್ಯೆಯಿಂದ ಸ್ವತಂತ್ರರಾಗಿ’ ಎಂದರೆ ಇಂದು ‘ಶಿಕ್ಷಣ’ ಮತ್ತು ‘ಉದ್ಯೋಗ’ ಎಂಬ ಸೀಮಿತ ಅರ್ಥವಲ್ಲ. ಮಾರುಕಟ್ಟೆ ಜಗತ್ತು ಎಲ್ಲವನ್ನು ನಿಯಂತ್ರಿಸುತ್ತಿವೆ. ಮನಸ್ಸು ಸಾಮಾಜಿಕ ಜಾಲತಾಣಗಳ ಸುಳಿಯಲ್ಲಿ ಒದ್ದಾಡುತ್ತಿವೆ. ಸ್ವತಂತ್ರ ಆಯೋಚನೆಗಳು ಮಾತ್ರ ನಮ್ಮನ್ನು ಕಾಪಾಡಬಹುದು. ಗುರುಗಳ ಸಂದೇಶ ಬೆಳಕಿನಲ್ಲಿ ವರ್ತಮಾನದ ಬಹು ಬಗೆಯ ಕತ್ತಲೆಯಿಂದ ಪಾರಾಗಬಹುದು ಎಂದು ಘಟಕದ ಮಾಜಿ ಅಧ್ಯಕ್ಷ […]

Read More

ಶ್ರೀ ನಾರಾಯಣಗುರು ಧರ್ಮಶಿಕ್ಷಣ ಕೇಂದ್ರ ಕೊಲ್ಯದಲ್ಲಿ ಶಿಕ್ಷಕರ ದಿನಾಚರಣೆ-ಯುವವಾಹಿನಿ (ರಿ) ಕೊಲ್ಯ ಘಟಕ

ಬ್ರಹ್ಮ ಶ್ರೀ ನಾರಾಯಣಗುರು ಧರ್ಮಶಿಕ್ಷಣ ಕೇಂದ್ರ ಕೊಲ್ಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿಶೇಷ ತರಗತಿಯಲ್ಲಿ “ಗುರುವಂದನಂ” ಕಾರ್ಯಕ್ರಮ ದಿನಾಂಕ 09-09-2025 ನೇ ಮಂಗಳವಾರ ಗುರುಗಳಾದ ಡಾ. ಅರುಣ್ ಉಳ್ಳಾಲ್ ರವರು ಓಂಕಾರದೊಂದಿಗೆ ತರಗತಿ ಪ್ರಾರಂಭಿಸಿದರು, ಗಣಪತಿ ಶ್ಲೋಕ, ಗುರುಶ್ಲೋಕ,ನಿತ್ಯಾನುಷ್ಠಾನ ಶ್ಲೋಕ ಜೊತೆಯಾಗಿ ಪಠಿಸಲಾಯಿತು.ಧರ್ಮ ಶಿಕ್ಷಣ ಗುರುಗಳಾದ ಡಾ.ಅರುಣ್ ಉಳ್ಳಾಲ್ ಹಾಗೂ ತರಗತಿಯ ಶಿಕ್ಷಕರು ಮತ್ತು ಕೊಲ್ಯ ಘಟಕದ ಶಿಕ್ಷಕರನ್ನು ಗೌರವಿಸಲಾಯಿತು.ಶಿಕ್ಷಕರ ದಿನಾಚರಣೆ ವಿಶೇಷವಾಗಿ ಧರ್ಮ ಶಿಕ್ಷಣ ತರಗತಿಯ ವಿದ್ಯಾರ್ಥಿಗಳಾದ ಕು| ತನಿಷ್ಕ ಗುರುಕೀರ್ತನೆ ಹಾಡಿದರು,ಕು| ಹೃದ್ವಿ ರಾಜೇಶ್, […]

Read More

ನಾರಾಯಣ ಗುರು ಮಂದಿರದಲ್ಲಿ ಭಜನಾ ಸೇವೆ -ಯುವವಾಹಿನಿ (ರಿ.) ಪಡುಬಿದ್ರಿ ಘಟಕ

ನಾರಾಯಣ ಗುರು ಮಂದಿರದಲ್ಲಿ ಭಜನಾ ಸೇವೆ ನೀಡುವುದು ವಾಡಿಕೆ, ಅದೇ ರೀತಿಯಾಗಿ ದಿನಾಂಕ 04/09/25 ಗುರುವಾರ ರಂದು ಸಂಜೆ 6:0 ಗಂಟೆಗೆ ಸರಿಯಾಗಿ ಘಟಕದ ವತಿಯಿಂದ ಭಜನಾ ಸೇವೆ ಜರುಗಿತು. ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗುರು ದೇವರ ಕೃಪೆಗೆ ಪಾತ್ರರಾದರು. ಭಜನಾ ಸೇವೆಗೆ ಆಗಮಿಸಿದ ಎಲ್ಲರಿಗೂ ಪ್ರಸಾದ ಹಾಗೂ ಫಲಾಹಾರ ನೀಡಲಾಯಿತು.

Read More

ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನೋತ್ಸವ-ಯುವವಾಹಿನಿ(ರಿ) ಹಳೆಯಂಗಡಿ ಘಟಕ

ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನೋತ್ಸವವನ್ನು ದಿನಾಂಕ 07/09/2025 ರಂದು ಹಳೆಯಂಗಡಿಯ ಬಿಲ್ಲವ ಮಂದಿರದಲ್ಲಿ ಆಚರಿಸಲಾಯಿತು. ಘಟಕದ ಸದಸ್ಯರೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.

Read More

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಸ್ಕೂಲ್ ಐಡಿ ವಿತರಣೆ-ಯುವವಾಹಿನಿ (ರಿ) ಅಡ್ವೆ ಘಟಕ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ವೆ ಇಲ್ಲಿಯ ಶಾಲಾ ಮಕ್ಕಳಿಗೆ ಪ್ರತಿವರ್ಷ ನೀಡುವಂತೆ ಈ ವರ್ಷವೂ ಕೂಡ ,ಘಟಕದ ವತಿಯಿಂದ ಮಕ್ಕಳಿಗೆಲ್ಲ ಸಿಹಿ ನೀಡಿ ಸ್ಕೂಲ್ ಐಡಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ,ಕಾರ್ಯದರ್ಶಿ ,ಉಪಾಧ್ಯಕ್ಷರು ,ಸ್ಥಾಪಕ ಅಧ್ಯಕ್ಷರು, ಮಾಜಿ ಅಧ್ಯಕ್ಷರು ,ಸಲಹೆಗಾರರು ಹಾಗೂ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು.

Read More

ಕಟೀಲು ಶ್ರೀ ದೇವಿ ಸನ್ನಿದಾನಕ್ಕೆ ಪಾದಯಾತ್ರೆ -ಯುವವಾಹಿನಿ( ರಿ.) ಗ್ರಾಮಚಾವಡಿ ಕೊಣಾಜೆ

ಬಾಕ್ರಬೈಲ್ ಶ್ರೀ ದುರ್ಗಾ ಪರಮೇಶ್ವರಿ ಭಕ್ತ ವೃಂದದ 32 ಸದಸ್ಯರು ಕಟೀಲು ಶ್ರೀ ದೇವಿ ಸನ್ನಿದಾನಕ್ಕೆ ಪಾದಯಾತ್ರೆ ತೆರಳಿದ್ದು, ಗ್ರಾಮಚಾವಡಿ ಬ್ರಹ್ಮ ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಅವರಿಗೆ ಘಟಕದ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಯಿತು..ಯುವ ವಾಹಿನಿ ಕೊಣಾಜೆ ಘಟಕದ ಅಧ್ಯಕ್ಷರು ಶ್ರೀ ಬಾಬು ಬಂಗೇರ ಎಲ್ಲರನ್ನು ಸ್ವಾಗತಿಸಿದರು, ಶ್ರೀ ದುರ್ಗಾ ಪರಮೇಶ್ವರಿ ಭಕ್ತ ವೃಂದ ಪಾದಯಾತ್ರೆ ಸಂಚಾಲಕರಾದ ಶ್ರೀ ಅರವಿಂದ್ ಬಾಕ್ರ ಬೈಲ್ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು, ಈ ಸಂದರ್ಭದಲ್ಲಿ ಗ್ರಾಮ ಚಾವಡಿ ಕೊಣಾಜೆ […]

Read More

ಬಿರುವೆರೆ ಗೊಬ್ಬು ಕೆಸರ್ ದ ಕಂಡಡ್-ಯುವವಾಹಿನಿ (ರಿ.) ಬೆಳ್ತಂಗಡಿ ಘಟಕ

ಯುವವಾಹಿನಿ ಸಂಚಲನಾ ಸಮಿತಿ ಮುಂಡಾಜೆ ಇದರ ಆತಿಥ್ಯದಲ್ಲಿ ” ಬಿರುವೆರೆ ಗೊಬ್ಬು ಕೆಸರ್ ದ ಕಂಡಡ್ ” ಕಾರ್ಯಕ್ರಮ ದಿನಾಂಕ 14.09.2025 ಆದಿತ್ಯವಾರದಂದು ಮುಂಡಾಜೆಯ ಪಿಲತಡ್ಕದ ಪೂವಪ್ಪ ಪೂಜಾರಿಯವರ ಗದ್ದೆಯಲ್ಲಿ ನಡೆಯಿತು. ಕುದ್ರೋಳಿ ದೇವಸ್ಥಾನದ ಅರ್ಚಕರಾದ ರೂಪೇಶ್ ಶಾಂತಿ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು, ಪ್ರಚಾರ ನಿರ್ದೇಶಕರಾದ ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ […]

Read More

ಶ್ರೀ ನಾರಾಯಣ ಗುರು ಜಯಂತಿ -ಯುವವಾಹಿನಿ( ರಿ.)ಮಂಗಳೂರು ಮಹಿಳಾ ಘಟಕ

13-09-2025 ರಂದು ಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ಯುವವಾಹಿನಿ ಸಭಾಂಗಣದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ಅದ್ಯಕ್ಷರಾದ ನೈನಾ ವಿಶ್ವನಾಥ್ ಎಲ್ಲರನ್ನು ಸ್ವಾಗತಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮೊದಲಿಗೆ ಮಂಗಳೂರು ಮಹಿಳಾ ಘಟಕದ ಸದಸ್ಯರು ಭಜನೆಯನ್ನು ಪ್ರಾರಂಭ ಮಾಡಿದರು, ಆಮೇಲೆ ಮಂಗಳೂರು ಘಟಕದ ಸದಸ್ಯರು,ಕ್ರಷ್ಣ ಭಜನೆ ತಂಡ, ಹಾಗೂ ಬಿಲ್ಲವ ಮಹಿಳಾ ಸಂಘದ ಸದಸ್ಯರು ಮದ್ಯಾಹ್ನದವರೆಗೆ ಭಜನೆ ಮಾಡಿದರು,ನಂತರ ಮಹಾ ಪೂಜೆ ನಡೆಯಿತು.ಪ್ರಸಾಧ ವಿತರಣೆ ಆಗಿ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.ಗುರುಪೂಜೆ […]

Read More

ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ -ಯುವವಾಹಿನಿ( ರಿ.) ಶಕ್ತಿನಗರ ಘಟಕ

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್(ರಿ) ಕುಂಟಲ್ಪಾಡಿ ಸಹಭಾಗಿತ್ವದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ 11/09/2025 ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ಮುಂಜಾನೆ ಗಣಹೋಮ ನಡೆಸಿ ಮಂದಿರವನ್ನು ಶುದ್ಧೀಕರಿಸಿ ಗುರುಗಳ ಮೂರ್ತಿಗೆ ಅಭಿಷೇಕವನ್ನು ಮಾಡಲಾಯಿತು. ನಂತರ ಹೂಗಳಿಂದ ಅಲಂಕರಿಸಿ ಘಟಕದ ಅಧ್ಯಕ್ಷರಾದ ಶ್ರೀಮತಿ ಸುಜಾತ ನವೀನ್ ಕಕ್ಕೆಬೆಟ್ಟು ರವರ ಮನೆಯಲ್ಲಿ ಗುರುಗಳ ಮೂರ್ತಿಯನ್ನು ಇರಿಸಿ, ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಮೇರಿಹಿಲ್ ಗುರುನಗರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಸತ್ಸಂಗ ಹಾಗೂ ಧಾರ್ಮಿಕ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!