ಸಮಾಜ ಸೇವೆ

ವಿಶ್ವ ಪರಿಸರ ದಿನಾಚರಣೆ

ಕೂಳೂರು:- ಯುವವಾಹಿನಿ (ರಿ) ಕೂಳೂರು ಘಟಕ ಹಾಗೂ ಲಯನ್ಸ್ ಕ್ಲಬ್ ಫಲ್ಗುಣಿ ಸಹಯೋಗದೊಂದಿಗೆ ವಿಶ್ವ ಪರಿಸರ ದಿನದ ಅಂಗವಾಗಿ ದಿನಾಂಕ 05 ಜೂನ್ 2022 ರಂದು ಕ್ಲೀನ್ ಕೂಳೂರು ಡ್ರೈವ್ ಎಂಬ ಸ್ವಚ್ಚತಾ ಕಾರ್ಯಕ್ರಮಕ್ಕೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಯವರು ಚಾಲನೆ ನೀಡಿದರು. ಸೆಂಟರ್ ಫಾರ್ ಇಂಟಿಗ್ರೆಟೆಡ್ ಲರ್ನಿಂಗ್ ಇದರ ಸಂಚಾಲಕರಾದ ನಂದಗೋಪಾಲ್ ರವರು ಪರಿಸರದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಬೆಳಗ್ಗೆ 9.30 ರಿಂದ 10.30 ರವರೆಗೆ ನಡೆದ ಕಾರ್ಯಕ್ರಮದಲ್ಲಿ ಕೂಳೂರು […]

Read More

ಸ್ವಚ್ಚತಾ ಅಭಿಯಾನ ಮತ್ತು ಶ್ರಮದಾನ

ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ 23ನೇ ಸ್ವಚ್ಛತಾ ಅಭಿಯಾನವು ಪಂಜಿಮೊಗರು ಮಂಜೊಟ್ಟಿ ಅಂಗನವಾಡಿ ರಸ್ತೆಯ ಹತ್ತಿರ ದಿನಾಂಕ 13-03-2022 ಭಾನುವಾರ ನಡೆಯಿತು. ಘಟಕದ ಸುಮಾರು 18 ಸದಸ್ಯರನ್ನು ಒಳಗೊಂಡ ತಂಡವು ಬೆಳಿಗ್ಗೆ 7.30 ರಿಂದ 10.30 ರ ವರೆಗೆ ಪಂಜಿಮೊಗರು ಅಂಗನವಾಡಿ ಪರಿಸರದಲ್ಲಿ ಸ್ವಚ್ಚತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಂತರ ಬಡಕುಟುಂಬದ ಮಂಜುನಾಥ್ ಆಚಾರಿಯವರ ಮನೆ ದುರಸ್ಥಿಯ ಸಲುವಾಗಿ ಅವರ ಮನೆಯಲ್ಲಿ ಶ್ರಮದಾನ ಮಾಡಲಾಯಿತು, ಮತ್ತು ಘಟಕದ ವತಿಯಿಂದ ರೂ 5000/- ಮೊತ್ತವನ್ನು ಆ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. […]

Read More

ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಅರೋಗ್ಯ ಕಾರ್ಡ್ ಮಾಹಿತಿ ಕಾರ್ಯಗಾರ

ಕೆಎಂಸಿ ಸಂಸ್ಥೆಯ ಅತ್ತಾವರ ಇವರ ಸಹಕಾರದೊಂದಿಗೆ ಯುವವಾಹಿನಿ(ರಿ.) ಶಕ್ತಿನಗರ ಘಟಕ, ಲಯನ್ಸ್ ಕ್ಲಬ್‌ ಮಂಗಳೂರು ಇವರ ಸಹಭಾಗಿತ್ವದೊಂದಿಗೆ ಬೃಹತ್ ರಕ್ತದಾನ ಶಿಬಿರ, ಆರೋಗ್ಯ ಶಿಬಿರವು ದಿನಾಂಕ 06-03- 2022ರಂದು ಕುವೆಂಪು ಮಾದರಿ ಸರಕಾರಿ ಶಾಲೆ ನಾಳ್ಯಪದವು ಶಕ್ತಿನಗರದಲ್ಲಿ ಜರುಗಿತು. ಯುವವಾಹಿನಿ( ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಶಕ್ತಿನಗರ ಯುವವಾಹಿನಿ ಘಟಕದ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಘಟಕದ ಅಧ್ಯಕ್ಷರಾದ ಜಯರಾಮ ಪೂಜಾರಿ ಬಾಳಿಲ […]

Read More

ಬಜಗೋಳಿ ಬ್ರಹತ್ ರಕ್ತದಾನ ಶಿಬಿರ, ಅಭಿನಂದನಾ ಕಾರ್ಯಕ್ರಮ

ಕಾರ್ಕಳ :ಬಿಲ್ಲವ ಸಮಾಜ ಸೇವಾ ಸಂಘ(ರಿ) ಬಜಗೋಳಿ,ಯುವವಾಹಿನಿ(ರಿ) ಕಾರ್ಕಳ ಘಟಕ,ಹಾಗೂ ಯೂತ್ ಬಿಲ್ಲವ(ರಿ) ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ, ಜಿಲ್ಲಾ ರಕ್ತ ನಿಧಿ ಕೇಂದ್ರ ಉಡುಪಿ ಇದರ ಸಹಯೋಗದೊಂದಿಗೆ ಸಾರ್ವಜನಿಕ ಬ್ರಹತ್ ರಕ್ತದಾನ ಶಿಬಿರವು ಶ್ರೀ ನಾರಾಯಣ ಗುರು ಸಭಾಭವನ ಬಜಗೋಳಿ ಇಲ್ಲಿ ಫೆ.13ರಂದು ನಡೆಯಿತು. ಬಜಗೋಳಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ನಲ್ಲೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಜನಔಷಧಿ ಕೇಂದ್ರ ಕಾರ್ಕಳ ಇದರ ಮಾಲಕರಾದ ಸುಶಾಂತ್ ಬಜಗೋಳಿ ಇವರು […]

Read More

ಬೃಹತ್ ರಕ್ತದಾನ ಶಿಬಿರ

  ಮಂಗಳೂರು : ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ರಜತ ಮಹೋತ್ಸವದ ಅಂಗವಾಗಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಂಗಳೂರು ಹಾಗೂ ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿ ಇವರ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರವು ದಿನಾಂಕ 06-02- 2022 ರಂದು ಮಂಗಳೂರಿನ ತುಳು ಭವನದಲ್ಲಿ ಜರುಗಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ .ಜಿ. ಕತ್ತಲಸಾರ್ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿ ಮಹಾನಗರ ಪಾಲಿಕೆಯ […]

Read More

ಸರಕಾರಿ ವೆನ್‌ಲಾಕ್ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಹಸ್ತಾಂತರ

ಮಂಗಳೂರು: ಯುವವಾಹಿನಿ(ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ವತಿಯಿಂದ “ಆರೋಗ್ಯ ಮಂತ್ರ ಸೇವಾ ಯೋಜನೆ” ಅಂಗವಾಗಿ ನಗರದ ಜಿಲ್ಲಾ ಸರಕಾರಿ ವೆನ್‌ಲಾಕ್ ಆಸ್ಪತ್ರೆಗೆ ದಿನಾಂಕ 11.01.2022 ರಂದು  ₹ 6.50 ಲಕ್ಷ ವೆಚ್ಚದ ಅತ್ಯಾಧುನಿಕ ಡಯಾಲಿಸಿಸ್ ಯಂತ್ರ ಹಸ್ತಾಂತರ ಮಾಡಲಾಯಿತು. ಗರಿಷ್ಟ ಡಯಾಲಿಸಿಸ್ ಯಂತ್ರ ಹೊಂದಿರುವ ರಾಜ್ಯದ ಏಕೈಕ ಆಸ್ಪತ್ರೆ : ಶಾಸಕ ವೇದವ್ಯಾಸ ಕಾಮತ್ ಅಸತ್ರೆಯ ಸೆಮಿನಾರ್ ಹಾಲ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಭಾಗವಹಿಸಿದ್ದ ಶಾಸಕ ಡಿ. ವೇದವ್ಯಾಸ್ ಕಾಮತ್ ಮಾತನಾಡಿ, ವೆನ್ಲಾಕ್ ಆಸ್ಪತ್ರೆಗೆ […]

Read More

ಅರಸು ಕಂಬಳದ ಬಾಕಿಮಾರು ಗದ್ದೆಯಲ್ಲಿ ಸ್ವಚ್ಛತೆಯ ಕಾರ್ಯ

*ಯುವವಾಹಿನ(ರಿ.)  ಹಳೆಯಂಗಡಿಘಟಕ ಮತ್ತು ಬಿಲ್ಲವಸಮಾಜ ಸೇವಾ ಸಂಘ(ರಿ)ಹಳೆಯಂಗಡಿ,* *ಲಯನ್ಸ್ ಕ್ಲಬ್, ಪೂಜಾ ಫ್ರೆಂಡ್ಸ್ ಹಳೆಯಂಗಡಿ* ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 8-12-2019ರಂದು ಮುಲ್ಕಿ ಸೀಮೆ ಅರಸು ಕಂಬಳದ ಪ್ರಯುಕ್ತ ದಿನಾಂಕ 28-12-2019ರಂದು ನಡೆಯಲಿರುವ ಅರಸು ಕಂಬಳದ ಬಾಕಿಮಾರು ಗದ್ದೆಯಲ್ಲಿ ಬೆಳಿಗ್ಗೆ 9.00ಗಂಟೆಯಿಂದ ಮಧ್ಯಹ್ನ12.00ಗಂಟೆ ತನಕ ಸ್ವಚ್ಛತೆಯ ಕಾರ್ಯವನ್ನು ಮುಲ್ಕಿ ಸೀಮೆ ಅರಸರಾದ ಶ್ರೀ ದುಗ್ಗಣ್ಣ ಸಾವಂತರ ನೇತ್ರತ್ವದಲ್ಲಿ ಕೈಗೊಳ್ಳಲಾಯಿತು.  

Read More

ನಮ್ಮ ನಡೆ ಸ್ವಚ್ಛತೆಯ ಕಡೆ

ಯುವವಾಹಿನಿ (ರಿ.) ಯಡ್ತಾಡಿ ಘಟಕದ ವತಿಯಿಂದ ಪ್ರತಿ ವರ್ಷವೂ  ಊರಿನ ಪರಿಸರದಲ್ಲಿ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸಲು  ನಮ್ಮ ನಡೆ ಸ್ವಚ್ಛತೆಯ ಕಡೆ ಎಂಬ ವಿನೂತನ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು ಊರಿನ ಸ್ವಚ್ಛತೆಗೆ ಆದ್ಯತೆ ನೀಡುತ್ತ ಬಂದಿರುತ್ತಾರೆ. ಜೊತೆಗೆ  ಪ್ಲಾಸ್ಟಿಕ್ ಮುಕ್ತ ಪರಿಸರ ವನ್ನಾಗಿಸಲು ಕೂಡ ಶ್ರಮಿಸುತ್ತಿದ್ದಾರೆ.  24.11.2019 ರಂದು ಯಡ್ತಾಡಿ ಚಿತ್ತೇರಿ ದೇವಸ್ಥಾನದ ದೀಪೋತ್ಸವದ  ಪೂರ್ವ ತಯಾರಿಯಾಗಿ  ಚಿತ್ತೇರಿ ದೇವಸ್ಥಾನದ ಇಕ್ಕೆಲಗಳಲ್ಲಿ  ಬೆಳೆದಿರುವ ಪೊದೆ, ಹಾಗು ಕಸ ಕಡ್ಡಿ  ಹಾಗು ಪ್ಲಾಸ್ಟಿಕ್ ಗಳನ್ನು ಶ್ರಮದಾನದ  ಮೂಲಕ […]

Read More

ಮಹಿಳೆಯರಿಗಾಗಿ ಮುನ್ನೋಟ

  ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ, ಮಹಿಳಾ ಸಂಚಾಲನ ಸಮಿತಿ ನೇತೃತ್ವದಲ್ಲಿ ಸ್ತ್ರೀ ಶಕ್ತಿಯನ್ನು ಪ್ರಬಲಪಡಿಸುವ ನಿಟ್ಟಿನಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಮುನ್ನೋಟ – ಮುಂದಿನ ಹೆಜ್ಜೆಯತ್ತ ಕಾರ್ಯಕ್ರಮವನ್ನು ನವೆಂಬರ್17 ರಂದು ಗುರುವಾಯನಕೆರೆ ಶಾರದಾ ಮಂಟಪದಲ್ಲಿ ನಡೆಸಲಾಯಿತು. ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕುರಿತ ಸವಿವರ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ನಾಗವೇಣಿ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ನಾರಾವಿಯ ವೈದ್ಯಾಧಿಕಾರಿಗಳಾದ ಡಾ ದೀಕ್ಷಿತಾ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ ಬೆಳ್ತಂಗಡಿ ಘಟಕದ […]

Read More

ಸ್ವಚ್ಛತಾ ಕಾರ್ಯಕ್ರಮ

ದಿನಾಂಕ 17/11/2019 ರಂದು ಯುವವಾಹಿನಿ(ರಿ) ಎಕ್ಕಾರು-ಪೆರ್ಮುದೆ ಘಟಕದ ವತಿಯಿಂದ ಬಿಲ್ಲವ ಸಮಾಜ ಸೇವಾ ಸಂಘ ಎಕ್ಕಾರು-ಪೆರ್ಮುದೆ ಇದರ ವಠಾರದ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು. ಅಧ್ಯಕ್ಷರಾದ ಸಂದೇಶ್ ಪೂಜಾರಿ, ಉಪಾಧ್ಯಕ್ಷರಾದ ಚಂದ್ರಹಾಸ ಪೂಜಾರಿ, ಹಿರಿಯರಾದ ಪ್ರದೀಪ್ ಕುಮಾರ್ ಸುವರ್ಣ, ವಿನೋದ್ ಸಾಲ್ಯಾನ್ ಸೇರಿದಂತೆ ಒಟ್ಟು 12 ಸದಸ್ಯರು ಹಾಜರಿದ್ದರು.

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 26-10-2024
ಸ್ಥಳ : ಸಮಾಜ ಮಂದಿರ, ಮೂಡುಬಿದಿರೆ

ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ

ದಿನಾಂಕ : 10-11-2024
ಸ್ಥಳ : ಅಮೃತ ಸೋಮೇಶ್ವರ ಸಭಾಭವನ ಊರ್ವಸ್ಟೋರ್

ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು

ದಿನಾಂಕ : 27-10-2024
ಸ್ಥಳ : ಎಸ್.ವಿ.ಎಸ್. ಶಾಲಾ ಮೈದಾನ ಬಂಟ್ವಾಳ

ಬೈದ್ಯಶ್ರೀ ಟ್ರೋಫಿ - 2024

ದಿನಾಂಕ : 07-09-2024
ಸ್ಥಳ : ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ

ನವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮ

ದಿನಾಂಕ :
ಸ್ಥಳ :

ಯುವ ಸ್ಟಾರ್ ಕಿಡ್ - 2024

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!