22-10-2025, 4:36 PM
ಮಂಗಳೂರು ದಸರಾ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಂಜೆಯಿಂದ ತಡ ರಾತ್ರಿಯವರೆಗೆ ನಿರಂತರವಾಗಿ ಸೇವಾ ಕೌಂಟರ್ನಲ್ಲಿ ಘಟಕದ ಸದಸ್ಯರು ಸೇವೆಯನ್ನು ಸಲ್ಲಿಸಿದರು ಈ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡ ಸಲುವಾಗಿ ಶ್ರೀ ಶಾರದ ಮಾತೆಯ ದಿವ್ಯಾ ಸಾನಿಧ್ಯದಲ್ಲಿ ದೇವರ ಪ್ರಸಾದೊಂದಿಗೆ ಅನುಗ್ರಹ ಪತ್ರವನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಘಟಕಕ್ಕೆ ಸಮರ್ಪಿಸಿದರು.
Read More
22-10-2025, 4:22 PM
ದಿನಾಂಕ:27-09-2025 ಶನಿವಾರ ದಂದು ಮಂಗಳೂರು ದಸರಾದ ಪ್ರಯುಕ್ತ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಸ್ವಯಂ ಸೇವೆ ಸಲ್ಲಿಸಲಾಯಿತು.ಮತ್ತು ಘಟಕದ ವತಿಯಿಂದ ಶ್ರೀ ಕ್ಷೇತ್ರದಲ್ಲಿ ನಡೆಯುವ ಅನ್ನದಾನ ಸೇವೆಗಾಗಿ ಕೇಂದ್ರ ಸಮಿತಿಗೆ ದೇಣಿಗೆ ನೀಡಲಾಯಿತು.
Read More
22-10-2025, 4:13 PM
ಮಂಗಳೂರು ದಸರಾ 2025 ಇದರ ಹತ್ತನೇ ದಿನ ತಾ:01-10-2025ರಂದು ಸೇವೆಯಲ್ಲಿ ಘಟಕದ ಅಧ್ಯಕ್ಷರು ಹಾಗೂ ಸರ್ವ ಸದ್ಯಸರು ಸೇವಾ ಕೌಂಟರ್ ಮತ್ತು ಅನ್ನದಾನ ಕೌಂಟರ್ ನಲ್ಲಿ ಸೇವೆ ಸಲ್ಲಿಸಿದರು.
Read More
22-10-2025, 2:54 PM
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ದಿನಾಂಕ 07.09.2025ರಂದು ನಡೆದ ಗುರುಗಳ 171ನೇ ಜಯಂತಿ ಕಾರ್ಯಕ್ರಮದಲ್ಲಿ ಘಟಕದ ವತಿಯಿಂದ ಸ್ವಯಂ ಸೇವೆಯಲ್ಲಿ ಭಾಗವಹಿಸಲಾಯಿತು. ಘಟಕದ ಹೆಚ್ಚಿನ ಸದಸ್ಯರು ಬೆಳಿಗ್ಗೆಯಿಂದಲೇ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ಅವರೊಂದಿಗೆ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸ್ವಯಂ ಸೇವೆಯಲ್ಲಿ ಭಾಗವಹಿಸಿದ್ದರು.
Read More
19-10-2025, 2:40 PM
ದಿನಾಂಕ 28/09/25 ರಂದು ಮಂಗಳೂರು ದಸರಾ ಪ್ರಯುಕ್ತ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಘಟಕದ ವತಿಯಿಂದ ಒಂದು ದಿನದ ಸ್ವಯಂ ಸೇವೆಯಲ್ಲಿ ಭಾಗವಹಿಸಲಾಯಿತು .
Read More
19-10-2025, 11:00 AM
ಬ್ರಹ್ಮಾವರ: ಯುವವಾಹಿನಿ (ರಿ.) ಉಡುಪಿ ಘಟಕದ ಮಹತ್ವಾಕಾಂಕ್ಷೆಯ ‘ತಲೆಗೊಂದು ಸೂರು’ ಯೋಜನೆಯಡಿ ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದ ಅಂಜಾಲು ನಿವಾಸಿ ಸುಮಿತ್ರಾ ಪೂಜಾರಿ ಅವರಿಗೆ 19.10.2025ರಂದು ನೂತನವಾಗಿ ನಿರ್ಮಿಸಿದ ಮನೆ ‘ಶ್ರೀ ಗುರು ನಿಲಯ’ವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರವನ್ನು ನೀಡಿ, ಮನೆ ಹಸ್ತಾಂತರ ಕಾರ್ಯಕ್ರಮವನ್ನು ಗೌರವಪೂರ್ಣವಾಗಿ ನೆರವೇರಿಸಲಾಯಿತು. ಸಮಾಜಸೇವೆಯ ಪರಂಪರೆಯನ್ನು ಮುಂದುವರಿಸುತ್ತಿರುವ ಯುವವಾಹಿನಿ ಉಡುಪಿ ಘಟಕವು ಇದುವರೆಗೆ ಒಟ್ಟು 7 ಮನೆಗಳನ್ನು ನಿರ್ಮಿಸಿ, 3 ಮನೆಗಳನ್ನು ಸಂಪೂರ್ಣ ದುರಸ್ತಿ ಮಾಡಿ ಫಲಾನುಭವಿಗಳಿಗೆ ಹಸ್ತಾಂತರಿಸಿರುವುದು […]
Read More
19-09-2025, 7:42 AM
ತಾರೀಕು 27/08/2025 ರಿಂದ 31/08/2025ರ ವರೆಗೆ ಘಟಕದ ಸ್ಥಾಪಕ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಸುವರ್ಣ ರವರ ಅಧ್ಯಕ್ಷತೆಯಲ್ಲಿ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸುವರ್ಣ ಸಂಭ್ರಮ ವು ಯಶಸ್ವಿಯಾಗಿ ವಿಜೃಂಭಣೆಯಿಂದ ಜರಗಿತು. ಸಮಾರಂಭದ ಐದು ದಿವಸದ ಸಭಾ ವೇದಿಕೆಯ ನಿರ್ವಹಣೆ ಯನ್ನು ನಮ್ಮ ಘಟಕವು ಅಚ್ಚುಕಟ್ಟಾಗಿ ನಿರ್ವಹಿಸಿತು.
Read More
23-11-2024, 5:44 AM
ಉಡುಪಿ: ಯುವವಾಹಿನಿ (ರಿ) ಉಡುಪಿ ಘಟಕದ ಅತ್ಯಂತ ಪ್ರಶಂಸನೀಯ ಯೋಜನೆಗಳಲ್ಲಿ ಒಂದಾದ ತಲೆಗೊಂದು ಸೂರು ಯೋಜನೆಯಡಿ ನಿರ್ಮಾಣಗೊಂಡ ಅಂದಾಜು ಹತ್ತು ಲಕ್ಷ ವೆಚ್ಚದ ಮನೆಯನ್ನು ದಿನಾಂಕ 23-11-2024 ರಂದು ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್.ಕೆ.ಪೂಜಾರಿಯವರ ಗೌರವ ಉಪಸ್ಥಿತಿಯಲ್ಲಿ ಫಲಾಕಾಂಕ್ಷಿಗೆ ಹಸ್ತಾಂತರಿಸಲಾಯಿತು. ಉದ್ಯಾವರ ಸಂಪಿಗೆ ನಗರದ ನಿವಾಸಿ, ಇಬ್ಬರು ಹೆಣ್ಣು ಮಕ್ಕಳ ತಾಯಿ ಶ್ರೀಮತಿ ಲತಾ ಸುರೇಶ್ ಈ ಬಾರಿಯ ಫಲಾಕಾಂಕ್ಷಿ. ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಶ್ರೀ ಪ್ರವೀಣ್.ಎಂ.ಪೂಜಾರಿಯವರು ಗಣ್ಯಾತಿ ಗಣ್ಯರ, ದಾನಿಗಳ, ಯುವವಾಹಿನಿ ಕೇಂದ್ರ […]
Read More
26-10-2024, 5:19 AM
ಕೂಳೂರು : ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪಾವಳಿ ಹಬ್ಬವು ಎಲ್ಲರ ಮನ ಮನೆ ಬೆಳಗಿದಂತೆ ಬಡವರ ಬಾಳಿನಲ್ಲೂ ಬೆಳಕನ್ನು ತರಲಿ ಎಂಬ ಉದ್ದೇಶದಿಂದ ಯುವವಾಹಿನಿ (ರಿ) ಕೂಳೂರು ಘಟಕ ಕಳೆದ 9 ವರುಷಗಳಿಂದ ಅಶಕ್ತ ಕುಟುಂಬಗಳಿಗೆ ನೆರವಿನ ಆಶಾ ದೀಪ ಎಂಬ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದ್ದು ಪ್ರತಿ ವರ್ಷವೂ ಕಡು ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಹಬ್ಬವನ್ನು ಆಚರಿಸಲು ಬೇಕಾದ ಎಲ್ಲ ದಿನಸಿ ಸಾಮಾಗ್ರಿಗಳನ್ನು ನೀಡುತ್ತಾ ಬಂದಿದೆ. ಅದೇ ರೀತಿ ಈ ವರ್ಷವೂ ಕುಟುಂಬ ಸಂಪರ್ಕ ನಿರ್ದೇಶಕರಾದ […]
Read More
20-10-2024, 7:09 AM
ಮಂಗಳೂರು : ಮಂಗಳೂರು ತಾಲೂಕು ಬೊಂಡಂತಿಲ ಗ್ರಾಮದ ತಾರಿಗುಡ್ಡೆ ನಿವಾಸಿ ಬೇಬಿ ಪೂಜಾರಿ ಕುಟುಂಬಕ್ಕೆ ದಿನಾಂಕ 20-10-2024 ರಂದು ಯುವವಾಹಿನಿ ಸಂಸ್ಥೆಯು ಸುಮಾರು ರೂ 6.40 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆಯ ಹಸ್ತಾಂತರ ಸಮಾರಂಭದಲ್ಲಿ ಉದ್ಯಮಿ ದಯಾನಂದ ಬಂಗೇರ ದೀಪ ಬೆಳಗಿ ಉದ್ಘಾಟಿಸಿದರು. ಮಾನವತಾವಾದಿ ನಾರಾಯಣ ಗುರುಗಳ ಸಂದೇಶದಂತೆ ಯುವವಾಹಿನಿ ಮಾಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರ ಡಾ.ಎನ್.ಟಿ.ಅಂಚನ್ ಅಶಕ್ತ ಕುಟುಂಬಕ್ಕೆ ಮನೆ ಹಸ್ತಾಂತರ ಮಾಡಿ ಮಾತನಾಡಿದರು. ಯುವವಾಹಿನಿಯ ಮನೆ […]
Read More