16-07-2017, 8:13 AM
ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 16.07.2017 ರಂದು ಸೋಪ್, ಸೋಪ್ ವಾಟರ್, ಬಾತ್ ಸೋಪ್ ತಯಾರಿಸುವ ಬಗ್ಗೆ ತರಬೇತಿಯನ್ನು ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಸುನೀತಾ ರವರು ಪ್ರಾತ್ಯಕ್ಷಿಕೆಯ ಮೂಲಕ ಈ ಕಾರ್ಯಾಗಾರ ನಡೆಸಿಕೊಟ್ಟರು. ಅಧ್ಯಕ್ಷರಾದ ಸುಪ್ರೀತಾ ಪೂಜಾರಿ ಹಾಗೂ ಸದಸ್ಯರು ಕಾರ್ಯಾಗಾರದ ಪ್ರಯೋಜನ ಪಡೆದರು.
Read More
24-06-2017, 9:02 AM
ಯುವವಾಹಿನಿ (ರಿ) ಸುರತ್ಕಲ್ ಘಟಕದ ಆಶ್ರಯದಲ್ಲಿ ದಿನಾಂಕ 24.06.2017ರಂದು ಜರುಗಿದ ವಾರದ ಸಭೆಯಲ್ಲಿ ಬೆಳ್ತಂಗಡಿ DKRDS ಯೋಜನಾಧಿಕಾರಿ ಶೈಲು ಬಿರ್ವ ಅಗತ್ತಾಡಿ ಇವರು ಬಿಲ್ಲವ ಸಮಾಜದ ಕಟ್ಟುಪಾಡು ಎಂಬ ವಿಚಾರದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಯುವವಾಹಿನಿ (ರಿ) ಮಂಗಳೂರು ಘಟಕದ ಮಾಜಿ ಅಧ್ಯಕ್ಷರಾದ ರಾಕೇಶ್ ಕುಮಾರ್, ಯುವವಾಹಿನಿ ಸುರತ್ಕಲ್ ಘಟಕದ ಅಧ್ಯಕ್ಷರಾದ ರವೀಂದ್ರ ಎಸ್.ಕೋಟ್ಯಾನ್, ಕಾರ್ಯದರ್ಶಿ ರಿತೇಶ್ ಕೆ.ನಿಕಟಪೂರ್ವ ಅಧ್ಯಕ್ಷರಾದ ಭಾಸ್ಕರ್ ಸಾಲ್ಯಾನ್ ಅಗರಮೇಲು ಹಾಗೂ ಸುರತ್ಕಲ್ ಯುವವಾಹಿನಿ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
Read More
10-06-2017, 7:34 AM
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಸಂಚಾರಿ ನಿಯಂತ್ರಣ ಮತ್ತು ನಿಯಮಗಳ ಮಾಹಿತಿ ಕಾರ್ಯಾಗಾರ ದಿನಾಂಕ 10.06.2017 ರಂದು ಮಂಗಳೂರಿನ ಉರ್ವಾಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿತು ಸಂಚಾರಿ ನಿಯಂತ್ರಣ ಮತ್ತು ನಿಯಮಗಳ ಬಗ್ಗೆ ಮಂಗಳೂರು ಉತ್ತರ ವಲಯದ ಪೋಲಿಸ್ ಸರ್ಕಲ್ ಇನ್ ಸ್ಪೆಕ್ಟರ್ ಶ್ರೀ ಮಂಜುನಾಥ್ ಅವರು ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಆರ್ಥಿಕ ವಾಗಿ ಹಿಂದುಳಿದ ಮೂರು ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು.ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸಲಹೆಗಾರರಾದ ಟಿ.ಶಂಕರ ಸುವರ್ಣ, […]
Read More
20-05-2017, 7:31 AM
ಯವವಾಹಿನಿ (ರಿ) ಕಂಕನಾಡಿ ಘಟಕದ ಆಶ್ರಯದಲ್ಲಿ ಭಾರತ ಸರಕಾರ ದತ್ತೋಪಂತ್ ಥೇಂಗಡಿ ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಅಭಿವೃದ್ಧಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಾದೇಶಿಕ ನಿರ್ದೇಶನಾಲಯ ಮಂಗಳೂರು ಇದರ ಸಹಯೋಗದೋಂದಿಗೆ 19.05.2017 ,ಮತ್ತು 20.05.2017 ಎರಢು ದಿನಗಳ ಅಸಂಘಟಿತ ಕಾರ್ಮಿಕರ ಕಾರ್ಯಾಗಾರ ಜರಗಿತು. ಕಾರ್ಯಕ್ರಮವನ್ನು ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮಂಡಳಿಯ ಶಿಕ್ಷಣಾಧಿಕಾರಿ ಸತೀಶ್ ಕುಮಾರ್ ಹಾಗೂ ಕೇರ್ಸ ಮಂಗಳೂರು ಇದರ ನಿರ್ದೇಶಕರಾಗಿರುವ ಸತೀಶ್ ಮಾಬೆನ್ ಉದ್ಘಾಟಿಸಿದರು. ಕಂಕನಾಡಿ ಯುವವಾಹಿನಿ ಅಧ್ಯಕ್ಷರಾದ ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. […]
Read More
16-05-2017, 7:24 AM
ಯುವವಾಹಿನಿ (ರಿ) ಯಡ್ತಾಡಿ ಘಟಕದ ಆಶ್ರಯದಲ್ಲಿ 07.05.2017 ರಿಂದ 16.05.2107 ರ ವರಗೆ ಹತ್ತು ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರ ವಿಕಸನ 2017 ಸೈಬರಕಟ್ಟೆ ಮಹಾತ್ಮಗಾಂಧಿ ಪ್ರೌಢ ಶಾಲೆಯಲ್ಲಿ ಜರುಗಿತು. ಒಟ್ಟು 137 ಮಕ್ಕಳು ಈ ಶಿಬಿರದ ಪ್ರಯೋಜನ ಪಡೆದರು. ಕರ್ನಾಟಕ ಬಾಲವಿಕಾಸ ಅಕಾಡೆಮಿ ,ದಾರಾವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಡುಪಿ, ಹಾಗೂ ಸಮಗ್ರ ಶಿಶು ಅಭಿವೃದ್ಧಿ ಇಲಾಖೆ ಬ್ರಹ್ಮಾವರ ಈ ಶಿಬಿರದಲ್ಲಿ ಸಹಭಾಗಿತ್ವ ನೀಡಿದರು
Read More
13-05-2017, 12:39 PM
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 10.05.2017 ರಿಂದ ದಿನಾಂಕ 13.05.2017 ರ ವರಗೆ ನಾಲ್ಕು ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರ ಮಂಗಳೂರಿನ ಕೊಟ್ಟಾರದ ಯುವವಾಹಿನಿ ಕೇಂದ್ರ ಕಛೇರಿಯಲ್ಲಿ ಜರುಗಿತು. ಖ್ಯಾತ ಮರಳು ಶಿಲ್ಪಿ ಹಾಗೂ ಮಣ್ಣಿನ ಕಲಾಕೃತಿಯ ಕಲಾವಿದ ಹರೀಶ್ ಕೊಡಿಯಾಲಬೈಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮುಖವಾಡ ಹಾಗೂ ಮಣ್ಣಿನ ಕಲಾಕೃತಿ ರಚನೆಯ ಬಗ್ಗೆ ಮಕ್ಕಳಿಗೆ ತರಬೇತಿ ನೀಡಿದರು ಹಾಗೂ ಶ್ರೀಮತಿ ಶುಭಾ ರಾಜೇಂದ್ರ ಸಹಕಾರ ನೀಡಿದರು. ಮಂಗಳೂರು ಮಹಿಳಾ ಘಟಕದ ಸದಸ್ಯೆಯರಾದ […]
Read More
11-05-2017, 7:23 AM
ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ದಿನಾಂಕ 11/04/2017 ರಿಂದ 11.05.2017 ರವರೆಗೆ ಯುವವಾಹಿನಿ ಸಂಚಾಲನ ಸಮಿತಿ ಮೂಡುಕೋಡಿ ಮತ್ತು ಸೇವಾ ಭಾರತಿ ಮೂಡುಕೋಡಿ ಇದರ ಜಂಟಿ ಸಹಯೋಗದೊಂದಿಗೆ ಒಂದು ತಿಂಗಳ ಕಾಲ ಮೂಡುಕೋಡಿ ಶ್ರೀರಾಮ ಮಂದಿರದಲ್ಲಿ ಹೊಲಿಗೆ ತರಬೇತಿ ಶಿಬಿರವು ಜರುಗಿತು. ದಿನಾಂಕ 11.05.2017 ರಂದು ಸಮಾರೋಪ ಸಮಾರಂಭವು ಯುವವಾಹಿನಿ ಸಂಚಾಲನ ಮೂಡುಕೋಡಿಯ ಕಾರ್ಯದರ್ಶಿ ಯೋಗೀಶ್ ಬಿಕ್ರೊಟ್ಟು ಇವರ ಅಧ್ಯಕ್ಷತೆಯಲ್ಲಿ ಜರುಗಿತು..ಮುಖ್ಯ ಅತಿಥಿಗಳಾಗಿ ಸೇವಾ ಭಾರತಿ ಕನ್ಯಾಡಿಯ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಯುವವಾಹಿನಿ ಕೇಂದ್ರ ಸಮಿತಿ ನಿರ್ದೇಶಕ […]
Read More
25-04-2017, 5:02 AM
ಯುವವಾಹಿನಿ (ರಿ) ಮಂಗಳೂರು ಘಟಕದ ಆಶ್ರಯದಲ್ಲಿ ದಿನಾಂಕ 25.04.2017 ನೇ ಮಂಗಳವಾರದಂದು ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿ ಕಛೇರಿಯಲ್ಲಿ ಸಂಚಾರಿ ನಿಯಮಗಳ ಮಾಹಿತಿ ಕಾರ್ಯಾಗಾರ ಜರುಗಿತು. ಮಂಗಳೂರು ಉತ್ತರ ವಲಯದ ಟ್ರಾಫಿಕ್ ಇನ್ಸ್‌ಪೆಕ್ಟರ್ ಮಂಜುನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು ಸಂಚಾರಿ ನಿಯಮಗಳ ಪಾಲನೆ,ಅನಾಹುತಗಳನ್ನು ತಡೆಗಟ್ಟುವ ಮುಂಜಾಗೃತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು ಯುವವಾಹಿನಿ ಮಂಗಳೂರು ಘಟಕದ ವಾರದ ಸಾಪ್ತಾಹಿಕ ಸಭೆಯಲ್ಲಿ ಜರುಗಿದ ಈ ಮಾಹಿತಿ ಕಾರ್ಯಾಗಾರದಲ್ಲಿ ಸುಮಾರು 75ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ […]
Read More
22-04-2017, 9:28 AM
ಯುವವಾಹಿನಿ ಸುರತ್ಕಲ್ ಹಾಗೂ ಯುವವಾಹಿನಿ ಸಸಿಹಿತ್ಲು ಘಟಕಗಳ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸಸಿಹಿತ್ಲು ಇದರ ಸಹಯೋಗದೊಂದಿಗೆ ದಿನಾಂಕ 22.04.2017ನೇ ಶನಿವಾರ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ,ಸಸಿಹಿತ್ಲು ಇಲ್ಲಿ ಸಂಚಾರಿ ನಿಯಮಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಜರುಗಿತು ಟ್ರಾಫಿಕ್ ಇನ್ಸ್‌ಪೆಕ್ಟರ್ ಮಂಜುನಾಥ್ ನಾಯಕ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರ ನಡೆಸಿಕೊಟ್ಟರು. ಸಂಚಾರಿ ನಿಯಮಗಳು, ರಸ್ತೆ ಸುರಕ್ಷತೆ ಹಾಗೂ ಅಪಘಾತ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸುರತ್ಕಲ್ […]
Read More
18-04-2017, 2:17 PM
ಯುವವಾಹಿನಿ (ರಿ) ಕಂಕನಾಡಿ ಘಟಕದ ಆಶ್ರಯದಲ್ಲಿ ಮಹಿಳೆಯರಿಗಾಗಿ ವೈವಿಧ್ಯಮಯ ಹಾಗೂ ವಿಶಿಷ್ಟ ವಿನ್ಯಾಸದ ಕೇಶ ವಿನ್ಯಾಸ ಕಾರ್ಯಾಗಾರ ದಿನಾಂಕ 18.04.2017 ರಂದು ಜರುಗಿತು. ಯುವವಾಹಿನಿ ಮಹಿಳಾ ಘಟಕದ ನಿಕಟಪೂರ್ವ ಅಧ್ಯಕ್ಷೆ ಹಾಗೂ ಬ್ಯುಟಿಷೀಯನ್ ಶ್ರೀಮತಿ ವಿದ್ಯಾ ರಾಕೇಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರ ನಡೆಸಿಕೊಟ್ಟರು. ಹಾಗೂ ಈ ಸಂದರ್ಭದಲ್ಲಿ ಸರಳ ವಿಧಾನಗಳ ಮೂಲಕ ಮಹಿಳೆಯರ ಸೌಂದರ್ಯ ಹೆಚ್ಚಿಸುವ ಮೇಕಪ್ ವಿಧಾನದ ಬಗ್ಗೆ ಮಾಹಿತಿ ನೀಡಿದರು. ಮಂಗಳೂರಿನ ಗೋರಿಗುಡ್ಡದಲ್ಲಿ ಜರುಗಿದ ಈ ಕಾರ್ಯಾಗಾರದಲ್ಲಿ 50 ಕ್ಕೂ ಹೆಚ್ಚು ಮಹಿಳೆಯರು […]
Read More