25-01-2026, 1:00 PM
ಉಪ್ಪಿನಂಗಡಿ : ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ಪದಾಧಿಕಾರಿಗಳು, ನಿರ್ದೇಶಕರುಗಳು ಹಾಗೂ ಸಂಘಟನಾ ಕಾರ್ಯದರ್ಶಿಗಳಿಗೆ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳ ಅರಿವು ಮೂಡಿಸುವ ಉದ್ದೇಶದಿಂದ “ಮಾಹಿತಿ ಕಾರ್ಯಾಗಾರ – 2k26” ಕಾರ್ಯಕ್ರಮವನ್ನು ದಿನಾಂಕ 25.01.2026ರ ಆದಿತ್ಯವಾರ ಉಪ್ಪಿನಂಗಡಿ ಸಹಸ್ರ ಕೋಚಿಂಗ್ ಸೆಂಟರ್ನಲ್ಲಿ ಆಯೋಜಿಸಲಾಯಿತು.ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಡಿ.ಕೆ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಯುವವಾಹಿನಿ ಸಂಘಟನೆಯ ಹಿನ್ನೆಲೆ, ಉದ್ದೇಶ, ಘಟಕಗಳ ಪದಾಧಿಕಾರಿಗಳು, ನಿರ್ದೇಶಕರುಗಳು ಹಾಗೂ ಸಂಘಟನಾ ಕಾರ್ಯದರ್ಶಿಗಳ ಜವಾಬ್ದಾರಿ–ಕರ್ತವ್ಯಗಳು […]
Read More
24-01-2026, 1:00 PM
ಮೂಲ್ಕಿ : ಯುವವಾಹಿನಿ (ರಿ.) ಮೂಲ್ಕಿ ಘಟಕ ಹಾಗೂ ಶ್ರೀ ನಾರಾಯಣಗುರು ಸಂಯುಕ್ತ ಪದವಿ ಪೂರ್ವ ಕಾಲೇಜು, ಮೂಲ್ಕಿ ಇವರ ಸಹಯೋಗದಲ್ಲಿ ದಿನಾಂಕ 24.01.2026 ರಂದು ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಶೈಕ್ಷಣಿಕ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಯಿತು. ರಾಷ್ಟ್ರೀಯ ತರಬೇತುದಾರರಾದ ಜೆ.ಸಿ. ರಾಜೇಂದ್ರ ಭಟ್ ಅವರು ಶಿಬಿರ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಶಾಲಾ ಸಂಚಾಲಕರಾದ ಹರೀಂದ್ರ ಸುವರ್ಣ ಅವರು ಉದ್ಘಾಟಿಸಿದರು. ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ವಿನಯ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ […]
Read More
19-01-2026, 4:00 PM
ಪಣಂಬೂರು–ಕುಳಾಯಿ : ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ ದಿನಾಂಕ 19-01-2026 ಸೋಮವಾರ ಮಧ್ಯಾಹ್ನ 2.30ರಿಂದ 4.00 ಗಂಟೆಯವರೆಗೆ ಬೈಕಂಪಾಡಿಯ ಭಟ್ಟರಾಂಡ್ ರಶೆಲ್ ಶಾಲೆಯಲ್ಲಿ ಅಲ್ಲಿನ ಮಕ್ಕಳಿಗಾಗಿ ವ್ಯಸನ ಮುಕ್ತ ಜೀವನ ಮತ್ತು ಪರಿಸರ ಸ್ವಚ್ಛತೆ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಣಂಬೂರು ಠಾಣಾ ಅಧಿಕಾರಿ ಜ್ಞಾನ ಶೇಖರ್ ಮಾತನಾಡಿ, ಮಾದಕ ವ್ಯಸನಗಳಿಂದ ಯುವಕರು ಹೇಗೆ ದಾರಿ ತಪ್ಪುತ್ತಿದ್ದಾರೆ, ಅದರ ದುಷ್ಪರಿಣಾಮಗಳು ಏನೆಂಬುದನ್ನು ಮಕ್ಕಳಿಗೆ ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ವಿವರಿಸಿದರು. […]
Read More
19-01-2026, 1:00 PM
ವೇಣೂರು : ಸಂಸ್ಥೆ ಎಂಬುದು ಕೇವಲ ಸಂಘಟನೆಯಷ್ಟೇ ಅಲ್ಲ, ಅದು ಸಮಾಜವನ್ನು ರೂಪಿಸುವ ಶಕ್ತಿ ಕೇಂದ್ರವಾಗಿರುತ್ತದೆ. ಯುವವಾಹಿನಿಯ ಪ್ರತಿಯೊಬ್ಬ ಸದಸ್ಯನಲ್ಲೂ ನಾಯಕತ್ವದ ಗುಣ ಅಡಗಿದೆ. ಸೇವೆ, ಶಿಸ್ತು ಮತ್ತು ಸಮರ್ಪಣೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವವಾಹಿನಿ ಶಕ್ತಿಯಾಗಿ ಹೊರಹೊಮ್ಮಿದೆ. ಒಟ್ಟಾಗಿ ಚಿಂತಿಸಿ, ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಂಸ್ಥೆಯ ಗುರಿ ಸಾಕಾರವಾಗುತ್ತದೆ. ಇಂದಿನ ನಿಮ್ಮ ಸೇವೆಯೇ ನಾಳೆಯ ಶ್ರೇಷ್ಠ ಸಮಾಜದ ಅಡಿಗಲ್ಲು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಡಿ […]
Read More
10-01-2026, 1:09 PM
ಮಂಗಳೂರು : ಡಿಜಿಟಲ್ ಯುಗದಲ್ಲಿ ಹೆಚ್ಚುತ್ತಿರುವ ಆನ್ಲೈನ್ ವಂಚನೆಗಳು, ಸೈಬರ್ ಅಪರಾಧಗಳ ವಿಧಗಳು ಮತ್ತು ಅವುಗಳಿಂದ ರಕ್ಷಿಸಿಕೊಳ್ಳುವ ಮಾರ್ಗಗಳ ಬಗ್ಗೆ ನಾವು ಜಾಗ್ರತರಾಗಬೇಕಿದೆ. ನಶೆಯ ದುಷ್ಪರಿಣಾಮಗಳು ಹಾಗೂ ನಶಮುಕ್ತ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರದ ಮಹತ್ವವನ್ನು ತಿಳಿಯಬೇಕಿದೆ. ಜಾಗೃತಿ, ಜವಾಬ್ದಾರಿ ಮತ್ತು ಸಹಕಾರವೇ ಸುರಕ್ಷಿತ ಹಾಗೂ ಆರೋಗ್ಯಕರ ಸಮಾಜದ ಮೂಲಮಂತ್ರವೆಂದು ಸೈಬರ್ ಕ್ರೈಂ ಪೊಲೀಸ್ ಅಧಿಕಾರಿ ತಿಪ್ಪಾ ರೆಡ್ಡಿ ಇವರು ತಿಳಿಸಿದರು. ಅವರು ದಿನಾಂಕ 10.01.2026 ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ.) ಮಂಗಳೂರು ಮಹಿಳಾ […]
Read More
12-12-2025, 6:03 AM
ಯುವ ಸಮುದಾಯ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು” .. ನ್ಯಾಯವಾದಿ ಸಂತೋಷ್ ಕುಮಾರ್. ಯುವಕರು ಸಮಾಜದ ಸಮಸ್ಯೆ, ನೋವುಗಳಿಗೆ ಸ್ಪಂದಿಸುವ ಹಾಗೂ ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡಾಗ ಆವರ ಮೂಲಕ ಸಂಘಟನೆಗಳ ಉದ್ದೇಶ ಸಾರ್ಥಕವಾಗಬಲ್ಲುದು. ಯುವವಾಹಿನಿ ಸಂಘಟನೆ ತನ್ನ ಸಾಧನೆಗಾಗಿ ರಾಜ್ಯ ಪ್ರಶಸ್ತಿ ಪಡೆದಿರುವುದು ಅಭಿನಂದನಾರ್ಹ ಎಂದು ಉಪ್ಪಿನಂಗಡಿಯ ಖ್ಯಾತ ನ್ಯಾಯವಾದಿ ಶ್ರೀ ಸಂತೋಷ್ ಕುಮಾರ್ ತಿಳಿಸಿದರು. ಅವರು ದಿ.22.11.25 ರಂದು ಬೆಳ್ಳಿಪ್ಪಾಡಿ ಶ್ರೀ ಚಂದ್ರಶೇಖರ ಕೆ ಸನಿಲ್ ರವರ ಮನೆ “ಯಮುನಾ” ದಲ್ಲಿ ನಡೆದ ಘಟಕದ ಮಹಾಸಭೆ […]
Read More
01-12-2025, 2:27 PM
ಘಟಕದ ಆಶ್ರಯದಲ್ಲಿ ದಿನಾಂಕ:02-11-2025 ಆದಿತ್ಯವಾರದಂದು ತುಳುವೆರೆ ತುಳಸಿ ಪರ್ಬ ಕಾರ್ಯಕ್ರಮವು ಹೆಜಮಾಡಿ ಬಿಲ್ಲವರ ಸಂಘದಲ್ಲಿ ಜರಗಿತು. * ತುಳಸಿ ಪೂಜೆಯ ವಿಧಿ ವಿಧಾನಗಳನ್ನು ಗುರು ಮಂದಿರದ ಅರ್ಚಕರಾದ ಹರೀಶ್ ಶಾಂತಿ ಮುಂಬೈ ಇವರ ನೇತೃತ್ವದಲ್ಲಿ ಗುರು ಮಂದಿರದಲ್ಲಿ ನೆರವೇರಿಸಲಾಹಿತು. * ನಂತರ ಸಭಾ ಕಾರ್ಯಕ್ರಮವು ಹೆಜಮಾಡಿ ಬಿಲ್ಲವರ ಸಂಘದ ವಠಾರದಲ್ಲಿ ಪ್ರಾಥನೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ನಿಶಾಂಕ್.ಎಸ್.ಕೋಟ್ಯಾನ್ ರವರು ವಹಿಸಿದ್ದು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ […]
Read More
01-12-2025, 2:15 PM
ದಿನಾಂಕ 04-11-2025: ಘಟಕದಲ್ಲಿ ಸೈಬರ್ ವಂಚನೆಯ ಕುರಿತು ಮಾಹಿತಿ ಕಾರ್ಯಾಗಾರ ನೆರವೇರಿತು. ಉರ್ವ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯಾದ ವೇಣುಗೋಪಾಲ್ ರವರು ಸೈಬರ್ ವಂಚನೆಯ ಕುರಿತು ಮಾತನಾಡಿ ಇಂದಿನ ದಿನಗಳಲ್ಲಿ ಹಿಂದೆ ಇದ್ದ ಅಪರಾಧ ಪ್ರಕರಣಗಳ ಚಿತ್ರಣವೆ ಬದಲಾಗಿದ್ದು ಇಂದು ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಸೈಬರ್ ವಂಚನೆ ಹಾಗೂ ಡ್ರಗ್ಸ್ ಸೇವನೆಗೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚಾಗಿದೆ. ಸೈಬರ್ ವಂಚನೆ ಪ್ರಕರಣಗಳಲ್ಲಿ ಹೆಚ್ಚಾಗಿ ವಿದ್ಯಾವಂತರೇ ಸಾಮಾಜಿಕ ಜಾಲತಾಣ, ಅಂತರ್ಜಾಲದ ಮೂಲಕ ವಂಚನೆಗೊಳಗಾಗುತ್ತಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣ ಹಾಗೂ […]
Read More
22-10-2025, 3:04 PM
ಘಟಕದಲ್ಲಿ ಹೊಸದಾಗಿ ಸದಸ್ಯರಾಗಿ ಸೇರ್ಪಡೆ ಗೊಂಡ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮವು ದಿನಾಂಕ 20.07.2025ರ ಆದಿತ್ಯವಾರ ಉಪ್ಪಿನಂಗಡಿ ಸಹಸ್ರ ಕೋಚಿಂಗ್ ಸೆಂಟರ್ ನಲ್ಲಿ ನಡೆಯಿತು. ತಣ್ಣೀರುಪಂತ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಜಯಾನಂದ ಕಲ್ಲಾಪು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಪಡ್ಪು ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಿದರು. ಕೇಂದ್ರ ಸಮಿತಿಯ ಮಾಜಿ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶ್ರೀ ಅಜಿತ್ ಕುಮಾರ್ ಪಾಲೇರಿ ನೂತನ […]
Read More