Yuvavahini

ಇತರೆ

ತುಳುವೆರೆ ತುಡರ ಪರ್ಬ

ಯುವವಾಹಿನಿ (ರಿ.) ಮುಲ್ಕಿ ಘಟಕದ ಪ್ರತಿಷ್ಠಿತ ಕಾರ್ಯಕ್ರಮ ವಾಗಿರುವ ” ತುಳುವೆರೆ ತುಡರ ಪರ್ಬ” ಕಾರ್ಯಕ್ರಮ ದಿನಾಂಕ 26.10 .2019 ರಂದು ಸಂಜೆ 6 .30ಕ್ಕೆ ಸರಿಯಾಗಿ ನಮ್ಮ ಘಟಕದ ಅಧ್ಯಕ್ಷ ರಾದ ಸತೀಶ್ ಕಿಲ್ಪಾಡಿಯವರ ಅಧ್ಯಕ್ಷತೆಯಲ್ಲಿ ಮುಲ್ಕಿ ಬಿಲ್ಲವ ಸಂಘದ ಸಭಾಗೃಹದಲ್ಲಿ ಜರಗಿತು. ಸಭಾಕಾರ್ಯಕ್ರಮದ ಪ್ರಾರಂಭದಲ್ಲಿ ವರುಣ್ ಪೂಜಾರಿ ಯವರು ಪ್ರಾರ್ಥನೆ ಗೈದರು. ಅಧ್ಯಕ್ಷ ರಾದ ಸತೀಶ್ ಕಿಲ್ಪಾಡಿಯವರು ಬಂದ ಅತಿಥಿ ಗಣ್ಯ ರಿಗೆ ಹಾಗೂ ಉಪಸ್ಥಿತರಿದ್ದ ಎಲ್ಲರಿಗೂ ಸ್ವಾಗತ ಕೋರಿ ಅತಿಥಿ ವರ್ಯರನ್ನು ಶಾಲು […]

Read More

ಶಿವಗಿರಿ ಯಾತ್ರೆ

  ವು ದಿ 20/10/2019 ರಂದು 2 ದಿನದ ಶಿವಗಿರಿ ಯಾತ್ರೆಯನ್ನು ಹಮ್ಮಿಕೊಂಡಿದ್ದು ವರ್ಕುಲ,ಚೆoಬಳಂತಿ, ಅರವಿಪುರ,ಮರುತಮಲೇ, ಕನ್ಯಾಕುಮಾರಿ, ಅನಂತ ಪದ್ಮನಾಭ ಮುಂತಾದ ಪುಣ್ಯಕ್ಷೇತ್ರಕ್ಕೆ ಭೇಟಿಕೊಡಲಾಯಿತು. ಒಟ್ಟು 50 ಮಂದಿ ಯಾತ್ರಿಗಳು ಪಾಲ್ಗೊಂಡಿದ್ದರು.

Read More

ಕಮಲಶಿಲೆ, ಹಂಪಿ, ಮಂತ್ರಾಲಯ ಪ್ರವಾಸ

  ಯುವವಾಹಿನಿ ಕೂಳೂರು ಘಟಕದ ವತಿಯಿಂದ ದಿನಾಂಕ 18 ರಿಂದ 21 ರವರೆಗೆ ಕಮಲಶಿಲೆ, ಹಂಪಿ, ಮಂತ್ರಾಲಯ ಪ್ರವಾಸ ಹಮ್ಮಿಕೊಂಡಿತು. ಘಟಕದ ಉಪಾಧ್ಯಕ್ಷರಾದ ಪವಿತ್ರ ಅಮೀನ್ ರವರ ಸಂಚಾಲಕತ್ವದಲ್ಲಿ 40 ಜನರ ತಂಡ  ದಿನಾಂಕ 18.10.19 ರಂದು ಸಂಜೆ 4 ಗಂಟೆಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಹೊರಟು ಕಮಲಶಿಲೆ ದೇವರ ದರ್ಶನ ಪಡೆದು,  ಪ್ರಯಾಣ ಮುಂದುವರೆಸಿ 19.10.19 ರ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಹೊಸಪೇಟೆ ತಲುಪಿ ಅಲ್ಲಿ ಉಪಹಾರದ ನಂತರ ಹಂಪಿ ತಲುಪಿದೆವು.  […]

Read More

ಉನ್ನತವಾದ ಮೂರು ಪ್ರವಾಸಗಳು

ದಿನಾಂಕ 05.09.2019 ರಿಂದ 12.09.2019 ರವರೆಗೆ ಮಂಗಳೂರು ಘಟಕದ 36 ಜನರ ತಂಡವು ತಮ್ಮ ಬಂಧುಗಳೊಂದಿಗೆ ಗುಜರಾತ್ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಿಂದ ಪ್ರೇರೆಪಿತಗೊಂಡ ನಮ್ಮ ಘಟಕದ ಎರಡನೇ ತಂಡವು 43 ಜನರ ಬಂಧುಗಳೊಂದಿಗೆ ದಿನಾಂಕ 10.10.2019 ರಿಂದ 17.10.2019 ರವರೆಗೆ ಗುಜರಾತ್ ಪ್ರವಾಸ ವನ್ನು ಹಮ್ಮಿಕೊಂಡಿತ್ತು. ಈ ಎರಡು ತಂಡಗಳು ಗುಜರಾತಿನಲ್ಲಿರುವ ದ್ವಾರಕ ಮಂದಿರ, ಬೆಟ್ ದ್ವಾರಕ, ರುಕ್ಕ್ಮಿನಿ ಮಾತಾ ಮಂದಿರ, ನಾಗೇಶ್ವರ ಜೋತರ್ಲಿಂಗ, ಗೋಪಿತಲಾಬ್, ಕೃಷ್ಣ ಸುಧಾಮ ದೇವಸ್ಥಾನ, ಸೋಮಾನಾಥ ಜೋತಿರ್‍ಲಿಂಗ, ಅಹಮದಾಬಾಧ್ ನಗರ, […]

Read More

ಕ್ರಿಯಾತ್ಮಕ ಮನಸುಗಳ ಸಂಘಟನೆಯೇ ಯುವವಾಹಿನಿ: ಮುದ್ದು ಮೂಡುಬೆಳ್ಳೆ

“ಯುವವಾಹಿನಿವೆಂಬುದು ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡುವ ಯುವಮನಸ್ಸುಗಳನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ಉತ್ತಮ ರೀತಿಯಲ್ಲಿ ತೊಡಗಿಕೊಳ್ಳುವ ಒಂದು ಅದ್ಭುತ ಸಂಘಟನೆ, ಚಂಚಲತೆಯ ಯುವಮನಸ್ಸುಗಳನ್ನು ಧನಾತ್ಮಕವಾದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಯುವವಾಹಿನಿಯ ಬದ್ಧತೆ ಅಭಿನಂದನೀಯವಾದುದು” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕರಾದ ಮುದ್ದು ಮೂಡುಬೆಳ್ಳೆ ಹೇಳಿದರು. ಅವರು ದಿನಾಂಕ 20-10- 2019ರ ರವಿವಾರದಂದು ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸಮುದಾಯ ಭವನದಲ್ಲಿ ನಡೆದ ಯುವವಾಹಿನಿ(ರಿ.) ಮಾಣಿ ಘಟಕದ 2019-20 ನೇ ಸಾಲಿನ ನೂತನ […]

Read More

ಜೀವನ ಕೌಶಲ್ಯ ತರಬೇತಿ ಕಾರ್ಯಗಾರ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಯುವವಾಹಿನಿ (ರಿ.)ಬಜಪೆ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಒಂದು ದಿನದ     “ಜೀವನ ಕೌಶಲ್ಯ ತರಬೇತಿ” ಕಾರ್ಯಗಾರವು ತಾರೀಕು  19.10.19ನೇ ಶನಿವಾರ ಬೆಳಿಗ್ಗೆ ಗಂಟೆ 9.30ಕ್ಕೆ ಸರಿಯಾಗಿ ಅನ್ಸಾರ್ ಪ್ರೌಢಶಾಲೆ ಬಜಪೆ ಇಲ್ಲಿ ನಡೆಯಿತು. ಅನ್ಸಾರ್ ಶಾಲೆಯ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಜ್ಯೋತಿ ನಾರಾಯಣ ಪೂಜಾರಿ(ಸಂಚಾಲಕರು,ಎಸ್,ಎನ್,ಎಸ್ ಶಿಕ್ಷಣ ಪ್ರತಿಷ್ಠಾನ ಸುಂಕದಕಟ್ಟೆ) ಇವರು ನೆರವೇರಿಸಿ ಉದ್ಘಾಟನ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಉಷಾ ಸುವರ್ಣ ಹಾಗೂ […]

Read More

ಕಾರ್ಯಕ್ರಮ ನಿರೂಪಣಾ ನಿಯಮಗಳ ಬಗ್ಗೆ ತರಬೇತಿ ಕಾರ್ಯಾಗಾರ

ಯುವವಾಹಿನಿ (ರಿ) ಕೊಲ್ಯ ಘಟಕ ವತಿಯಿಂದ ದಿನಾಂಕ 19.10.19 ರಂದು ಶನಿವಾರ ಸಂಜೆ 7.30 ಕ್ಕೆ ಕಾರ್ಯಕ್ರಮ ನಿರೂಪಣಾ ನಿಯಮಗಳ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಅಧ್ಯಕ್ಷರಾದ ಆನಂದ ಮಲಯಾಳ ಕೋಡಿ ಅವರ ನಿವಾಸ (ಒಲವು) ದಲ್ಲಿ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಯುವವಾಹಿನಿಯ ಸ್ವರ ಮಾಣಿಕ್ಯ ಶ್ರೀ ಯುತ. ದಿನೇಶ್ ಸುವರ್ಣ ರಾಯಿ ಅವರನ್ನು ನಮ್ಮ ಘಟಕದ ಅಧ್ಯಕ್ಷರು ಹೂ ಕೊಟ್ಟು ಸ್ವಾಗತಿಸಿದರು. ಹಾಗೂ ತರಬೇತಿಗೆ ಬಂದ ಸರ್ವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು. ಶ್ರೀ ಯುತ. ದಿನೇಶ್ ಸುವರ್ಣ […]

Read More

ಧಾರ್ಮಿಕ ಶಿಕ್ಷಣ – ಭಜನಾ ತರಬೇತಿ ಕಮ್ಮಟ

ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ದಿನಾಂಕ 15.10.19 ರಂದು ಧಾರ್ಮಿಕ ಶಿಕ್ಷಣ_ ಭಜನಾ  ತರಬೇತಿ ಕಮ್ಮಟ  ಬ್ರಹ್ಮಶ್ರೀ  ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯದಲ್ಲಿ ಬಿಲ್ಲವ ಸೇವಾ ಸಮಾಜದ ಹಿರಿಯರು  ಹಾಗೂ ಯುವ ವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು . ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುವಯ೯ರಿಗೆ ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಹಿರಿಯ ಸದಸ್ಯರಾದ […]

Read More

ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಉಡುಪಿ ಘಟಕದ ಆಶ್ರಯದಲ್ಲಿ “ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರಧಾನ ಸಮಾರಂಭ” ಯುವವಾಹಿನಿಯ ಸಭಾಂಗಣದಲ್ಲಿ ದಿನಾಂಕ 13/10/2019 ರಂದು ಜರಗಿತು. ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಖ್ಯಾತ ಹಿರಿಯ ಲೇಖಕಿ ಯಶವಂತಿ ಎಸ್ ಸುವರ್ಣ, ನಕ್ರೆ ಹಾಗೂ ಜಾನಪದ ಕಲಾವಿದ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಪಿ ಎನ್ ಅಚಾರ್ಯ ಕೊಡಂಕೂರು ಇವರಿಗೆ ಉಡುಪಿ ತುಳುಕೂಟದ ಗೌರವಾಧ್ಯಕ್ಷ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರು ಪ್ರಧಾನ ಮಾಡಿದರು. […]

Read More

ಕುಪ್ಪೆಪದವು ದಸರಾ ಶೋಭಾಯಾತ್ರೆಗೆ ಸ್ತಬ್ಧಚಿತ್ರ

ದಿನಾಂಕ 08/10/2019 ರಂದು ದಸರಾ ಉತ್ಸವದ ಪ್ರಯುಕ್ತ ಶ್ರೀ ದುರ್ಗೆಶ್ವರಿ ದೇಗುಲದಿಂದ ಹೊರಡುವ ಶೋಭಾ ಯಾತ್ರೆಗೆ ಯುವವಾಹಿನಿ ಕುಪ್ಪೆಪದವು ಘಟಕದ ವತಿಯಿಂದ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀರವರ ಪ್ರತಿಮೆಯನ್ನು ಸ್ತಬ್ಧ ಚಿತ್ರದ ಪ್ರದರ್ಶನ ಮೂಲಕ ಅವರ ಜೀವನ ಚರಿತ್ರೆಯನ್ನು ತಿಳಿಸುವ ಮೂಲಕ ಭವ್ಯ ಮೆರವಣಿಗೆಯಲ್ಲಿ ಸಾಗಲಾಯಿತು. ಮೆರವಣಿಗೆಯ ಉದ್ದಕ್ಕೂ ನಮ್ಮ ಸದಸ್ಯರೆಲ್ಲರೂ ಈ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.(ಈ ಕಾರ್ಯಕ್ರಮಕ್ಕೆ ದಿನೇಶ್ ರಾಯಿರವರು ಹಿನ್ನೆಲೆ ಧ್ವನಿಯಾಗಿ ತೆರೆಯ ಮರೆಯಲ್ಲಿ ಕಾರ್ಯ ನಿರ್ವಹಿಸಿ ಸ್ತಬ್ಧ ಚಿತ್ರಕ್ಕೆ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!