22-10-2025, 3:59 PM
ಕುದ್ರೋಳಿ ನವರಾತ್ರಿ ಮಹೋತ್ಸವದಲ್ಲಿ ಸ್ವಯಂ ಸೇವೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದಲ್ಲಿ ಯುವವಾಹಿನಿ ಉಪ್ಪಿನಂಗಡಿ ಘಟಕದ ವತಿಯಿಂದ ಸ್ವಯಂ ಸೇವೆ ನಡೆಯಿತು. ಘಟಕದ ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ಇವರ ನೇತೃತ್ವದಲ್ಲಿ 100 ಕ್ಕೂ ಹೆಚ್ಚಿನ ಮಂದಿ ಸದಸ್ಯರು02.10.2025ರಂದು ಬೆಳಿಗ್ಗೆಯಿಂದ ಸಂಜೆ ತನಕ ಸೇವೆ ಸಲ್ಲಿಸಿದರು. ಸೇವೆಯಲ್ಲಿ ಘಟಕದ ಗೌರವ ಸಲಹೆಗಾರರಾದ ವರದರಾಜ್, ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
Read More
22-10-2025, 3:56 PM
ದಿನಾಂಕ 02- 10- 2025 : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯ ದಸರಾ ಮಹೋತ್ಸವದ ಕೊನೆಯ ದಿನ ಶ್ರೀ ಶಾರದಾ ಮಾತೆಯ ಶೋಭಾ ಯಾತ್ರೆಯಂದು ನಾರಾಯಣ ಗುರು ವೃತ್ತದ ಬಳಿ ಸಾರ್ವಜನಿಕರಿಗೆ ತಂಪಾದ ಶರಬತ್ ನೀಡುವ ಸೇವಾ ಕಾರ್ಯ ಘಟಕದ ವತಿಯಿಂದ ನೆರವೇರಿತು. ಶರಬತ್ ಸೇವೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್. ಎಲ್ ಶೇಟ್ ಡೈಮಂಡ್ ಹೌಸ್ ನ ಮಾಲೀಕರಾದ ರವೀಂದ್ರ ಶೇಟ್ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಸಾರ್ವಜನಿಕರಿಗೆ […]
Read More
22-10-2025, 3:46 PM
ದಿನಾಂಕ 04-10-2025 ರಿಂದ 6-10-2025 ರ ವರೆಗೆ ಶಿವಗಿರಿ ಯಾತ್ರೆ ಕೈಗೊಳ್ಳಲಾಯಿತು. ದಿನಾಂಕ 04-10-2025 ರಂದು ಶನಿವಾರ ರೈಲಿನಲ್ಲಿ 52 ಜನ ಸದಸ್ಯರ ತಂಡ ಹೊರಟು ಆದಿತ್ಯವಾರ ಬೆಳಿಗ್ಗೆ ವರ್ಕಳ ಶಿವಗಿರಿ ತಲುಪಿದೆವು. ಶ್ರೀ ಶ್ರೀ ಶ್ರೀ ಸತ್ಯಾನಂದ ಸ್ವಾಮೀಜಿ ಅಲ್ಲಿಂದ ನಮ್ಮನ್ನು ಶಿವಗಿರಿ ಮಠಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸ್ನಾನಾದಿಗಳನ್ನು ಮುಗಿಸಿ ಶಿವಗಿರಿ ಮಠ, ನಾರಾಯಣ ಗುರು ವರ್ಯರ ವಿಶ್ರಾಂತಿ ಗೃಹ, ಗುರುಗಳು ಸ್ಥಾಪಿಸಿದ ಶಾರದಾ ಪೀಠ, ಗುರು ವರ್ಯರ ಮೂಲ ಸಮಾಧಿ ಬೇಟಿ ನೀಡಿ […]
Read More
22-10-2025, 3:39 PM
ರೋಟರಿ ಕ್ಲಬ್ ಮಂಗಳೂರು ಪೂರ್ವ, ರೋಟರಿ ಸಮುದಾಯ ದಳ ಕೊಲ್ಯ, ಸಾರ್ವಜನಿಕ ಶ್ರೀಶಾರದಾ ಮಹೋತ್ಸವ ಸಮಿತಿ ಕೊಲ್ಯ ಹಾಗೂ ಎನಿಮಲ್ ಕೇರ್ ಟ್ರಸ್ಟ್ ಮಂಗಳೂರು ಇವರ ಸಹಕಾರದೊಂದಿಗೆ ಹುಚ್ಚುನಾಯಿ ನಿಯಂತ್ರಣ ಲಸಿಕಾ ಶಿಬಿರ ಮತ್ತು ದೇಸಿ ನಾಯಿ ಹಾಗೂ ಬೆಕ್ಕಿನ ಮರಿಗಳ ಉಚಿತ ದತ್ತು ಸ್ವೀಕಾರ ಶಿಬಿರ ದಿನಾಂಕ 28.09.25 ರಂದು ಶ್ರೀ ಶಾರದ ಮಹೋತ್ಸವ ಸಮಿತಿಯ ವಠಾರದಲ್ಲಿ ನೆರವೇರಿತು, ಸುಮಾರು ನೂರಕ್ಕೂ ಅಧಿಕ ನಾಯಿ ಹಾಗೂ ಬೆಕ್ಕಿಗೆ ಲಸಿಕೆ ನೀಡಲಾಯಿತು.ಈ ಸಮಯದಲ್ಲಿ ಜಂಟಿ ಸಂಸ್ಥೆಗಳ ಅಧ್ಯಕ್ಷರು, […]
Read More
22-10-2025, 3:32 PM
ದಿನಾಂಕ 28/07/2025 ರಂದು ಶ್ರೀ ಗೋಕರ್ನಾಥೇಶ್ವರ ಕ್ಷೇತ್ರ ಕುದ್ರಳ್ಳಿಯಲ್ಲಿ ಘಟಕದ ವತಿಯಿಂದ ಭಜನಾ ಸಂಕೀರ್ತನೆಯನ್ನು ನಡೆಸಲಾಯಿತು
Read More
22-10-2025, 3:27 PM
ದಿನಾಂಕ 27/07/2025 ರಂದು ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ) ಇದರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು, ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಗುರುಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮೊದಲಿಗೆ ಘಟಕದ ಸದಸ್ಯರು ಹಾಗೂ ಊರ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಸಂತ ಅಲೋಶಿಯಸ್ ಸ್ನಾತಕೋತರ ವಿಭಾಗದಲ್ಲಿ ಮುಖ್ಯಸ್ಥರಾದ ಪ್ರೊ|ಡಾ| ರಾಕೇಶ್ ಕುಮಾರ್ ಹಾಗೂ ಸಾಹಿತಿಕಾರರು ಮತ್ತು ಸಂತ ಅಲೋಶಿಯಸ್ ಪಿಯು […]
Read More
22-10-2025, 3:13 PM
ಬಿಲ್ಲವ ಸಂಘ (ರಿ.) ವಿಟ್ಲ, ಬಿಲ್ಲವ ಮಹಿಳಾ ಘಟಕ ಹಾಗೂ ಘಟಕದ ವತಿಯಿಂದ ಕಾರ್ಯಕ್ರಮ ದಿನಾಂಕ 20/07/2025 ನೇ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ sslc ಮತ್ತು puc ಯಲ್ಲಿ ಶೇಕಡಾ 95% ಗಿಂತ ಅಧಿಕ ಅಂಕ ಪಡೆದ 9 ವಿದ್ಯಾರ್ಥಿಗಳನ್ನು ಗುರುತಿಸಲಾಯಿತು ಮತ್ತು ಸದಸ್ಯರು ತಯಾರಿಸಿದ ಆಟಿ ತಿಂಗಳ ಬಗ್ಗೆ ಬಗೆಯ ತಿಂಡಿಗಳನ್ನು ಪ್ರದರ್ಶನ ಬಳಿಕ ಎಲ್ಲರಿಗೂ ಬಡಿಸಲಾಯಿತು ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು
Read More
22-10-2025, 3:06 PM
ದಿನಾಂಕ 29-07-2025: ಕಷ್ಟಕರವಾದ ಭಾರತದ ಗಡಿ ಪ್ರದೇಶದಲ್ಲಿ ಹಗಲು ರಾತ್ರಿ ಎನ್ನದೇ ಬಿಸಿಲು, ಮಳೆ, ಕೊರೆಯುವ ಚಳಿಯ ನಡುವೆಯೂ ಭಾರತೀಯರಿಗೆ ರಕ್ಷಣೆ ನೀಡುತ್ತಿರುವ ನಮ್ಮ ಸೈನಿಕರ ಸಾಮರ್ಥ್ಯ ನಿಜವಾಗಿಯೂ ಹೆಮ್ಮೆಯ ವಿಷಯ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷರಾದ ವಿದ್ಯಾ ರಾಕೇಶ್ ಹೇಳಿದರು. ಅವರು ಘಟಕದಲ್ಲಿ ನಡೆದಂತಹ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕೆಂದು ಹೆಚ್ಚಿನ ಹೆತ್ತವರು ಬಯಸುತ್ತಾರೆ. ಆದರೆ ತನ್ನ ಮಗ ಸೈನ್ಯಕ್ಕೆ ಸೇರಿ ದೇಶ […]
Read More
22-10-2025, 3:04 PM
ಘಟಕದಲ್ಲಿ ಹೊಸದಾಗಿ ಸದಸ್ಯರಾಗಿ ಸೇರ್ಪಡೆ ಗೊಂಡ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮವು ದಿನಾಂಕ 20.07.2025ರ ಆದಿತ್ಯವಾರ ಉಪ್ಪಿನಂಗಡಿ ಸಹಸ್ರ ಕೋಚಿಂಗ್ ಸೆಂಟರ್ ನಲ್ಲಿ ನಡೆಯಿತು. ತಣ್ಣೀರುಪಂತ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಜಯಾನಂದ ಕಲ್ಲಾಪು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಪಡ್ಪು ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಿದರು. ಕೇಂದ್ರ ಸಮಿತಿಯ ಮಾಜಿ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶ್ರೀ ಅಜಿತ್ ಕುಮಾರ್ ಪಾಲೇರಿ ನೂತನ […]
Read More
22-10-2025, 2:58 PM
ಘಟಕದ ಆಶ್ರಯದಲ್ಲಿ ಮಹಿಳಾ ಸಂಚಾಲನ ಸಮಿತಿ ಬೆಳ್ತಂಗಡಿ ತಾಲೂಕು ಆತಿಥ್ಯದಲ್ಲಿ ದಿನಾಂಕ 02.08.2025ನೇ ಶನಿವಾರದಂದು ಆಟಿದ ಕಮ್ಮೆನ ಕಾರ್ಯಕ್ರಮವು ಬೆಳ್ತಂಗಡಿಯ ಗುರುನಾರಾಯಣ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ನೆರವೇರಿಸಿ ಶುಭ ಹಾರೈಸಿದರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಘಟಕದ ಸಲಹೆಗಾರರಾದ ಸುಧಾಮಣಿ ಆರ್ ಮಾತನಾಡಿ ಆಟಿ ತಿಂಗಳ ವಿಶೇಷತೆಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಸಂಚಾಲನ ಸಮಿತಿಯ ಪ್ರಧಾನ ಸಂಚಾಲಕರಾದ […]
Read More