ಶ್ರೀ ಗೋಕರ್ನಾಥೇಶ್ವರ ಕ್ಷೇತ್ರ ಕುದ್ರಳ್ಳಿಯಲ್ಲಿ ಭಜನಾ ಸಂಕೀರ್ತನೆ -ಯುವವಾಹಿನಿ( ರಿ.) ಶಕ್ತಿನಗರ ಘಟಕ
22-10-2025, 3:32 PM
ದಿನಾಂಕ 28/07/2025 ರಂದು ಶ್ರೀ ಗೋಕರ್ನಾಥೇಶ್ವರ ಕ್ಷೇತ್ರ ಕುದ್ರಳ್ಳಿಯಲ್ಲಿ ಘಟಕದ ವತಿಯಿಂದ ಭಜನಾ ಸಂಕೀರ್ತನೆಯನ್ನು ನಡೆಸಲಾಯಿತು
22-10-2025, 3:32 PM
ದಿನಾಂಕ 28/07/2025 ರಂದು ಶ್ರೀ ಗೋಕರ್ನಾಥೇಶ್ವರ ಕ್ಷೇತ್ರ ಕುದ್ರಳ್ಳಿಯಲ್ಲಿ ಘಟಕದ ವತಿಯಿಂದ ಭಜನಾ ಸಂಕೀರ್ತನೆಯನ್ನು ನಡೆಸಲಾಯಿತು
22-10-2025, 3:27 PM
ದಿನಾಂಕ 27/07/2025 ರಂದು ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ) ಇದರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು, ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಗುರುಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮೊದಲಿಗೆ ಘಟಕದ ಸದಸ್ಯರು ಹಾಗೂ ಊರ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಸಂತ ಅಲೋಶಿಯಸ್ ಸ್ನಾತಕೋತರ ವಿಭಾಗದಲ್ಲಿ ಮುಖ್ಯಸ್ಥರಾದ ಪ್ರೊ|ಡಾ| ರಾಕೇಶ್ ಕುಮಾರ್ ಹಾಗೂ ಸಾಹಿತಿಕಾರರು ಮತ್ತು ಸಂತ ಅಲೋಶಿಯಸ್ ಪಿಯು […]
22-10-2025, 3:13 PM
ಬಿಲ್ಲವ ಸಂಘ (ರಿ.) ವಿಟ್ಲ, ಬಿಲ್ಲವ ಮಹಿಳಾ ಘಟಕ ಹಾಗೂ ಘಟಕದ ವತಿಯಿಂದ ಕಾರ್ಯಕ್ರಮ ದಿನಾಂಕ 20/07/2025 ನೇ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ sslc ಮತ್ತು puc ಯಲ್ಲಿ ಶೇಕಡಾ 95% ಗಿಂತ ಅಧಿಕ ಅಂಕ ಪಡೆದ 9 ವಿದ್ಯಾರ್ಥಿಗಳನ್ನು ಗುರುತಿಸಲಾಯಿತು ಮತ್ತು ಸದಸ್ಯರು ತಯಾರಿಸಿದ ಆಟಿ ತಿಂಗಳ ಬಗ್ಗೆ ಬಗೆಯ ತಿಂಡಿಗಳನ್ನು ಪ್ರದರ್ಶನ ಬಳಿಕ ಎಲ್ಲರಿಗೂ ಬಡಿಸಲಾಯಿತು ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು
22-10-2025, 3:06 PM
ದಿನಾಂಕ 29-07-2025: ಕಷ್ಟಕರವಾದ ಭಾರತದ ಗಡಿ ಪ್ರದೇಶದಲ್ಲಿ ಹಗಲು ರಾತ್ರಿ ಎನ್ನದೇ ಬಿಸಿಲು, ಮಳೆ, ಕೊರೆಯುವ ಚಳಿಯ ನಡುವೆಯೂ ಭಾರತೀಯರಿಗೆ ರಕ್ಷಣೆ ನೀಡುತ್ತಿರುವ ನಮ್ಮ ಸೈನಿಕರ ಸಾಮರ್ಥ್ಯ ನಿಜವಾಗಿಯೂ ಹೆಮ್ಮೆಯ ವಿಷಯ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷರಾದ ವಿದ್ಯಾ ರಾಕೇಶ್ ಹೇಳಿದರು. ಅವರು ಘಟಕದಲ್ಲಿ ನಡೆದಂತಹ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕೆಂದು ಹೆಚ್ಚಿನ ಹೆತ್ತವರು ಬಯಸುತ್ತಾರೆ. ಆದರೆ ತನ್ನ ಮಗ ಸೈನ್ಯಕ್ಕೆ ಸೇರಿ ದೇಶ […]
22-10-2025, 3:04 PM
ಘಟಕದಲ್ಲಿ ಹೊಸದಾಗಿ ಸದಸ್ಯರಾಗಿ ಸೇರ್ಪಡೆ ಗೊಂಡ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮವು ದಿನಾಂಕ 20.07.2025ರ ಆದಿತ್ಯವಾರ ಉಪ್ಪಿನಂಗಡಿ ಸಹಸ್ರ ಕೋಚಿಂಗ್ ಸೆಂಟರ್ ನಲ್ಲಿ ನಡೆಯಿತು. ತಣ್ಣೀರುಪಂತ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಜಯಾನಂದ ಕಲ್ಲಾಪು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಪಡ್ಪು ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಿದರು. ಕೇಂದ್ರ ಸಮಿತಿಯ ಮಾಜಿ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶ್ರೀ ಅಜಿತ್ ಕುಮಾರ್ ಪಾಲೇರಿ ನೂತನ […]
22-10-2025, 2:58 PM
ಘಟಕದ ಆಶ್ರಯದಲ್ಲಿ ಮಹಿಳಾ ಸಂಚಾಲನ ಸಮಿತಿ ಬೆಳ್ತಂಗಡಿ ತಾಲೂಕು ಆತಿಥ್ಯದಲ್ಲಿ ದಿನಾಂಕ 02.08.2025ನೇ ಶನಿವಾರದಂದು ಆಟಿದ ಕಮ್ಮೆನ ಕಾರ್ಯಕ್ರಮವು ಬೆಳ್ತಂಗಡಿಯ ಗುರುನಾರಾಯಣ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ನೆರವೇರಿಸಿ ಶುಭ ಹಾರೈಸಿದರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಘಟಕದ ಸಲಹೆಗಾರರಾದ ಸುಧಾಮಣಿ ಆರ್ ಮಾತನಾಡಿ ಆಟಿ ತಿಂಗಳ ವಿಶೇಷತೆಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಸಂಚಾಲನ ಸಮಿತಿಯ ಪ್ರಧಾನ ಸಂಚಾಲಕರಾದ […]
22-10-2025, 2:56 PM
ಶ್ರೀ ಕೃಷ್ಣ ಭಜನಾ ಮಂದಿರ (ರಿ) ಪಜೀರು ದಿ ವಿನಯ ಶೆಟ್ಟಿ ನಗ್ರಿ ಗುತ್ತು ವೇದಿಕೆ ಯಲ್ಲಿ ಘಟಕದ ವತಿಯಿಂದ ಪ್ರಯೋಜಕತ್ವ ನೀಡಿ ಅದ್ಬುತ ಪ್ರದರ್ಶನ ನೀಡಲಾಯಿತು. ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಿಸಿ ಕೊನೆಗೆ ಕಣ್ಣಂಚಲ್ಲಿ ಕಣ್ಣೀರು ಬರಿಸಿ ಕುಳಿತ ಜಾಗದಿಂದ ತುಸು ಕದಲದ ಹಾಗೆ ಮಾಡಿದ ಪ್ರತಿಯೊಬ್ಬ ಘಟಕದ ಸದಸ್ಯರು ಅನುಭವಸ್ತ ಕಲಾವಿದರಿಗೆ ತಾವೇನು ಕಡಿಮೆ ಇಲ್ಲ ಅನ್ನುವ ಮಟ್ಟಿನಲ್ಲಿ ಪ್ರಥಮ ಪ್ರಯೋಗ ದಲ್ಲಿ ಭೇಷ್ ಎಣಿಸಿಕೊಂಡರು. ಸಮಾಜಕ್ಕೆ ಪ್ರಸ್ತುತ ಸನ್ನಿವೇಶದಲ್ಲಿ ಉತ್ತಮ ಸಂದೇಶ ನೀಡುವ […]
22-10-2025, 2:52 PM
ದಿನಾಂಕ 08-07-2025 ರಂದು ಘಟಕದ ಮಾಜಿ ಅಧ್ಯಕ್ಷರಾದ ಕಿಶೋರ್ ಕುಮಾರ್ ರವರ ಮನೆಯಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮ ನಡೆಯಿತು. ಪ್ರಥಮವಾಗಿ ಅಂದಿನ ವಾರದ ಸಭೆಯನ್ನು ಅವರ ಮನೆಯಲ್ಲಿಯೇ ನಡೆಸಿಕೊಂಡೆವು ನಂತರ ಒಂದು ಗಂಟೆಯ ಭಜನಾವಳಿ ನಡೆಯಿತು. ಮಾಜಿ ಅಧ್ಯಕ್ಷರು,ಸದಸ್ಯರೆಲ್ಲರೂಡನೆ ಮನೆಯವರೂ ಕೂಡಿ ಭಜನಾವಳಿಯನ್ನು ಚಂದಗೊಳಿಸಿದರು. ಮಂಗಳ ಹಾಡುವುದರೊಡನೆ ದೇವರ ಆರತಿ ಮುಗಿಸಿ ಪ್ರಸಾದ ವಿತರಣೆ ಮಾಡಿದರು. ತದನಂತರ ಪಲಹಾರದ ಸೇವನೆಯೊಂದಿಗೆ ಭಜನಾ ಸೇವೆಯನ್ನು ಮುಕ್ತಾಯಗೊಳಿಸಲಾಯಿತು.
22-10-2025, 2:47 PM
ಘಟಕ ಮತ್ತು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಪದವಿ ವ್ಯಾಸಂಗ ಮಾಡಿ ಬ್ಯಾಂಕಿಂಗ್ ಉದ್ಯೋಗದ ಆಸಕ್ತಿ ಇರುವ ಆಕಾಂಕ್ಷಿಗಳಿಗಾಗಿ ದಿನಾಂಕ 13.09.2025ರಂದು ಮಾಹಿತಿ ಕಾರ್ಯಕ್ರಮ ನಡೆಸಲಾಯಿತು. ಉಪ್ಪಿನಂಗಡಿ ಸಹಸ್ರ ಕೋಚಿಂಗ್ ಸೆಂಟರ್ ನಲ್ಲಿ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಮಂಗಳೂರಿನ ಸರ್ವಜ್ಞ IAS ಅಕಾಡೆಮಿಯ ಸುರೇಶ್ ಎಂ ಎಸ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ಪಾಲೇರಿ ವಹಿಸಿದ್ದರು. ಯುವವಾಹಿನಿ (ರಿ.) ಕೇಂದ್ರ […]
22-10-2025, 2:41 PM
ಇತ್ತೀಚಿಗೆ ನಮ್ಮನ್ನಗಲಿದ ಘಟಕದ ಸಲಹೆಗಾರರಾದ ಉಮನಾಥ ಕೋಟ್ಯಾನ್ ಬೆಳಾಲು ಇವರಿಗೆ ನುಡಿನಮನ ಕಾರ್ಯಕ್ರಮವನ್ನು ದಿನಾಂಕ 18.09.2025 ಗುರುವಾರದಂದು ಘಟಕದ ವತಿಯಿಂದ ನಡೆಸಿ ಅವರಿಗೆ ಗೌರವ ಸಲ್ಲಿಸಲಾಯಿತು. ಘಟಕದ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳರವರು ಉಮಾನಾಥ್ ಕೋಟ್ಯಾನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರೊಂದಿಗಿನ ಒಡನಾಟದ ಬಗ್ಗೆ ಹಾಗೂ ಸಂಘಟನೆಯ ಯಶಸ್ಸಿನ ಹಿಂದೆ ಇದ್ದ ಅವರ ಕೊಡುಗೆಯನ್ನು ಸ್ಮರಿಸಿದರು ಘಟಕದ ಸ್ಥಾಪಕಧ್ಯಕ್ಷರಾದ ರಾಕೇಶ್ ಕುಮಾರ್ ಮೂಡುಕೋಡಿ, ಮಾಜಿ ಅಧ್ಯಕ್ಷರಾದ ಎಂ ಕೆ ಪ್ರಸಾದ್, ಅಶ್ವಥ್ ಕುಮಾರ್, ಸದಾಶಿವ ಪೂಜಾರಿ ಊರ […]