01-12-2025, 3:06 PM
ದಿನಾಂಕ 19-10-2025 ನೇ ಆದಿತ್ಯವಾರ ದಂದು ದೀಪಾವಳಿ ಹಬ್ಬದ ಪ್ರಯುಕ್ತ ಬಡ ಕುಟುಂಬಗಳಿಗೆ ದಿನಸಿ ವಿತರಣೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಘಟಕದ ಅಧ್ಯಕ್ಷರಾದ ಲತೀಶ್ ಪೂಜಾರಿ ರವರು ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ದೀಪ ಬೆಳಗಿಸಿ, ಪ್ರಾರ್ಥಿಸಿದರು. ನಂತರ ಸದಸ್ಯರ ಜೊತೆಗೆ ಸೇರಿಕೊಂಡು ದೀಪಾವಳಿ ಹಬ್ಬವನ್ನು ನಮ್ಮಂತೆಯೇ ಬಡ ಕುಟುಂಬದವರೂ ಆಚರಣೆ ಮಾಡಬೇಕು ಎಂಬ ಉದ್ದೇಶದಿಂದ 8 ಬಡ ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾದಷ್ಟು ದಿನಸಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿ ಜಯಲಕ್ಷ್ಮಿ, […]
Read More
01-12-2025, 3:01 PM
ಘಟಕದ ಸಂಘಟನಾ ಕಾರ್ಯದರ್ಶಿ ತುಳಸೀ ಸುಜೀರ್ ರವರ ಮನೆಯಲ್ಲಿ ದಿನಾಂಕ 25-10-2025 ನೇ ಶನಿವಾರ ದಂದು ನೆರವೇರಿತು. ಮನೆ ಮನೆ ಭಜನೆಯಲ್ಲಿ ಘಟಕದ ಅಧ್ಯಕ್ಷರಾದ ಲತೀಶ್ ಪೂಜಾರಿ, ಪ್ರಥಮ ಉಪಾಧ್ಯಕ್ಷರಾದ ಗೀತಾ ವಸಂತ್, ನಿಕಟಪೂರ್ವ ಅಧ್ಯಕ್ಷರಾದ ಇಂದಿರಾ ಸುರೇಶ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಭಾಸ್ಕರ್ ಕೋಟ್ಯನ್, ದೀಕ್ಷಿತ್ ಸಿ ಎಸ್ , ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
Read More
22-10-2025, 3:46 PM
ದಿನಾಂಕ 04-10-2025 ರಿಂದ 6-10-2025 ರ ವರೆಗೆ ಶಿವಗಿರಿ ಯಾತ್ರೆ ಕೈಗೊಳ್ಳಲಾಯಿತು. ದಿನಾಂಕ 04-10-2025 ರಂದು ಶನಿವಾರ ರೈಲಿನಲ್ಲಿ 52 ಜನ ಸದಸ್ಯರ ತಂಡ ಹೊರಟು ಆದಿತ್ಯವಾರ ಬೆಳಿಗ್ಗೆ ವರ್ಕಳ ಶಿವಗಿರಿ ತಲುಪಿದೆವು. ಶ್ರೀ ಶ್ರೀ ಶ್ರೀ ಸತ್ಯಾನಂದ ಸ್ವಾಮೀಜಿ ಅಲ್ಲಿಂದ ನಮ್ಮನ್ನು ಶಿವಗಿರಿ ಮಠಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸ್ನಾನಾದಿಗಳನ್ನು ಮುಗಿಸಿ ಶಿವಗಿರಿ ಮಠ, ನಾರಾಯಣ ಗುರು ವರ್ಯರ ವಿಶ್ರಾಂತಿ ಗೃಹ, ಗುರುಗಳು ಸ್ಥಾಪಿಸಿದ ಶಾರದಾ ಪೀಠ, ಗುರು ವರ್ಯರ ಮೂಲ ಸಮಾಧಿ ಬೇಟಿ ನೀಡಿ […]
Read More
19-09-2025, 7:48 AM
10/08/2025 ಘಟಕದ ವತಿಯಿಂದ ಆಟಿದ ಪೊರ್ಲು ಕಾರ್ಯಕ್ರಮ ತುಳುನಾಡಿನ ಸಂಪ್ರದಾಯದ ಪ್ರಕಾರ ಭತ್ತ ಕುಟ್ಟುವುದರ ಮೂಲಕ ವಿಶೇಷವಾಗಿ ಆಟಿದ ಪೊರ್ಲು 2025 ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧನ ಲಕ್ಷ್ಮಿ ಗಟ್ಟಿ .(ಸದಸ್ಯರು ರಾಣಿ ಅಬ್ಬಕ್ಕ ಅಧ್ಯಯನ ಪೀಠ ವಿಶ್ವ ವಿದ್ಯಾನಿಲಯ.ಮಂಗಳ ಗಂಗೋತ್ರಿ) ಆಟಿ ತಿಂಗಳ ವಿಶೇಷ ಆಚರಣೆಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು. ‘ಪರನೀರ್ ನೆಗೆಪೆರೆ ಬಲ್ಲಿ, ಪೊಸ ನೀರ್ ಉರ್ಕರ್ರೆ ಬಲ್ಲಿ’ ಎಂದರೆ ಹಳೇ ನೀರು ಬತ್ತಬಾರದು, ಹೊಸ ನೀರು ಹೆಚ್ಚಾಗಬಾರದು. ಹಿರಿಯರು, ಕಿರಿಯರು ಸಮಾನ […]
Read More
19-09-2025, 7:45 AM
ಸಂಪರ್ಕದ ನಿಟ್ಟಿನಲ್ಲಿ ಕುಟುಂಬ ಸಂಪರ್ಕ ನಿರ್ದೇಶಕರಾದ ಸುಜಾತ ರವರ ಸಂಚಾಲಕತ್ವದಲ್ಲಿ ದಿನಾಂಕ 11-08-2025 ರಂದು ಸು ಪ್ರಮ್ ಸೋ ಚಲನಚಿತ್ರ ವೀಕ್ಷಣೆಗೆ ಹೋಗಲಾಗಿತ್ತು. 51 ಜನ ಸದಸ್ಯರ ತಂಡ ಚಲನಚಿತ್ರ ವೀಕ್ಷಣೆ ಮಾಡಿದೆವು.
Read More
16-09-2025, 7:17 PM
ಬ್ರಹ್ಮ ಶ್ರೀ ನಾರಾಯಣ ಗುರು ವರ್ಯರ 171 ನೇ ಜನ್ಮದಿನದ ಆಚರಣೆ ದಿನಾಂಕ 07-09-2025 ನೇ ಆದಿತ್ಯವಾರ ದಂದು ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ನಲ್ಲಿ ನಡೆಯಿತು ಹಿರಿಯರಾದ ವಿಶಾಲಾಕ್ಷಿ.ಎಸ್ ರವರು ಗುರುಗಳಿಗೆ ದೀಪ ಬೆಳಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಪ್ರಥಮ ಉಪಾಧ್ಯಕ್ಷರಾದ ಗೀತಾ ವಸಂತ್ ವಹಿಸಿದ್ದರು ಘಟಕದ ಸದಸ್ಯರಾದ ಚಿತ್ರ ಶ್ರೀ ರವರು ಬ್ರಹ್ಮ ಶ್ರೀ ನಾರಾಯಣ ಗುರು ವರ್ಯರ ಬಗ್ಗೆ ಮಾಹಿತಿಯನ್ನು ನೀಡಿದರು. ಸೂಪರ್ ವೈಸರ್ ವಿದ್ಯಾ ರವರು ಮಾತನಾಡಿ ಘಟಕದ ಸಾಮಾಜಿಕ ಕಾಳಜಿಯನ್ನು […]
Read More
15-09-2025, 3:55 PM
ದಿನಾಂಕ 14-08-2025 ನೇ ಗುರುವಾರ ಬೆಳಿಗ್ಗೆ ಘಟಕದ ವತಿಯಿಂದ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಪಂಜಿಮೊಗರು ಇವರ ಸಹಯೋಗದೊಂದಿಗೆ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಯುವವಾಹಿನಿ ( ರಿ.) ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಕೂಳೂರು ಘಟಕವು ಕಳೆದ 10 ವರ್ಷದಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿ ವಿತರಣೆ ಮಾಡಿಕೊಂಡು ಬರುತ್ತಿದೆ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸದಾ ಪ್ರೋತ್ಸಾಹಿಸುವ ಯುವವಾಹಿನಿ ಕೂಳೂರು ಘಟಕದ […]
Read More
15-09-2025, 3:41 PM
ದಿನಾಂಕ 15-08-2025 ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಂಜೋಟ್ಟಿ ಅಂಗನವಾಡಿ ಕೇಂದ್ರದಲ್ಲಿ ಘಟಕದ ಅಧ್ಯಕ್ಷರಾದ ಲತೀಶ್ ಪೂಜಾರಿ ರವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅದ್ಯಕ್ಷರು,ಸದಸ್ಯರು ಹಾಗೂ ಅಂಗನವಾಡಿ ಕೇಂದ್ರದ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Read More
14-09-2025, 5:36 PM
61 ನೇ ಮನೆ ಮನೆ ಭಜನೆಯು ಘಟಕದ ಸದಸ್ಯರಾದ ಶ್ವೇತಾ ಲತೀಶ್ ರವರ ಅಮ್ಮನ ಮನೆಯಲ್ಲಿ ದಿನಾಂಕ 18-08-2025 ನೇ ಸೋಮವಾರ ದಂದು ನೆರವೇರಿತು. ಮನೆ ಮನೆ ಭಜನೆಯಲ್ಲಿ ಘಟಕದ ಸದಸ್ಯರೆಲ್ಲರೂ ಭಾಗವಹಿಸಿದ್ದರು.
Read More
13-08-2025, 2:24 PM
ಯುವವಾಹಿನಿ( ರಿ.) ಕೂಳೂರು ಘಟಕ ವಿಶ್ವ ಮಹಿಳಾ ದಿನಾಚರಣೆ ದಿನಾಂಕ 12-03-2025 ಶ್ರೀಮತಿ ವಾಣಿ, ಮುಖ್ಯೋಪಾಧ್ಯಾಯಿನಿ ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಪಂಜಿಮೊಗರು* ಕಾರ್ಯಕ್ರಮ ಉದ್ಘಾಟಿಸಿ ಮಹಿಳಾ ದಿನಾಚರಣೆಯ ಅಗತ್ಯತೆ ಬಗ್ಗೆ ಮಾತನಾಡಿದರು.. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ಲತೀಶ್ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕರಾದ ಶ್ರೀಮತಿ ಕವಿತಾ ಅಡ್ವೆ ಮಾತನಾಡಿ ಯುವವಾಹಿನಿ ಸಂಸ್ಥೆಯಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಇದ್ದು, ಉತ್ತಮ ಪ್ರೋತ್ಸಾಹ […]
Read More