02-06-2024, 2:32 PM
ಕಂಕನಾಡಿ: ಬ್ರಹ್ಮಾವರದ ಕಿಂಗ್ ಆಫ್ ಕಿಂಗ್ಸ್ ರೆಸಾರ್ಟ್ ನಲ್ಲಿ ಒಂದು ದಿನದ ಕಿರುಪ್ರವಾಸ ಕಾರ್ಯಕ್ರಮವನ್ನು ದಿನಾಂಕ 02-06-2024ರ ಆದಿತ್ಯವಾರ ಹಮ್ಮಿಕೊಳ್ಳಲಾಗಿತ್ತು. ಪ್ರವಾಸ ಸಂಚಾಲಕರಾದ ಹರಿಣಿ ಹಾಗೂ ಬೇಬಿ ಗೋಪಾಲ್ ಇವರ ಮಾರ್ಗದರ್ಶನದಲ್ಲಿ ಘಟಕದ ಅಧ್ಯಕ್ಷರಾದ ಶ್ರೀಯುತ ಲೋಕೇಶ್ ಅಮೀನ್, ಕಾರ್ಯದರ್ಶಿ ಮಮತಾ ತೇಜ್ ಪಾಲ್ ಇವರುಗಳ ಮುಂದಾಳತ್ವದಲ್ಲಿ ಸದಸ್ಯರು ತಮ್ಮ ಕುಟುಂಬದ ಜೊತೆಗೂಡಿ ಒಟ್ಟು 51 ಮಂದಿ ಪ್ರವಾಸಿಗರು ಬಸ್ಸಿನಲ್ಲಿ ಪ್ರಯಾಣ ಹೊರಟು ರೆಸಾರ್ಟ್ ತಲುಪಿ ಅಲ್ಲಿ ಉಪಾಹಾರವನ್ನು ಸೇವಿಸಿ ನಂತರ ಬೋಟಿನಲ್ಲಿ ಪ್ರಯಾಣಿಸಿ ಸುತ್ತಲೂ ನೀರಿನಿಂದ […]
Read More
26-04-2024, 2:46 PM
ಕಂಕನಾಡಿ: ಯುವವಾಹಿನಿ(ರಿ.) ಕಂಕನಾಡಿ ಘಟಕದ ಸದಸ್ಯರ ಮತ್ತು ಕುಟುಂಬ ಸದಸ್ಯರ ನಡುವೆ ಬಾಂಧವ್ಯ ವೃದ್ಧಿಗಾಗಿ ಪುಣ್ಯಕ್ಷೇತ್ರ ದರ್ಶನ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡು ದಿನಾಂಕ 26-04-2024 ಶುಕ್ರವಾರದಂದು ಹಮ್ಮಿಕೊಂಡಿದ್ದರು. ಮಂಗಳೂರು ರೈಲ್ವೆ ನಿಲ್ದಾಣದಿಂದ ರಾತ್ರಿ 9:00ಕ್ಕೆ ಹೊರಟು ಮರುದಿನ ತಾರೀಕು 27-04-2024 ಶನಿವಾರ ಸಾಯಂಕಾಲ 5:30 ಗಂಟೆಗೆ MANMAD ರೈಲ್ವೇ ಸ್ಟೇಷನ್ ತಲುಪಿ ಅಲ್ಲಿಂದ ಶಿರಡಿಯಲ್ಲಿ ವಸತಿ ಗೃಹಕ್ಕೆ ತೆರಳಿ, ಸ್ನಾನಾದಿ ಮುಗಿಸಿ ನಂತರ ರಾತ್ರಿ 9 ಗಂಟೆಗೆ ಶಿರಡಿ ಕ್ಷೇತ್ರ ದರ್ಶನ ಮಾಡಿ ವಿಶ್ರಾಂತಿ ಪಡೆದರು. 28-04-2024ನೇ ಆದಿತ್ಯವಾರ ಶನಿ […]
Read More
17-03-2024, 3:51 PM
ಮಂಗಳೂರು: ಸ್ತ್ರೀ.. ಸಹನೆ, ತಾಳ್ಮೆ, ಸಂಯಮದಿಂದ ಜೀವನದುದ್ದಕ್ಕೂ ಅದೆಷ್ಟೋ ಪಾತ್ರ ನಿರ್ವಹಿಸುವ ಯಶಸ್ವಿ ರಾಯಭಾರಿ. ಹೆಣ್ಣು ಅಗತ್ಯವಾಗಿ ಸ್ವಾವಲಂಬಿ.. ಶಿಕ್ಷಿತ.. ಉದ್ಯೋಗಸ್ಥ.. ಸಬಲೆ.. ಸಂಘಟಿತಳಾಗಿ ಸಂಸಾರದಲ್ಲಿ, ಸಮಾಜದಲ್ಲಿ ನಾನಾ ರೀತಿಯ ಸಂಬಂಧ ನಿಭಾಯಿಸಿಕೊಂಡು.. ಹೇಗೆ.. ಏಕೆ.. ಹೊಂದಾಣಿಕೆಯಿಂದ ಸಂಸಾರದ ಗುಟ್ಟು ಕಾಪಾಡಬೇಕು. ಪುರುಷ ಸಮಾಜವ ಜರಿಯದೆ.. ಅವರೊಟ್ಟಿಗೆ ಹೇಗೆ ಒಗ್ಗೂಡಬೇಕು.. ಪ್ರಸ್ತುತ ಸಮಾಜಕ್ಕೆ ಇದರ.. ಅಗತ್ಯತೆ ಏನು? ಕೂಡು ಕುಟುಂಬ, ಅವಿಭಕ್ತ ಕುಟುಂಬ ಎರಡಕ್ಕೂ ಸಮಾನತೆಯ ಅಗತ್ಯವಿದೆ.. ಮಹಿಳೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆಲ್ಲ ಒತ್ತು […]
Read More
24-02-2024, 11:17 AM
ಕಂಕನಾಡಿ: ಯುವವಾಹಿನಿ (ರಿ.) ಕಂಕನಾಡಿ ಘಟಕ ಹಾಗೂ ಭಾರತ ಸರ್ಕಾರ ದತ್ತೋಪಂಥ, ಠೇಂಗಡಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ದಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಪ್ರಾದೇಶಿಕ ನಿರ್ದೇಶನಾಲಯ, ಮಂಗಳೂರು ವತಿಯಿಂದ ಮಹಿಳೆಯರಿಗೆ ಸ್ವಉದ್ಯೋಗ ಉಚಿತ ತರಬೇತಿ ಕಾರ್ಯಗಾರವು ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನ ಸಭಾಂಗಣದಲ್ಲಿ ದಿನಾಂಕ 24-02-2024 ಶನಿವಾರದಂದು ನಡೆಯಿತು. ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನದ ಅಧ್ಯಕ್ಷರಾದ ಉಮಾನಾಥ್ ಕೋಟ್ಯಾನ್ ರವರು ದೀಪ ಪ್ರಜ್ವಲಿಸುವ ಮುಖೇನ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ರೇಖಾ ಗೋಪಾಲ್ […]
Read More
21-01-2024, 7:00 AM
ಕಂಕನಾಡಿ : ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನ ಉಜ್ಜೋಡಿ ಕಂಕನಾಡಿ ಇದರ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ದೈವಸ್ಥಾನ ಹಾಗೂ ಉಜ್ಜೋಡಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವು 2024 ನೇ ಜನವರಿ 21 ರಂದು ಬೆಳಗ್ಗೆ 7 ರಿಂದ 10ರ ವರೆಗೆ ಕಂಕನಾಡಿ ಘಟಕದ ಸದಸ್ಯರ ನೇತ್ರತ್ವದಲ್ಲಿ ಜರಗಿತು. ಈ ಸ್ವಚ್ಚತಾ ಅಭಿಯಾನದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು ಹಾಗೂ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
Read More
14-12-2023, 5:38 AM
ಕಂಕನಾಡಿ : ಯುವವಾಹಿನಿ (ರಿ) ಕಂಕನಾಡಿ ಘಟಕದ ವತಿಯಿಂದ ಸಂವಿಧಾನ ದಿನದ ಪ್ರಯುಕ್ತ 2023ನೇ ಡಿಸೆಂಬರ್ 14 ರಂದು ಯುವವಾಹಿನಿ ಕಂಕನಾಡಿ ಘಟಕದ ಕಚೇರಿಯಲ್ಲಿ ಸಂವಿಧಾನದ ದಿನಾಚರಣೆಯನ್ನು ಆಚರಿಸಲಾಯಿತು ಜನಪ್ರಿಯ ನ್ಯಾಯವಾದಿ ಹಾಗೂ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಎನ್ಮಕಜ್ಜೆ ಇವರು ಸಂವಿಧಾನದ ಮೂಲಭೂತ ಕರ್ತವ್ಯಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ಯುವವಾಹಿನಿ ಕಂಕನಾಡಿ ಘಟಕದ ಸುಮಾರು 50 ಕ್ಕೂ ಹೆಚ್ಚು ಸದಸ್ಯರು ಈ ಕಾರ್ಯಾಗಾರದ ಪ್ರಯೋಜನ ಪಡೆದರು.
Read More
14-11-2022, 6:03 PM
ಕಂಕನಾಡಿ :- ದಿನಾಂಕ 14 ನವೆಂಬರ್ 2022ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ಘಟಕದ ವತಿಯಿಂದ ನೆಕ್ಕರೆಮಾರ್ ಅಂಗನವಾಡಿಯಲ್ಲಿ ಚಿಣ್ಣರೊಂದಿಗೆ ಸುಸಮಯ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಸ್ಥಳೀಯ ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ ನಮ್ಮ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ರವರಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಪೃಥ್ವಿರಾಜ್ ವಹಿಸಿದ್ದರು. ಅಂಗನವಾಡಿ ಶಿಕ್ಷಕಿ ಪುಷ್ಪರವರು ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿಯ ನೂತನ ಶಿಕ್ಷಕಿ ಕುಮಾರಿ ಪ್ರತೀಕ್ಷಾರವರು ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಘಟಕದ […]
Read More
11-09-2022, 2:27 PM
ಕಂಕನಾಡಿ :- ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ದಿನಾಂಕ 11 ಸೆಪ್ಟೆಂಬರ್ 22ನೇ ರವಿವಾರದಂದು ಗುರುಸ್ಮರಣೆ, ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವು ಉಜ್ಜೋಡಿ ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನದ ಆವರಣದಲ್ಲಿ ಜರುಗಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ ಕತ್ತಲ್ ಸರ್ ಹಾಗೂ ಗಣ್ಯರು ಸೇರಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ದಯಾನಂದ ಜಿ ಕತ್ತಲ್ ಸರ್ ಮಾತನಾಡಿ ಅಂದಿನ ಕಾಲದಲ್ಲಿದ್ದ […]
Read More
04-09-2022, 2:18 PM
ಕಂಕನಾಡಿ :- ಯುವಕರು ವಿದ್ಯಾವಂತರಾಗಿ, ಪ್ರತಿಭಾವಂತರಾಗಿ, ಸ್ವಾವಲಂಬಿಗಳಾಗಿ ಧನಾತ್ಮಕವಾಗಿ ಚಿಂತನೆಗಳನ್ನು ಮಾಡುತ್ತಾ ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಂದೆ ಬಂದು ಸಾಧನೆ ಮಾಡುವಂತಾಗಬೇಕೆಂದು ಎಂದು ಉದ್ಯಮಿ ಹಾಗೂ ಸಮಾಜ ಸೇವಕರೂ ಆಗಿರುವ ಸಂತೋಷ್ ಕಾಮತ್ ರವರು ಯುವಕರಿಗೆ ಕರೆ ನೀಡಿದರು. ಅವರು ದಿನಾಂಕ 4 ಸೆಪ್ಟಂಬರ್ 2022ದಂದು ಕಂಕನಾಡಿ ಗರೋಡಿ ಬಳಿಯ ಸಮೃದ್ಧಿ ಭವನದಲ್ಲಿ ಜರಗಿದ ಯುವವಾಹಿನಿ ಕಂಕನಾಡಿ ಘಟಕದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಆತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಘಟಕದ […]
Read More
15-08-2022, 2:40 PM
ಕಂಕನಾಡಿ :- 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯನ್ನು ಘಟಕದ ಸದಸ್ಯರು ದಿನಾಂಕ 15 ಆಗಸ್ಟ್ 2022ರಂದು ಕಿಟ್ಟೆಲ್ ಮೆಮೋರಿಯಲ್ ಶಾಲೆಯ ಧ್ವಜಾರೋಹಣದಲ್ಲಿ ಪಾಲ್ಗೊಳ್ಳುವ ಮೂಲಕ ಆಚರಿಸಲಾಯಿತು.ಅಶೋಕ್ ಶಾಲೆಯ ಮಕ್ಕಳ ಸಮವಸ್ತ್ರಕ್ಕಾಗಿ ರೂಪಾಯಿ 5000/- ಸಹಾಯ ಧನ ಹಾಗೂ ಮಕ್ಕಳಿಗೆ ಸಿಹಿತಿಂಡಿ ಹಂಚುವ ಮೂಲಕ ಮಕ್ಕಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಘಟಕದ ಅಧ್ಯಕ್ಷರಾದ ನಯನ ಸುರೇಶ್ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Read More