Yuvavahini

ಬಜಪೆ

ಬಲಿರಾಜ ಕೃಷಿ ಕ್ಷೇತ್ರದ ಯಜಮಾನ – ಡಾ|| ದೇಜಪ್ಪ ದಲ್ಲೋಡಿ

ಪುರಾಣ ಕಾಲದ ಬಲಿ ಚಕ್ರವರ್ತಿಯು ಭರತ ಭೂಮಿಯ ಕೃಷಿ ಕ್ಷೇತ್ರದ ಯಜಮಾನನಾಗಿದ್ದನು. “ಕೃಷಿತೋ ನಾಸ್ತಿ ದುರ್ಭಿಕ್ಷಂ” ಎಂಬುದು ಎರಡನೇ ಮನುವಾದ ಸ್ವಾರೋಚಿಷನ ಕಾಲದಲ್ಲಿ ವಿಶ್ವದ ಪ್ರಥಮ ಕೃಷಿಕನಾದ ಆದಿಮನಿಂದ ಹುಟ್ಟಿಕೊಂಡು ಬಲಿರಾಜನ ಕಾಲದಲ್ಲಿ ಸಂಪೂರ್ಣ ಪ್ರಗತಿಯನ್ನು ಕಂಡಿತು. ಇದರ ನಿಮಿತ್ತವಾಗಿಯೇ ಒಂದು ಕಾಲದ ತುಳುನಾಡಿನ ರೈತರು ತಮ್ಮ ಬೇಸಾಯದ ಗದ್ದೆಗಳ ಹುಣಿಗಳಲ್ಲಿ ಸಾಲು ಸಾಲಾಗಿ ದೀಪಗಳನ್ನುರಿಸಿ, ಬಲಿರಾಜನನ್ನು ಸಾಂಕೇತಿಕವಾಗಿ ಪ್ರತಿಷ್ಠಾಪಿಸಿ ದೀಪಾವಳಿಯನ್ನು ಆಚರಿಸುತ್ತಿದ್ದರು ಎಂದು ಖ್ಯಾತ ಸಂಶೋಧಕ ಹಾಗೂ ಹಿರಿಯ ಸಾಹಿತಿ ಡಾ|| ದೇಜಪ್ಪ ದಲ್ಲೋಡಿ ತಿಳಿಸಿದರು […]

Read More

ಶಿವಗಿರಿ ಯಾತ್ರೆ

ಯುವವಾಹಿನಿ (ರಿ) ಬಜ್ಪೆ ಘಟಕದ ನೇತೃತ್ವದಲ್ಲಿ ದಿನಾಂಕ 21/10/2017ರಿಂದ 24/10/2017ರವರೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹದಿಂದ ಮತ್ತು ಶ್ರೀ ಶ್ರೀ ಶ್ರೀ ಸತ್ಯಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶಿವಗಿರಿ ಯಾತ್ರೆಯು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಈ ಯಾತ್ರೆಯಲ್ಲಿ ಒಟ್ಟು 52 ಯಾತ್ರಾರ್ಥಿಗಳು ಭಾಗವಹಿಸಿದ್ದರು. ಘಟಕದ ಅಧ್ಯಕ್ಷರಾದ ಚಂದ್ರಶೇಖರ್ ಪೂಜಾರಿ ಮತ್ತು ಕಾರ್ಯದರ್ಶಿ ಕನಕಾ ಮೋಹನ್, ಸಂಚಾಲಕರಾದ ದೇವರಾಜ್ ಅಮೀನ್, ಶಿವರಾಮ ಪೂಜಾರಿ ಇವರು ಶಿವಗಿರಿ ಯಾತ್ರೆಯ ನೇತ್ರತ್ವ ವಹಿಸಿದ್ದರು.

Read More

ಮಂಗಳೂರು ದಸರಾ ಉತ್ಸವದಲ್ಲಿ ಯುವವಾಹಿನಿಯ ಸೇವೆ

ಜಗದ್ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿಯ ವೈಭವದ ಮಂಗಳೂರು ದಸರಾದಲ್ಲಿ ಯುವವಾಹಿನಿಯ ಸದಸ್ಯರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದರು. ದಿನಾಂಕ 21.09.2017 ರಿಂದ 30.09.2017 ರ ವರಗೆ ಯುವವಾಹಿನಿಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರೆ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಮುಲ್ಕಿ, ಬೆಳುವಾಯಿ, ಅಡ್ವೆ, ಬಜಪೆ, ಕಂಕನಾಡಿ, ಕುಳೂರು, ಕೊಲ್ಯ,ಸುಳ್ಯ, ಮಾಣಿ ಘಟಕಗಳು ದೇವರ ಪ್ರಸಾದ ವಿತರಣೆ ,ಹೀಗೆ ಹಲವು ಸೇವಾ ಕಾರ್ಯದಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸೇವಾ […]

Read More

ಕಷ್ಟದ ದಿನಗಳ ನೆನಪು ನಮಗಿರಬೇಕು : ರೋಹಿಣಿ

ತುಳು ಸಂಸ್ಕೃತಿಯಲ್ಲಿ ಆಟಿ ತಿಂಗಳಿಗೆ ವಿಶೇಷವಾದ ಸ್ಥಾನಮಾನವಿದೆ. ಈ ತಿಂಗಳಿನಲ್ಲಿ ನಡೆಯುವ ಯಾವೆಲ್ಲ ಆಚರಣೆಗಳಿವೆಯೋ ಅವೆಲ್ಲದರ ಹಿಂದೆ ಪೂರ್ವಜರು ವೈಜ್ಞಾನಿಕತೆಯನ್ನು ಪರಿಚಯಿಸಿದ್ದನ್ನು ಈಗಲೂ ಕಾಣಬಹುದಾಗಿದೆ. ಬದಲಾವಣೆಯ ಗಾಳಿ ಬಲವಾಗಿ ಬೀಸಿದೆ. ಕೃಷಿ ಸಂಸ್ಕೃತಿಯಿಂದ ಹಿಮ್ಮುಖವಾದ ಕಾರಣ ನಾವೆಲ್ಲ ಆರೋಗ್ಯಪೂರ್ಣ ವಾತಾವರಣದಿಂದ ದೂರ ಸರಿಯುತ್ತಿದ್ದೇವೆ” ಎಂದು ಹಿರಿಯ ಸಾಹಿತಿ ಶ್ರೀಮತಿ ಕೆ.ಎ.ರೋಹಿಣಿ ತಿಳಿಸಿದರು. ಅವರು ದಿನಾಂಕ 23.07.2017ನೇ ಆದಿತ್ಯವಾರದಂದು ಬಜ್ಪೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಯುವವಾಹಿನಿ (ರಿ) ಬಜ್ಪೆ ಘಟಕದ ಆಶ್ರಯದಲ್ಲಿ ಬಜ್ಪೆ ಬ್ರಹ್ಮಶ್ರೀ ನಾರಾಯಣಗುರು ಸಂಘದ ಸಹಯೋಗದೊಂದಿಗೆ […]

Read More

ಯುವಕಲೋತ್ಸವದಲ್ಲಿ ಬಜ್ಪೆ ಯುವವಾಹಿನಿ ದ್ವಿತೀಯ ಬಹುಮಾನ

ಮಂಗಳೂರು ತಾಲೂಕು ವ್ಯಾಪ್ತಿಯ ಯುವವಾಹಿನಿ ಘಟಕಗಳ ಸಾಂಸ್ಕೃತಿಕ ಸ್ಪರ್ಧೆ ಯುವ ಕಲೋತ್ಸವ ದಿನಾಂಕ 28.05.2017 ನೇ ಆದಿತ್ಯವಾರ ಮಂಗಳೂರು ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿತು. ಯುವವಾಹಿನಿಯ ನೂತನ ಸಭಾಂಗಣ ಹಾಗೂ ಕಛೇರಿಯ ಉದ್ಘಾಟನೆಯ ಸವಿನೆನಪಿಗಾಗಿ ಯುವ ಕಲೋತ್ಸವ ಸಾಂಸ್ಕೃತಿಕ  ಸ್ಪರ್ಧೆ ನಡೆಸಲಾಯಿತು. ಮಂಗಳೂರು ತಾಲೂಕು ವ್ಯಾಪ್ತಿಯ   ಒಟ್ಟು 8 ಯುವವಾಹಿನಿ ಘಟಕಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಕಲಾ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದ ರಮೇಶ್ ಕಲ್ಮಾಡಿ,ಜಗನ್ ಪವಾರ್ ಬೇಕಲ್,ಶ್ರೀಮತಿ ರತ್ನಾವತಿ ಬೈಕಾಡಿ,ಶ್ರೀಮತಿ ಮಲ್ಲಿಕಾ ಸಿದ್ದಕಟ್ಟೆ ತೀರ್ಪುಗಾರರಾಗಿ ಸಹಕಾರ […]

Read More

ಉಚಿತ ದಂತ ವೈದ್ಯಕೀಯ ತಪಾಸಣೆ, ಚಿಕಿತ್ಸಾ ಶಿಬಿರ.

ಯುವವಾಹಿನಿ (ರಿ) ಬಜಪೆ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಬಜಪೆ‌‌ ಮತ್ತು ಶ್ರೀನಿವಾಸ್   ದಂತ ವೈದ್ಯಕೀಯ ಕಾಲೇಜು, ಮುಕ್ಕ ಇವರ ಜಂಟಿ ಆಶ್ರಯದಲ್ಲಿ “ಉಚಿತ ದಂತ ವೈದ್ಯಕೀಯ ತಪಾಸಣೆ, ಚಿಕಿತ್ಸಾ ಶಿಬಿರವು ತಾ 28/05/2017ರಂದು ಬಜಪೆ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನೆರವೇರಿತು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಮಾಜಿ ಅಧ್ಯಕ್ಷ ಬಿ. ಸುಕುಮಾರ್ ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಶ್ರೀನಿವಾಸ್   ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಹಾಗೂ ಇಂಡಿಯನ್ […]

Read More

ಬಜಪೆ ಯುವವಾಹಿನಿಯಿಂದ ಬಿಸು ಪರ್ಬ ಆಚರಣೆ

ಜಾಗತೀಕರಣದ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ ನಶಿಸಿಹೋಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮೂಲಕ ಯುವ ಜನಾಂಗದಲ್ಲಿ ಹೊಸ ಹುರುಪು ಮೂಡಿಸುವ ಕಾರ್ಯ ಮಾಡುತ್ತಿರುವ ಬಜಪೆ ಯುವವಾಹಿನಿಯು ಉತ್ತಮ ದಾರಿಯಲ್ಲಿ ಮುನ್ನಡೆಯುತ್ತಿದೆ ಎಂದು ರೋಟರಿ ವಲಯ 1ರ ಸಹಾಯಕ ಗವರ್ನರ್ ಜಿನರಾಜ್ ಸಾಲ್ಯಾನ್ ತಿಳಿಸಿದರು. ಅವರು ಯುವವಾಹಿನಿ(ರಿ) ಬಜಪೆ ಘಟಕದ ಆಶ್ರಯದಲ್ಲಿ ದಿನಾಂಕ 16.04.2017 ನೇ ಆದಿತ್ಯವಾರ ಬೆಳಗ್ಗೆ ಬಜಪೆ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ಜರುಗಿದ ಬಿಸು […]

Read More

ಬಜಪೆ ಯುವವಾಹಿನಿಯ ಸ್ವಚ್ಛತಾ ಕಾರ್ಯ

ಯುವವಾಹಿನಿ (ರಿ) ಬಜಪೆ ಘಟಕದ ಆಶ್ರಯದಲ್ಲಿ ದಿನಾಂಕ 26-03-2017 ನೇ ಆದಿತ್ಯವಾರದಂದು ಬಜಪೆಯ ಸಮೀಪವಿರುವ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಬಜಪೆ‌ ಘಟಕದ ಸುಮಾರು 20 ಕ್ಕೂ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು. ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|| ಜಯರಾಮ ಶೆಟ್ಟಿ, ಇವರು ಬಜಪೆ ಯುವವಾಹಿನಿಯ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಜಪೆ ಯುವವಾಹಿನಿ ಪದಾಧಿಕಾರಿಗಳಾದ ಚಂದ್ರಶೇಖರ ಎಸ್ ಪೂಜಾರಿ ದೇವರಾಜ್‌ […]

Read More

ಬಜಪೆ ಯುವವಾಹಿನಿ : ಪದಗ್ರಹಣ 2016-17

ಯುವವಾಹಿನಿ (ರಿ) ಬಜಪೆ ಘಟಕದ 2016-17 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತಾ 26-11-2016 ರಂದು ಬಜಪೆ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಜರುಗಿತು. ಯುವವಾಹಿನಿ ಕೇಂದ್ರ ಸಮಿತಿ (ರಿ) ಮಂಗಳೂರು ಇದರ ಅಧ್ಯಕ್ಷರಾದ ಶ್ರೀಯುತ ಪದ್ಮನಾಭ ಮರೋಳಿ ನೂತನ ಪದಾಧಿಕಾರಿಗಳಿಗೆ ಪದಪ್ರಧಾನ ಮಾಡಿದರು. 2016-17 ನೇ ಸಾಲಿನ ಪದಾಧಿಕಾರಿಗಳ ವಿವರ ಅಧ್ಯಕ್ಷರು – ಶ್ರೀ ಚಂದ್ರಶೇಖರ. ಎಸ್. ಪೂಜಾರಿ ಉಪಾಧ್ಯಕ್ಷರು – ಶ್ರೀ ದೇವರಾಜ ಅಮೀನ್ ಕಾರ್ಯದರ್ಶಿ – ಶ್ರೀಮತಿ ಕನಕ ಮೋಹನ್ ಜತೆ ಕಾರ್ಯದರ್ಶಿ […]

Read More

ಬಜಪೆ ಯುವವಾಹಿನಿಯ ಸಾಂಸ್ಕ್ರತಿಕ ಲೋಕ ಅನಾವರಣ

ಯುವವಾಹಿನಿಯ ವರ್ಷದ ಪ್ರತಿಷ್ಠಿತ ಕಾರ್ಯಕ್ರಮ ಯುವವಾಹಿನಿ ಅಂತರ ಘಟಕ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಯುವವಾಹಿನಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ 20 ನವಂಬರ್ 2016 ನೇ ಆದಿತ್ಯವಾರ ಜರಗಿತು. ಯುವವಾಹಿನಿ ಬಜಪೆ ಘಟಕದ ಆಶ್ರಯದಲ್ಲಿ ಜರಗಿದ ಸಾಂಸ್ಕೃತಿಕ ಕಲಾ ರೂಪಕ ಸರ್ವರ ಪ್ರಶಂಸೆಗೆ ಪಾತ್ರವಾಯಿತು.

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!