22-03-2026, 9:00 PM
ಉಡುಪಿ, ಮಾ.22: ಯುವವಾಹಿನಿ (ರಿ.) ಉಡುಪಿ ಘಟಕದ ಪದಗ್ರಹಣ ಸಮಾರಂಭವು ಮಾರ್ಚ್ 22, 2026ರಂದು ಉಡುಪಿ ಘಟಕದ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ನಮಸ್ಕರಿಸಿ ದೀಪ ಪ್ರಜ್ವಲಿಸುವ ಮೂಲಕ ಪ್ರಾರಂಭವಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ದಯಾನಂದ ಕರ್ಕೇರ ವಹಿಸಿದ್ದರು. ಕಾರ್ಯದರ್ಶಿ ಮಹೇಶ್ ಮಲ್ಪೆ ರಜತ ವರ್ಷದ ವರದಿಯನ್ನು ವಾಚಿಸಿದರು. ಆಯ್ಕೆ ಸಮಿತಿಯ ಸಂಚಾಲಕರು, ನಿಕಟಪೂರ್ವ ಅಧ್ಯಕ್ಷೆ ಅಮಿತಾಂಜಲಿ ಕಿರಣ್ ನೂತನ ಕಾರ್ಯಕಾರಿ ಸಮಿತಿಯನ್ನು ಪರಿಚಯವನ್ನು ಸಭೆಯ ಮುಂದೆ ಪ್ರಸ್ತುತಪಡಿಸಿದರು. ಕೇಂದ್ರ ಸಮಿತಿಯ […]
Read More
22-03-2026, 9:00 PM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿನೋದ್ ಮಂಚಿ ಆಯ್ಕೆಯಾಗಿದ್ದಾರೆ ಪ್ರಥಮ ಉಪಾಧ್ಯಕ್ಷರು:- ಸುಪ್ರೀತ್ ಸುವರ್ಣದ್ವಿತೀಯ ಉಪಾಧ್ಯಕ್ಷರು :- ಉಮೇಶ್ ಕರ್ಕೇರಾಕಾರ್ಯದರ್ಶಿ:- ವೀಕ್ಷಿತ್ಜೊತೆ ಕಾರ್ಯದರ್ಶಿ:- ಸಚ್ಚೇಂದ್ರ ಅಂಬಾಗಿಲುಕೋಶಾಧಿಕಾರಿ : ಪ್ರಕಾಶ್ ಚಂದ್ರಕ್ರೀಡೆ ಹಾಗೂ ಆರೋಗ್ಯ ನಿರ್ದೇಶಕರು:- ಸುಜಾತಾ ಪ್ರವೀಣ್ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು:- ಕುಶಾಲ್ ಜತ್ತನ್ನವ್ಯಕ್ತಿತ್ವ ವಿಕಸನ ನಿರ್ದೇಶಕರು :- ವಿಮಲ ಜಗದೀಶ್ಕಲೆ ಮತ್ತು ಸಾಹಿತ್ಯ ನಿರ್ದೇಶಕರು :- ಸಂದೇಶ್ ಕಟ್ಪಾಡಿಸಮಾಜ ಸೇವೆ ನಿರ್ದೇಶಕರು :- […]
Read More
01-03-2026, 6:00 PM
ಉಡುಪಿ : ಭಾರತೀಯ ಸಂಸ್ಕ್ರತಿಯಲ್ಲಿ ಕುಟುಂಬ ವ್ಯವಸ್ಥೆಯೆ ಪ್ರಧಾನವಾದುದು. ರಾಷ್ಟ್ರಭಕ್ತಿ, ಶ್ರದ್ಧೆ, ಒಕ್ಕೂಟ ವ್ಯವಸ್ಥೆ, ಸಾಮಾಜಿಕ ಮೌಲ್ಯಗಳಿಗೆ ಸದಾ ಪ್ರೇರಣೆಗಳಾಗುವುದು ಕುಟುಂಬ ವ್ಯವಸ್ಥೆಯಿಂದ. ಆಧುನಿಕ ದಿನಮಾನದಲ್ಲಿ ಎಲ್ಲಾ ಎಲ್ಲೆಗಳನ್ನು ಮೀರಿ ಕುಟುಂಬದ ಉಳಿವಿಗೆ ಹೆಚ್ಚು ಸಹಕಾರಿಯಾಗುವುದು ಸಂಘಟನಾ ಸಹಭಾಗಿತ್ವ ಎಂದು ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ತಾರಾನಾಥ ಪೂಜಾರಿ ಅಭಿಪ್ರಾಯಪಟ್ಟರು. ಯುವವಾಹಿನಿಯಂತಹ ಸಂಘಟನೆ ತತ್ವ ಸಿದ್ದಾಂತಗಳಿಗೆ ಬದ್ದವಾಗಿ ಮಾತೃವಾತ್ಸಲ್ಯದ ರೀತಿಯಲ್ಲಿ ಸದಸ್ಯರನ್ನು ಪ್ರೇರೇಪಿಸುತ್ತಾ ಸಂಘಟನೆ ಮತ್ತು ಸೇವಾ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿರುವುದು ಶ್ಲಾಘನೀಯ ಎಂದರು.ರಜತ ಮಹೋತ್ಸವದ ಸವಿ […]
Read More
01-03-2026, 1:00 PM
ಶ್ರೀಯುತರು ಉಡುಪಿ ಯುವವಾಹಿನಿಯ ರಜತ ಸಂಭ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳು ಕರಮುಕ್ಕು ದೇಗುಲದಲ್ಲಿ ಪ್ರತಿಷ್ಠಾಪಿಸಿದ ದೀಪದ ಮಾದರಿಯನ್ನು ಪ್ರಜ್ವಲಿಸಿ ಸಂಸ್ಥೆಯು ನಡೆಸಿದ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ವಿಶೇಷ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ದಯಾನಂದ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಜತ ಸಂಭ್ರಮ ಸಂಚಾಲಕರಾದ ರಘುನಾಥ್ ಮಾಬಿಯಾನ್ ಗೌರವ ಉಪಸ್ಥಿತರಿದ್ದರು. ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಅರವಿಂದ ಕೋಟ್ಯಾನ್ ಕಲ್ಲುಗುಡ್ಡೆ ಸಂಗ್ರಹಿಸಿದ ‘ಗುರುವಾಣಿ’ ಕೃತಿಯನ್ನು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ […]
Read More
28-02-2026, 6:00 PM
ಉಡುಪಿ : ಸಮುದಾಯದ ಉನ್ನತಿಗೆ ಭೌದ್ದಿಕ ವಿಕಸನದೊಂದಿಗೆ ಸಾಂಸ್ಕೃತಿಕ ವಿಚಾರಧಾರೆಗಳು ಅವಶ್ಯಕ. ಈ ನಿಟ್ಟಿನಲ್ಲಿ ಯುವವಾಹಿನಿಯು ಯುವ ಮನಸ್ಸುಗಳಿಗೆ ಸೂಕ್ತ ಪ್ರೋತ್ಸಾಹ ನೀಡಿ ಸೃಜನಶೀಲತೆಯನ್ನು ಸದ್ವಿನಿಯೋಗಪಡಿಸುತ್ತಿದೆ ಎಂದು ನಾರಾಯಣಗುರು ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀ ಮುದ್ರಾಡಿ ಮಂಜುನಾಥ ಪೂಜಾರಿ ಅಭಿಪ್ರಾಯಪಟ್ಟರು. ಸಾಂಸ್ಕೃತಿಕ ಪ್ರಜ್ಞೆಗಳು ವ್ಯಕ್ತಿಗಳಲ್ಲಿ ಸೃಜನಶೀಲತೆಯನ್ನು ಸೃಷ್ಟಿಸುತ್ತಿದ್ದು, ಉತ್ತಮ ವಿಚಾರಧಾರೆಗಳು, ನೈಜ್ಯ ಇತಿಹಾಸಗಳ ಸಂದೇಶವನ್ನು ಬಿತ್ತರಿಸುವಲ್ಲಿ ನಿರಂತರ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಯುವವಾಹಿನಿಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಯತರು ದಿನಾಂಕ 28-02-2062,ಶನಿವಾರ ,ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ […]
Read More
28-02-2026, 12:30 PM
ಉಡುಪಿ : ಸದಭಿರುಚಿಯ ಚಟುವಟಿಕೆಗಳು ಪ್ರತಿಭಾ ಪರಿಶೋಧದ ಜೊತೆಗೆ ಸ್ನೇಹ,ಸೌಹಾರ್ದ ಸಂಬಂಧವನ್ನೂ ಸಾಧ್ಯವಾಗಿಸುತ್ತದೆ. ಸಂಸ್ಕೃತಿ,ಸಂಸ್ಕಾರಗಳನ್ನು ಪ್ರಸ್ತುತಪಡಿಸುವುದರಿಂದ ಸಮುದಾಯದ ಸಂವರ್ಧನೆಗೂ ಕಾರಣವಾಗುತ್ತದೆ. ವಿವಿಧ ಆಸಕ್ತಿಗಳ ಜೊತೆಗೆ ಸಜ್ಜುಗೊಳ್ಳುವ ಸಾಂಸ್ಕೃತಿಕ ಪ್ರಕಾರಗಳು ಅನ್ಯೋನ್ಯತೆಯ ಪ್ರತೀಕವಾಗಿ ಸಂಘಟನೆಗೆ ಶಕ್ತಿ ತುಂಬುತ್ತದೆ ಎಂದು ಹಿರಿಯ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟರು. ಶ್ರೀಯುತರು ದಿನಾಂಕ 28-02-2026,ಶನಿವಾರದಂದು ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ಜರಗಿದ ಉಡುಪಿ ಘಟಕದ ರಜತ ಸಂಭ್ರಮ ಪ್ರಯುಕ್ತ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಸಂಘಗಳಿಗೆ ಆಯೋಜಿಸಲಾದ ಸಾಂಸ್ಕೃತಿಕ ಸ್ಪರ್ಧಾ […]
Read More
19-02-2026, 9:30 AM
ಬಂಟ್ವಾಳ : ಫೆಬ್ರವರಿ 28 ಹಾಗೂ ಮಾರ್ಚ್ 01ರಂದು ನಡೆಯಲಿರುವ ಯುವವಾಹಿನಿ ಉಡುಪಿ ಘಟಕದ ರಜತ ಸಂಭ್ರಮ ಸಮಾರಂಭದ ಆಮಂತ್ರಣ ಪತ್ರವನ್ನು ಬಂಟ್ವಾಳದಲ್ಲಿ ಭಾರತ ಸರ್ಕಾರದ ಮಾಜಿ ವಿತ್ತ ಸಚಿವರಾದ ಬಿ ಜನಾರ್ದನ ಪೂಜಾರಿ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಲ್ಲಿ ಯುವವಾಹಿನಿ ಉಡುಪಿ ಘಟಕವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸಿದ್ದು, ಅಶಕ್ತ ಕುಟುಂಬಗಳ ಮನೆ ನಿರ್ಮಾಣದಂತಹ ಮಹತ್ವದ ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡಿರುವುದು […]
Read More
25-01-2026, 11:00 AM
ಉಡುಪಿ: ನಾರಾಯಣ ಗುರುಗಳು ವಿಶ್ವಕ್ಕೆ ಸಾರ್ವಕಾಲಿಕ ಸಂದೇಶ ನೀಡಿದ ಜಗದ್ಗುರುಗಳು. ಅವರ ಚಿಂತನೆಗಳು ಪ್ರಸ್ತುತ ಯುವ ಜನತೆಗೆ ಹೆಚ್ಚು ಪ್ರೇರಣೆಯಾಗಬೇಕು. ಜಾತಿ ಮತ ಧರ್ಮಗಳ ಸಾಮರಸ್ಯ ಸಾರಿದ ನಾರಾಯಣ ಗುರುಗಳ ತತ್ವಾದರ್ಶಗಳನ್ನು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನಿರಂತರ ಸಂಘಟಿಸುವ ಮೂಲಕ ಯುವವಾಹಿನಿ ಉಡುಪಿ ಘಟಕವು ಗುರುತಿಸಿಕೊಂಡಿರುವುದು ಸ್ತುತ್ಯರ್ಹವೆಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟರು. ಶ್ರೀಯುತರು ಯುವವಾಹಿನಿ ಉಡುಪಿ ಘಟಕವು ಬನ್ನಂಜೆ ಬಿಲ್ಲವರ ಸೇವಾ ಸಂಘದ […]
Read More