Yuvavahini

ಪಣಂಬೂರು-ಕುಳಾಯಿ

ಆಧುನಿಕ ಜೀವನಶೈಲಿ ಆರೋಗ್ಯಕ್ಕೆ ಸವಾಲು: ಕನಕಾ ಮೋಹನ್ ಕಳಕಳಿ

ಪಣಂಬೂರು: “ಇಂದಿನ ಬದಲಾದ ಜೀವನಶೈಲಿ ಮನುಷ್ಯನನ್ನು ರೋಗಗಳ ಗೂಡಾಗಿಸುತ್ತಿದೆ. ಅನಿಯಮಿತ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದ ಆಯುಷ್ಯ ಕ್ಷೀಣಿಸುತ್ತಿರುವುದು ಆತಂಕಕಾರಿ ಸಂಗತಿ. ಆರೋಗ್ಯಕರ ಬದುಕಿಗಾಗಿ ದಿನದ 24 ಗಂಟೆಗಳಲ್ಲಿ ಕನಿಷ್ಠ ಒಂದು ಗಂಟೆಯನ್ನಾದರೂ ಯೋಗಾಭ್ಯಾಸಕ್ಕೆ ಮೀಸಲಿಡುವುದು ಅನಿವಾರ್ಯ,” ಎಂದು SPYSS(R) ಜಿಲ್ಲಾ ಸಂಯೋಜಕಿ ಕನಕಾ ಮೋಹನ್ ತಿಳಿಸಿದರು. ​ಯುವವಾಹಿನಿ (ರಿ.) ಪಣಂಬೂರು-ಕುಳಾಯಿ ಘಟಕದ ವತಿಯಿಂದ ಮಾರ್ಚ್ 8ರ ಭಾನುವಾರ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಆರೋಗ್ಯ ಪದ್ಧತಿಯ […]

Read More

ಪಣಂಬೂರು ಕುಳಾಯಿ ಘಟಕದಿಂದ ಪೋಡಿಯಂ ಕೊಡುಗೆ

ಕುಳಾಯಿ: ಭಜನಾ ಮಂಗಳೋತ್ಸವಗಳು ಸಮಾಜದಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ತುಂಬುತ್ತವೆ. ಗುರುಗಳ ತತ್ವಗಳನ್ನು ಪ್ರಸಾರ ಮಾಡುವ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಯುವವಾಹಿನಿಯು ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು. ಬ್ರಹ್ಮ ಶ್ರೀ ನಾರಾಯಣ ಗುರು ಸಂಘ ಕುಳಾಯಿ ಇದರ 43ನೇ ಭಜನಾ ಮಂಗಳೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಘಟಕದ ಪದಾಧಿಕಾರಿಗಳು ಭಾಗವಹಿಸಿ ಶುಭ ಹಾರೈಸಿದರು. ​ಬ್ರಹ್ಮ ಶ್ರೀ ನಾರಾಯಣ ಗುರು ಸಂಘ ಕುಳಾಯಿ ಇದರ 43ನೇ ವರ್ಷದ ಭಜನಾ ಮಂಗಳೋತ್ಸವದ ಪ್ರಯುಕ್ತ ಯುವವಾಹಿನಿ ಪಣಂಬೂರು-ಕುಳಾಯಿ ಘಟಕದ ವತಿಯಿಂದ […]

Read More

ಭಕ್ತಿಭಾವ, ಸಂಘಟನೆ ಮತ್ತು ಆತ್ಮೀಯತೆಯೊಂದಿಗೆ ಸ್ಮರಣೀಯ ಪ್ರವಾಸ

ಪಣಂಬೂರು : ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ ದಿನಾಂಕ 01-02-2026, ರವಿವಾರ ಒಂದು ದಿನದ ದೇವಸ್ಥಾನ ಯಾತ್ರೆ ಮತ್ತು ಪ್ರವಾಸ ಕಾರ್ಯಕ್ರಮವನ್ನು ಭಕ್ತಿಭಾವ ಹಾಗೂ ಆತ್ಮೀಯತೆಯೊಂದಿಗೆ ಆಯೋಜಿಸಲಾಗಿತ್ತು.ಈ ಯಾತ್ರೆಯ ಅಂಗವಾಗಿ ಕಣಿಪುರ ಗೋಪಾಲ ಕೃಷ್ಣ ದೇವಸ್ಥಾನ, ಅನಂತಪುರ ಪದ್ಮನಾಭ ಸ್ವಾಮಿ ದೇವಸ್ಥಾನ, ಮಲ್ಲ ದುರ್ಗಾ ಪರಮೇಶ್ವರಿ ದೇವಸ್ಥಾನ, ಮಧೂರು ಮದನಂತೇಶ್ವರ ವಿನಾಯಕ ದೇವಸ್ಥಾನ, ಪರಶಿನ ಕಡವು ಮುತ್ತಪ್ಪ ದೇವಸ್ಥಾನ ಹಾಗೂ ಬೇಕಲ್ ಬೀಚ್ ಪ್ರವಾಸವನ್ನು ಯಶಸ್ವಿಯಾಗಿ ನಡೆಸಲಾಯಿತು. ಯಾತ್ರಿಗಳು ಮೊದಲಾಗಿ ಕಣಿಪುರ ಗೋಪಾಲ ಕೃಷ್ಣ ದರ್ಶನ […]

Read More

ಮನೆ ಮನದಲ್ಲಿ ಭಜನೆ

ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ “ಮನೆ ಮನದಲ್ಲಿ ಭಜನೆ” ಯೋಜನೆಯ ಅಂಗವಾಗಿ, ದಿನಾಂಕ 28-01-2026 ಬುಧವಾರ ಘಟಕದ ಗೌರವ ಸದಸ್ಯರಾದ ಪ್ರಕಾಶ್ ಪೂಜಾರಿ ಅವರ ಮನೆಯಲ್ಲಿ ಸಂಜೆ 6:00 ಗಂಟೆಗೆ ಗುರುಪೂಜೆ ಹಾಗೂ ಘಟಕದ ಭಜನಾ ತಂಡದ ವತಿಯಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಭಕ್ತಿ–ಭಾವಪೂರ್ಣ ಭಜನಾ ಕೀರ್ತನೆಯಲ್ಲಿ ಯುವವಾಹಿನಿ ಮಂಗಳೂರು ಘಟಕದ ಸದಸ್ಯರಾದ ಸದಾನಂದ ಪೂಜಾರಿ ಅವರು ಗುರುಪೂಜಾ ಕಾರ್ಯವನ್ನು ನೆರವೇರಿಸಿದರು. ಭಜನಾ ಸೇವೆಗೆ ಆತಿಥ್ಯ ವಹಿಸಿದ ಪ್ರಕಾಶ್ ಪೂಜಾರಿ ದಂಪತಿಗಳನ್ನು ಘಟಕದ ವತಿಯಿಂದ […]

Read More

ವ್ಯಸನ ಮುಕ್ತ ಜೀವನ ಮತ್ತು ಪರಿಸರ ಸ್ವಚ್ಛತೆ ಕುರಿತು ಮಕ್ಕಳಿಗೆ ಜಾಗೃತಿ

ಪಣಂಬೂರು–ಕುಳಾಯಿ : ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ ದಿನಾಂಕ 19-01-2026 ಸೋಮವಾರ ಮಧ್ಯಾಹ್ನ 2.30ರಿಂದ 4.00 ಗಂಟೆಯವರೆಗೆ ಬೈಕಂಪಾಡಿಯ ಭಟ್ಟರಾಂಡ್ ರಶೆಲ್ ಶಾಲೆಯಲ್ಲಿ ಅಲ್ಲಿನ ಮಕ್ಕಳಿಗಾಗಿ ವ್ಯಸನ ಮುಕ್ತ ಜೀವನ ಮತ್ತು ಪರಿಸರ ಸ್ವಚ್ಛತೆ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಣಂಬೂರು ಠಾಣಾ ಅಧಿಕಾರಿ ಜ್ಞಾನ ಶೇಖರ್ ಮಾತನಾಡಿ, ಮಾದಕ ವ್ಯಸನಗಳಿಂದ ಯುವಕರು ಹೇಗೆ ದಾರಿ ತಪ್ಪುತ್ತಿದ್ದಾರೆ, ಅದರ ದುಷ್ಪರಿಣಾಮಗಳು ಏನೆಂಬುದನ್ನು ಮಕ್ಕಳಿಗೆ ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ವಿವರಿಸಿದರು. […]

Read More

ಯುವವಾಹಿನಿ ಸದಸ್ಯರ ಸ್ವಯಂ ಸೇವೆ

ಪಣಂಬೂರು ಕುಳಾಯಿ : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ, ಕಂಕನಾಡಿಯಲ್ಲಿ ನಡೆದ ವರ್ಷಾವಧಿ ಉತ್ಸವದ ಸಂದರ್ಭದಲ್ಲಿ ದಿನಾಂಕ 04.01.2026 ರಂದು ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಸದಸ್ಯರು ಸ್ವಯಂಸೇವೆಯ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು. ಉತ್ಸವದ ಅವಧಿಯಲ್ಲಿ ಶಿಸ್ತು, ಸಹಕಾರ ಮತ್ತು ಸೇವಾಭಾವನೆಯೊಂದಿಗೆ ಯುವವಾಹಿನಿ ಸದಸ್ಯರು ಕಾರ್ಯ ನಿರ್ವಹಿಸಿದರು

Read More

ಅಧ್ಯಕ್ಷರು: ಸುನೀಲ್ ಸಾಲ್ಯಾನ್

ಯುವವಾಹಿನಿ ಪಣಂಬೂರು–ಕುಳಾಯಿ ಘಟಕದ ಅಧ್ಯಕ್ಷರಾಗಿ ಸುನೀಲ್ ಸಾಲ್ಯಾನ್ ಆಯ್ಕೆ

ಪಣಂಬೂರು–ಕುಳಾಯಿ: ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುನೀಲ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ 2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ: ಅಧ್ಯಕ್ಷರು: ಸುನೀಲ್ ಸಾಲ್ಯಾನ್ ಪ್ರಥಮ ಉಪಾಧ್ಯಕ್ಷರು: ಹರಿಣಿ ಜಗದೀಶ್ ದ್ವಿತೀಯ ಉಪಾಧ್ಯಕ್ಷರು: ಯಶವಂತ್ ಕುಮಾರ್ ಕಾರ್ಯದರ್ಶಿ: ಸಂದೀಪ್ ಕೋಟ್ಯಾನ್ ಜೊತೆ ಕಾರ್ಯದರ್ಶಿ: ರೇಣುಕಾ ರವಿ ಕೋಶಾಧಿಕಾರಿ: ಯಶಸ್ವಿನಿ ವ್ಯಕ್ತಿತ್ವ ವಿಕಸನ ನಿರ್ದೇಶಕರು: ಕವಿತಾ ತುಕಾರಾಮ್ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು: ದೀಪಕ್ ಕ್ರೀಡಾ ನಿರ್ದೇಶಕರು: ಸುದೇಶ್ ಕುಮಾರ್ ಆರೋಗ್ಯ […]

Read More

ಮಂಗಳೂರು ದಸರಾ 2025 ಸೇವಾ ಕೌಂಟರ್ ಮತ್ತು ಅನ್ನದಾನ ಕೌಂಟರ್ ನಲ್ಲಿ ಸೇವೆ-ಯುವವಾಹಿನಿ( ರಿ.) ಪಣಂಬೂರು ಕುಳಾಯಿ ಘಟಕ

ಮಂಗಳೂರು ದಸರಾ 2025 ಇದರ ಹತ್ತನೇ ದಿನ ತಾ:01-10-2025ರಂದು ಸೇವೆಯಲ್ಲಿ ಘಟಕದ ಅಧ್ಯಕ್ಷರು ಹಾಗೂ ಸರ್ವ ಸದ್ಯಸರು ಸೇವಾ ಕೌಂಟರ್ ಮತ್ತು ಅನ್ನದಾನ ಕೌಂಟರ್ ನಲ್ಲಿ ಸೇವೆ ಸಲ್ಲಿಸಿದರು.

Read More

ಮಾಧವ ಕೀರ್ತನೋತ್ಸವ-ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕ

ಹಿರಿಯ ಭಜಕರಾದ ಶ್ರೀ ಮಾಧವ ಅಂಚನ್ ರವರ ಸಹಕಾರದಲ್ಲಿ ನಾಲ್ಕನೇ ವರುಷದ ” “ಮಾಧವ ಕೀರ್ತನೋತ್ಸವ” ಕಾರ್ಯಕ್ರಮವು ತಾ:14-09-2025 ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕುಳಾಯಿ ಇದರ ಸಭಾಂಗಣದಲ್ಲಿ ನಡೆಯಿತು. ಮದ್ಯಾಹ್ನ ಘಟಕದ ಅಧ್ಯಕ್ಷರಾದ ಧನಿಶ್ ಕುಳಾಯಿ, ಹಿರಿಯರಾದ ಮಾಧವ ಅಂಚನ್, ಸಂಚಾಲಕರದ ಹರೀಶ್ ಪೂಜಾರಿ ಮತ್ತು ಮಾಜಿ ಅಧ್ಯಕ್ಷರೆಲ್ಲರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನ ದೀಪ ಬೆಳಗಿಸಿ ಉದ್ಘಾಟಿಸಿದರು. ಭಜನೆ ಸಂಕೀರ್ತನೆ ಕಾರ್ಯಕ್ರಮದಲ್ಲಿ ಮೊದಲಿಗೆ ಪಣಂಬೂರು ಕುಳಾಯಿ ತಂಡದಿಂದ ಪ್ರಾರಂಭವಾಗಿ ನಂತರ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ […]

Read More

ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನೋತ್ಸವ-ಯುವವಾಹಿನಿ( ರಿ.) ಪಣಂಬೂರು ಕುಳಾಯಿ

07- 09- 2025ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನೋತ್ಸವ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕುಳಾಯಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರೆಲ್ಲರೂ ಭಾಗವಹಿಸಿದ್ದರು.

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!