03-01-2026, 11:00 PM
ಸುರತ್ಕಲ್ : ಯುವವಾಹಿನಿ (ರಿ) ಸುರತ್ಕಲ್ ಘಟಕದ ವತಿಯಿಂದ ಎರಡು ದಿನಗಳ ಸಂಘಟನಾ ಪ್ರವಾಸವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ದಿನಾಂಕ 03.01.2026ರಂದು ಸುರತ್ಕಲ್ ಬಸ್ಸ್ಟ್ಯಾಂಡ್ನಿಂದ ಪ್ರಯಾಣ ಆರಂಭಿಸಿದ ತಂಡವು ಸೂರ್ಮನೆ ವಾಟರ್ಫಾಲ್, ಹೊರನಾಡು ದೇವಸ್ಥಾನ, ಕ್ಯಾತನಮಕ್ಕಿ ರೆಸಾರ್ಟ್ ಹಾಗೂ ಸನ್ಸೆಟ್ ಪಾಯಿಂಟ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿತು. ದಿನಪೂರ್ತಿ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದ ನಂತರ ತಂಡವು ರೆಸಾರ್ಟ್ನಲ್ಲಿ ವಿಶ್ರಾಂತಿ ಪಡೆದುಕೊಂಡಿತು. ಮರುದಿನ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟ ಮುಗಿಸಿ, ಹಿಂತಿರುಗುವ ಸಂದರ್ಭದಲ್ಲಿ ದಾರಿಮಧ್ಯೆ ಕಂಡುಬಂದ […]
Read More
13-12-2025, 11:51 AM
ಸುರತ್ಕಲ್ : ಯುವವಾಹಿನಿ (ರಿ) ಸುರತ್ಕಲ್ ಘಟಕದ ವತಿಯಿಂದ ಇಡ್ಯಾ ವಿಠೋಬ–ರುಕುಮಾಯಿ ಮಂದಿರದ ಜೀರ್ಣೋದ್ಧಾರದ ಸಂಧರ್ಭದಲ್ಲಿ ದಿನಾಂಕ 13.12.2025ರಂದು ರೂ. 10,000 ಮೊತ್ತದ ನೆರವನ್ನು ಮಂದಿರದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷರುಗಳು ಉಪಸ್ಥಿತರಿದ್ದು, ಮಂದಿರದ ಆಡಳಿತ ಮಂಡಳಿ ಸದಸ್ಯರಿಗೆ ಸಹಾಯಧನವನ್ನು ಹಸ್ತಾಂತರಿಸಿದರು. ಸಮಾಜ ಸೇವೆಯ ಭಾಗವಾಗಿ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಕೈಜೋಡಿಸುವ ಉದ್ದೇಶದಿಂದ ಈ ನೆರವು ನೀಡಲಾಗಿದೆ ಎಂದು ತಿಳಿಸಲಾಯಿತು.
Read More
12-12-2025, 6:36 AM
ಮಕ್ಕಳ ದಿನಾಚರಣೆಯ ಪ್ರಯುಕ್ತ ದಿನಾಂಕ 14.11.2025 ರಂದು ಘಟಕದ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರುಗಳು KMC ಅತ್ತವರ ದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ 13 ವರ್ಷದ ಮಾಸ್ಟರ್ ಸನ್ವಿತ್ ಕೆ ಪೂಜಾರಿ ಯ ಅರೋಗ್ಯ ವಿಚಾರಿಸಿ ಅವರ ಕುಟುಂಬಕ್ಕೆ ಘಟಕದ ವತಿಯಿಂದ ವೈದ್ಯಕೀಯ ನೆರವಿನ ಚೆಕ್ಕ ನ್ನು ನೀಡಿ ಸನ್ವಿತ್ ಬೇಗನೆ ಗುಣಮುಖರಾಗಿ ಮನೆಗೆ ತೆರಳಲೆಂದು ಹಾರೈಸಿದರು.
Read More
12-12-2025, 6:31 AM
ಯುವವಾಹಿನಿ( ರಿ.) ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ(ರಿ.) ಸಸಿಹಿತ್ಲು ಘಟಕದ ಅಥಿತ್ಯದಲ್ಲಿ ನಡೆದ ವಿಶುಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ತುಳು ಕುಣಿತ ಭಜನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ನಮ್ಮ ಘಟಕದ ಸದಸ್ಯರು ಭಾಗವಹಿಸಿ ಕುಣಿತ ಭಜನೆಯಲ್ಲಿ ಪ್ರಥಮ ಸ್ಥಾನವನ್ನು ತಮ್ಮ ಮುಡಿಗೇರಿಸಿಕೊಂಡಿರುವಂತಹ ಈ ಶುಭ ಸಂಧರ್ಭದಲ್ಲಿ ಕುಣಿತಭಜನೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರು ಹಾಗೂ ಭಜನೆಯ ನಿರ್ದೇಶನ, ಸಾಹಿತ್ಯದಲ್ಲಿ ನಮ್ಮ ತಂಡಕ್ಕೆ ಸಹಕರಿಸಿದ ಎಲ್ಲರನ್ನು ನಮ್ಮ ವಾರದ ಸಭೆಯಲ್ಲಿ ಗೌರವಿಸುವ ಉದ್ದೇಶದಿಂದ ಸಂಭ್ರಮಾಚರಣೆ ಆಚರಿಸಲಾಯಿತು. ಈ ಸಂಧರ್ಭದಲ್ಲಿ ನಿರ್ದೇಶನ […]
Read More
22-10-2025, 4:22 PM
ದಿನಾಂಕ:27-09-2025 ಶನಿವಾರ ದಂದು ಮಂಗಳೂರು ದಸರಾದ ಪ್ರಯುಕ್ತ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಸ್ವಯಂ ಸೇವೆ ಸಲ್ಲಿಸಲಾಯಿತು.ಮತ್ತು ಘಟಕದ ವತಿಯಿಂದ ಶ್ರೀ ಕ್ಷೇತ್ರದಲ್ಲಿ ನಡೆಯುವ ಅನ್ನದಾನ ಸೇವೆಗಾಗಿ ಕೇಂದ್ರ ಸಮಿತಿಗೆ ದೇಣಿಗೆ ನೀಡಲಾಯಿತು.
Read More
22-10-2025, 4:17 PM
ಘಟಕದ ವತಿಯಿಂದ ಗುರುಸ್ಮರಣೆ ಕಾರ್ಯಕ್ರಮವು ದಿನಾಂಕ 21/09/2025 ಆದಿತ್ಯವಾರ ನಾರಾಯಣ ಗುರು ಸಭಾಗೃಹ ಕುಳಾಯಿ ಇಲ್ಲಿ ನಡೆಯಿತು. ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ ಇದರ ಅಧ್ಯಕ್ಷರಾದ ಶ್ರೀಯುತ ಕೇಶವ ಸುವರ್ಣರವರು ಮಾತನಾಡಿ ಶ್ರೀ ಗುರುಗಳ ಜೀವನ ಸಾಮರಸ್ಯದ ಬಗೆಗೆ ವಿವರಿಸಿದರು. ಶ್ರೀಮತಿ ಶೃತಿ ಅಮೀನ್. ಕೆ ಇವರು ಗುರುಸಂದೇಶ ನೀಡುವುದರ ಮೂಲಕ ಗುರುವರ್ಯರ ಜೀವನದ ವಾಸ್ತವಿಕ ಘಟನೆಗಳು ಹಾಗೂ ನಮ್ಮ ಜೀವನದಲ್ಲಿ ಆಧುನಿಕತೆಯ ಗಾಳಿ ಯಾವ ರೀತಿ ಮಡುಗಟ್ಟಿದೆ, ಆಧುನಿಕತೆಯಿಂದ […]
Read More
22-10-2025, 2:52 PM
ದಿನಾಂಕ 08-07-2025 ರಂದು ಘಟಕದ ಮಾಜಿ ಅಧ್ಯಕ್ಷರಾದ ಕಿಶೋರ್ ಕುಮಾರ್ ರವರ ಮನೆಯಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮ ನಡೆಯಿತು. ಪ್ರಥಮವಾಗಿ ಅಂದಿನ ವಾರದ ಸಭೆಯನ್ನು ಅವರ ಮನೆಯಲ್ಲಿಯೇ ನಡೆಸಿಕೊಂಡೆವು ನಂತರ ಒಂದು ಗಂಟೆಯ ಭಜನಾವಳಿ ನಡೆಯಿತು. ಮಾಜಿ ಅಧ್ಯಕ್ಷರು,ಸದಸ್ಯರೆಲ್ಲರೂಡನೆ ಮನೆಯವರೂ ಕೂಡಿ ಭಜನಾವಳಿಯನ್ನು ಚಂದಗೊಳಿಸಿದರು. ಮಂಗಳ ಹಾಡುವುದರೊಡನೆ ದೇವರ ಆರತಿ ಮುಗಿಸಿ ಪ್ರಸಾದ ವಿತರಣೆ ಮಾಡಿದರು. ತದನಂತರ ಪಲಹಾರದ ಸೇವನೆಯೊಂದಿಗೆ ಭಜನಾ ಸೇವೆಯನ್ನು ಮುಕ್ತಾಯಗೊಳಿಸಲಾಯಿತು.
Read More
14-09-2025, 5:45 PM
ವನಮಹೋತ್ಸವದ ಪ್ರಯುಕ್ತ ಪರಿಸರಕ್ಕೆ ಸಣ್ಣ ಕೊಡುಗೆ ನೀಡುವುದರ ನಿಟ್ಟಿನಲ್ಲಿ ಘಟಕದ ಸದಸ್ಯರಿಗೆ ಫೋಟೊ ಕಾಂಟೆಸ್ಟ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕಿಶೋರ್ ಕುಮಾರ್ ರವರು, ದ್ವಿತೀಯ ಬಹುಮಾನವನ್ನು ಸುಲತಾ ಪೂಜಾರಿಯವರು,ತೃತೀಯ ಬಹುಮಾನವನ್ನು ಪಲ್ಲವಿಯವರು ಹಾಗೂ ಪ್ರೋತ್ಸಾಹಕ ಬಹುಮಾನವನ್ನು ಭಾಸ್ಕರ್ ಸಾಲ್ಯಾನ್ ಹಾಗೂ ರೇವತಿ ನವೀನ್ ಇವರು ಗಳಿಸಿರುತ್ತಾರೆ.
Read More
14-09-2025, 5:42 PM
ಅಳಿವಿನಂಚಿನಲ್ಲಿರುವ ನಮ್ಮ ತುಳುನಾಡ ಸಂಸ್ಕ್ರತಿಯ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ಆದ್ಯ ಕರ್ತವ್ಯ ಎಂದು ಮುಖ್ಯ ಅತಿಥಿಗಳಾದ ದೇವೇಂದ್ರ ಡಿ. ಕೋಟ್ಯಾನ್ ತಿಳಿಸಿದರು. ಅಲ್ಲದೆ ಆಷಾಢದ ಕಷ್ಟ ಶ್ರಾವಣದ ಸುಖವನ್ನು ಸವಿವರವಾಗಿ ತಿಳಿಸುವುದರ ಮೂಲಕ ಕೃಷಿ ಬದುಕಿನ ಮೂಲಕ ತುಳುನಾಡ ಜನರ ಜೀವನ ಯಾವ ರೀತಿ ಬೆಸೆದುಕೊಂಡಿದೆ ಎನ್ನುವುದನ್ನು ತಿಳಿಸಿಕೊಟ್ಟರು. ಅಲ್ಲದೆ ತುಳುನಾಡ ಜನರ ಹಬ್ಬ ಹರಿದಿನಗಳ ಮಹತ್ವವನ್ನು ತಿಳಿಸಿಕೊಟ್ಟರು. ಅದೇ ರೀತಿ ಆಷಾಢ ಮಾಸದಲ್ಲಿ ದೇವಸ್ಥಾನಗಳು, ದೈವ ದೇವರುಗಳ ಪೂಜಾ ಕೈಂಕರ್ಯಗಳು ಸ್ಥಗಿತಗೊಂಡು […]
Read More
14-09-2025, 5:32 PM
ದಿನಾಂಕ 19-08-2025 ರಂದು ಘಟಕದ ಮಾಜಿ ಅಧ್ಯಕ್ಷರಾದ ಅಶೋಕ್ ಸುವರ್ಣ ಹಾಗೂ ತಾರಾ ಅಶೋಕ್ ರವರ ಮನೆಯಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮ ನಡೆಯಿತು. ಪ್ರಥಮವಾಗಿ ಅಂದಿನ ವಾರದ ಸಭೆಯನ್ನು ನಡೆಸಲಾಯಿತು. ನಂತರ ಭಜನಾವಳಿ ನಡೆಯಿತು. ಅಧ್ಯಕ್ಷರು, ಕಾರ್ಯದರ್ಶಿ, ಮಾಜಿ ಅಧ್ಯಕ್ಷರು,ಸದಸ್ಯರೆಲ್ಲರೂಡನೆ ಮನೆಯವರೂ ಕೂಡಿ ಭಕ್ತಿ ಭಾವದಿಂದ ತಾಳ ಹಾಕುತ್ತ ಭಜನಾವಳಿಯನ್ನ ನಡೆಸಲಾಯಿತು.. ಮಂಗಳ ಹಾಡುವುದರೊಡನೆ ದೇವರ ಆರತಿ ಮುಗಿಸಿ ಪ್ರಸಾದ ವಿತರಣೆ ಮಾಡಲಾಯಿತು. ತದನಂತರ ಪಲಹಾರದ ಸೇವನೆಯೊಂದಿಗೆ ಭಜನಾ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
Read More