ಮಂಗಳೂರು ತಾಲೂಕು ಕುಪ್ಪೆಪದವಿನ ಪ್ರತಿಷ್ಠಿತ ಕುಟುಂಬದ ಗುರಿಕಾರ ಅಗರಿ ದಿ| ಮುಂಡಪ್ಪ ಪೂಜಾರಿ ಹಾಗೂ ಶ್ರೀಮತಿ ಮುತ್ತು ಇವರುಗಳ ಮಗನಾಗಿ 05-05-1959ರಲ್ಲಿ ಜನಿಸಿದರು. ಎಳವೆಯಲ್ಲೇ ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಬಂದ ನೀಲಯ ಅಗರಿಯವರು ’ಅಗರಿ’ ಎಂದೇ ಜನಪ್ರಿಯರು. ಕುಟುಂಬದ ಹಿರಿಯರಿಂದ ಬಂದ ಕೃಷಿ ಭೂಮಿಯನ್ನು ಹಸನುಗೊಳಿಸಿ ಸ್ವತಃ ಕೃಷಿಕನಾಗಿ ಕಾಯಕ ಮಾಡಿ ಜೀವನ ನಿರ್ವಹಣೆ ಮಾಡುತ್ತಿರುವ ಅಗರಿಯವರು ಎಲ್ಲಾ ರೈತಾಪಿ ಜನಗಳಿಗೆ ಮಾದರಿಯಾಗಿದ್ದಾರೆ.
ಮಾಜಿ ವಿದ್ಯಾರ್ಥಿ ನಾಯಕನಾಗಿದ್ದ ಅಗರಿ ಬಿ.ಎ. ಪದವೀಧರ. ’ಬೆಳೆವ ಸಿರಿ ಮೊಳಕೆಯಲ್ಲಿ’ ಎಂಬ ನಾಣ್ಣುಡಿಯಂತೆ ಶಾಲಾ ಕಾಲೇಜುಗಳಲ್ಲಿಯೇ ಕಲೆಯ ಬಗ್ಗೆ ಆಸಕ್ತಿಯನ್ನು ಹೊಂದಿ ಅದರಲ್ಲೇ ಬೆಳೆದ ಅಗರಿಯವರು ಸುಮಾರು ೧೮ ನಾಟಕಗಳನ್ನು ಬರೆದು ಅಭಿನಯಿಸಿ, ಇಂದಿಗೂ ಕಲಾವಿದನಾಗಿಯೇ ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಜೊತೆಯಾಗಿಸಿಕೊಂಡವರು ಶ್ರೀಯುತರು, ವ್ಯ.ಸೇ.ಸ. ಬ್ಯಾಂಕ್ (ನಿ.) ಎಡಪದವು ಇದರ ಅಧ್ಯಕ್ಷರಾಗಿ, ಶ್ರೀ ದುರ್ಗಾ ಯುವಕ ಮಂಡಳ (ರಿ) ಕುಪ್ಪೆಪದವು ಇದರ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ, ಗೌರವ ಸಲಹಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
1987ರಲ್ಲಿ ಯುವವಾಹಿನಿಯ ಸ್ಥಾಪನೆಯ ಬಳಿಕ ಯುವವಾಹಿನಿ ಮಂಗಳೂರು ಘಟಕದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದರು. ಬಳಿಕ ಕೇಂದ್ರ ಸಮಿತಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ 1997-98 ಸಾಲಿನಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಅಗರಿಯವರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷರಾಗಿ, ಶ್ರೀ ನಾರಾಯಣ ಗುರು ಸೇವಾ ಸಮಿತಿ (ರಿ) ಕುಪ್ಪೆಪದವು ಇದರ ಅಧ್ಯಕ್ಷರಾಗಿ, ಮಳಲಿ ಮಂಡಲ ಪಂಚಾಯತ್‌ನ ಮಾಜಿ ಸದಸ್ಯರಾಗಿ, ಗುರುಪುರ ವಲಯದ ಶಾಂತಿ ಸೌಹಾರ್ದ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ದ.ಕ. ಜಿಲ್ಲಾ ಪರಿಯಾವರಣದ ಸಮಿತಿಯ ಸದಸ್ಯರಾಗಿ, ವ್ವವಸಾಯ ಸೇವಾ ಸಹಕಾರಿ ಬ್ಯಾಂಕ್(ನಿ.) ಎಡಪದವು ಇದರ ಅಧ್ಯಕ್ಷರಾಗಿ, ಎ.ಪಿ.ಯಂ.ಸಿ. ಮಂಗಳೂರು (ಎಡಪದವು ಕೃಷಿಕ ಕ್ಷೇತ್ರ) ಇದರ ಸದಸ್ಯರಾಗಿ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ, ಶ್ರೀ ನಾರಾಯಣ ಗುರು ಯುವ ವೇದಿಕೆ(ರಿ) ಮಂಗಳೂರು ದ.ಕ. ಇದರ ಸ್ಥಾಪಕ ಸದಸ್ಯರಾಗಿಯೂ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.
ಚಟುವಟಿಕೆಗಳು: ಶ್ರೀಯುತ ನೀಲಯ ಎಂ. ಅಗರಿಯವರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿದ್ದಾಗ ಸಮಾಜದ ಯುವಜನರ ಪ್ರಯೋಜನಕ್ಕಾಗಿ ’ಸ್ವ-ಉದ್ಯೋಗ ಮಾಹಿತಿ ಶಿಬಿರ’ ಮತ್ತು ಉದ್ಯಮಿಗಳ ಸಮಾವೇಶವನ್ನು ಮಂಗಳೂರು ಕಂಕನಾಡಿಯ ಸರ್ವಮಂಗಳ ಸಭಾಂಗಣದಲ್ಲಿ ನಡೆಸಲಾಗಿತ್ತು. ಕೋಟಿ-ಚೆನ್ನಯರ ಜನ್ಮಭೂಮಿ ಪಡುಮಲೆ, ಸಮಾಧಿ ಸ್ಥಳ ಎಣ್ಮೂರುಗಳಿಗೆ ಸುಮಾರು 50 ಜನರ ತಂಡದ ಭೇಟಿ ನಡೆದಿತ್ತು. ಯುವವಾಹಿನಿಗೆ 5 ಘಟಕಗಳ (ಕಾಸರಗೋಡಿನ ಅಮ್ಮೇರಿ, ಬಡಗಬೆಳ್ಳೂರು, ಕಾಪು ಪೊಯ್ಯ ಪೊಡಿಕಲ್ಲ ಗರಡಿ, ಕೈಪುಂಜಾಲು, ಬಂಟ್ವಾಳ ತಾಲೂಕು ಘಟಕ ಸೇರ್ಪಡೆಯಾಯಿತು. ಉಚ್ಚಿಲ ಮತ್ತು ಪುತ್ತೂರು ಘಟಕಗಳನ್ನು ಪುನಶ್ಚೇತನಗೊಳಿಸಲಾಯಿತು. ಯುವವಾಹಿನಿಯ ನಿಯಮ ನಿಬಂಧನೆಗಳ ಪರಿಷ್ಕರಣೆ ಮಾಡಿದ್ದು ನೋಂದಾಯಿಸಲಾಗಿದೆ. ನಾರಾಯಣ ಗುರುವರ್ಯರ ಗುರುಸೂಕ್ತಿಯ ಪುಸ್ತಕವನ್ನು ಪ್ರಕಟಿಸಿ ಬಿಡುಗಡೆಗೊಳಿಸಲಾಯಿತು. ಅಂತರ್ ಘಟಕ ಕ್ರಿಕೆಟ್ ಸ್ಪರ್ಧೆ, ತ್ರೋಬಾಲ್ (ಮಹಿಳೆಯರಿಗೆ) ಸ್ಪರ್ಧೆ, ಪ್ರತಿಭಾ ಪ್ರದರ್ಶನ ಏರ್ಪಡಿಸಲಾಗಿತ್ತು.
ವಿಳಾಸ: ’ಕಂಚಿಲ್’,
ಕಾಸಿಯಾ ಹೈಸ್ಕೂಲಿನ ಎದುರಿನ ಅಡ್ಡರಸ್ತೆ,
ಮಾರ್ನಮಿಕಟ್ಟೆ ರಸ್ತೆ, ಮಂಗಳೂರು-575001
ಮೊಬೈಲ್: 9338549494