ಸಂಘಟನೆಯ ಮೂಲಕ ಸಮಾಜವನ್ನು ಕಟ್ಟಿ ಯುವಕರನ್ನು ಒಗ್ಗೂಡಿಸುವ ಶ್ರೇಷ್ಠ ಕಾರ್ಯ ಯುವವಾಹಿನಿ ಮಾಡುತ್ತಿದೆ. ಕ್ರೀಡಾಕೂಟದ ಮೂಲಕ ಯುವ ಮನಸ್ಸುಗಳನ್ನು ಬೆಸೆದು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕಾರ್ಯವನ್ನು ಯುವವಾಹಿನಿಯಂತಹ ಯುವಕರ ಸಂಘಟನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮೂಲ್ಕಿ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ನಿವೃತ್ತ ಎಸ್ ಪಿ ಪೀತಾಂಬರ ಹೇರಾಜೆ ಹೇಳಿದರು.
ಅವರು ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ದಿನಾಂಕ. 09.04.2017 ನೇ ಆದಿತ್ಯವಾರ ವೇಣೂರು ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬಿಲ್ಲವ ಸಮಾಜ ಭಾಂದವರಿಗಾಗಿ ಜರುಗಿದ ಕ್ರಿಕೆಟ್ ಪಂದ್ಯ ಯುವವಾಹಿನಿ ಟ್ರೋಫಿ- 2017 ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಯುವವಾಹಿನಿ ಬೆಳ್ತಂಗಡಿ ಘಟಕದ ಅದ್ಯಕ್ಷ ಸದಾನಂದ ಉಂಗಿಲಬೈಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ಅದ್ಯಕ್ಷ ಭಗೀರಥ ಜಿ, ಯುವವಾಹಿನಿ ಕೇಂದ್ರ ಸಮಿತಿ ಅದ್ಯಕ್ಷ ಪದ್ಮನಾಭ ಮರೋಳಿ, ಬೆಳ್ತಂಗಡಿ ಸ್ಥಾಯೀ ಸಮಿತಿ ಅದ್ಯಕ್ಷ ಸುಧೀರ್ ಆರ್ ಸುವರ್ಣ, ಬೆಳ್ತಂಗಡಿ ಗೆಜ್ಜೆಗಿರಿ ನಂದನಬಿತ್ತಿಲು ಸೇವಾ ಸಮಿತಿ ಅದ್ಯಕ್ಷ ಸೋಮನಾಥ ಬಂಗೇರ ವರ್ಪಾಳ, ಬೆಳ್ತಂಗಡಿ ಯುವವಾಹಿನಿ ನಿರ್ದೇಶಕಿ ಹಾಗೂ ತಾಲೂಕು ಪಂಚಾಯತ್ ಸದಸ್ಯೆ ಕೇಶವತಿ ಎನ್, ಬಜಿರೆಯ ಸಂಜೀವ ಸುವರ್ಣ, ವೇಣೂರು ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಸುಧಾಕರ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅದ್ಯಕ್ಷರಾದ ಪ್ರೇಮನಾಥ ಕೆ, ತುಕರಾಮ್ ಎನ್, ಬೆಳ್ತಂಗಡಿ ಎಪಿಎಂಸಿ ಅದ್ಯಕ್ಷ ಸತೀಶ್ ಕೆ.ಕಾಶೀಪಟ್ಲ, ಬೆಳ್ತಂಗಡಿ ಯುವವಾಹಿನಿ ಘಟಕದ ಕಾರ್ಯದರ್ಶಿ ಪ್ರಶಾಂತ್ ಮಚ್ಚಿನ, ಯುವವಾಹಿನಿ ವೇಣೂರು ಸಂಚಲನಾ ಸಮಿತಿಯ ಅದ್ಯಕ್ಷ ನವೀನ್ ಪೂಜಾರಿ ಪಚ್ಚೇರಿ, ಕಾರ್ಯದರ್ಶಿ ಸತೀಶ್ ಪಿ ಎನ್, ಬೆಳ್ತಂಗಡಿ ಯುವಬಿಲ್ಲವ ವೇದಿಕೆಯ ಸ್ಥಾಪಕ ಅದ್ಯಕ್ಷ ಹರೀಶ್ ಕುಮಾರ್, ನಿರ್ದೇಶಕ ಚಿದಾನಂದ ಪೂಜಾರಿ ಮತ್ತಿತರರು ಉಪಸ್ಥಿತವಿರಿದ್ದರು.
ಸನ್ಮಾನ
ವಿವಿಧ ಕ್ಷೇತ್ರದ ಸಾಧಕರಾದ ರಕ್ಷಾ ಜಾರಿಗೆದಡಿ, ಸಂದ್ಯಾ, ರಕ್ಷಿತ್ ಪುನ್ಕೆದಡಿ, ಸಂದೇಶ್ ಇವರುಗಳನ್ನು ಸನ್ಮಾನಿಸಲಾಯುತು.
ಕ್ರೀಡಾಕೂಟದ ಪ್ರಧಾನ ಸಂಚಾಲಕ ರಾಕೇಶ್ ಕುಮಾರ್ ಮೂಡುಕೋಡಿ, ಸ್ವಾಗತಿಸಿದರು, ಅರುಣ್ ಎಸ್ ಕಾರ್ಯಕ್ರಮ ನಿರೂಪಿಸಿದರು, ನವೀನ್ ಪಚ್ಚೇರಿ ವಂದಿಸಿದರು.
ಗುರುದೇವ ವಿವಿದ್ದೋದೇಶ ಸಹಕಾರಿ ಸಂಘ ಪ್ರಥಮ ಬಹುಮಾನ : 5555/- ಮತ್ತು ಯುವವಾಹಿನಿ ಟ್ರೋಫಿ ಹಾಗೂ ದ್ವಿತೀಯ ಬಹುಮಾನ 3333/- ಹಾಗೂ ಯುವವಾಹಿನಿ ಟ್ರೋಫಿ ಮತ್ತು ವೈಯಕ್ತಿಕ ಬಹುಮಾನ ನೀಡಿ ಗೌರವಿಸಲಾಯಿತು.
ಗುರುದೇವ ವಿವಿದ್ದೋದ್ದೇಶ ಸಹಕಾರಿ ಸಂಘ ಪಂದ್ಯಾಟದಲ್ಲಿ ಪ್ರಥಮ ಸ್ಥಾನಕ್ಕಾಗಿ ಪಡೆದ ರೂಪಾಯಿ 5,555 ನ್ನು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಯುವವಾಹಿನಿ ಸಕ್ರೀಯ ಸದಸ್ಯ ಚಂದ್ರಹಾಸರವರ ಕುಟುಂಬಕ್ಕೆ ನೀಡುವ ಸಾಂತ್ವಾನ ನಿಧಿಗೆ ಅರ್ಪಿಸಲಾಯಿತು.